Sunday, 9 October 2016

Gk 10/10/2016

[10/10 6:58 am] : 🔺ಕ್ವಿಜ್🔺
1) 2015 ನೇ ವರ್ಷವನ್ನು ಯಾವ ವರ್ಷವನ್ನಾಗಿ
ಆಚರಿಸಲಾಗುತ್ತಿದೆ?
a) ಅಂತರಾಷ್ತ್ರೀಯ ಜಾಗತಿಕ ವರ್ಷ
b) ಅಂತರಾಷ್ಟ್ರೀಯ ಮಣ್ಣಿನ ವರ್ಷ✅
c) ಅಂತರಾಷ್ಟ್ರೀಯ ಶಾಂತಿ ವರ್ಷ
d) ಅಂತರಾಷ್ಟ್ರೀಯ ಶುದ್ಧ ವಾಯು ವರ್ಷ
2) 2015ರ ಯೂನಿಸೆಫ್ ಪ್ರಕಾರ ಹವಾಮಾನ ಬದಲಾವಣೆಯಿಂದ
ಎಷ್ಟು ಮಕ್ಕಳು ಅಪಾಯದಲ್ಲಿ ಸಿಲುಕಿದ್ದಾರೆ?
a) 800 ದಶಲಕ್ಷ
b) 690 ದಶಲಕ್ಷ✅
c) 850 ದಶಲಕ್ಷ
d) 950 ದಶಲಕ್ಷ
3) ರಾಷ್ಟ್ರೀಯವಾದಿ ರಾಷ್ಟ್ರಪತಿ ’ಪ್ರಣವ್ ಮುಖರ್ಜಿ’ ಎಂಬ
ಕೃತಿಯ ಲೇಖಕರು ಯಾರು?
a) ಪ್ರಭು ಚಾವ್ಲಾ✅
b) ಹುಸೇನ್ ಅಬ್ಬಾಸ್
c) ಮಹೇಶ್ ಚಾವ್ಲಾ
d) ಇವರಾರೂ ಅಲ್ಲ
4) 2015ರ ಡಿಸೆಂಬರ್ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ
ಆಯೋಗದ (NWC) ಸದಸ್ಯರಾಗಿ ನೇಮಕಗೊಂಡವರು
ಯಾರು?
a) ಲಲಿತಾ ಕುಮಾರಿ
b) ಅಲೋಕ್ ರಾವತ್✅
c) ಇಂದಿರಾ ಬಾಯಿ
d) ಮಹೇಶ್ವರಿ ಕುಮಾರಿ
5) ಭವಿಷ್ಯ ನಿಧಿ (ಪಿಎಫ್) ಬಡ್ಡಿ ದರವನ್ನು 2015–16ನೇ ಸಾಲಿಗೆ
ಶೇ ಎಷ್ಟಕ್ಕೆ ಏರಿಕೆ ಮಾಡಲಾಗಿದೆ?
a) 8.8%
b) 9%
c) 8.9%✅
d) 8.75%
6) ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನ
(Rank) ವನ್ನು ಪಡೆದುಕೂಂಡಿದೆ?
a) 75
b) 15
c) 76✅
d) 85
7) ತೈಲ ರಫ್ತಿಗೆ ಸಂಬಂಧಿಸಿದಂತೆ ಕಳೆದ 40 ವರ್ಷಗಳಿಂದ ಯಾವ
ದೇಶದ ಮೇಲೆ ವಿಧಿಸಿದ್ಧ ನಿರ್ಬಂಧ ತೆರೆವುಗೊಳಿಸಲಾಗಿದೆ?
a) ಇರಾಕ್
b) ಸೌದಿ ಅರೇಬಿಯಾ
c) ಇರಾನ್✅
d) ಕುವೈತ್
8) ಮುಂದಿನ 104 ನೇ ಭಾರತೀಯ ವಿಜ್ಞಾನ ಸಮ್ಮೇಳನವು
ಎಲ್ಲಿ ನಡೆಯಲಿದೆ?
a) ಬೆಂಗಳೂರು
b) ಮಂಗಳೂರು
c) ದೆಹಲಿ
d) ಚೆನ್ನೈ✅
9) ಅತಿ ಹೆಚ್ಚು ಕೋಟ್ಯಧೀಶರನ್ನು ಹೊಂದಿದ ಏಷ್ಯಾ–
ಪೆಸಿಫಿಕ್ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಎರಡು
ಪ್ರಮುಖ ನಗರಗಳೆಂದರೇ ...?
a) ದೆಹಲಿ ಮತ್ತು ಕೋಲ್ಕತ್ತಾ
b) ದೆಹಲಿ ಮತ್ತು ಬೆಂಗಳೂರು
c) ದೆಹಲಿ ಮತ್ತು ಮುಂಬೈ✅
d) ಮುಂಬೈ ಮತ್ತು ಕೋಲ್ಕತ್ತಾ
10) ಮಾನವ ಅಭಿವೃದ್ಧಿ ಸೂಚ್ಯಾಂಕ - 2015 ರ ಪ್ರಕಾರ
ಭಾರತದ ಸ್ಥಾನ ಯಾವುದು?
a) 128
b) 125
c) 130✅
d) 141
11) ಮಾನವ ಅಭಿವೃದ್ಧಿ ಸೂಚ್ಯಾಂಕ - 2015 ರಲ್ಲಿ ಮೊದಲ
ಸ್ಥಾನದಲ್ಲಿರುವ ದೇಶ ಯಾವುದು?
a) ಅಮೆರಿಕಾ
b) ಚೀನಾ
c) ನಾರ್ವೆ✅
d) ಆಸ್ಟ್ರೇಲಿಯಾ
12) ಪಟ್ಟಿ ಬೆಳೆ ಪದ್ದತಿಯನ್ನು ಬಹುಮುಖ್ಯವಾಗಿ ಕೆಳಗಿನ ಯಾವ
ಅಂಶವನ್ನು ನಿಯಂತ್ರಿಸುವ ದೃಷ್ಠಿಯಿಂದ ಅನುಸರಿಸಲಾಗುತ್ತದ
ೆ ?
a) ಭೂ ಸವಕಳಿ✅
b) ಮಣ್ಣಿನ ಫಲವತ್ತತೆ
c) ಕೀಟ ಪೀಡೆ
d) ನೀರಿನ ನಷ್ಟ
13) ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿ ಶೀತಲವಾದ ಸಾಂದ್ರ
ಗಾಳಿಯ ಗುರುತ್ವಾಕರ್ಷಣ ಚಲನೆಯಿಂದ ಉಂಟಾಗುವ ಶೀತಲ
ಇಳಿಜಾರು ಮುಖದ ಗಾಳಿಯನ್ನು ಹೀಗೇನ್ನುತ್ತಾರೆ ?
a) ಬಿರುಗಾಳಿ
b) ತುಫಾನು
c) ಕೆಟಬ್ಯಾಟಿಕ್ ಗಾಳಿಗಳು✅
d) ಚಂಡಮಾರುತಗಳು
14) ಸಮುದ್ರದ ಸಮಾನ ಆಳದ ಬಿಂದುಗಳ ಮೊಲಕ ಸಾಗುವ
ಕಾಲ್ಪನಿಕ ರೇಖೆಗಳನ್ನು ಸೂಚಿಸುವ ಪಾರಿಭಾಷಿಕ ಪದ
ಯಾವುದು ?
a) ಐಸೊಹಿಪ್ಸ್
b) ಐಸೋಪ್ಲೆತ್ಸ್
c) ಐಸೊಬಾತ್ಸ್✅
d) ಐಸೊಹೈಯೆಟ್ಸ್
15) ಅತ್ಯಧಿಕ ಶೀತದ ಮೊಡಗಳ ಹಿಮದ ಹರಳುಗಳಲ್ಲಿ ಕೃತಕ
ಬೀಜ ಬಿತ್ತನೆ ಮಾಡುವ ಮೂಲಕ ಪಡೆಯಲಾಗುವ ದ್ರವೀಭವನ
ಅವಪಾತವನ್ನು ಹೀಗೆನ್ನುತ್ತಾರೆ ?
a) ನಿಸರ್ಗ ಪ್ರೇರಿತ ಅವಪಾತ ದ್ರವ
b) ವಾಯು ಪ್ರೇರಿತ ಅವಪಾತ ದ್ರವ
c) ಮನುಷ್ಯ ಪ್ರೇರಿತ ಅವಪಾತ ದ್ರವ✅
d) ನಿಸರ್ಗ ಪ್ರೇರಿತ ಅವಪಾತ ದ್ರವ
16)1939ರಲ್ಲಿ ಕಾಂಗ್ರೇಸ್ ಸಚಿವರು ರಾಜೀನಾಮೆ ನೀಡಲು
ಕಾರಣ ?
a) ಭಾರತವನ್ನು ದ್ವಿತೀಯ ಮಹಾಯುದ್ದಕ್ಕೆ ಸೆಳೆದಿದ್ದರ ಬಗ್ಗೆ
ವಿರೋಧವನ್ನು ಸೂಚಿಸಲು✅
b) ಕಾಂಗ್ರೇಸ್ ಸಮಾಜವಾದಿ ಪಕ್ಷದ ಒತ್ತಡದಿಂದ
c) ಮುಸ್ಲೀಂ ಲೀಗ್ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳು
ವುದಾಗಿ ಬೆದರಿಸಿದ್ದರಿಂದ
d) ಗಾಂಧೀಜಿ ಮತ್ತು ಸುಭಾಷ್ ಚಂದ್ರ ಭೊಸ್ ರವರ
ಅಭಿಪ್ರಾಯ ಭೇದದಿಂದ
17) ಸಂಸ್ಕೃತದಲ್ಲಿ ವೈದ್ಯ ಪದ್ಧತಿಯ ಬಗ್ಗೆ ಇರುವ 'ಅಷ್ಟಾಂಗ
ಹೃದಯ' ಎಂಬ ಪ್ರಸಿದ್ಧ ಕೃತಿಯ ಹೆಸರು ಯಾವುದರಿಂದ ಬಂದಿದೆ ?
a) ಬೌದ್ಧರ ಅಷ್ಟಾಂಗ ಮಾರ್ಗ ಪರಿಕಲ್ಪನೆಯಿಂದ
b) ಹೃದಯ ಸಂಬಂಧಿ ಕಾಯಿಲೆಗಳೊಂದಿಗೆ ಇದು ವಿಶೇಷ ಪರಿಣತಿ
ಹೊಂದಿರುವುದರಿಂದ
c) ಇದು ಎಂಟು ವಿವಿಧ ರೀತಿಯ ಕಾಯಿಲೆಗಳಿಗೆ
ಸಂಬಂಧಿಸಿರುವುದರಿಂದ✅
d) ಇದು ಅಷ್ಟದಿಕ್ಪಾಲಕರಿಗೆ ಸಂಬಂಧಿಸಿರುವುದರಿಂದ
18) ದಕ್ಷಿಣ ಭಾರತದೊಂದಿಗೆ ರೋಮನ್ನರು ವ್ಯಾಪಾರ
ನಡೆಸಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಎಲ್ಲಿ ಸಿಗುತ್ತವೆ?
1) ಗ್ರೀಕ್ ರೋಮನ್ "ಕ್ಲಾಸಿಕಲ್ ಅಕೌಂಟ್ಸ್"ನಲ್ಲಿ
2) ಅರಿಕಮೇಡು ಮತ್ತು ಅಂತದೇ
ಸ್ಥಳಗಳ ಪುರಾತತ್ವ ಸಾಕ್ಷ್ಯಗಳಲ್ಲಿ
3) ತಮಿಳು ಸಂಗಂ ಪಠ್ಯಗಳಲ್ಲಿ
4) ದಕ್ಷಿಣ ಭಾರತದಲ್ಲಿ ದೊರೆತ ರೋಮನ್ ನಾಣ್ಯಗಳಲ್ಲಿ.
a) 1 ಮತ್ತು 4
b) 1, 2, ಮತ್ತು 4✅
c) 2 ಮತ್ತು 4
d) 1,2,3 ಮತ್ತು 4
19) ವೇದ ಸಾಹಿತ್ಯದ ನಾರಶಾಂಸಿಗಳು ಯಾವುದಕ್ಕೆ
ಸಂಬಂಧಿಸಿವೆ ?
a) ಭಾವಗೀತಾತ್ಮಕ ಪ್ರಣಯ ಪದ್ಯಗಳು✅
b) ಚಾರಿತ್ರಿಕ ಪ್ರಜ್ಞೆಯ ಅಭಿವ್ಯಕ್ತಿಗಳು
c) ಸಾಮವೇದದ ಸಂಗೀತಾತ್ಮಕ ರಚನೆಗಳು
d) ಮೌಖಿಕ ಪರಂಪರೆಯಲ್ಲಿ ಸಾಗಿಬಂದ ಗಾದೆಗಳು
20) ನೀತಿ (NITI) ಆಯೋಗದ ಪೂರ್ಣ ರೂಪ ಇವುಗಳಲ್ಲಿ
ಯಾವುದಾಗಿದೆ?
a) ನ್ಯಾಷನಲ್ ಇನಸ್ಟಿಟ್ಯೂಷನ ಫಾರ್ ಟ್ರಾನ್ಸಫಾರಮೀಂಗ್
ಇಂಡಿಯಾ✅
b) ನ್ಯಾಷನಲ್ ಇನಸ್ಟಿಮ್ಯಾಟ ಫಾರ್ ಟ್ರಾನ್ಸಫಾರಮಿಂಗ
ಇಂಡಿಯಾ
c) ನ್ಯಾಷನಲ್ ಇನಸ್ಟಿಟ್ಯೂಷನ ಫಾರ್ ಟ್ರಾನ್ಸಫಾರಮೇಷನ
ಇಂಡಿಯಾ
d) ನ್ಯಾಷನಲ್ ಇನಸ್ಟಿಟ್ಯೂಟ ಫಾರ್ ಟ್ರಾನ್ಸಫಾರಮೇಷನ
ಇಂಡಿಯಾ
21) ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು
ತನ್ನಧಾಗಿಸಿಕೊಂಡಿದೆ?
a) ಏಷ್ಯಾನ ಬ್ಯಾಂಕಿನ ಸಾಧಕ ಪ್ರಶಸ್ತಿ 2015✅
b) ಏಷ್ಯಾನ ಬ್ಯಾಂಕಿನ ಮತ್ತು ಹಣಕಾಸು ಚಿಲ್ಲರೆ ವಹಿವಾಟು
ಬ್ಯಾಂಕಿಂಗ ಪ್ರಶಸ್ತಿ 2015
c) ಏಷ್ಯಾನ ಬ್ಯಾಂಕಿಂರ್ಗ ಮತ್ತು ಹಣಕಾಸು ಸಗಟು
ವಹಿವಾಟು ಬ್ಯಾಂಕಿಂಗ್ ಪ್ರಶಸ್ತಿ 2015
d) ವಿಸಿಷ್ಟ ಸಾಧನೆಗಾಗಿ ಯೂರೋ ಹಣ ಪ್ರಶಸ್ತಿ 2015
22) ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ
ಪರಿಚಯಿಸಲಾಯಿತು?
a) 2007-08✅
b) 2010-11
c) 2012-13
d) 2013-14
23) ಶಾಂತಕುಮಾರ ನೇತೃತ್ವದ ಅಧಿಕ ಶಕ್ತಿಯ ಸಮಿತಿಯ ಈ
ಕೆಳಗಿನದಕ್ಕೆ ಸಂಬಂಧಿಸಿದೆ ...?
a) ಉದ್ದಿಮೆಯ ಹಣಕಾಸು
b) ಪರಿಸರ ಪ್ರಮಾಣ
c) ಭಾರತೀಯ ಆಹಾರನಿಗಮದ ಮರುಸ್ಥಾಪನೆ✅
d) ತೈಲ ಬೆಲೆಗಳ ಮರುಸ್ಥಾಪನೆ
24) 14 ನೇಯ ಹಣಕಾಸು ಆಯೋಗವು ಈ ಕೆಳಗಿನ ಯಾವ
ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ
ಸಂಪನ್ಮೂಲಗಳನ್ನು ವಿತರಿಸುತ್ತದೆ?
a) ಜನಸಂಖ್ಯೆ ಜನಾಂಗೀಯ ಪರಿವರ್ತನೆ ಆದಾಯದ ದೂರ
ಪ್ರದೇಶ ಮತ್ತು ಅರಣ್ಯ ಪ್ರದೇಶ✅
b) ಜನಸಂಖ್ಯೆ ಮೂಲಸೌಕರ್ಯ ವಿತ್ತೀಯ ಶಿಸ್ತು ಮತ್ತು ಪ್ರದೇಶ
c) ಜನಸಂಖ್ಯೆ ಜನಾಂಗೀಯ ಪರಿವರ್ತನೆ ಮೂಲ ಸೌಕರ್ಯ ಮತ್ತು
ಪ್ರದೇಶ
d) ಜನಸಂಖ್ಯೆ ಆದಾಯದ ಅಂತರ ಪ್ರದೇಶ ಮತ್ತು ವಿತ್ತೀಯ
ಶಿಸ್ತು
25) ಅರೆವಾಹಕಗಳಿಗೆ ಸೂಕ್ತ ಅಶುದ್ದಗೊಳಿಸುವ ಪದಾರ್ಥಗಳನ್ನು
ಸೇರಿಸುವುದರಿಂದ ____?
a) ತನ್ನ ವಿದ್ಯುತ ಪ್ರತಿರೋಧಶೀಲತೆ ಯನ್ನು ಹೆಚ್ಚಿಸಿಕೊಳ್ಳುತ
್ತದೆ
b) ತನ್ನ ವಿದ್ಯುತ ವಾಹಕತೆಯನ್ನು ಹೆಚ್ಚಿಸಿಕೊಳ್ಳುತ್ತದೆ✅
c) ಅಧಿಕ ವೋಲ್ಟೆಜನ್ನು ತಡೆದುಕೊಳ್ಳಲು ಸಮರ್ಥವಾಗಿಸುತ್ತದೆ
d) ತನ್ನ ಉಪಯೋಗ ಸಮಯ ಹೆಚ್ಚಾಗುತ್ತದೆ
26) ಮಳೆಯ ದಿನದಂದು ಸಣ್ಣ ಪ್ರಮಾಣದ ಎಣ್ಣೆ ಪದರಗಳು
ನೀರಿನ ಮೇಲೆ ಹೊಳೆಯುವ ವರ್ಣಗಳನ್ನು ತೋರಿಸುತ್ತವೆ,
ಇದಕ್ಕೆ ಕಾರಣ __?
a) ಪ್ರಸರಣ
b) ಧ್ರುವೀಕರಣ
c) ವಿವರ್ತನೆ
d) ವ್ಯತಿಕರಣ✅
[10/10 6:59 am] : 🔺ಕ್ವಿಜ್🔺
09/06/2016
1) ಮಸೂದೆಯು ಸಂವಿಧಾನಾತ್ಮಕವಿದೆಯೋ ಅಥವಾ
ಇಲ್ಲವೋ ಎಂದು ಸಂಶಯ ಬಂದಾಗ ರಾಷ್ಟ್ರಪತಿಯು ಕೆಳಗಿನ
ಕ್ರಮ ತೆಗೆದು ಕೊಳ್ಳಬಹುದು ?
a) ಉಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
b) ಸವೋ೯ಚ್ಚ ನ್ಯಾಯಾಲಯಕ್ಕೆ ಅಭಿಪ್ರಾಯಕ್ಕೋಸ್ಕರ
ಮಸೂದೆಯನ್ನು ಕಳುಹಿಸಬಹುದು
c) ಮಸೂದೆಯನ್ನು ತಿರಸ್ಕರಿಸಬಹುದು
d) ಪ್ರಧಾನಮಂತ್ರಿಯ ಅಭಿಪ್ರಾಯಕ್ಕೆ ಮಸೂದೆಯನ್ನು
ಕಳುಹಿಸಬಹುದು
2) ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು
ಯಾವುದು ?
a) ಅಲಹಾಬಾದ್ ಸ್ತಂಭಶಾಸನ - ಸಮುದ್ರಗುಪ್ತ
b) ಐಹೊಳೆ ಶಾಸನ - ಇಮ್ಮಡಿ ಪುಲಕೇಶಿ
c) ಮಸ್ಕಿಶಾಸನ - ಅಶೋಕನ ಕಳಿಂಗ ಯುದ್ದ ✅
d) ಉತ್ತರ ಮೇರೂರು ಶಾಸನ - ಚೋಳರ ಆಡಳಿತ ವ್ಯವಸ್ಥೆ
3) ಭಾರತದ ಇತಿಹಾಸದ ಈ ಕೆಳಗಿನ ಘಟನೆಗಳು ಘಟಿಸಿದವು ಅವುಗಳ
ಕಾಲಾನುಕ್ರಮ ಸರಣಿಯನ್ನು ಗುರುತಿಸಿ ?
೧) ಮತೀಯ ಗಲಭೆ
೨) ಪೂಣ೯ ಸ್ವರಾಜ್ಯ ಘೋಷಣೆ
೩) ಸತಂತ್ರ್ಯ ಭಾರತದ ಹುಟ್ಟು
೪) ಪಾಕಿಸ್ತಾನದ ರಚನೆ
a) 1 2 3 4
b) 2 1 4 3✅
c) 3 2 1 4
d) 4 1 3 2
4) ಕನಾ೯ಟದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಈ ಕೆಳಗಿನ
ಘಟನೆಗಳು ಸಂಭವಿಸಿದವು
೧) ಅಂಕೋಲ ಸತ್ಯಾಗ್ರಹ

೨) ವಿದುರಾಶ್ವತ್ಥ ದುರಂತ
೩) ಹಲಗಲಿಯ ಬೇಡರ ದಂಗೆ
೪) ಮೈಸೂರು ಚಲೋ ಚಳುವಳಿ ಈ
a) 2 1 3 4
b) 3 2 4 1
c) 4 3 1 2
d) 3 1 2 4✅
5) ಉದ್ದವಾಗ ಆವರ್ತ ಕೋಷ್ಟಕವು ಮೂಲ ವಸ್ತುಗಳ ಈ ಕೆಳಗಿನ
ಗುಣಲಕ್ಷಣಗಳ ತಳಹದಿಯ ಮೇಲೆ ರಚಿತಗೊಂಡಿದೆ?
a) ಪರಮಾಣ್ವಿಕ ದ್ರವ್ಯರಾಶಿ
b) ಪರಮಾಣು ಸಂಖ್ಯೆ✅
c) ಪರಮಾಣು ಗಾತ್ರ
d) ಋಣ ವಿದ್ಯುದಂಶತೆ (electronegativity)
6) ಯಾವ ರೋಗಾಣು ದಡಾರ (Measles) ವನ್ನುಂಟು
ಮಾಡುತ್ತದೆ ?
R
a) ವಿಬ್ರಿಯೊ
b) ಸ್ಟ್ರೆಪ್ಟೋಕೊಕ್ಕಸ್
c) ರುಬಿಯೋಲ✅
d) ಮೈಕೊಬ್ಯಾಕ್ಟೀರಿಯಮ್
7) ಈ ಕೆಳಗಿನವುಗಳಲ್ಲಿ ಯಾವುದು ಆನೆ ಕಾಲು ರೋಗವನ್ನು
ತರುತ್ತದೆ ?
a) ವುಚೆರೆರಿಯ ಬ್ಯಾಂಕ್ರೊಫ್ಟಿ✅
b) ಟೀನಿಯ ಸ್ಯಾಜಿನೇಟ
c) ಎಖಿನೋಕೋಕಸ್ ಗ್ರಾನ್ಯುಲೋಸಸ್
d) ಸಿಸ್ಟೋಸ್ಟೋಮ ಮನ್ಸೋನಿ
8) ಭಾರತದ ಪ್ರಪ್ರಥಮವಾಗಿ ಅಣು ವಿದ್ಯುತ್ ಕೇಂದ್ರ ಎಲ್ಲಿ
ಯಾವಾಗ ಸ್ಥಾಪನೆಯಾಯಿತು?
a) ಮಹರಾಷ್ಟ್ರ 1850
b) ರಾಜಸ್ಥಾನ 1996
c) ಗುಜರಾತ್ 1976
d) ಮಹಾರಾಷ್ಟ್ರ 1969✅
9) 2011 - 12 ರ ಸಾಲಿಗೆ ಮಂಡಿತವಾದ ಕರ್ನಾಟಕ ಬಜೆಟ್ ನಲ್ಲಿ
ದೇಶದಲ್ಲಿ ಪ್ರಥಮ ಬಾರಿಗೆt ಕೆಳಕಂಡದ್ದಕ್ಕೆ ಸಂಬಂಧಿಸಿದಂತೆ
ಪ್ರತ್ಯೇಕ ಬಜೆಟ್ ರೂಪಿತವಾಗಿದೆ?
a) ಕೃಷಿ ಕ್ಷೇತ್ರ✅
b) ಕೈಗಾರಿಕಾ ಕ್ಷೇತ್ರ
c) ವ್ಯಾಪಾರ ಕ್ಷೇತ್ರ
d) ಸಾಗಾಣಿಕಾ ಕ್ಷೇತ್ರ
10) 2011 ರ ಪ್ರಾಥಮಿಕ ಜನಗಣತಿ ಅಂಕಿ ಸಂಖ್ಯೆಗಳ ಪ್ರಕಾರ
ಕೆಳಕಂಡ ಯಾವ ಗುಂಪಿನ ರಾಜ್ಯಗಳಲ್ಲಿನ ಜನಸಂಖ್ಯಾ
ಸಾಂದ್ರತೆಯು ಪ್ರತಿ ಚದರ ಕಿ.ಮೀ. ಗೆ 500 ಕ್ಕಿಂತ ಹೆಚ್ಚಾಗಿದೆ?
a) ಕರ್ನಾಟಕ, ಆಂಧ್ರಪ್ರದೇಶ, ದೆಹಲಿ
b) ತಮಿಳುನಾಡು, ಕೇರಳ, ದೆಹಲಿ✅
c) ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ
d) ಪುದುಚೇರಿ, ಚಂಡೀಘರ್, ಗೋವಾ
11) ಬೆಂಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತಿ ನಗರವನ್ನಾಗಿ
ಮಾಡುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರವು 2011 ರ ಮಾರ್ಚ
15 ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದಕ್ಕಿಂತ ಕಡಿಮೆ
ದಪ್ಪವಿರುವ ಪ್ಲಾಸ್ಟಿಕ್ ಗಳ ಬಳಕೆಯನ್ನು ನಿಷೇಧಿಸಿದೆ ?
a) 20 ಮೈಕ್ರಾನ್ ಗಳಿಗಿಂತt ಕಡಿಮೆ
b) 30 ಮೈಕ್ರಾನ್ ಗಳಿಗಿಂತt ಕಡಿಮೆ
c) 40 ಮೈಕ್ರಾನ್ ಗಳಿಂತ ಕಡಿಮೆ✅
d) 45 ಮೈಕ್ರಾನ್ ಗಳಿಗಿಂತ ಕಡಿಮೆ
12) ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
’ಆಸರೆ’ ಯಾವುದಕ್ಕೆ ಸಂಬಂಧಿಸಿದೆ?
a) ಉತ್ತರ ಕರ್ನಾಟಕಕ್ಕೆ 2009 ರಲ್ಲಿನ ಪ್ರವಾಹದ ಹಾವಳಿಯಿಂದಈ
ತೀವ್ರ ತೊಂದರೆಗೊಳಗಾದ ಜನರಿಗಾಗಿ ಮನೆಗಳನ್ನು
ನಿರ್ಮಿಸುವುದು✅
b) ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿಯನ್ನು
ಒದಗಿಸುವುದು
c) ಭಿಕ್ಷುಕರಿಗೆ ಹಾಗೂ ಮನೆ ಇಲ್ಲದವರಿಗೆ ವಸತಿಯನ್ನು
ಒದಗಿಸುವುದು
d) ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ವಸತಿಯನ್ನು
ಒದಗಿಸುವುದು
13) ಜಪಾನಿನಲ್ಲಿ ಇಟಾಯಿ-ಇಟಾಯಿ ರೋಗವು ಈ ಕೆಳಕಂಡ
ಅಂಶದಿಂದ ಕಲುಷಿತಗೊಂಡ ಅಕ್ಕಿಯನ್ನು ಸೇವಿಸಿದ್ದರಿಂದ
ಉಂಟಾಯಿತು?
a) ಪಾದರಸ✅
b) ಕ್ಯಾಡ್ಮಿಯಂ
c) ಕಬ್ಬಿಣ
d) ಕ್ಯಾಲ್ಸಿಯಂ
14) ಹಳದಿ ಬೆಳಕನ್ನು ಉತ್ಸರ್ಜಿಸುವ ನಕ್ಷತ್ರವೊಂದು
ಭೂಮಿಯತ್ತ ವೇಗೋತ್ಕರ್ಷಿತವಾಗಿ ಬರುವಾಗ ಭೂಮಿಯ
ಮೇಲಿನಿಂದ ನೋಡಿದರೆ ಅದರ ಬಣ್ಣವು...?
a) ಕ್ರಮೇಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
b) ಕ್ರಮೇಣವಾಗಿ ನೀಲಲೋಹಿತ (ನೇರಳೆ) ಬಣ್ಣಕ್ಕೆ
ತಿರುಗುತ್ತದೆ✅
c) ಯಾವುದೇ ಬದಲಾವಣೆಯಾಗುವುದಿಲ್ಲ.
d) ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತದೆ
15) ಸಗಟು ಮಾರಾಟಬೆಲೆ ಸೂಚಿಯ ಆಧಾರ ವರ್ಷವನ್ನು ಕೆಳಕಂಡ
ವರ್ಷಕ್ಕೆ ಬದಲಾಯಿಸಲಾಗಿದೆ...?
a) 2003-04
b) 2000-01
c) 2004-05✅
d) 2007-08
16) ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ
ವಿಕ್ಷೇಪಣಗೊಳ್ಳುತ್ತದೆ. ಕಾರಣವೇನು?
a) ಭೂಮಿಯ ಪರಿಭ್ರಮಣ✅
b) ಭೂಮಿಯ ಅಕ್ಷದ ಬಾಗುವಿಕೆ
c) ಸೂರ್ಯನ ಸುತ್ತ ಭೂಮಿಯ ಪರಿಭ್ರಮಣ
d) ಚಂದ್ರನ ಗುರುತ್ವಾಕರ್ಷಣ ಬಲ
17) ಈ ಕೆಳಗಿನ ವಿವರಣೆಗಳನ್ನು ಗಮನಿಸಿ ಕೆಳಗೆ ಕೊಟ್ಟಿರುವ
ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ.
I) ಎಲ್ಲಾ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ
ತಳದಲ್ಲಿದ್ದವು
II) ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ
ತಳದಲ್ಲಿದ್ದವು
III) ಯಾವ ಜಲಜ ಶಿಲೆಗಳೂ ಯಾವ ಕಾಲದಲ್ಲೂ ಸಮುದ್ರದ
ತಳದಲ್ಲಿರಲಿಲ್ಲ
IV) ಎಲ್ಲಾ ಅಗ್ನಿಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ
ತಳದಲ್ಲಿದ್ದವು
a) I ಮಾತ್ರ ಸರಿ ಇದೆ✅
b) II ಮಾತ್ರ ಸರಿ ಇದೆ
c) III ಮತ್ತು IV ಸರಿ ಇವೆ
d) III ಮಾತ್ರ ಸರಿ ಇದೆ
18) ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ
ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ
ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು
ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.. ?
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
a) I, II, III, IV
b) II, I, III, IV
c) III, I IV, II
d) II, I, IV, III✅
19) ಕರ್ನಾಟಕದ ಕೃಷಿ ನೀರಾವರಿ ಕ್ಷೇತ್ರದಲ್ಲಿ ಎಲ್ಲಾ
ನೀರಾವರಿ ಮೂಲಗಳ ಪೈಕಿ ಯಾವ ಕ್ಷೇತ್ರದ ಪಾಲು
ಅಧಿಕವಾಗಿದೆ?
A) ಕೊಳವೆ/ಕೊರೆದ ಬಾವಿ✅
B) ನೀರಾವರಿ ಕಾಲುವೆ
C) ತೋಡಿದ ಬಾವಿ
D) ಕೆರೆಗಳು
20) ಕರ್ನಾಟಕದ ಮಲ್ಟಿ ಸೆಕ್ಟರಲ್ ಸ್ಟಾರ್ಟ್ಆಪ್ ನೀತಿ 2015-2020 ರ
ಪ್ರಕಾರ ರಾಜ್ಯದಲ್ಲಿ 2020 ರ ವೇಳೆಗೆ ಎಷ್ಟು ಸ್ಟಾರ್ಟ್ ಆಪ್
ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ?
A) 10,000
B) 20,000✅
C) 15,000
D) 25,000
21) ಕರ್ನಾಟಕವು ದೇಶದಲ್ಲೆ ನೂತನ ಜವಳಿ ನೀತಿಯನ್ನು ತಂದ
ಮೊದಲ ರಾಜ್ಯ. ಕರ್ನಾಟಕದ ನೂತನ ಜವಳಿ ನೀತಿ ಜಾರಿ ಇರುವ
ವರ್ಷ______?
A) 2013-18✅
B) 2014-19
C) 2015-20
D) 2012-17
22) ಡಾ. ನಂಜುಂಡಪ್ಪ ರವರ ವರದಿಯ ಮೇರೆಗೆ ರಾಜ್ಯದಲ್ಲಿ
ಎಷ್ಟು ತಾಲ್ಲೂಕಗಳನ್ನು ಹಿಂದುಳಿದ ತಾಲ್ಲೂಕುಗಳೆಂದು
ಗುರುತಿಸಲಾಗಿದೆ?
A) 110
B) 114✅
C) 121
D) 125
[10/10 7:00 am] : 🚩ಕ್ವಿಜ್🚩
9/06/2016
1) 2015-16 ನೇ ಸಾಲಿನಲ್ಲಿ ಕರ್ನಾಟಕದ ತಲಾದಾಯ ಎಷ್ಟು?
A) 142500
B) 135250
C) 130897✅
D) 145300
Explanation: ಇ
130897: ಕರ್ನಾಟಕ ರಾಜ್ಯದ ತಲಾದಾಯ 2015-16 ನೇ
ಸಾಲಿನಲ್ಲಿ 130897 ಇದ್ದು, ರಾಜ್ಯವು ತಲಾದಾಯದಲ್ಲಿ
ಆರನೇ ಸ್ಥಾನವನ್ನು ಹೊಂದಿದೆ.
2) ಈ ಕೆಳಗಿನ ಯಾವ ಮೂರು ಜಿಲ್ಲೆಗಳು ರಾಜ್ಯದಲ್ಲಿ ಕ್ರಮವಾಗಿ
ಅತಿ ಹೆಚ್ಚು ನಗರೀಕರಣಗೊಳ್ಳುತ್ತಿರುವ ಜಿಲ್ಲೆಗಳಾಗಿವೆ?
A) ಬೆಂಗಳೂರು, ಧಾರವಾಡ,ಇ ಗುಲ್ಬರ್ಗಾ
B) ಬೆಂಗಳೂರು, ಮೈಸೂರು, ಧಾರವಾಡ
C) ಬೆಂಗಳೂರು, ಧಾರವಾಡ, ದಕ್ಷಿಣ ಕನ್ನಡ✅
D) ಬೆಂಗಳೂರು, ತುಮಕೂರು, ಮೈಸೂರು
Explanation:
ಬೆಂಗಳೂರು, ಧಾರವಾಡ, ದಕ್ಷಿಣ ಕನ್ನಡ:
ಬೆಂಗಳೂರು, ಧಾರವಾಡ ಮತ್ತು ದಕ್ಷಿಣ ಕನ್ನಡ ರಾಜ್ಯದಲ್ಲಿ ಅತಿ
ಹೆಚ್ಚು ನಗರೀಕರಣವಾಗಿರುವ ಮೂರು ಜಿಲ್ಲೆಗಳು.
ಬೆಂಗಳೂರಿನಲ್ಲಿ ಶೇ 90.94 ರಷ್ಟು ಜನರು ನಗರದಲ್ಲಿ ವಾಸಿಸುವ
ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ನಗರೀಕಣಗೊಂಡ
ಜಿಲ್ಲೆಯಾಗಿದೆ, ಎರಡನೇ ಸ್ಥಾನದಲ್ಲಿ ಧಾರವಾಡ (ಶೇ 56.82)
ಹಾಗೂ ಮೂರನೇ ಸ್ಥಾನದಲ್ಲಿ ದಕ್ಷಿಣ ಕನ್ನಡ (ಶೇ 47.67%)
ಇದೆ.
3) ಸಂವಿಧಾನದ ಅನುಚ್ಛೇದ 371-ಜೆ ಅನ್ವಯ ಸ್ಥಾಪಿಸಲಾಗಿರುವ
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ
ವ್ಯಾಪ್ತಿಗೆ ಎಷ್ಟು ವಿಧಾನ ಸಭಾ ಕ್ಷೇತ್ರಗಳು ಒಳಪಡುತ್ತವೆ?
A) 51
B) 45
C) 42✅
D) 49
Explanation:
42: ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಡಿ
ಆರು ಜಿಲ್ಲೆಯ 42 ವಿಧಾನ ಸಭಾ ಕ್ಷೇತ್ರಗಳು ಒಳಪಡುತ್ತವೆ.
4) ಇವರಲ್ಲಿ ಯಾರು ರಾಜ್ಯ ಸರ್ಕಾರದ ವಿತ್ತೀಯ ನಿರ್ವಹಣೆ
ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ?
A) ಮುಖ್ಯಮಂತ್ರಿಗಳು
B) ಹಣಕಾಸು ಸಚಿವರು
C) ಮುಖ್ಯಕಾರ್ಯದರ್ಶಿ✅
D) ಗೃಹ ಸಚಿವರು
Explanation:
ಮುಖ್ಯಕಾರ್ಯದರ್ಶಿ: ರಾಜ್ಯ ಸರ್ಕಾರವು ವಿತ್ತೀಯ ನಿರ್ವಹಣೆ
ಮತ್ತು ಪರಿಶೀಲನಾ ಸಮಿತಿಯನ್ನು ಮುಖ್ಯಕಾರ್ಯದರ್ಶಿ ರವರ
ನೇತೃತ್ವದಲ್ಲಿ ಸ್ಥಾಪಿಸಿದ್ದು, ಈ ಸಮಿತಿಯು ರಾಜ್ಯದ
ಹಣಕಾಸು ಮತ್ತು ಋಣದ ಸ್ಥಿತಿಗತಿಯ ಬಗ್ಗೆ ಪುನಾರುವಲೋಕನ
ಮಾಡಿ ಹಣಕಾಸು ಸಚಿವರಿಗೆ ಸಲಹೆ ನೀಡುತ್ತದೆ
5) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು
ಆಯ್ಕೆ ಮಾಡಿ?
A) ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯು ರೂ 15
ಕೋಟಿಯಿಂದ 100 ಕೋಟಿ ಯೋಜನೆಗೆ ಅನುಮೋದನೆ
ನೀಡುವ ಅಧಿಕಾರ ಹೊಂದಿದೆ
B) ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯು ರೂ 1 00
ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಅನುಮೋದನೆ ನೀಡುವ
ಅಧಿಕಾರ ಹೊಂದಿದೆ
A) ಹೇಳಿಕೆ ಒಂದು ಮಾತ್ರ ಸರಿ
B) ಹೇಳಿಕೆ ಎರಡು ಮಾತ್ರ ಸರಿ
C) ಎರಡು ಹೇಳಿಕೆಗಳು ಸರಿಯಾಗಿವೆ✅
D) ಎರಡು ಹೇಳಿಕೆಗಳು ತಪ್ಪಾಗಿವೆ
Explanation:
ಎರಡು ಹೇಳಿಕೆಗಳು ಸರಿಯಾಗಿವೆ
6) ಮಹಾತ್ಮಗಾಂಧಿ ಪ್ರಾದೇಶಿಕ ಗ್ರಾಮೀಣ ಇಂಧನ ಮತ್ತು
ಅಭಿವೃದ್ದಿ ಸಂಸ್ಥೆ ಎಲ್ಲಿದೆ?
A) ಬೆಂಗಳೂರು✅
B) ಬೆಳಗಾವಿ
C) ಮೈಸೂರು
D) ಹಾಸನ
Explanation:
ಬೆಂಗಳೂರು: ಮಹಾತ್ಮಗಾಂಧಿ ಪ್ರಾದೇಶಿಕ ಗ್ರಾಮೀಣ
ಇಂಧನ ಮತ್ತು ಅಭಿವೃದ್ದಿ ಸಂಸ್ಥೆ ಬೆಂಗಳೂರಿನ ಜಕ್ಕೂರು ಬಳಿ
ಇದೆ. ಈ ಸಂಸ್ಥೆಯು ನವೀನ ಹಾಗೂ ನವೀಕರಿಸಬಹುದಾದ
ಇಂಧನ ಮಂತ್ರಾಲಯ ಭಾರತ ಸರ್ಕಾರದ ಸಹಯಾನುದಾನದಿಂದ
ಅಸ್ಥಿತ್ವಕ್ಕೆ ಬಂದಿದೆ. .
7) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ..
i) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರವು
(BMRD) ಒಂದು ಸ್ವಾಯುತ್ತ ಸಂಸ್ಥೆ
ii) ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ
ಪ್ರಾಧಿಕಾರ ಕಾಯ್ದೆ 1987 ರ ಪ್ರಕಾರ ರಚಿಸಲಾಗಿದೆ
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) ಒಂದು ಮಾತ್ರ✅
B) ಎರಡು ಮಾತ್ರ
C) ಎರಡು ಸರಿ
D) ಎರಡು ತಪ್ಪು
Explanation:
ಒಂದು ಮಾತ್ರ: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ
ಪ್ರಾಧಿಕಾರವು (BMRD) ಒಂದು ಸ್ವಾಯುತ್ತ ಸಂಸ್ಥೆಯಾಗಿದೆ.
ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ
ಪ್ರಾಧಿಕಾರ ಕಾಯ್ದೆ 1985 ರ ಪ್ರಕಾರ ರಚಿಸಲಾಗಿದೆ.
8) 2014-15 ರ ಅಂತ್ಯಕ್ಕೆ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ
ಎಷ್ಟಿದೆ?
A) 35
B) 32✅
C) 40
D) 48
Explanation:
32 : ರಾಜ್ಯದಲ್ಲಿ 2014-15 ರ ಅಂತ್ಯಕ್ಕೆ ಶಿಶು ಮರಣ ಪ್ರಮಾಣ
ಪ್ರತಿ ಸಾವಿರ ಜನನಗಳಿಗೆ 32 ರಷ್ಟಿದೆ.
9) ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ?
i) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ
ಮೊದಲ ಹುಲಿ ಸಂರಕ್ಷಿತ ತಾಣ
ii) ಪ್ರಸ್ತುತ ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ತಾಣಗಳಿವೆ
iii) ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ
ಸ್ಥಾನದಲ್ಲಿದೆ ಸರಿಯಾದ ಉತ್ತರವನ್ನು ಆಯ್ಕೆಮಾಡಿ:
A) I & ii
B) ii & iii
C) iii ಮಾತ್ರ
D) ಎಲ್ಲವೂ ಸರಿಯಾಗಿವೆ✅
Explanation:
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಮೊದಲ
ಹುಲಿ ಸಂರಕ್ಷಿತ ತಾಣವಾಗಿದೆ. 1973 ರಲ್ಲಿ ಬಂಡೀಪುರ
ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ತಾಣವೆಂದು
ಘೋಷಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ ಐದು ಹುಲಿ
ಸಂರಕ್ಷಿತ ತಾಣಗಳಿವೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ
ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
10) “ಪಂಚಮಿತ್ರ” ಮತ್ತು “ಪಂಚತಂತ್ರ” ವೆಬ್ ತಾಣವು ರಾಜ್ಯ
ಸರ್ಕಾರದ ಯಾವ ಇಲಾಖೆಗೆ ಸಂಬಂಧಿಸಿದಾಗಿದೆ?
A) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ✅
B) ಕಂದಾಯ ಇಲಾಖೆ
C) ಮಹಿಳಾ ಮತ್ತು ಶಿಶು ಕಲಾಣ್ಯ ಇಲಾಖೆ
D) ಸಮಾಜ ಕಲ್ಯಾಣ ಇಲಾಖೆ
Explanation:
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ:
ಪಂಚತಂತ್ರ ಮತ್ತು ಪಂಚಮಿತ್ರ ವೆಬ್ ತಾಣವು
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ
ಸಂಬಂಧಿಸಿದಾಗಿದ್ದು, ಈ ವೆಬ್ ತಾಣದಲ್ಲಿ ರಾಜ್ಯದ ಎಲ್ಲಾ
ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ
ಸಂಪೂರ್ಣ ವಿವರ, ಯೋಜನೆಗಳ ವಿವರ, ಅಧಿಕಾರಿಗಳ ವಿವರ
ಒಳಗೊಂಡಿದೆ.
[10/10 7:01 am] : ಕ್ವಿಜ್
🔺4/06/2016🔺
1) ಸಿಂಗ್ ಭೂಮ್ ಮತ್ತು ಕಿಯೊಂಜಾರ್ ಗಳು ಇದರ ಪ್ರಮುಖ
ಉತ್ಪಾದನಾ ಕೇಂದ್ರಗಳು?
a) ಮೈಕಾ
b) ಕಲ್ಲಿದ್ದಲು
c) ಮ್ಯಾಂಗನೀಸ್
d) ಕಬ್ಬಿಣದ ಅದಿರು✅
2) ಭೂಮಿಯಿಂದ ನೋಡುತ್ತಿರುವ ವ್ಯಕ್ತಿಗೆ ನಕ್ಷತ್ರಗಳು
ಮಿನುಗುತ್ತಿರುವಂತೆ ಕಾಣಿಸುತ್ತವೆ. ಇದಕ್ಕೆ ಕಾರಣ...?
a) ಭೂಮಿಯ ವಾತಾವರಣದಲ್ಲಿ ಆಗುವಂತಹ ವಕ್ರೀಭವನದ
ಏರಿಳಿತಗಳು
b) ನಕ್ಷತ್ರಗಳ ಸ್ವಂತ ವಾತಾವರಣದಲ್ಲಿ ನಕ್ಷತ್ರದ ಬೆಳಕಿನ
ಆವರ್ತಾಂಕ ಹೀರಿಕೆ
c) ಭೂಮಿಯ ವಾತಾವರಣದಿಂದ ನಕ್ಷತ್ರದ ಬೆಳಕಿನ ಆವರ್ತಾಂಕ
ಹೀರಿಕೆ✅
d) ನಕ್ಷತ್ರಗಳು ನಿರಂತರವಾಗಿ ಬೆಳಕನ್ನು ಹೊರಸೂಸುವುದಿಲ್ಲ
ಎಂಬ ಕಾರಣದಿಂದ
3) ಮೊಘಲರ ಮನ್ ಸಬ್ದಾರಿ ವ್ಯವಸ್ಥೆಯು...?
a) ನಾಗರೀಕ ಹಾಗೂ ಸೇವಾ ವ್ಯವಹಾರಗಳ ಶ್ರೇಣಿ ಪದ್ದತಿ✅
b) ಭೂಮಿಯ ಕೊಡುಗೆ, ಇದರಿಂದಾಗಿ ಜಮೀನ್ದಾರಿ ವ್ಯವಸ್ಥೆಯ
ನಿರ್ಮಾಣ
c) ರಾಜ ಕುಟುಂಬದ ಸದಸ್ಯರು ಆಚರಿಸುತ್ತಿದ್ದ ಒಂದು ಉತ್ಸವ
d) ಅಕ್ಬರನು ಧಾರ್ಮಿಕ ಕ್ಷೇತ್ರದಲ್ಲಿ ಜಾರಿಗೆ ತಂದ
ಸುಧಾರಣೆಗಳು
4) ಆರಂಭದ ತಮಿಳು ಸಾಹಿತ್ಯವನ್ನು ಸಂಗಂ ಸಾಹಿತ್ಯ ಎಂದೂ
ಕರೆಯುತ್ತಾರೆ. ಕಾರಣವೇನು ?
a) ಇದನ್ನು ಬೌದ್ಧ ಸಂಘದ ಸದಸ್ಯರು ರಚಿಸಿದ್ದರು
b) ಇದು ಸಂಗಮ ರಾಜವಂಶದ ಆಶ್ರಯದಲ್ಲಿ ರಚಿತವಾಗಿತ್ತು✅.
c) ಇದು ಪಂಡಿತರ ಆಧ್ಯಾತ್ಮ ಪಂಥದೊಂದಿಗೆ ಸಂಬಂಧ
ಪಡೆದಿರುವಂತದ್ದು
d) ಇದನ್ನು ಆಧುನಿಕ ಯುಗದಲ್ಲಿ ಮಧುರೈನ ನಾಲ್ಕನೇ ತಮಿಳು
ಚಂಕಂನಿಂದ ಕಂಡುಹಿಡಿಯಲಾಯಿತು.
5) ಶಹಜಾನನ ಕಾಲದ ಮುಘಲ್ ವಾಸ್ತುಶಿಲ್ಪಗಳಲ್ಲೆಲ್ಲ ಕಂಡು
ಬರುವಂತಹ ವಿಶಿಷ್ಟ ಅಂಶ ಯಾವುದು ?
a) ಆನೇಕ ಶೃಂಗಗಳ ಕಮಾನುಗಳು
b) ಅರೆಗೊಳವಿಯಾಕಾರದ ಸ್ಥಂಭಗಳು
c) ಮುಖಭಾಗದ ಚಾಚು ತೊಲೆ ತೂಗು ರಚನೆಗಳು
d) ದೀರ್ಘ ವೃತ್ತಾಕಾರದ ವೇದಿಕೆಗಳು✅
6) 1857ರ ದಂಗೆಯು 'ಮೊದಲ ಸ್ವಾತಂತ್ರ್ಯ ಯುದ್ದ' ಎಂಬ
ಪರಿಕಲ್ಪನೆಯನ್ನು ತಿರಸ್ಕರಿಸಿದವರು ಯಾರು ?
a) ಕೆ.ಎಂ.ಫಣಿಕ್ಕರ್✅
b) ಪೆರ್ಸಿವಲ್ ಸ್ಟಿಯರ್
c) ಪಿ.ಇ.ಎಂ.ರಾಬರ್ಟ್ಸ್
d) ಆರ್.ಸಿ.ಮಜುಂದಾರ್
7) ರಾಜಸ್ಥಾನ ಕಾಲುವೆಯು ಯಾವ ಯಾವ ರಾಜ್ಯಗಳಿಗೆ
ನೀರಾವರಿ ಮಾಡುತ್ತದೆ ?
a) ರಾಜಸ್ಥಾನ್, ಪಂಜಾಬ್ ಮತ್ತು ಹರಿಯಾಣ✅
b) ರಾಜಸ್ತಾನ್, ಪಂಜಾಬ್ ಮತ್ತು ಗುಜರಾತ್
c) ರಾಜಸ್ತಾನ್, ಪಂಜಾಬ್ ಮತ್ತು ಮಧ್ಯಪ್ರದೇಶ
d) ರಾಜಸ್ತಾನ್, ಪಂಜಾಬ್ ಮತ್ತು ಕಾಶ್ಮೀರ
8) ಸಾಗರಗಳಿಗೆ ಉಪ್ಪು ಮುಖ್ಯವಾಗಿ ಕೆಳಕಂಡ ಮೂಲಗಳಿಂದ
ಬರುತ್ತದೆ...?
a) ಹಿಮನದಿಗಳಿಂದ
b) ಸಾಗರ ಪ್ರವಾಹಗಳಿಂದ
c) ಸೂರ್ಯನ ಬೆಳಕಿನಿಂದ
d) ನದಿಗಳಿಂದ✅
9 ) ಅಡಿಗೆ ಉಪ್ಪು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರುತ್ತದೆ
ಏಕೆಂದರೆ?
a) ಸೋಡಿಯಂ ಕ್ಲೋರೈಡ್ ಜಲಾಕಷ೯ಕ ಆಗಿದೆ ✅
b) ಸೋಡಿಯಂ ಕ್ಲೋರೈಡ್ ಜಲವಿಮೋಚಕ ಆಗಿದೆ
c) ಸೋಡಿಯಂ ಕ್ಲೋರೈಡ್ ನಲ್ಲಿ ಸೋಡಿಯಂ ಅಯೊಡೈಡ್
ಸ್ವಲ್ಪ ಪ್ರಮಾಣದಲ್ಲಿದೆ
d) ಸೋಡಿಯಂ ಕ್ಲೋರೈಡ್ ನಲ್ಲಿ ಮೆಗ್ನೀಶಿಯಂ ಕ್ಲೋರೈಡ್
ನಂಥ ಜಲಾಕಷ೯ಕ ಅಶುದ್ದತೆಗಳಿವೆ
10)ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಹೊಂದಾಣಿಕೆ
ಆಗುವುದಿಲ್ಲವೋ ಗುರುತಿಸಿ?
a) ಕಾಜಿರಂಗ - ರೈನೊ(ಘೆಂಡಾ)
b) ಜಿಮ್ ಕಾಬೆ೯ಟ್ ನ್ಯಾಷನಲ್ ಪಾಕ್೯ - ಉತ್ತರಪ್ರದೇಶ
c) ಸುಂದರ್ ಬನ್ಸ್ - ಬಿಹಾರ್✅
d) ಗಿರಿನಾರ್ ಅರಣ್ಯ - ಸಿಂಹ
11)ಕೆಳಕಾಣಿಸಿದ ಸಂದಭ೯ದಲ್ಲಿ ಕೇಂದ್ರವು ರಾಜ್ಯ ಸರಕಾರಕ್ಕೆ
ಮೀಸಲಿಟ್ಟ ವಿಷಯಗಳ ಮೇಲೆ ಕಾನೂನು ಪಾಸು
ಮಾಡಬಹುದು
1) ಸಂವಿಧಾನದ ಯಂತ್ರವು ಕುಸಿದುಬಿದ್ದಾಗ
2) ಅಂತರಾಷ್ಟ್ರೀಯ ಒಪ್ಪಂದಕ್ಕೆ ಅನುಷ್ಟಾನ
ಮಾಡಬೇಕಾದಾಗ
3) ರಾಷ್ಟ್ರೀಯ ಹಿತದೃಷ್ಟಿಯಿಂದ
4) ಕೇಂದ್ರದ ಇಷ್ಟದ ಮೇರೆಗೆ
ಕೋಡ ಸಹಾಯದಿಂದ ಸರಿ ಉತ್ತರವನ್ನು ಗುರುತಿಸಿ ?
a) ವಿಧಾನ 1 2 3ಸರಿ ಇದೆ ✅
b) ವಿಧಾನ 2 3 4 ಸರಿ ಇದೆ
c) ವಿಧಾನ 1 2 4 ಸರಿ
d) ವಿಧಾನ 1 3 4 ಸರಿ ಇದೆ
12) ನಮ್ಮ ಸಂವಿಧಾನವು ಕೆಳಗಿನ ಎರಡು ಕಾರಣಕ್ಕೆ
ಕಟ್ಟುನಿಟ್ಟಿನದಾಗಿರುತ್ತದೆ?
1 ತಿದ್ದುಪಡಿ ಮಾಡುವ ವಿಧಾನ ಕಷ್ಟಕರವಿದೆ
2 ಅದು ಲಿಖಿತ ಸಂವಿಧಾನವಿದೆ
3 ಸಂವಿಧಾನವು ಉದ್ದ ಮತ್ತು ತೊಡಕಿನದು ಆಗಿರುತ್ತದೆ
4 ಸಂವಿಧಾನವು ಡಾ ಅಂಬೇಡ್ಕರರ ಸಮಿತಿಯಿಂದ
ರಚಿಸಲ್ಪಟ್ಟಿರುತ್ತದೆ
ಕೆಳಗೆ ಕಾಣಿಸಿದ ಕೋಡ್ ಸಹಾಯದಿಂದ ಸರಿ ಉತ್ತರವನ್ನು ಗುರುತಿಸಿ
a) ಕಾರಣ 1 2 ಸರಿ ಇದೆ ✅
b) ಕಾರಣ 3 4 ಸರಿ ಇದೆ
c) ಕಾರಣ 1 3 ಸರಿ ಇದೆ
d) ಕಾರಣ 2 4 ಸರಿ ಇದೆ
13) ಗಂಡು ಹಾಗೂ ಹೆಣ್ಣು ಗ್ಯಾಮೆಟಗಳ ಸಂಯೋಗವನ್ನು
ಏನೆಂದು ಕರೆಯುತ್ತಾರೆ ?
a) ಐಸೋಗ್ಯಾಮಿ
b) ಹೆಟೆರೋಗ್ಯಾಮಿ
c) ಹೋಲೋಗ್ಯಾಮಿ
d) ಸಿಂಗ್ಯಾಮಿ✅
14) ಮೈಟೋಸಿಸ್ ಎನ್ನುವ ಜೀವಕೋಶ ವಿಭಜನೆ ಪ್ರಕ್ರಿಯೆಯಲ್ಲಿ
ಸೆಂಟ್ರೋಮಿಯರ್ ಯಾವಾಗ ವಿಭಾಗಿಸಲ್ಪಡುತ್ತದೆ ?
a) ಎನಾಫೇಸ್✅
b) ಟೆಲೋಫೇಸ್
c) ಪ್ರೋಫೇಸ್
d) ಮೆಟಾಫೇಸ್
15)ಒಂದು ವಂಶವಾಹಿಯು ಇನ್ನೊಂದು ವಂಶವಾಹಿಯ
ವ್ಯಕ್ತವಾಗುವಿಕೆಯನ್ನು ಅಡಗಿಸುವ ಕ್ರಿಯೆಯನ್ನು ಏನೆಂದು
ಕರೆಯುತ್ತಾರೆ?
a) ಕಾಂಪ್ಲಿಮೆಂಟಾರಿಟಿ
b) ಎಪಿಸ್ಟಾಸಿಸ್✅
c) ಪ್ಲಿಯೋಟ್ರೋಪಿ
d) ಕೋಡೋಮಿನೆನ್ಸ್
16) ರೆಫ್ರಿಜರೇಟರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
a) ಉಷ್ಣ ಬಲಶಕ್ತಿ
b) ಔಲ್ಸ್ ನಿಯಮದಂತೆ
c) ಉಷ್ಣ ಬಲ ಕ್ರಿಯಾಶಾಸ್ತ್ರದ 2 ನೇ ನಿಯಮದಂತೆ ✅
d) ಕೂಲಂಬ್ ನಿಯಮದಂತೆ
17) ವಾಹನಗಳ ಟೈರಿನಲ್ಲಿ ತಂಬಲು ಗಾಳಿಗೆ ಬದಲಾಗಿ ನೀರನ್ನು
ಏಕೆ ಬಳಸುವುದಿಲ್ಲ?
a) ಗಾಳಿಯಂತೆ ನೀರನ್ನು ಚೆನ್ನಾಗಿ ಸಂಕೋಚನಕ್ಕೆ ಒಳಪಡಿಸಲು
ಸಾಧ್ಯವಿಲ್ಲ ✅
b) ಚಳಿಗಾಲದಲ್ಲಿ ನೀರು ಮಂಜುಗಡ್ಡೆ ಯಾಗಬಹುದು
c) ಗಾಳಿಗಿಂತ ನೀರು ದುಬಾರಿ
d) ನೀರು ಟೈರಿನೊಂದಿಗೆ ಪ್ರತಿಕ್ರಿಯಿಸಬಹುದು
18) ಭಾರತ ಸರ್ಕಾರಕ್ಕೆ ತೆರಿಗೆ ಆದಾಯವನ್ನು ಒದಗಿಸುವ
ಬಹುಮುಖ್ಯ ಮೂಲಗಳೆಂದರೆ ..?
a) ಅಬ್ಕಾರಿ ಶುಲ್ಕಗಳು , ಸಂಪತ್ತಿನ ತೆರಿಗೆ ಮತ್ತು ವಹಿವಾಟು ತೆರಿಗೆ
b) ಅಬ್ಕಾರಿ ಶುಲ್ಕಗಳು, ಭೂಕಂದಾಯ ಮತ್ತು ಸೀಮಾ
ಸುಂಕಗಳು
c) ಅಬ್ಕಾರಿ ಶುಲ್ಕಗಳು , ಕೃಷಿ ವರಮಾನ ಮತ್ತು ಸೀಮಾ ತೆರಿಗೆ
d) ಅಬ್ಕಾರಿ ಶುಲ್ಕಗಳು, ವರಮಾನ ತೆರಿಗೆ ಮತ್ತು ಸೀಮಾ
ಸುಂಕಗಳು✅
19) ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳು ಸಾಲ ನೀಡುವ
ಆದ್ಯತಾ ವಲಯಗಳು ಈ ಕೆಳಕಂಡಂತಿವೆ ?
a) ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು
b) ಕೃಷಿ, ಗ್ರಾಹಕ ಬಾಳಿಕೆಯ ವಸ್ತುಗಳು ಮತ್ತು ಗೃಹ ನಿರ್ಮಾಣ
c) ಭಾರೀ ಕೈಗಾರಿಕೆಗಳು ಕೃಷಿ ಮತ್ತು ಶೇರುಗಳ ಖರೀದಿ
d) ಕೃಷಿ, ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಚಿಕ್ಕ
ವ್ಯವಹಾರಗಳು✅
20) ಏಪ್ರಿಲ್ 2016ರಲ್ಲಿ ಕೆಳಕಂಡ ಯಾವ ದೇಶ
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF)ಯ ಸದಸ್ಯತ್ವ
ಪಡೆಯಿತು?
A. ದಕ್ಷಿಣ ಸುಡಾನ್
B. ಚಿಲಿ
C. ನೌರು✅
D. ಮಾರ್ಶಲ್ ದ್ವೀಪ ಸಮೂಹ
21) 'ಗುಡಗಾಂವ್' ನಗರದ ಹೆಸರನ್ನು ಈಚೆಗೆ 'ಗುರುಗ್ರಾಮ್'
ಎಂದು ಬದಲಿಸಲಾಗಿದೆ. ಅಂದಹಾಗೆ ಈ ನಗರ ಯಾವ
ರಾಜ್ಯದಲ್ಲಿದೆ?
A. ಪಂಜಾಬ್
B. ಹರಿಯಾಣ✅
C. ಮಧ್ಯಪ್ರದೇಶ
D. ರಾಜಸ್ಥಾನ
22) 'ನವಾಮಿ ಗಂಗೆ' ಕಾರ್ಯಕ್ರಮದನ್ವಯ ಗಂಗಾ
ಶುದ್ಧೀಕರಣಕ್ಕೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ
ಮಾಡಿಕೊಳ್ಳಲಾಗಿದೆ?
A. ಕೆನಡಾ
B. ಆಸ್ಟ್ರೇಲಿಯಾ
C. ಇಟಲಿ
D. ಜರ್ಮನಿ✅
a) ಅಬ್ಕಾರಿ ಶುಲ್ಕಗಳು , ಸಂಪತ್ತಿನ ತೆರಿಗೆ ಮತ್ತು ವಹಿವಾಟು ತೆರಿಗೆ
b) ಅಬ್ಕಾರಿ ಶುಲ್ಕಗಳು, ಭೂಕಂದಾಯ ಮತ್ತು ಸೀಮಾ
ಸುಂಕಗಳು
c) ಅಬ್ಕಾರಿ ಶುಲ್ಕಗಳು , ಕೃಷಿ ವರಮಾನ ಮತ್ತು ಸೀಮಾ ತೆರಿಗೆ
d) ಅಬ್ಕಾರಿ ಶುಲ್ಕಗಳು, ವರಮಾನ ತೆರಿಗೆ ಮತ್ತು ಸೀಮಾ
ಸುಂಕಗಳು
[10/10 7:02 am] : 🚩GDP🚩
🔺ಪ್ರಸಕ್ತ ಸಾಲಿನ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ವರದಿಯನ್ನು
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ನಲ್ಲಿ
ಮಂಡಿಸಿದ್ದು, 2016–17ನೇ ಸಾಲಿಗೆ ದೇಶದ ಒಟ್ಟು ಆಂತರಿಕ
ಉತ್ಪಾದನೆ(ಜಿಡಿಪಿ) ಶೇಕಡಾ 7 ರಿಂದ 7.75 ರಷ್ಟು ಪ್ರಗತಿ
ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.
🔺ಕಳೆದ ಹಣಕಾಸು ವರ್ಷದಲ್ಲಿ ಮಂಡಿಸಿದ್ದ ಸಮೀಕ್ಷಾ
ವರದಿಯಲ್ಲಿ ಜಿಡಿಪಿ ಶೇಕಡಾ 8.1ರಿಂದ 8.5 ರಷ್ಟು ಪ್ರಗತಿ ಕಾಣಲಿದೆ
ಎಂದು ಅಂದಾಜು ಮಾಡಲಾಗಿತ್ತು.
🔺2016–17 ರಲ್ಲಿ ಆರ್ಥಿಕ ಸುಧಾರಣೆ, ಸಬ್ಸಿಡಿ ಕಡಿತ ಮತ್ತು
ವಿತ್ತೀಯ ಬಲವರ್ಧನೆಗೆ ಆಧ್ಯತೆ ನೀಡುವುದಾಗಿ ಅವರು
ತಿಳಿಸಿದ್ದಾರೆ.
🔺ಇದೇ ವೇಳೆ ವಿತ್ತೀಯ ಕೊರತೆಯನ್ನು ಶೇಕಡಾ 3.5ರಲ್ಲಿ
ಇರುವಂತೆ ನೋಡಿಕೊಳ್ಳುವುದಾಗಿ ಅವರು ವಿಶ್ವಾಸ
ವ್ಯಕ್ತಪಡಿಸಿದ್ದಾರೆ.
🔺ಜಾಗತಿಕ ಅರ್ಥ ವ್ಯವಸ್ಥೆಯ ಮಂದಗತಿಯ ಪ್ರತಿಯ
ನಡುವೆಯೂ ಭಾರತ 2015–16 ರಲ್ಲಿ ಜಿಡಿಪಿ ಶೇ 7.6 ರಷ್ಟು ಪ್ರಗತಿ
ಕಾಣಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
🔺ತಜ್ಞರು ಹೇಳುವಂತೆ ಶೇ 8 ರಿಂದ 10 ರಷ್ಟು ಜಿಡಿಪಿ ಪ್ರಗತಿ
ಸಾಧನೆಗೆ ಇನ್ನೂ ಕೆಲ ವರ್ಷಗಳು ಹಿಡಿಯಬಹುದು ಎಂದು ವರದಿ
ವಿಶ್ಲೇಷಿಸಿದೆ.
🔺ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಹೆಚ್ಚುವರಿ
ಅನುದಾನ ನೀಡಬೇಕಿರುವುದು ಸರ್ಕಾರಕ್ಕೆ ಬಹುದೊಡ್ಡ
ಸವಾಲಾಗಿ ಪರಿಣಮಿಸಬಹುದು.
🔺2016–17ರಲ್ಲಿ ಹಣದುಬ್ಬರವು ಆರ್ಬಿಐ ಅಂದಾಜಿನಂತೆ ಶೇ
4.5ರಿಂದ 5 ರ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ ಎಂದು
ಹೇಳಿದೆ.
🔺ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯ ಅಗತ್ಯವಿದೆ
ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದ
[10/10 7:03 am] : ಕ್ವಿಜ್
31-5-2016
1) ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹೊಂದಿರುವ
ಹಿನ್ನೆಲೆಯಲ್ಲಿ, ಭಾರತದಿಂದ ಮೆಣಸು ಆಮದು ಮೇಲೆ ನಿಷೇದ
ಹೇರಿದ ದೇಶ ಯಾವುದು?
A. ಯುರೋಪ
B. ಸೌದಿ ಅರೇಬಿಯಾ✅
C. ಬರ್ಮಾ
D. ಅಮೆರಿಕ
2) ಕೇಂದ್ರ ಸರಕಾರ ಅಂಗೀಕರಿಸಿದ ಪೋಲಾವರಂ ಪ್ರಾಜೆಕ್ಟ್
ಯಾವುದಕ್ಕೆ ಸಂಬಂಧಿಸಿದೆ?
A. ವಿದ್ಯುತ್
B. ಮಹಿಳಾ ಸಬಲೀಕರಣ
C. ಅರಣ್ಯ ರಕ್ಷಣೆ
D. ನೀರಾವರಿ✅
3) 2014 ರಲ್ಲಿ ಸುಪ್ರೀಂಕೋರ್ಟ್ ಯಾರ ನೇತೃತ್ವದಲ್ಲಿ
ಕಾವೇರಿ ನದಿ ನೀರು ನ್ಯಾಯಾಧೀಕರಣ ರಚಿಸಿದೆ?
A. ನ್ಯಾ.ಎಂ.ಬಿ ಪಾಶಾ
B. ಬಿ.ಎಸ್. ಚೌವ್ಹಾಣ✅
C. ಎಸ್.ಪಿ.ಸಿಂಗ್
D. ನ್ಯಾ. ಮಾರ್ಕಂಡೇಯ ಕಾಟ್ಜು
4) ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು
ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____
A. ಭಾರಜಲ
B. ಮೃದುನೀರು
C. ಗಡಸು ನೀರು✅
D. ಖನಿಜ ನೀರು
5) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ
ಎಷ್ಟು?
A) 1120
B) 1186
C) 1197 ✅
D) 1106
6) ಮಹಾ ಹಿಮಾಲಯ ಸರಣಿಯಲ್ಲಿ ಹರಿಯುವ ಹಿಮ ನದಿಗಳಲ್ಲಿ
ಉದ್ದವಾದ ಹಿಮನದಿ ಯಾವುದು ?
A) ಗಂಗೋತ್ರಿ
B) ಬೈಯೋಫೋ
C) ಜೇಮು
D)ಸಯಾಚಿನ್✅
7) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ
ಪ್ರದೇಶ___?
A) ಸವನ್ನಾ ಹುಲ್ಲುಗಾವಲು
B) ಮರುಭೂಮಿ
C) ಹಿಮಪರ್ವತದ ಅರಣ್ಯಗಳು
D) ನದಿ/ಸಮುದ್ರ ತೀರಗಳು✅
8) ಗಾಜನ್ನು ಕತ್ತರಿಸಲು ಉಪಯೋಗಿಸುವ ಸಿಲಿಕಾನ್
ಸಂಯುಕ್ತದ ಹೆಸರೇನು ?
A)ಸಿಲಿಕಾನ್ ಡೈ ಆಕ್ಸೈಡ್
B) ಸೋಡಿಯಂ ಸಿಲಿಕೇಟ್
C) ಸಿಲಿಕಾನ್ ಕಾರ್ಬೈಡ್✅
D) ಸೋಡಿಯಂ ಅಲ್ಯುಮಿನಿಯಂ ಸಿಲಿಕೇಟ್
9) ನಾವು ಸೈಕಲ್ ಮೇಲೆ ತಿರುವಿನಲ್ಲಿ ಚಲಿಸುವಾಗ ನಮ್ಮ
ದೇಹವು ತಿರುವಿನ ಕೇಂದ್ರದ ಕಡೆಗೆ ವಾಲುತ್ತದೆ. ಇದಕ್ಕೆ
ಕಾರಣವೇನು ?
A) ಕೇಂದ್ರತ್ಯಾಗಿ ಪ್ರತಿಕ್ರಿಯೆ
B) ಕೇಂದ್ರಾಭಿಮುಖ ಬಲ ✅
C) ಗುರುತ್ವ ಬಲ
D) ಸೈಕಲ್ ನ ಬಲ
10) ತೆಲಂಗಾಣ ರಾಜ್ಯ ಎಂದು ಉದಯವಾಯಿತು ?
A) ಮೇ 03 , 2014
B) ಆಗಸ್ಟ್ 18, 2014
C) ಜೂನ್ 02, 2014 ✅
D) ಸೆಪ್ಟೆಂಬರ್ 17, 2014
11) ಸೆಪ್ಟೆಂಬರ್ 20, 1932 ರಂದು ಮಹಾತ್ಮಗಾಂಧಿಯವರು
ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸವನ್ನು
ಯಾವುದರ ವಿರುದ್ಧ ಕೈಗೊಂಡರು ?
A) ಗಾಂಧಿ – ಇರ್ವಿನ್ ಒಪ್ಪಂದ ಪಾಲಿಸದ ವಿರುದ್ಧ
B) ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರ ದಮನಕಾರಿ ನೀತಿ ವಿರುದ್ಧ
C) ಕೋಲ್ಕತಾದಲ್ಲಿ ನಡೆದ ಕೋಮು ಗಲಭೆ ವಿರುದ್ಧ
D) ಮ್ಯಾಕ್ ಡೊನಾಲ್ಡ್ ನ ತೀರ್ಪಿನ ವಿರುದ್ಧ✅
12) ಭಾರತದ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ‘ಡೆಕ್ಕನ್
ಎಜುಕೇಶನಲ್ ಸೊಸೈಟಿ ‘ಯನ್ನು ಸ್ಥಾಪಿಸಿದವರು ಯಾರು ?
A) ಬಾಲಗಂಗಾಧರ ತಿಲಕ್ ✅
B) ವಿ.ಡಿ. ಸಾವರ್ಕರ್
C) ದಾದಾಬಾಯಿ ನವರೋಜಿ
D) ಎಂ.ಜಿ.ರಾನಡೆ
13) “ಹೈಡ್ರಾಲಿಕ್ ಬ್ರೇಕ್” ಗಳು ಯಾವ ನಿಯಮದ ಮೇಲೆ ಕೆಲಸ
ನಿರ್ವಹಿಸುತ್ತವೆ ?
A) ಪ್ಯಾಸ್ಕಲ್ ನ ನಿಯಮ✅
B) ನ್ಯೂಟನ್ ನ ನಿಯಮ
C) ಥಾಮ್ಸನ್ ನ ನಿಯಮ
D) ಬೆರ್ನೋಲಿಯ ನಿಯಮ
14) 2011 ರ ಜನಗಣತಿಯ ಪ್ರಕಾರ ರಾಜ್ಯಗಳ ಜನಸಂಖ್ಯೆಯು
ಇಳಿಕೆಯ ಕ್ರಮದಲ್ಲಿರುವ ಸರಿಯಾದ ಅನುಕ್ರಮವನ್ನು ಗುರ್ತಿಸಿ?
A) ಕರ್ನಾಟಕ – ತಮಿಳುನಾಡು – ಆಂಧ್ರಪ್ರದೇಶ
B) ತಮಿಳುನಾಡು – ಆಂಧ್ರಪ್ರದೇಶ – ಕರ್ನಾಟಕ
C) ತಮಿಳುನಾಡು – ಕರ್ನಾಟಕ – ಆಂಧ್ರಪ್ರದೇಶ ✅
D) ಆಂಧ್ರಪ್ರದೇಶ – ಕರ್ನಾಟಕ – ತಮಿಳುನಾಡು
15) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ
ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್
ಯಾರು?
A) ಲಾರ್ಡ್ ಆಕ್ಲೆಂಡ್
B) ಲಾರ್ಡ್ ವಿಲಿಯಂ ಬೆಂಟಿಂಕ್
C)ಲಾರ್ಡ್ ವೆಲ್ಲೆಸ್ಲಿ
D) ಲಾರ್ಡ್ ಡಾಲ್ ಹೌಸಿ✅
[10/10 7:04 am] : 🔺KAS ವಿಶೇಷಾಂಕ🔺
ನೀತಿ ಆಯೋಗ
🚩ಯೋಜನೆ ಆಯೋಗ ರದ್ದು –
ನೀತಿ ಆಯೋಗ ರಚನೆ:🚩
🔺ಆರೂವರೆ ದಶಕಗಳ ಹಿಂದೆ ಅಂದರೆ 15 ಮಾರ್ಚ್ 1950 ರಂದು
ದೇಶದ ಪ್ರಥಮ ಪ್ರಾಧಾನಿ ಜವಾಹರ್ಲಾಲ್ ನೆಹರು ಅವರ
ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗ (planning
commission) ವನ್ನು ರದ್ದು ಪಡಿಸಿ ಅದರ ಬದಲಾಗಿ ನೀತಿ
ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ.
🔺11-2-2015 ರಂದು ಭಾರತ ಪರಿವರ್ತನಾ ರಾಷ್ಟ್ರೀಯ
ಸಂಸ್ಥೆ
( ನ್ಯಾಷನಲ್ ಇನ್ಸ್ಟಿಟ್ಯೂಷನ್‌ ಫಾರ್ ಟ್ರಾನ್ಸ್ರ್ಫಾರ್ಮಿಂಗ್
ಇಂಡಿಯಾ– NITI (Aayog) ಕೇಂದ್ರ ಹಾಗೂ ರಾಜ್ಯ
ಸರಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯನ್ನು
ಹುಟ್ಟು ಹಾಕಲಾಯಿತು.
🔺ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದ ಮೂರೇ
ದಿನದಲ್ಲಿ ಅಜಯ್ ಚಿಬ್ಬರ್ ಎಂಬ ತಜ್ಞ ಸಲ್ಲಿಸಿದ ವರದಿ ಆಧಾರದ
ಮೇಲೆ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ನೀತಿ
ಆಯೋಗದಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ.
🔺ಉಳಿದ ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ
ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್, ಕೇಂದ್ರ
ಸಂಪುಟ ದರ್ಜೆಯ ನಾಲ್ವರು ಸಚಿವರು ವಿವಿಧ ಕ್ಷೇತ್ರಗಳ
ತಜ್ಞರು ಸದಸ್ಯರಾಗಿರುತ್ತಾರೆ.
🔺ಸದಸ್ಯರ ಪೈಕಿ ಕೆಲವರು ಪೂರ್ಣಾವಧಿ ಮತ್ತು ಅಲ್ಪಾವಧಿ
ಸದಸ್ಯರು, ಕೇಂದ್ರ ಸಂಪುಟ ಸಚಿವರು ಪದನಿವಿತ್ತ (EX-
OFFICIO) ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ
ಸದಸ್ಯರಾಗಿರುತ್ತಾರೆ.
🔺 ಆಯೋಗದಲ್ಲಿ ಉಪಾಧ್ಯಕ್ಷರು ಒಳಗೊಂಡಂತೆ ಕಾರ್ಯ
ನಿರ್ವಹಣಾಧಿಕಾರಿ (CEO) ಎಂಬ ಹೊಸ ಹುದ್ದೆ ಸೃಷ್ಟಿಸಿದ್ದಾರೆ.
ನೀತಿ ಆಯೋಗದ ಈಗಿನ
ಸದಸ್ಯರು
1)🔺 ಅಧ್ಯಕ್ಷರು:
ಪ್ರಧಾನಿ ನರೇಂದ್ರ ಮೋದಿ
2)🔺ಉಪಾಧ್ಯಕ್ಷರು:
ಅರವಿಂದ ಪನಗರಿಯಾ
3)🔺ಮುಖ್ಯ ಕಾರ್ಯ ನಿರ್ವಹಣಾಧಿಕಾರಿ:
ಅಮಿತಾಬ್ ಕಾಂತ್
4)🔺 ಪದನಿಮಿತ್ತ ಸದಸ್ಯರು:
ರಾಜನಾಥ ಸಿಂಗ್, ಅರುಣ್ ಜೇಟ್ಲಿ. ಸುರೇಶ್ ಪ್ರಭು, ರಾಧಾ
ಮೋಹನ ಸಿಂಗ್
5)🔺ಪೂರ್ಣಾವಧಿ ಸದಸ್ಯರು:
ವಿವೇಕ್ ದೇವರಾಯ್,
ವಿ.ಕೆ. ಸಾರಸ್ವತ್
6)🔺ಆಡಳಿತ ಮಂಡಳಿ:
ಎಲ್ಲ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ
ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ಗಳು
🔺ನೀತಿ ಆಯೋಗದ ವಿಶೇಷ ಆಹ್ವಾನಿತ ಸದಸ್ಯರಾಗಿ
ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ
ಚಂದ ಗೆಹ್ಲೋಟ್ ಆಯ್ಕೆಯಾಗಿದ್ದಾರೆ.
ಯೋಜನಾ ಆಯೋಗ
ಹಾಗೂ ನೀತಿ ಆಯೋಗದ ಹೋಲಿಕೆಗಳು
🔺ನೀತಿ ಆಯೋಗವು ಕೇವಲ ಚಿಂತಕರ ಚಾವಡಿಯಂತೆ ಕೆಲಸ
ಮಾಡುತ್ತದೆ. ರಾಜ್ಯಗಳಿಗೆ ಹಣಕಾಸಿನ ಹಂಚಿಕೆ ವಿಷಯವು
ಹಣಕಾಸು ಸಚಿವರ ಪರಿಧಿಯಲ್ಲೆ ಇರುತ್ತದೆ. ಆದರೆ ಯೋಜನಾ
ಆಯೋಗವು ರಾಜ್ಯಗಳಿಗೆ ನಿಧಿ ಹಂಚಿಕೆ ವಿಷಯದಲ್ಲೂ
ಅಧಿಕಾರವನ್ನು ಹೊಂದಿತ್ತು.
🔺ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ
ಯೋಜನೆ ಆಯೋಗದಲ್ಲಿದ್ದ ಸದಸ್ಯರ ಸಂಖ್ಯೆ ಕಡಿಮೆ. ಈಗಿನ
ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಎರಡು
ಆದರೆ ಈ ಹಿಂದಿನ ಯೋಜನಾ ಆಯೋಗದಲ್ಲಿ 8 ಜನ ಪೂರ್ಣಾವಧಿ
ಸದಸ್ಯರಿದ್ದರು.
🔺ನೀತಿ ಆಯೋಗದಲ್ಲಿ ರಾಜ್ಯಗಳಿಗೆ ಹೆಚ್ಚಿನ ಒತ್ತು
ನೀಡಲಾಗಿದೆ.
ಆದರೆ ಯೋಜನಾ ಆಯೋಗದಲ್ಲಿ ರಾಜ್ಯಗಳು ಕೇವಲ
ರಾಷ್ಟ್ರೀಯ ಅಭಿವೃದ್ಧಿ ನಿಗಮ (national development council)
ದ ಭಾಗವಹಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು.
🔺ನೀತಿ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿರುತ್ತಾರೆ. ಆದರೆ
ಯೋಜನಾ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿಲ್ಲ
🔺ನೀತಿ ಆಯೋಗದಲ್ಲಿ ಹೊಸದಾಗಿ ಸೃಷ್ಟಿಸಲಾದ ಮುಖ್ಯ
ಕಾರ್ಯನಿರ್ವಹಣಾ ಅಧಿಕಾರಿಗಳನ್ನೊಳಗೊಂಡಂತೆ.
ಉಪಾಧ್ಯಕ್ಷರು 5 ಜನ ಪೂರ್ಣಾವಧಿ ಮತ್ತು 2 ಜನ ಅಲ್ಪಾವಧಿ
ಸದಸ್ಯರು, ನಾಲ್ಕು ಜನ ಕ್ಯಾಬಿನೆಟ್ ದರ್ಜೆಯ ಸಚಿವರು
( ಪದನಿಮಿತ್ತ) ಇರುತ್ತಾರೆ.
🔺ಆದರೆ ಯೋಜನಾ ಆಯೋಗವು ಉಪಾಧ್ಯಕ್ಷರು, ಸದಸ್ಯ
ಕಾರ್ಯದರ್ಶಿ ಹಾಗೂ ಕೆಲವು ಪೂರ್ಣಾವಧಿ
ಸದಸ್ಯರನ್ನೊಳಗೊಂಡಿತ್ತು
[10/10 7:05 am] : ಕ್ವಿಜ್
[ 28/05/2016]
1} ಖಾಯಂ ಗುತ್ತಾ ಪದ್ಧತಿಯನ್ನು ಯಾರು ಜಾರಿಗೆ ತಂದರು?
1)ವಿಲಿಯಂ ಬೆಂಟಿಕ್
2)ಕಾರ್ನ್ ವಾಲಿಸ್✅
3)ರಿಪ್ಪನ್
4)ಮೇನ್ರೊ
2} "ವಿಧವಾ ಪುನರ್ ವಿವಾಹ" ಕಾನೂನು ಕಾಯಿದೆ
ಜಾರಿಯಾಗಿದ್ದು?
1)1856✅
2)1756
3)1884
4)1952
3} ಋಗ್ವೇದ ಕಾಲದಲ್ಲಿ ಗ್ರಾಮದ ಮುಖ್ಯಸ್ಥ
ಯಾರಾಗಿದ್ದರು?
1)ಸೇನಾನಿ
2)ಪುರೋಹಿತ
3)ಗ್ರಾಮಣಿ✅
4)ನಾಡಿಗ
4) ಗುಪ್ತರ ಕಾಲದಲ್ಲಿ ಪ್ರಾಂತ್ಯಗಳನ್ನು ಏನೆಂದು
ಕರೆಯುತ್ತಿದ್ಧರು?
1) ಭುಕ್ತಿ✅
2)ವಿಷಯ
3)ಗ್ರಾಮ
4)ಪರಂಗಣ
5) ಸಾತವಾಹನರ ಯಾವ ಅರಸನು"ದಕ್ಷಿಣಾಪಥಪತಿ" ಎಂಬ
ಬಿರುದು ಹೊಂದಿದ್ದನು?
1)ಹಾಲರಾಜ
2)ಸಿಮುಕ
3)1ನೇ ಶಾತಕರ್ಣಿ✅
4)3ನೇ ಕೃಷ್ಣ
6) ಗೌತಮಿಪುತ್ರ ಶಾತಕರ್ಣಿಯು "ತ್ರಿಸಮುದ್ರ ತೋಯಾ
ಪೀತವಾಹನ" ಎಂಬ ಬಿರುದುಹೊಂದಿದ್ದನೆಂದು ಯಾವ ಶಾಶನ
ತಿಳಿಸುತ್ತದೆ?
1)ತಾಳಗುಂದ ಶಾಶನ
2)ತಮ್ಮಟಕಲ್ಲು ಶಾಶನ
3)ನಾಸಿಕ್ ಶಾಶನ✅
4)ಆತಕೂರ ಶಾಶನ
7) ಗಂಗರ ಕಾಲದಲ್ಲಿ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ಧ
ಅಧಿಕಾರಿ?
1)ಪ್ರಜೆಗಾವುಂಡ
2)ಪ್ರಭು ಗಾವುಂಡ✅
3)ಗ್ರಾಮಿಕ
4)ಶ್ರೇಣಿಕ
8) ಯಾವ ರಾಜವಂಶದ ಸೈನ್ಯವು "ಕರ್ನಾಟಬಲ" ಎಂದು
ಪ್ರಸಿದ್ಧವಾಗಿತ್ತು?
1)ರಾಷ್ಟ್ರಕೂಟರು
2)ಕದಂಬರು
3)ಬಾದಮಿ ಚಾಲುಕ್ಯರು✅
4)ಮೌರ್ಯರು
9} ಪಲ್ಲವರ ಆಡಳಿತದ ಕಾಲಾವಧಿಯಲ್ಲಿ ಗ್ರಾಮದ ಆಡಳಿತ
ನೋಡಿಕೊಳ್ಳುತ್ತಿದ್ಧವರು ಯಾರು?
1)ವಿಷಯಪತಿ
2)ಗ್ರಾಮೀಣಿ
3)ಗ್ರಾಮಭೋಜಕ✅
4)ಗ್ರಾಮಪತ
10) "ತಲಕಾಡುಗೊಂಡ" ಎಂಬ ಬಿರುದು ಹೊಂದಿದ್ಧ
ಹೊಯ್ಸಳರ ಅರಸ ಯಾರು?
1)2ನೇ ಬಲ್ಲಾಳ
2)ವಿನಯಾದಿತ್ಯ
3 )ವಿಷ್ಣುವರ್ಧನ✅
4)ನೃಪಕಾಮ
11) "ಪರಮ ಭಾಗವತ" ಎಂಬ ಬಿರುದು ಹೊಂದಿದ್ದವರು?
1)ಇಮ್ಮಡಿ ಪುಲಿಕೇಶಿ✅
2)ಚಂದ್ರಾದಿತ್ಯ
3)ವಿಕ್ರಮಾದಿತ್ಯ
4)ಮಯೂರ
13) "ವೇಸರ ಶೈಲಿ" ವಾಸ್ತುಶಿಲ್ಪವು ಯಾರ ಕಾಲದಲ್ಲಿ
ಹುಟ್ಟಿಕೊಂಡಿತು?
1)ರಾಷ್ಟ್ರಕೂಟ
2)ಚೋಳರ
3)ಬಾದಾಮಿ ಚಾಲುಕ್ಯ✅
4)ಪಲ್ಲವರು
13) "ಗಂಗೈಕೊಂಡ ಚೋಳ" ಎಂಬ ಬಿರುದು ಹೊಂದಿದ್ಧ
ಚೋಳ ಅರಸ?
1)1ನೇ ರಾಜಾಧಿರಾಜ
2)2ನೇ ರಾಜೇಂದ್ರ
3)1ನೇ ರಾಜೇಂದ್ರ✅
4)ಕುಲೋತ್ತುಂಗ
14) "ಪರಮ ಭಟ್ಟಾರಕ" ಎಂಬ ಬಿರುದು ಯಾರು ಹೊಂದಿದ್ದರು?
1)ಪ್ರಭಾಕರ ವರ್ಧನ✅
2)ರಾಜವರ್ಧನ
3)ಆದಿತ್ಯವರ್ಧನ
4)ಹರ್ಷವರ್ಧನ
15) ವಿಶ್ವಸಂಸ್ಥೆಯ ಪ್ರಪ್ರಥಮ ಮಹಾಸಭೆಯಲ್ಲಿ ಭಾರತವು
ವರ್ಣಭೇದ ನೀತಿಯು ಮಹಾ ಅಪರಾಧ ಎಂದು ಸಾರಿದ ವರ್ಷ?
1)1946✅
2)1956
3)1948
4)1950
[10/10 7:06 am] : 📕 KAS ವಿಶೇಷಾಂಕ📕
ಸಮಗ್ರ ಅರ್ಥಶಾಸ್ತ್ರದ ಮೂಲಭೂತಗಳು
🔺2014-15 ರಲ್ಲಿ ಗಣನೀಯವಾಗಿ ಸುಧಾರಿಸಿವೆ
2013ರ ಕೊನೆ ಅವಧಿಯಿಂದ ಹಣದುಬ್ಬರವು ಸುಮಾರು 6%
ನಷ್ಟು ಕಡಿಮೆಯಾಗಿದೆ.
🔺ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರುವ
2016-17ರಲ್ಲಿ ಶೇಕಡಾ 4.5ರಿಂದ ಶೇಕಡಾ 5ರಷ್ಟು ಇರುವ
ನಿರೀಕ್ಷೆ.
🔺ಚಾಲ್ತಿ ಖಾತೆ ಕೊರತೆಯು 6.7% (2012-13 ರ
ತ್ರೈಮಾಸಿಕದಲ್ಲಿ) ಇಂದ 1%
( 2014-15ರಲ್ಲಿ) ಗೆ ಇಳಿದಿದೆ.
🔺ವಿದೇಶಿ ಬಂಡವಾಳದ ಹರಿವು ರುಪಾಯಿಯನ್ನು
ಸ್ಥಿರವಾಗಿಸಿದೆ.
ಕೇಂದ್ರೀಯ ಅಂಕಿ ಅಂಶ
ಕಚೇರಿ
🔺ಹೊಸ ಅಂದಾಜು ಇದ್ದಾಗ್ಯೂ, ಸಾಕ್ಷ್ಯಗಳ ಪ್ರಕಾರ
ಭಾರತವು ಚೇತರಿಸಿಕೊಳ್ಳುತ್ತಿದ್ದು, ಉಲ್ಬಣವಾಗುತ್ತಿರುವ
ಅರ್ಥಿಕತೆಯಲ್ಲ
🔺ಮುಂದುವರಿಯುತ್ತಿರುವ ಹಣದುಬ್ಬರವು 5-5.5%
ವ್ಯಾಪ್ತಿಯಲ್ಲಿರಲಿದ್ದು, ಹಣಕಾಸಿನ ಪರಿಸ್ಥಿತಿಯನ್ನು
ಸುಲಭಗೊಳಿಸಲು ಅನುಕೂಲವಾಗಿದೆ.
🔺2014-15ರ ಆಧಾರದ ಹೊಸ ಅಂದಾಜಿನಲ್ಲಿ, 2015-16ರಲ್ಲಿ
ಜಿಡಿಪಿ ಬೆಳವಣಿಗೆಯು ಸ್ಥಿರ ಮಾರುಕಟ್ಟೆ ದರದಲ್ಲಿ 8.1%- 8.5%
ರಷ್ಟು ಹೆಚ್ಚಳವಾಗಲಿದೆ.
🔺ಖಾಸಗಿ ಹೂಡಿಕೆಯು ದೀರ್ಘಾವಧಿಯ ಬೆಳವಣಿಗೆಗೆ
ಇಂಧನವಾಗಬೇಕು.
🔺ಭಾರತವು ರಫ್ತಿನ ಸವಾಲನ್ನು ಎದುರಿಸುತ್ತಿದ್ದು, ಕಳೆದ
5ವರ್ಷಗಳಲ್ಲಿ ಉತ್ಪಾದನೆ ಮತ್ತು ಸೇವಾ ರಫ್ತಿನ ಪಾಲು
ಸ್ಥಿರವಾಗಿದೆ.
🔺ಸಾರ್ವಜನಿಕ ಭವಿಷ್ಯ ನಿಧಿ ಮತ್ತು ಇತರ ಉಳಿತಾಯ
ಯೋಜನೆಗಳ ತೆರಿಗೆ ಲಾಭಗಳನ್ನು ರದ್ದುಗೊಳಿಸಲು ಸಲಹೆ
ನೀಡಲಾಗಿದೆ.
ವಿತ್ತೀಯ ಚೌಕಟ್ಟು
🔺ಮಧ್ಯಮ ಅವಧಿ ವಿತ್ತೀಯ ಕೊರತೆಯು ರಾಷ್ಟ್ರದ
“ಒಟ್ಟುದೇಶಿಯ ಉತ್ಪನ್ನ”ದ (GDP) 3% ರಷ್ಟು ಇರುವಂತೆ
ಕಾಪಾಡಬೇಕು.
🔺ಭಾರತವು ರಾಜಸ್ವ ಕೊರತೆ (Revenue Deficit) ಯನ್ನು
ನಿವಾರಿಸಲು ಸುವರ್ಣ ಸೂತ್ರ(Golden Rule)ವನ್ನು
ಅನುಸರಿಸಬೇಕು.
🔺ವೆಚ್ಚ ನಿಯಂತ್ರಣ ಜೊತೆ ಬೆಳವಣಿಗೆಯ ಚೇತರಿಕೆ
ಮತ್ತುಜಿ.ಎಸ್.ಟಿ.ಯು ಮಧ್ಯಮ-ಅವಧಿ ಗುರಿಗಳನ್ನು
ತಲುಪುವಂತೆ ನೋಡಿಕೊಳ್ಳುತ್ತವೆ.
🔺ವೆಚ್ಚದ ಗುಣಮಟ್ಟವು ಬಳಕೆಯಿಂದ ಹೂಡಿಕೆ ಕಡೆ
ತಿರುಗುವಂತೆ ಮಾಡುವ ಅವಶ್ಯಕತೆಯಿದೆ.
ಸಬ್ಸಿಡಿಸ್ ಮತ್ತು ‘ಜಾಮ್ (JAM)’ ಪರಿಹಾರ
🔺ಎಲ್ಲ ಸಹಾಯಧನಕ್ಕೆ ನೀಡಲಾಗುತ್ತಿರುವ ನೇರ ವಿತ್ತೀಯ
ಬೆಲೆಯ ಮೊತ್ತವು ಅಂದಾಜು ರೂ.3,78,000 ಅಥವಾ 2011-12
ರ ಜಿಡಿಪಿಯ 2% ಆಗಿದೆ.
🔺ಸಾರ್ವಜನಿಕ ವಿತರಣ ವ್ಯವಸ್ಥೆಯ41%
ಸೀಮೆಎಣ್ಣೆಯುಸೋರಿಕೆಯಾಗಿ ನಷ್ಟವಾಗಿದೆ.
🔺JAM (ಜನಧನ, ಆಧಾರ್, ಮೊಬೈಲ್) ಯು ಸೋರಿಕೆ ಮತ್ತು
ಅಸ್ಪಷ್ಟತೆಯನ್ನು ನಿವಾರಿಸಲಿವೆ.
🔺ಸಬ್ಸಿಡಿ ಒಳಗೊಂಡ ಸಿಲಿಂಡರ್ ಸಂಖ್ಯೆಯನ್ನು 12 ರಿಂದ 10
ಕ್ಕೆ ಇಳಿಸಲು ಸಲಹೆ
⚛ಹೂಡಿಕೆಯ ಸವಾಲು✡
🔺ಸ್ಥಗಿತಗೊಂಡಿರುವ ಯೋಜನೆಗಳು ಜಿಡಿಪಿಯ 7% ಇದ್ದು,
ಬಹುಪಾಲು ಖಾಸಗಿ ವಲಯದವೇ ಆಗಿವೆ.
🔺ಸ್ಥಗಿತಗೊಂಡಿರುವ ಯೋಜನೆಗಳು ಹೆಚ್ಚಾಗಿ ಉತ್ಪಾದನೆ
ಮತ್ತು ಮೂಲ ಸೌಕರ್ಯಕ್ಕೆ ಸೇರಿದವುಗಳಾಗಿವೆ
🔺ಕಾರ್ಪೋರೇಟ್ ಮತ್ತು ಸಾರ್ವಜನಿಕ ವಲಯದ
ಬ್ಯಾಂಕುಗಳ ಅಯವ್ಯಯವು ನಿಶಕ್ತಗೊಳಿಸಿವೆ
🔺ಒತ್ತಡ ಇರುವ ಕಾರ್ಪೊರೇಟ್ ರಂಗದ ಆಸ್ತಿಪಾಸ್ತಿ
ಮಾರಾಟ ಅಥವಾ ಮರುವಸತಿ ಅಗತ್ಯತೆ
🔺ಅದಾಗ್ಯೂ , ಸ್ಥಗಿತ ಯೋಜನೆ ಕಂಪನಿಗಳ ಷೇರು
ಮಾರುಕಟ್ಟೆ ಮೌಲ್ಯಮಾಪನವು ದೃಢವಾಗಿದೆ.
🔺ಖಾಸಗಿ ವಲಯುವು ಸಾಧಾರಣ ಬಂಡವಾಳವನ್ನು
ಆಕರ್ಷಿಸುವ ನಿರೀಕ್ಷೆಯಿದೆ
🔺ಬಂಡವಾಳ ರಚನೆಯಲ್ಲಿ ಚಲನ ಶೀಲತೆಯನ್ನು ಹೆಚ್ಚಿಸಲು
ಸಾರ್ವಜನಿಕ ಹೂಡಿಕೆಯು ಹೆಜ್ಜೆ ಹಾಕಬೇಕು
🔺ಬಂಡವಾಳದ ಹರಿವು ಕಡಿಮೆಯಾದರೆ ರೂಪಾಯಿ ಅಪಮೌಲ್ಯಕ್ಕೆ
ಅವಕಾಶ ಮಾಡಿಕೊಡಲಾಗುವುದು
[9:57AM, 27/05/2016] S.Kalal: 🔹ಬ್ಯಾಂಕಿನ
ಸವಾಲುಗಳು🔹
🔺“ದ್ವಿಮುಖ ಅರ್ಥಿಕ ದಮನ” ದಿಂದಾಗಿ ಭಾರತೀಯ
ಬ್ಯಾಂಕುಗಳ ಅಯವ್ಯಯ ಪಟ್ಟಿ ನಷ್ಟ ಅನುಭವಿಸುತ್ತಿದೆ
🔺ಮುಂದುವರಿಯುತ್ತ, ಬಂಡವಾಳ ಮಾರುಕಟ್ಟೆ ಮತ್ತು
ಬಾಂಡ್-ಹಣಕಾಸಿಗೆ ಉತ್ತೇಜನ ನೀಡಬೇಕು
🔺2005-2012ರ ನಡುವಿನ ಅವಧಿಯಲ್ಲಿ ಖಾಸಗಿ ವಲಯದ
ಬ್ಯಾಂಕುಗಳು ಖಾಸಗಿ ವಲಯ ಆಧಾರಿತ ಬೆಳವಣಿಗೆಯಲ್ಲಿ
ಭಾಗವಹಿಸಲಿಲ್ಲ
🔺ಸರ್ಕಾರಿ ವಲಯದ ಬ್ಯಾಂಕುಗಳಿಗೆ ರೂ.8 ಲಕ್ಷ ಕೋಟಿಗಳ
ಬಂಡವಾಳ ನೆರವಿನ ಅಗತ್ಯವಿದೆ.
🔺ಮುಂಗಡಪತ್ರ ಅನುಮೋದನೆ ಮೂಲಕ ಬ್ಯಾಂಕಿಂಗ್ಗೆ
700 ಬಿಲಿಯನ್ (70000 ಕೋಟಿ) ರೂಪಾಯಿ ಒದಗಿಸಲು ಸರ್ಕಾರದ
ಪ್ರಸ್ತಾವ
🔹ಉನ್ನತ ಬೆಳವಣಿಗೆಗೆ ರೈಲು ಮಾರ್ಗ🔹
🔺ಆರ್ಥಿಕ ಸಾಕ್ಷ್ಯಗಳು ಸಲಹೆ ನೀಡುವುದೇನೆಂದರೆ,
ರೈಲ್ವೆಯಸಾರ್ವಜನಿಕ ಹೂಡಿಕೆಯು ದ್ವಿಗುಣಗೊಳ್ಳುತ್ತದೆ.
🔺ಹಾಗಿದ್ದರೂ, ದೀರ್ಘ ಅವಧಿಯಲ್ಲಿ ರೈಲ್ವೆಯನ್ನು
ವಾಣಿಜ್ಯೀಕರಣ ಮಾಡಬೇಕು ಮತ್ತು ರೈಲ್ವೆ ಸುಧಾರಣೆಗೆ
ಸಾರ್ವಜನಿಕ ಬೆಂಬಲವನ್ನು ಒದಗುವಂತೆ ಮಾಡಬೇಕು
🔹ಕೃಷಿ ಉತ್ಪನ್ನಗಳಿಗೆ
ರಾಷ್ಟ್ರೀಯ ಮಾರುಕಟ್ಟೆ🔹
🔺ಭಾರತದಲ್ಲಿ ಸಾವಿರಾರು ಕೃಷಿಮಾರುಕಟ್ಟೆಗಳಿವೆ
🔺ಕೃಷಿ ಉತ್ಪನ್ನ ಮಾರುಕಟ್ಟೆಗಳು ಅಪಾರದರ್ಶಕವಾದ
ಗಣನೀಯ ಪ್ರಮಾಣದ ಶುಲ್ಕಗಳನ್ನು ವಿಧಿಸುತ್ತಿವೆ
🔺“ಮಾದರಿ ಎ.ಪಿ.ಎಂ.ಸಿ. ಕಾಯ್ದೆ – 2003” ವು “ಕರ್ನಾಟಕ
ಮಾದರಿ” ಯಿಂದ ಪ್ರಯೋಜನ ಪಡೆಯಬೇಕು
🔺ರೈತರಿಗೆ ಆಯ್ಕೆಯ ರಚನೆ ಮತ್ತು ಖಾಸಗಿ ವಲಯದಿಂದ
ಮಾರುಕಟ್ಟೆ ಮೂಲ ಸೌಕರ್ಯ ರಚನೆಗೆ ಅಡ್ಡಲಾಗಿರುವ ತಡೆಗಳನ್ನು
ನಿವಾರಿಸಬೇಕು
🔺ಕೃಷಿ ಧಾನ್ಯ ಉತ್ಪಾದನೆಯು 2015-16ರಲ್ಲಿ 253.2 ದಶಲಕ್ಷ
ಟನ್ ಆಗಿದೆ.
[10/10 7:07 am] : ಕ್ವಿಜ್
26-5-2016
1) "ಜೀವಕೋಶದ ಪ್ರೋಟೀನ್ ಕಾರ್ಖಾನೆ" ಎಂದು
ಯಾವುದನ್ನು ಕರೆಯುತ್ತಾರೆ?
1}ರೈಬೋಸೋಮ್✅
2}ಸೆಂಟ್ರಿಯೋಲ್
3}ಶೈವಲ
4}ನ್ಯೂಕ್ಲಿಯಸ್
2} ಜೀವಕೋಶದ "ಆತ್ಮಹತ್ಯಾ ಸಂಚಿಗಳು" ಎಂದು
ಯಾವುದನ್ನು ಕರೆಯುತ್ತಾರೆ?
1}ಗಾಲ್ಗಿ ಸಂಕಿರ್ಣ
2}ಕ್ರಿಸ್ಟೆ
3}ಲೈಸೋಸೋಮ್✅
4}ಪ್ಲಾಸ್ಟಿಡ್
3} ಜೀವಕೋಶದ "ಶಕ್ತಿ ಉತ್ಪಾದನಾ ಕೇಂದ್ರ" ಯಾವುದು?
1)ರೆಟಿಕ್ಯುಲಮ್
2)ಮೈಟೋಕಾಂಡ್ರಿಯ✅
3)ಲೈಸೋಸೋಮ್
4)ಕ್ಲೊರೊಪ್ಲಾಸ್ಟ
4) ಪರಮಾಣು ಸಂಖ್ಯೆಯನ್ನು ಯಾವ ಅಕ್ಷರದಿಂದ
ಸೂಚಿಸುತ್ತಾರೆ?
1)X
2)A
3)Z✅
4)M
5) ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಹೊಂದಿರುವ ನೈಸರ್ಗಿಕ
ಸಂಪನ್ಮೂಲ ಯಾವುದು?
1)ಪೆಟ್ರೊಲಿಯಂ
2)ಡೀಸಲ್
3)ಕಲ್ಲಿದ್ದಲು✅
4)ಕೀಲೆಣ್ಣೆ
6) ಈಗಿರುವ ಒಟ್ಟು ಧಾತುಗಳ ಸಂಖ್ಯೆ ಎಷ್ಟು?
1)118✅
2)112
3)115
4)90
7} ಲಾಲಾರಸದ ಯಾವ ಕಿಣ್ವವು ಪಿಷ್ಟವನ್ನು ಮಾಲ್ಟೋಸ್ ಆಗಿ
ಪರಿವರ್ತಿಸುತ್ತದೆ?
1)ಬೋಲಸ್
2)ಮಾಲ್ಟೇಸ್
3)ಅಮೈಲೇಸ್✅
4)ಲೈಪೇಸ್
8) ಕಡಲಾಮೆಗಳ ಎಲ್ಲ ಪ್ರಭೇದಗಳೂ ಕಡಲಂಚಿನ ಮರಳಿನ
ತೀರದಲ್ಲೇ ಮೊಟ್ಟೆ ಇಡುತ್ತವೆ ಹಾಗೆ ನಮ್ಮ ದೇಶದ ಆಂಧ್ರ
ಮತ್ತು ಒರಿಸ್ಸಾ ರಾಜ್ಯಗಳ ಕಡಲ ತೀರಗಳಿಗೆ ಪ್ರತಿ ವರ್ಷ ಮೊಟ್ಟೆ
ಇಡಲು ಬರುವ ಕಡಲಾಮೆ ವಿಧ?
A) ಆಲಿವ್ ರಿಡ್ಲೀ✅
B) ದಿ ಲೆದರ್ ಬ್ಯಾಕ್
C)ದಿ ಲಾಗರ್ ಹೆಡ್
D) ದಿ ಗ್ರೀನ್ ಟರ್ಟಲ್
9) ನಮ್ಮ ಸೂರ್ಯನಿಗಿಂತ ಬಹಳ ಹೆಚ್ಚು ದ್ರವ್ಯರಾಶಿಯ
ನಕ್ಷತ್ರವೊಂದು ಅದರ ಬದುಕಿನ ಅಂತಿಮ ಹಂತದಲ್ಲಿ
ಸಿಡಿದುಹೋಗುತ್ತಿರುವ ಭೀಕರ ಸಿಡಿತದ ವಿದ್ಯಮಾನದ ವಿಶೇಷ
ಹೆಸರೇನು?
A)ಬೈಜಿಕ ಸ್ಫೋಟ
B)ಮಹಾ ಸ್ಫೋಟ
C)ಸೂಪರ್ ನೋವಾ ಸ್ಫೋಟ✅
D) ತಾರಾ ಸ್ಫೋಟ
10) ಸೌರವ್ಯೂಹದ ಅತ್ಯಂತ ಪ್ರಸಿದ್ಧ ‘ಕುಬ್ಜಗ್ರಹ’ ಪ್ಲೂಟೋ
ಈ ಕಾಯದ ಅಧ್ಯಯನಕ್ಕೆಂದು ಅದರ ಸನಿಹ ತಲುಪಿರುವ ವಿಶೇಷ
ವ್ಯೋಮನೌಕೆ ಯಾವುದು?
A) ಮೆಸೆಂಜರ್
B)ರೊಸೆಟ್ಟಾ
C)ಕ್ಯಾಸಿನೀ
D)ನ್ಯೂ ಹೊರೈಜನ್ಸ✅‌
11) ಒಂದು ಬೆಳಕಿನ ಆಕರವು ನಮ್ಮಿಂದ ದೂರ ಚಲಿಸುತ್ತಿದ್ದಾಗ,
ಅದರ ತರಂಗ ದೂರವು____
(ಎ) ಹೆಚ್ಚಾದಂತೆ ಭಾಸವಾಗುತ್ತದೆ✅
(ಬಿ) ಮೊದಲು ಹೆಚ್ಚಾದಂತೆ
ನಂತರ ಕಡಿಮೆಯಾದಂತೆ
ಭಾಸವಾಗುತ್ತದೆ
(ಸಿ) ಇದ್ದ ಹಾಗೆ ಭಾಸವಾಗುತ್ತದೆ
(ಡಿ) ಕಡಿಮೆಯಾದಂತೆ
12) ಗಾಳಿಯಲ್ಲಿ ಶ್ರವಣಾತೀತ ಶಬ್ಧದ ಜವ?
(A) 3 X 108MS-1
(B) 340 MS-1✅
(C) 1500 MS-1
(D) 3500 MS-1
13) ಡೈನಮೋದಲ್ಲಿ ಸುರುಳಿ ಸ್ಥಿರವಾಗಿದ್ದು ಕಾಂತವು
ಚಲಿಸುತ್ತಿದ್ದರೆ ಕಾರ್ಬನ್ ಕುಂಚಗಳ ಅವಶ್ಯಕತೆ ಇಲ್ಲ . ಏಕೆಂದರೆ___
?
(ಎ) ವಿದ್ಯುತ್ ಪ್ರವಾಹವು ಸ್ಥಿರ ಆಕರದಿಂದ ಬರುತ್ತದೆ
(ಬಿ) ವಿದ್ಯುತ್ ಪ್ರವಾಹವು ಚಲಿಸುವ ಆಕರದಿಂದ ಬರುತ್ತದೆ
(ಸಿ) ನೇರ ವಿದ್ಯುತ್ ಉತ್ಪಾದನೆಯಾಗುತ್ತದೆ.
(ಡಿ) ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಾಯಿಸುವ ಅವಶ್ಯಕತೆ
ಇಲ್ಲ✅
14) ವಿದ್ಯುತ್ ವಿಭಜನೆಯಲ್ಲಿ ಎ.ಸಿ. ವಿದ್ಯುತ್ ಪ್ರವಾಹ ಸೂಕ್ತವಲ್ಲ
ಏಕೆಂದರೆ?
(A) ಅದು ಹೆಚ್ಚಿನ ವಿದ್ಯುತ್ ಪ್ರವಾಹವನ್ನು ಹೊಂದಿದೆ
(B) ಅದು ಹೆಚ್ಚು ವೋಲ್ಟೇಜ್ ಹೊಂದಿದೆ
(C) ವಿದ್ಯುತ್ ಪ್ರವಾಹದ ದಿಕ್ಕು ಬದಲಾಗುತ್ತಿರುತ್ತದೆ ✅
(D) ವಿದ್ಯುತ್ ಪ್ರವಾಹದ ದಿಕ್ಕು ಸ್ಥಿರವಾಗಿರುತ್ತದೆ.
15) ಡೈನಮೋದಲ್ಲಿ ಆಯತಾಕಾರದ ಸುರುಳಿಯ ಸಮತಲವು
ವಿದ್ಯುತ್ ಕ್ಷೇತ್ರಕ್ಕೆ ಸಮಾಂತರವಾಗಿದ್ದಾಗ__
(A) ಪ್ರೇರಿತ ವಿದ್ಯುತ್ ಪ್ರವಾಹವು ಶೂನ್ಯ ✅
(B) ಪ್ರೇರಿತ ವಿದ್ಯುತ್ ಪ್ರವಾಹವು ಗರಿಷ್ಠ
(C) ಎ.ಸಿ. ವಿದ್ಯುತ್ ಉತ್ಪಾದನೆಯಾಗುವುದು
(D) ಡಿ.ಸಿ.ವಿದ್ಯುತ್ ಉತ್ಪಾದನೆಯಾಗುವುದು
17)ಈ ಸಂದರ್ಭದಲ್ಲಿ ಹೈಡ್ರೋಜನ್ ಅನಿಲ ಬಿಡುಗಡೆಯಾಗುತ್ತದ
ೆ..?
A) ಕುದಿಯುವ ನೀರಿನಲ್ಲಿ ಕಬ್ಬಿಣವನ್ನು ಇಟ್ಟಾಗ
(B) ಬಿಸಿ ಕಬ್ಬಿಣದ ಮೇಲೆ ಕುದಿನೀರು ಸುರಿದಾಗ
(C) ಕೆಂಗಾವಿನಲ್ಲಿರುವ ಕಬ್ಬಿಣದ ಮೇಲೆ ನೀರಿನ ಹಬೆ
ಹಾಯಿಸಿದಾಗ✅
(D) ಕಬ್ಬಿಣವನ್ನು ತಣ್ಣೀರಿನಲ್ಲಿ ಮುಳುಗಿಸಿದಾಗ
18) ಸಾರತೆ ಕಡಿಮೆ ಇರುವ ಹೈಡ್ರೋಕ್ಲೋರಿಕ್ ಆಮ್ಲದ ಜೊತೆ
ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡದೆ ಇರುವ
ಲೋಹವೆಂದರೆ..?
A) ಸೋಡಿಯಂ
B) ಅಲ್ಯೂಮಿನಿಯಂ
C) ತಾಮ್ರ ✅
D) ಪೊಟ್ಯಾಸಿಯಮ್
19) ನಿಂಬೆ ಪಾನಕವನ್ನು ಸಾಮಾನ್ಯವಾಗಿ ಲೋಹದ
ಲೋಟಗಳಲ್ಲಿ ನೀಡುವ ಬದಲು ಪಿಂಗಾಣಿ ಅಥವಾ ಗಾಜಿನ
ಲೋಟಗಳಲ್ಲಿ ನೀಡುತ್ತಾರೆ ಎಕೆಂದರೆ
A) ಗಾಜು ಮತ್ತು ಪಿಂಗಾಣಿ ಬೆಲೆ ಕಡಿಮೆ
(B) ಲೋಹದ ಸಂಗ್ರಾಹಕಗಳು ನಿಂಬೆಯಲ್ಲಿರುವ
ಆಮ್ಲದೊಂದಿಗೆ ವರ್ತಿಸುತ್ತದೆ.✅
(C) ನಿಂಬೆಪಾನಕ ಲೋಹದ ಲೋಟಗಳೊಂದಿಗೆ ದಹ್ಯ
ಹೈಡ್ರೋಜನ್ ಅನಿಲವನ್ನು ಬಿಡುಗಡೆಮಾಡುತ್ತದೆ.
(D) ಗಾಜು ಮತ್ತು ಪಿಂಗಾಣಿ ನಿಂಬೆ ಪಾನಕ ತಂಪಾಗಿಡುತ್ತದೆ
20) ಕೆಳಗಿನ ಲೋಹ ಮತ್ತು ಆಮ್ಲದ ಸಂಯೋಜನೆ ಗಂಧಕದ ಡೈ
ಆಕ್ಸೈಡ್ ಬಿಡುಗಡೆ ಮಾಡುತ್ತದೆ.
A) ಸತು ಮತ್ತು ಕಡಿಮೆ ಸಾರತೆಯ ನೈಟ್ರಿಕ್ ಆಮ್ಲ
B) ಸತು ಮತ್ತು ಕಡಿಮೆ ಸಾರತೆಯ ಸಲ್ಪ್ಯೂರಿಕ್ ಆಮ್ಲ
C) ಸತು ಮತ್ತು ಹೈಡ್ರೋಕ್ಲೋರಿಕ್ ಆಮ್ಲ
D) ಸತು ಮತ್ತು ಸಾರಯುತ ಸಲ್ಪ್ಯೂರಿಕ್ ಆಮ್ಲ✅
[10/10 7:08 am] : KAS ವಿಶೇಷಾಂಕ
🔺ಕರ್ನಾಟಕ ಸರ್ಕಾರದ ಮುಂಗಡ ಪತ್ರ 2016-17🔺
ದಿನಾಂಕ 2016 ಮಾರ್ಚ್, 18 ರಂದು ಮುಖ್ಯಮಂತ್ರಿ
ಸಿದ್ದರಾಮಯ್ಯನವರು ರಾಜ್ಯದ ಹಣಕಾಸು ಪತ್ರವನ್ನು
ಮಂಡನೆ ಮಾಡಿದ್ದಾರೆ.
ಮುಖ್ಯ ಮಂತ್ರಿಯಾಗಿ 4ನೇ ಬಾರಿ ಹಾಗೂ ಒಟ್ಟಾರೆಯಾಗಿ
11ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ
ಮಾಡಿದರು.
ಈ ಸಾಲಿನ ಬಜೆಟ್ ಗಾತ್ರ ರೂ.1,63,419 ಕೋಟಿಗೆ ಏರಿದೆ.
ವಿತ್ತೀಯ ಕೊರತೆ ರೂ.25,657 ಕೋಟಿಯಾಗಲಿದೆ. ಸರ್ಕಾರ
ರೂ.31,123 ಕೋಟಿ ಸಾಲ ಎತ್ತಲಿದೆ
🔺ರೈತರ ಕಲ್ಯಾಣ ಸಮಿತಿ:
ಸರಣಿ ಆತ್ಮಹತ್ಯೆ ಪ್ರಕರಣಗಳಿಂದ ಕಂಗಾಲಾಗಿರುವ ರೈತ
ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನೂ
ಮುಖ್ಯಮಂತ್ರಿ ಮಾಡಿದ್ದಾರೆ.
ರೈತರ ಸಂಕಷ್ಟ ನಿವಾರಣೆಗೆ ತಮ್ಮ (ಮುಖ್ಯಮಂತ್ರಿ)
ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ
ರಚಿಸುವ ಭರವಸೆ ನೀಡಿದ್ದಾರೆ.
ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ
ಮುಂದುವರಿಸುವುದಾಗಿ ಹೇಳಿದ್ದಾರೆ.
ಕಳೆದ ವರ್ಷ 21 ಲಕ್ಷ ರೈತರಿಗೆ ಇದರ ಉಪಯೋಗ ಆಗಿದ್ದು,
ಮುಂದಿನ ವರ್ಷ ಕನಿಷ್ಠ 23 ಲಕ್ಷ ಜನರಿಗೆ ರೂ.11 ಸಾವಿರ ಕೋಟಿ
ಸಾಲ ನೀಡುವ ಗುರಿ ಘೋಷಿಸಿದ್ದಾರೆ
‘ನವೋದ್ಯಮ’ (ಸ್ಟಾರ್ಟ್ಅಪ್) ಕ್ಷೇತ್ರದಲ್ಲಿ ರಾಜ್ಯ
ಮುಂಚೂಣಿಯಲ್ಲಿದೆ. ಅದರ ಉಪಯೋಗ ಕೃಷಿ ಕ್ಷೇತ್ರಕ್ಕೂ
ಆಗಬೇಕೆಂದು ‘ಕೃಷಿ ನವೋದ್ಯಮ’ ಸ್ಥಾಪಿಸುವುದಾಗಿಯ
ೂ ಪ್ರಕಟಿಸಿದ್ದಾರೆ.
ಇದರಡಿ ಕೈಗಾರಿಕಾ ಅಭಿವೃದ್ಧಿಯ ವಿಶೇಷ ಆರ್ಥಿಕ ವಲಯಗಳ
ಮಾದರಿಯಲ್ಲೇ ರಾಜ್ಯದ ವಿವಿಧೆಡೆ ‘ವಿಶೇಷ ಕೃಷಿ ವಲಯ’ಗಳನ್ನು
ಸ್ಥಾಪಿಸಲಾಗುತ್ತದೆ.
🔺ಆರ್ಥಿಕ ಸಮೀಕ್ಷೆ ಆರ್ಥಿಕ ಸಮೀಕ್ಷೆ ಅಂದಾಜು
ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ) 2014–15 ರೂ.7,34,988
ಕೋಟಿ
2015–16 ರೂ.7,80,805 ಕೋಟಿಆರ್ಥಿಕ ವೃದ್ಧಿ ದರ ಕುಸಿತ
ಸತತ ಮೂರು ವರ್ಷಗಳ ಬರಗಾಲದಿಂದಾಗಿ ಕೃಷಿ ವಲಯದ
ಬೆಳವಣಿಗೆಯು ಗಮನಾರ್ಹ ಕುಸಿತ ಕಂಡಿದ್ದರಿಂದ ರಾಜ್ಯದ ಆರ್ಥಿಕ
ವೃದ್ಧಿ ದರವು ಶೇ 7.8ರಿಂದ ಶೇ 6.2ಕ್ಕೆ ಇಳಿದಿದೆ ಎಂದು ಆರ್ಥಿಕ
ಸಮೀಕ್ಷೆ ಅಂದಾಜಿಸಿದೆ.
2015-16ನೇ ಸಾಲಿನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು
(ಎಸ್ಜಿಡಿಪಿ) , ಹಿಂದಿನ ವರ್ಷದ (2014–15) ಶೇ 7.8ಕ್ಕೆ ಹೋಲಿಸಿದರೆ
ಶೇ 6.2ರಷ್ಟಕ್ಕೆ ಇಳಿದಿದೆ.
2014–15ನೇ ಸಾಲಿನಲ್ಲಿ ರೂ.7,34, 988 ಕೋಟಿಯಷ್ಟಿದ್ದ
‘ಎಸ್ಜಿಡಿಪಿ’ ಶೇ 6.2 ವೃದ್ಧಿದರದೊಂದಿಗೆ ರೂ.7,80,805 ಕೋಟಿ
ತಲುಪುವ ನಿರೀಕ್ಷೆ ಇದೆ ಎಂದು ಶುಕ್ರವಾರ ವಿಧಾನಸಭೆಯಲ್ಲಿ
ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಲೆಕ್ಕ ಹಾಕಲಾಗಿದೆ
ರಾಜ್ಯದ ವಿವಿಧೆಡೆ ಕಾಣಿಸಿಕೊಂಡ ಬರದಿಂದಾಗಿ ಕೃಷಿ ವಲಯದ
ಬೆಳವಣಿಗೆ ದರ ಶೇ (– ) 4.7ಕ್ಕೆ ಕುಸಿಯುವ ಭೀತಿ ಎದುರಾಗಿದೆ.
ಬರದ ಛಾಯೆಯಿಂದಾಗಿ 12.26 ಕೋಟಿ ಟನ್ ಆಹಾರ ಪದಾರ್ಥಗಳ
ಉತ್ಪಾದನೆ 11 ಕೋಟಿ ಟನ್ಗಳಿಗೆ ಕುಂಠಿತಗೊಳ್ಳುವ
ಸಾಧ್ಯತೆಇದೆ.
ಮುಂಗಾರು ಹಂಗಾಮಿನಲ್ಲಿ ರಾಜ್ಯದ 136
ತಾಲ್ಲೂಕುಮತ್ತು ಹಿಂಗಾರಿನಲ್ಲಿ 62 ತಾಲ್ಲೂಕುಗಳು ಬರಕ್ಕೆ
ತುತ್ತಾಗಿದ್ದವು. ಗಣಿ, ಕಲ್ಲುಗಣಿಗಾರಿಕೆ, ತಯಾರಿಕಾ ಮತ್ತು
ನಿರ್ಮಾಣ ವಲಯ, ವಿದ್ಯುಚ್ಛಕ್ತಿ, ಅನಿಲ ಹಾಗೂ ನೀರು
ಸರಬರಾಜು ಸೇರಿದಂತೆ ಕೈಗಾರಿಕಾ ವಲಯದ ಬೆಳವಣಿಗೆ ದರ ಶೇ
4.7ರಿಂದ ಶೇ 4.5ಕ್ಕೆ ಇಳಿಕೆಯಾಗುವುದೆಂದು ಎಂದು ಸಮೀಕ್ಷೆ
ಹೇಳಿದೆ.
ಗಮನಾರ್ಹ ಕೊಡುಗೆ ಶೇ 10.3ರಷ್ಟಿದ್ದ ಸೇವಾ ವಲಯದ
(ವೃತ್ತಿಪರ ಸೇವೆ, ಸ್ಥಿರಾಸ್ತಿ, ಸಂಪರ್ಕ ಕ್ಷೇತ್ರ ಇತ್ಯಾದಿ)
ಬೆಳವಣಿಗೆ ಶೇ 9.1ಕ್ಕೆ ಇಳಿಕೆಯಾಗಿದ್ದರೂ, ರಾಜ್ಯದ ಒಟ್ಟು
ಆಂತರಿಕ ಉತ್ಪನ್ನಕ್ಕೆ ಬಹುಪಾಲು ಕೊಡುಗೆ ನೀಡಿದೆ.
ಸೇವಾವಲಯದ ವ್ಯಾಪ್ತಿಯಲ್ಲಿಯ ಪ್ರತಿ ಯೊಂದು
ಕೈಗಾರಿಕೆಯು ಶೇ 12ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ
ರಾಜ್ಯದ ಆರ್ಥಿಕ ಬೆಳವಣಿಗೆ ಶೇ 6.2 ತಲುಪಲು ಗಮನಾರ್ಹ
ಕೊಡುಗೆ ನೀಡಿದೆ.
🔺ಹೆಚ್ಚಿದ ನಿವ್ವಳ ತಲಾ ಆದಾಯ
ರಾಜ್ಯದ ನಿವ್ವಳ ತಲಾ ಆದಾಯ ರೂ.1,30,897
ಕೋಟಿಯಿಂದ ರೂ.1,45,799 ಕೋಟಿಗೆ ಹೆಚ್ಚುವ ಮೂಲಕಶೇ
11.4ರಷ್ಟು ಏರಿಕೆ ಕಾಣಲಿದೆ.
ಇದೇ ಅವಧಿಯಲ್ಲಿ ರಾಷ್ಟ್ರೀಯ ನಿವ್ವಳ ತಲಾ ಆದಾಯ ಶೇ
7.3ರಷ್ಟು (ರೂ.86,879 ರಿಂದ ರೂ.93,231) ಹೆಚ್ಚಳವಾಗಲಿದೆ
ಎಂದು ಅಂದಾಜಿಸಲಾಗಿದೆ.
🔺ಲಿಂಗಾಧಾರಿತ ಬಜೆಟ್

ದೇಶದಲ್ಲಿ ಲಿಂಗಾಧಾರಿತ ಬಜೆಟ್ ಜಾರಿಗೊಳಿಸಿರುವ ಮೂರು
ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಬಜೆಟ್ನಲ್ಲಿ ಲಿಂಗ ಸಮಾನತೆ ಮತ್ತು ಸಾರ್ವಜನಿಕ ವೆಚ್ಚದಲ್ಲಿ
ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.
ಮಹಿಳೆಯರಿಗೆ ಸಮಾನ ಸಂಪನ್ಮೂಲ ಹಂಚಿಕೆ ಮತ್ತು ವೆಚ್ಚ
ನಿಗದಿಪಡಿಸಲು ರಾಜ್ಯ ಸರ್ಕಾರ ಆರ್ಥಿಕ ಇಲಾಖೆಯಲ್ಲಿ ಮಹಿಳಾ
ಉದ್ದೇಶಿತ ಆಯವ್ಯಯ ಘಟಕ ಸ್ಥಾಪಿಸಿದೆ.
🔺ಬಂಡವಾಳ ಇನ್ವೆಸ್ಟ್
‌ ಕರ್ನಾಟಕ ಸಮಾವೇಶದ ಮೂಲಕ ರಾಜ್ಯ ಸರ್ಕಾರ ₹3 ಲಕ್ಷ
ಕೋಟಿಗಿಂತಲೂ ಹೆಚ್ಚು ಬಂಡವಾಳ ಆಕರ್ಷಿಸಿದೆ. ಆ ಪೈಕಿ ₹ 1.77
ಲಕ್ಷ ಕೋಟಿ ಹೂಡಿಕೆಯ 1080 ಯೋಜನೆಗಳಿಗೆ ಸರ್ಕಾರ
ಈಗಾಗಲೇ ಹಸಿರು ನಿಶಾನೆ ತೋರಿಸಿದೆ. ಇದರಿಂದಾಗಿ 4.82 ಲಕ್ಷ
ಉದ್ಯೋಗ ಸೃಷ್ಟಿಯಾಗಲಿದೆ
ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಆಕರ್ಷಿಸುವಲ್ಲಿ
ಕರ್ನಾಟಕ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.
2014–15ರಲ್ಲಿ ಭಾರತಕ್ಕೆ ಹರಿದು ಬಂದ ಎಫ್ಡಿಐನಲ್ಲಿ ಶೇ
11.13ರಷ್ಟು ರಾಜ್ಯದ ಪಾಲಾಗಿದೆ.
ಮಾಹಿತಿ ಮತ್ತು ತಂತ್ರ ಜ್ಞಾನಕ್ಷೇತ್ರದಲ್ಲಿ
ಮುಂಚೂಣಿಯಲ್ಲಿರುವ ರಾಜ್ಯ ಈ ಕ್ಷೇತ್ರದಲ್ಲಿ ರೂ.2.20
ಲಕ್ಷ ಕೋಟಿ ರಫ್ತು ವಹಿವಾಟು ನಡೆಸಿದೆ. ಈ ಕ್ಷೇತ್ರ ರಾಜ್ಯದ
ಜಿಡಿಪಿಗೆ ಶೇ 26ಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ
🔺ರಫ್ತಿಗೆ ಐ.ಟಿ ಕೊಡುಗೆ:
ದೇಶದ ರಫ್ತು ಪ್ರಮಾಣದಲ್ಲಿ ರಾಜ್ಯದ ಐ.ಟಿ ಕ್ಷೇತ್ರದ ಪಾಲು
ಶೇ 38ರಷ್ಟಾಗಿದೆ. 3500 ಐ.ಟಿ ಕಂಪೆನಿಗಳು ಅತಿ ಹೆಚ್ಚಿನ
ಪ್ರಮಾಣದ ಉದ್ಯೋಗ ಸೃಷ್ಟಿಸುವ ಕೇಂದ್ರಗಳಾಗಿ
ಗುರುತಿಸಿಕೊಂಡಿವೆ.
ಐ.ಟಿ ತಾಂತ್ರಿಕ ಕೇಂದ್ರ
ಅಮೆರಿಕದ ಸಿಲಿಕಾನ್ ವ್ಯಾಲಿ, ಬಾಸ್ಟನ್ ಮತ್ತು ಲಂಡನ್ ಬಿಟ್ಟರೆ
ಬೆಂಗಳೂರು ವಿಶ್ವದ ನಾಲ್ಕನೇ ಅತ್ಯುತ್ತಮ ಐ.ಟಿ ತಾಂತ್ರಿಕ
ಕೇಂದ್ರವಾಗಿದೆ.
ಅದೇ ರೀತಿ ಶೇ 30ರಷ್ಟು ಸ್ಟಾರ್ಟ್ ಅಪ್ಗಳಿರುವ
ಕರ್ನಾಟಕವು ದೇಶದ ಸ್ಟಾರ್ಟ್ ಅಪ್ ರಾಜಧಾನಿಯಾಗಿ
ಹೊರಹೊಮ್ಮಿದೆ.
🔸ಮೊದಲ ಬಾರಿಗೆ ಪ್ರತ್ಯೇಕ ‘ಸ್ಟಾರ್ಟ್ಅಪ್ ನೀತಿ 2015–
20’ ಜಾರಿಗೆ ತಂದ ಹೆಗ್ಗಳಿಕೆ ಕೂಡ ರಾಜ್ಯಕ್ಕೆ ಸಲ್ಲುತ್ತದೆ.
🔸2020ರ ವೇಳೆಗೆ 20 ಸಾವಿರ ತಾಂತ್ರಿಕ ಸ್ಟಾರ್ಟ್ಅಪ್
ಸ್ಥಾಪಿಸುವ ಗುರಿ ಹೊಂದಿದೆ.
🔺ಸವಾಲುಗಳು
🔹ವಿದೇಶಿ ನೇರ ಬಂಡವಾಳ ಆಕರ್ಷಿಸುವ ಅವಕಾಶಗಳಿದ್ದು ಆ
ನಿಟ್ಟಿನಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಬೇಕಾಗಿದೆ
ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
🔹ಮೂಲಸೌಲಭ್ಯ ಕೊರತೆ, ಅಧಿಕಾರಿಶಾಹಿ ಅಡೆತಡೆ, ವಿದ್ಯುತ್
ಅಭಾವ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ
ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರ ಹಲವಾರು ಪರಿಣಾಮಕಾರಿ
ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರ್ಥಿಕ ಸಮೀಕ್ಷೆ
ಹೇಳಿದೆ.
🔹 ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಶಿವಮೊಗ್ಗ,
ಕಲಬುರ್ಗಿಯಂತಹ ಎರಡನೇ ಹಂತದ ನಗರಗಳಿಗೆ ಐ.ಟಿ ಮತ್ತು
ಸ್ಟಾರ್ಟ್ ಅಪ್ಗಳನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆಜಿಲ್ಲಾ
ಯೋಜನಾ ಗಾತ್ರ ಹೆಚ್ಚಳ
🔹ವರ್ಷದಿಂದ ವರ್ಷಕ್ಕೆ ಜಿಲ್ಲಾ ವಲಯದ ಯೋಜನಾ ಗಾತ್ರ
ಹೆಚ್ಚಾಗುತ್ತಿದೆ. ಶಿಕ್ಷಣ, ಗ್ರಾಮೀಣ ಉದ್ಯೋಗ, ಮಹಿಳಾ
ಮತ್ತು ಮಕ್ಕಳ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪಂಗಡ,
ಗ್ರಾಮೀಣ ವಿದ್ಯಾರ್ಥಿ ವಸತಿ ನಿಲಯಗಳು ಹೆಚ್ಚಿನ ಪಾಲು
ಹೊಂದಿವೆ.
🔹 2013–14ರಲ್ಲಿ ರೂ.8921 ಕೋಟಿಯಷ್ಟಿದ್ದ ಜಿಲ್ಲಾ
ವಲಯದ ಯೋಜನಾ ಗಾತ್ರ 2014–15ರಲ್ಲಿ ರೂ. 10,481 ಕೋ
ಟಿಗೆ ಹಾಗೂ 15–16ರಲ್ಲಿ ರೂ.11,328 ಕೋಟಿಗೆ ಏರಿದೆ.ಕೃಷಿ
ವಲಯದ ಕೊಡುಗೆ ಇಳಿಕೆ
🔹ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ಕೃಷಿ ವಲಯದ ಕೊಡುಗೆ
ಇಳಿಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ
ವ್ಯಕ್ತಪಡಿಸಿದ್ದಾರೆ. ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ
ರಾಜ್ಯದ ಕೊಡುಗೆ ಶೇ. 5.5ರಿಂದ ಶೇ. 7ಕ್ಕೆ ಹೆಚ್ಚಿದ್ದು, ಇದು
ರಾಷ್ಟ್ರೀಯ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ನಮ್ಮ ರಾಜ್ಯದ
ವಾಸ್ತವಿಕ ಕೊಡುಗೆಯನ್ನು ಪ್ರತಿಬಿಂಬಿಸುತ್ತಿದೆ. ಐಟಿ ವಲಯದ
ಕೊಡುಗೆ ಶೇ. 9ರಿಂದ ಶೇ. 18ಕ್ಕೆ ಏರಿಕೆಯಾಗಿದೆ.
🔹ಸೇವಾವಲಯದ ಒಟ್ಟಾರೆ ಕೊಡುಗೆಯು ಶೇ. 59ರಿಂದ
ಶೇ. 64ಕ್ಕೆ ಹೆಚ್ಚಳವಾಗಿದೆ. ಉತ್ಪಾದನಾ ವಲಯದ ಕೊಡುಗೆ
ಶೇ.12ರಿಂದ ಶೇ.15ಕ್ಕೆ ಏರಿದೆ.
🔹ಆದರೆ, ಕೃಷಿ ವಲಯದ ಕೊಡುಗೆಯುಶೇ.14ರಿಂದ ಶೇ.8ಕ್ಕೆ
ಇಳಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು
ತಮ್ಮ ಬಜೆಟ್ನಲ್ಲಿ ಪ್ರಸ್ತಾವಿಸಿದ್ದಾರೆ.

No comments:

Post a Comment