Friday, 28 October 2016

ಸರ್ಕಾರಿಕಾರ್ನರ

/ಅಕ್ಟೋಬರ್ -2016 ರ ಸರ್ಕಾರಿ ಕಾರ್ನರ್
ಪ್ರಶ್ನೆಗಳು.
September 26, 2016ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ
ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು
ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ
ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ,
5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
26-10-16.
ನೌಕರಿಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬಹುದು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರನು ಸಾರ್ವತ್ರಿಕ
ಚುನಾವಣೆಗಳಾದ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ,
ವಿಧಾನಸಭೆ, ಲೋಕಸಭೆಗಳಂತಹ ಚುನಾವಣೆಗಳಿಗೆ ಸ್ಪರ್ಧಿಸಲು
ಅವಕಾಶವಿದೆಯೆ? ಹಾಗಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮ ಹಾಗೂ
ಷರತ್ತುಗಳನ್ನು ತಿಳಿಸಿ. ನೌಕರಿಗೆ ರಾಜೀನಾಮೆ ನೀಡಿ
ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರೆ ರಾಜೀನಾಮೆ
ಹಿಂಪಡೆದು ಪುನಃ ಅದೇ ಹುದ್ದೆಗೆ ಹಾಜರಾಗಬಹುದೇ?
| ಸುರೇಶ. ಹೆಚ್ ಬಳ್ಳಾರಿ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ
5ರ ರಿತ್ಯಾ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ನೌಕರಿಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬಹುದು.
ಚುನಾವಣಾ ಅಧಿಕಾರಿಯಿಂದ ರಾಜೀನಾಮೆ ಅಂಗೀಕಾರವಾದ
ಬಗ್ಗೆ ಮಾಹಿತಿ ಪಡೆಯುವುದರಿಂದ ಚುನಾವಣೆಯಲ್ಲಿ
ಪರಾಭವಗೊಂಡ ನಂತರ ಕರ್ತವ್ಯಕ್ಕೆ ಮರು ಹಾಜರಾಗಲು
ಸಾಧ್ಯವಾಗುವುದಿಲ್ಲ. ಆದುದರಿಂದ ಸರ್ಕಾರಿ ನೌಕರನು
ಸಾಹಿತ್ಯಿಕ ಸಾಂಸ್ಕೃತಿಕ ಮತ್ತು ಇನ್ನಿತರ ರಾಜಕೀಯೇತರ
ಸಂಸ್ಥೆ ಚುನಾವಣೆಗಳಲ್ಲಿ ಭಾಗವಹಿಸಬಹುದು.
***
24-10-16.
ನನಗೆ ಮಗು ಪೋಷಣೆಗೆ ರಜೆ ಸೌಲಭ್ಯದ ಅವಧಿ ಎಷ್ಟು?
ನನಗೆ 41 ವರ್ಷವಿದ್ದು ಸಂತಾನಕ್ಕಾಗಿ ಸಾಕಷ್ಟು ವೈದ್ಯರ ಸಲಹೆ/
ಸೂಚನೆ ಪಡೆದರೂ ಫಲಪ್ರದವಾಗಲಿಲ್ಲ. ಈಗ ನಮ್ಮ
ಸಂಬಂಧಿಕರೊಬ್ಬರ ಮಗು ದತ್ತು ಪಡೆಯುವ ಅವಕಾಶ ದೊರಕಿದೆ.
ಇದಕ್ಕೂ ಇಲಾಖಾ ಅನುಮತಿ ಪಡೆಯಬೇಕೆ ಹಾಗೂ ನನಗೆ ಮಗು
ಪೋಷಣೆಗೆ ರಜೆ ಸೌಲಭ್ಯದ ಅವಧಿ ಎಷ್ಟು?
| ಎಸ್.ಲಕ್ಷ್ಮೀ ತುರುವೇಕೆರೆ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ
ರೀತ್ಯಾ ನೀವು ಮಗು ದತ್ತು ಪಡೆಯಲು ಸರ್ಕಾರದ ಅನುಮತಿ
ಅವಶ್ಯಕತೆಯಿಲ್ಲ. ನೀವು ಹಿಂದೂ ದತ್ತಕ ಕಾಯ್ದೆಯಡಿ ಮಗು
ದತ್ತು ತೆಗೆದುಕೊಂಡು ನೋಂದಣಿ ಮಾಡಿಸಬೇಕು ಹಾಗೂ
ನಿಮ್ಮ ಮಗುವು ಒಂದು ವರ್ಷ ಪೂರ್ಣವಾಗುವವರೆಗೆ ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿ ನಿಯಮ 135ಬಿ ರೀತ್ಯಾ ನೀವು
ಮಗುವಿನ ಪೋಷಣೆಗೆ ರಜೆ ಪಡೆಯಬಹುದು.
***
23-10/16.
ಯಾವುದೇ ಸರ್ಕಾರಿ ನೌಕರರು ದೀರ್ಘ ಕಾಯಿಲೆಯಿಂದ
ಯಾವುದೇ ರಜೆ ಪಡೆಯದೆ ಮೃತಪಟ್ಟಲ್ಲಿ ಆತನ ಅವಲಂಬಿತರು
ಹೆಂಡತಿ/ಗಂಡ ಅನುಕಂಪದ ಆಧಾರದ ಮೇರೆಗೆ ನೌಕರಿ ಪಡೆಯಲು
ಅರ್ಹರೆ? ಸದರಿ ಮೃತಪಟ್ಟ ವ್ಯಕ್ತಿಯು ಇಂತಿಷ್ಟು ವರ್ಷ ಸರ್ಕಾರಿ
ಸೇವೆ ಸಲ್ಲಿಸಬೇಕಾಗಿರುತ್ತದೆ ಎಂದೇನಾದರೂ
ಇರುತ್ತದೆಯೇ?
| ಎಂ. ವೆಂಕಟಾಚಲಪತಿ ಕೋಲಾರ.
ಕರ್ನಾಟಕ ಸರ್ಕಾರಿ ನೌಕರನು ಸರ್ಕಾರಿ ಸೇವೆಗೆ ಸೇರಿ ಒಂದು ದಿನ
ಸೇವೆ ಸಲ್ಲಿಸಿ ಮೃತನಾದರೆ, ಅವನನ್ನು ಅವಲಂಬಿಸಿದ ಗಂಡ ಅಥವಾ
ಹೆಂಡತಿ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ
ನೇಮಕ) ನಿಯಮಗಳು 1986ರ ನಿಯಮ 3ರಂತೆ ಅನುಕಂಪದ
ಮೇರೆಗೆ ನೇಮಕ ಹೊಂದಲು ಅರ್ಹರಾಗುತ್ತಾರೆ. ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿ ರೀತಿ ಸೇವೆಗೆ ಸೇರಿ 1
ದಿವಸವಾದರೂ ಸಹ ಅವರು ಸರ್ಕಾರಿ ನೌಕರರೇ ಆಗಿರುವುದರಿಂದ
ತಕ್ಷಣವೇ ಮೃತನಾದರೂ ಅವನ ಕುಟುಂಬಕ್ಕೆ ಎಲ್ಲಾ ಆರ್ಥಿಕ
ಮತ್ತು ಸೇವಾ ಸೌಲಭ್ಯಗಳು ನಿಯಮಾವಳಿಗಳ ರೀತ್ಯಾ
ಲಭ್ಯವಾಗುತ್ತದೆ.
***
22-10-16.
ನಾನು ಬೆರಳಚ್ಚುಗಾರನಾಗಿ ಸರ್ಕಾರಿ ಸೇವೆಗೆ ಸೇರಿ 8 ವರ್ಷ
ಸೇವೆಯ ನಂತರ ಶೀಘ್ರಲಿಪಿಗಾರರ ಹುದ್ದೆಗೆ ಪದೋನ್ನತಿ ಪಡೆದೆ.
4 ವರ್ಷ ಶೀಘ್ರಲಿಪಿಗಾರನಾಗಿ ಹಾಗೂ 1 ವರ್ಷ ಪ್ರಥಮ ದರ್ಜೆ
ಸಹಾಯಕರ ತರಬೇತಿ ಪಡೆದಿದ್ದೇನೆ. ನಮ್ಮ ಇಲಾಖೆಗೆ ಕಚೇರಿ
ಅಧೀಕ್ಷಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಾವಳಿ
ರೀತ್ಯಾ ಶೀಘ್ರಲಿಪಿಗಾರನಾಗಿ ಅಥವಾ ಪ್ರಥಮ ದರ್ಜೆ
ಸಹಾಯಕನಾಗಿ ಸೇವೆ ಸಲ್ಲಿಸಿದರೆ ಪದೋನ್ನತಿ ನೀಡಲಾಗು
ವುದೆಂದು ತಿಳಿಸಲಾಗಿದೆ. ಆದರೂ ನನಗೆ ಪದೋನ್ನತಿ
ನಿರಾಕರಿಸಿದ್ದಾರೆ. ಇದು ಸ್ವಾಭಾವಿಕ ನ್ಯಾಯವೆ? ನಾನು
ಪರಿಶಿಷ್ಟ ಜಾತಿಗೆ ಸೇರಿದ್ದು ಪದೋನ್ನತಿ ಸೇವಾವಧಿಗೆ ಅರ್ಹತಾ
ಸೇವಾವಧಿ ಕಡಿಮೆ ಸಲ್ಲಿಸಿದ್ದರೂ ಪದೋನ್ನತಿ ನೀಡಬಹುದೆ.
-ಶಿವಕುಮಾರಯ್ಯ ಮೈಸೂರು.
ಕರ್ನಾಟಕ ಸರ್ಕಾರಿ ಸೇವಾ (ಪದೋನ್ನತಿ), ವೇತನ ನೀತಿ-
ನಿಯಮಗಳು 1973ರ ರೀತ್ಯಾ ಸರ್ಕಾರಿ ನೌಕರನು ವೃಂದ
ನೇಮಕಾತಿ ನಿಯಮಾವಳಿ ರೀತ್ಯಾ ಅರ್ಹತಾದಾಯಕ ಸೇವೆ
ಹೊಂದಿದ್ದರೆ ಮುಂದಿನ ಹುದ್ದೆಗೆ ಪದೋನ್ನತಿ
ನೀಡಬಹುದೆಂದು ಸೂಚಿಸಲಾಗಿದೆ. ನೀವು
ಶೀಘ್ರಲಿಪಿಗಾರರಾಗಿ 4 ವರ್ಷ ಮತ್ತು 1 ವರ್ಷ ತರಬೇತಿಯನ್ನು
ಸಹ ಪಡೆದಿರುವುದರಿಂದ ಸರ್ವ ರೀತಿಯಲ್ಲೂ ನೀವು
ಪದೋನ್ನತಿಗೆ ಅರ್ಹರಾಗಿರುತ್ತೀರಿ. ಆದರೆ, ನಿಮ್ಮ ಇಲಾಖೆಯ
ಕೆಳಗಿನ ಅಧಿಕಾರಿಗಳು ಶೀಘ್ರಲಿಪಿಗಾರರ ಹುದ್ದೆಯಲ್ಲಿ ಐದು ವರ್ಷ
ಮತ್ತು ಪ್ರ.ದ.ಸ ತರಬೇತಿ 1 ವರ್ಷ ಎಂದು ತಿಳಿಸಿ ಪದೋನ್ನತಿ
ನಿರಾಕರಿಸುವುದು ಸ್ವಾಭಾವಿಕ ನ್ಯಾಯವಲ್ಲ.
ಶೀಘ್ರಲಿಪಿಗಾರರ ಮತ್ತು ಪ್ರಥಮ ದರ್ಜೆ ಸಹಾಯಕರ ವೇತನ
ಶ್ರೇಣಿ ಒಂದೇ ಆಗಿದ್ದು ಇವುಗಳನ್ನು ಲಿಪಿಕ ಹುದ್ದೆಗಳೆಂದು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗೆ ಪರಿಗಣಿಸಲಾಗಿದೆ.
ಅಲ್ಲದೆ ನೀವು ಪರಿಶಿಷ್ಟ ಜಾತಿಯವರಾಗಿರುವುದರಿಂದ ದಿನಾಂಕ:
27.07.2013ರ ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 88
ಸೇನೆನಿ 2013ರ ರೀತ್ಯಾ ನಿಮ್ಮ ಅರ್ಹತಾದಾಯಕ
ಸೇವೆಯನ್ನು ಕಡಿಮೆಗೊಳಿಸಿ ಪದೋನ್ನತಿಯನ್ನು
ನೀಡಬಹುದಾಗಿದೆ.
***
21-10-16.
ನಾನು ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಕೆಲಸ
ಮಾಡುತ್ತಿದ್ದು ಪ್ರಸ್ತುತ 2 ವರ್ಷಗಳಿಂದ ಲೋಕಾಯುಕ್ತ
ಟ್ರಾ್ಯಪ್ ಕೇಸ್​ನಲ್ಲಿ ಸಿಲುಕಿಕೊಂಡು ಅಮಾನತ್ತಿನಲ್ಲಿದ್ದೇನೆ.
ನಾನು ಪದವೀಧರನಾಗಿದ್ದು ಪ್ರಸ್ತುತ ಕರ್ನಾಟಕ ಪರೀಕ್ಷಾ
ಪ್ರಾಧಿಕಾರವು ಕರೆದಿರುವ ಪಿ.ಡಿ.ಓ ಹುದ್ದೆಗಳಿಗೆ ಹಾಗೂ
ಪೊಲೀಸ್ ಇಲಾಖೆಯ ಪಿ.ಎಸ್.ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
ಇಚ್ಛಿಸಿದ್ದು ನಾನು ಆಕ್ಷೇಪಣಾ ರಹಿತ ಪತ್ರ ನೀಡಲು
ಮೇಲಧಿಕಾರಿಗಳಿಗೆ ಕೋರಿದಾಗ ನಿರಾಕರಿಸಿದ್ದಾರೆ. ನನಗೆ
ನಿಯಮಾವಳಿಯ ರೀತ್ಯಾ ಅನುಮತಿ ನೀಡಲು
ಅವಕಾಶವಿದೆಯೇ. | ಬಿ.ಎನ್.ಬಿರಾದಾರ ಕೊಪ್ಪಳ
ಕರ್ನಾಟಕ ಸರ್ಕಾರಿ ಸೇವಾ (ನಡತೆ ನಿಯಮಳು) 1966ರ ಮೇರೆಗೆ
ಪ್ರತಿಯೊಬ್ಬ ಸರ್ಕಾರಿ ನೌಕರನೂ ಪೂರ್ವಾನುಮತಿಯೊಂದಿಗೆ
ಅರ್ಜಿ ಸಲ್ಲಿಸಬೇಕು. ಅಲ್ಲದೆ ಕರ್ನಾಟಕ ಸರ್ಕಾರಿ ಸೇವಾ (ನೇರ
ನೇಮಕಾತಿ, ಬಡ್ತಿ) ನಿಯಮಗಳು 1977ರ ನಿಯಮ 11ರಂತೆ ಸಕ್ಷಮ
ಪ್ರಾಧಿಕಾರದ ಮೂಲಕವೇ ಸಲ್ಲಿಸಬೇಕು. ಆದರೆ, ಪ್ರಸ್ತುತ
ನೀವು ಅಮಾನತ್ತಿನಲ್ಲಿರುವಾಗ ಅಂತಹ ನೌಕರರಿಗೆ ಆಕ್ಷೇಪಣಾ
ರಹಿತ ಪತ್ರ ಕೊಡಲು ಬರುವುದಿಲ್ಲ. ಅಂತಹ ಅರ್ಜಿ
ಪರಿಗಣಿಸಬಾರದೆಂದು ಈಗಾಗಲೇ ಕೇಂದ್ರ ಸರ್ಕಾರ ಆದೇಶ
ಹೊರಡಿಸಿದೆ. ಅಮಾನತ್ತಿನಲ್ಲಿರುವ ನೌಕರನನ್ನು ಹೊಸ ಹುದ್ದೆಗೆ
ಆಯ್ಕೆಯಾಗುವುದರಿಂದ ಬಿಡುಗಡೆಗೊಳಿಸಲು
ಕ್ಲಿಷ್ಟಕರವಾಗುತ್ತದೆ. ಶಿಸ್ತುಕ್ರಮ, ಕ್ರಿಮಿನಲ್ ಕ್ರಮ
ಎದುರಿಸುತ್ತಿರುವವರ ಪ್ರಕರಣಗಳನ್ನು ಹಾಗೂ ದಂಡನಾ
ಅವಧಿಯಲ್ಲಿರುವ ಪ್ರಕರಣಗಳನ್ನು ಇದೇ ರೀತಿ
ಪರಿಗಣಿಸಬೇಕಾಗುತ್ತದೆ.
***
20-10-16.
ನಾನು ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು
ಈಗ ಪಿಡಿಓ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿದ್ದೇನೆ. ವಯೋಮಿತಿ
ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಸರ್ಕಾರಿ ಸೇವಾ
ನಿಯಮಾವಳಿಯಂತೆ ನನಗೆ ವಯಸ್ಸಿನ ಸಡಿಲಿಕೆ ದೊರಕುತ್ತದೆಯೇ?
ಸಡಿಲಿಕೆ ಸಿಗುವುದಾದರೆ ಎಷ್ಟು ವರ್ಷ ಸಿಗುತ್ತದೆ?
| ಗಜಾನನ ಹೆಗಡೆ ಯಲ್ಲಾಪುರ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು
1977ರ ನಿಯಮ 6 (ಬಿ)ರಂತೆ ಸರ್ಕಾರಿ ನೌಕರನು ಸರ್ಕಾರ ಅಥವಾ
ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಅಧಿನಿಯಮ, ಕೇಂದ್ರ
ಮತ್ತು ರಾಜ್ಯ ಅಧಿನಿಯಮದಡಿಯಲ್ಲಿನ ಸರ್ಕಾರದಿಂದ
ಸ್ಥಾಪಿತವಾಗಿದ್ದು ಮತ್ತು ಒಡೆತನ ಹೊಂದಿರುವ ಅಥವಾ
ನಿಯಂತ್ರಣ ಹೊಂದಿರುವ ನಿಗಮದಡಿಯಲ್ಲಿ ಹುದ್ದೆ ಹೊಂದಿರುವ
ಸಂದರ್ಭದಲ್ಲಿ ಅಭ್ಯರ್ಥಿಯು ಆ ಹುದ್ದೆಯಲ್ಲಿ ಮಾಡಿರುವ
ಸೇವಾ ಅವಧಿಯಷ್ಟು ಅಥವಾ ಗರಿಷ್ಠ 10 ವರ್ಷದ ವಯೋಮಿತಿ
ಸಡಿಲಿಕೆ ನೀಡಲಾಗುವುದು. ಆದರೆ ನೀವು ಖಾಸಗಿ ಒಡೆತನದ
ಪಟ್ಟಣ ಸಹಕಾರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ
ನಿಮಗೆ ವಯೋಮಿತಿ ಸಡಿಲಿಕೆಯ ಸೌಲಭ್ಯ ಲಭ್ಯವಾಗುವುದಿಲ್ಲ.
***
19-10-2016.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕರ್ತವ್ಯ
ನಿರ್ವಹಿಸುತ್ತಿದ್ದು, ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ
ನಿರಾಕರಿಸಿದ್ದೇನೆ. ಇಂತಹ ನಿರಾಕರಣಿಯಿಂದ ನನಗೆ 25 ಮತ್ತು 30
ವರ್ಗಗಳ ವೇತನ ಬಡ್ತಿ ನೀಡಿರುವುದಿಲ್ಲ. ಶಿಕ್ಷಕ ಪದೋನ್ನತಿ
ಪಡೆಯಲು ಒಮ್ಮೆ ಮರು ಅವಕಾಶ ಕೋರಿದ ಶಿಕ್ಷಕರಿಗೆ 25 ವರ್ಷದ
ವೇತನ ಬಡ್ತಿ ಮಂಜೂರು ಮಾಡಬಹುದೇ?
– ಎಸ್.ವೇಣು, ಬಾಗೇಪಲ್ಲಿ.
ದಿನಾಂಕ 12-4-2012ರ ಸರ್ಕಾರಿ ಆದೇಶದ ಕಂಡಿಕೆ 6ರಲ್ಲಿಯಂತೆ
ಸರ್ಕಾರಿ ನೌಕರನು ಸ್ವಯಂಪ್ರೇರಿತ ಪದೋನ್ನತಿ ನಿರಾಕರಿಸಿದರೆ
ಅಥವಾ ಈಗಾಗಲೇ ಒಂದು ಪದೋನ್ನತಿ ಪಡೆದಿದ್ದರೆ ಅಂತಹ
ನೌಕರರಿಗೆ 25 ಮತ್ತು 30 ವರ್ಷಗಳ ನಿರಂತರ ಸೇವಾ ಅವಧಿಗೆ
ನೀಡಲಾಗುವ ಹೆಚ್ಚುವರಿ ವೇತನ ಬಡ್ತಿ ನೀಡುವದಿಲ್ಲ.
ಆದುದರಿಂದ ನೀವು ಪುನಃ ಪದೋನ್ನತಿ ಸ್ವೀಕರಿಸಿದರೂ ಸಹ
ಈ ಹಿಂದೆ ನಿರಾಕರಿಸಿದ ಪ್ರಯುಕ್ತ ಹೆಚ್ಚುವರಿ ವೇತನ ಬಡ್ತಿ ನಿಮಗೆ
ನೀಡಲಾಗುವುದಿಲ್ಲ.
***
18-10-16.
ಅನುಮತಿಸಬೇಕೇ ಬೇಡವೇ ಎಂಬುದನ್ನು ಪ್ರಾಧಿಕಾರಿಯೇ
ನಿರ್ಧರಿಸತಕ್ಕದ್ದು.
ನಾನು ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕಳೆದ
ಮಾರ್ಚ್ ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಪ್ರಸ್ತುತ
ಕರೆದಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸ
ಬಯಸಿದ್ದು ಮೇಲಧಿಕಾರಿಗಳಿಗೆ ಆಕ್ಷೇಪಣಾ ರಹಿತ ಪತ್ರ ನೀಡಲು
ಕೋರಿದಾಗ ಪ್ರೊಬೇಷನರಿ ಅವಧಿ ಮುಗಿಯದಿರುವುದರಿಂದ
ನೀಡಲು ಸಾಧ್ಯವಿಲ್ಲವೆಂದು ತಗಾದೆ ಎತ್ತಿದ್ದಾರೆ. ಆಕ್ಷೇಪಣಾ
ಪತ್ರವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಿ ಪ್ರಸ್ತುತ ಹುದ್ದೆಗೆ
ರಾಜೀನಾಮೆ ನೀಡಿ ಪಿಡಿಓ ಹುದ್ದೆಗೆ ಹಾಜರಾದರೆ
ತೊಂದರೆಯಾಗುತ್ತದೆಯೇ? ಪಿಡಿಓ ಪರೀಕ್ಷೆಗೆ ಯಾವ ಪುಸ್ತಕ
ಓದಬೇಕೆಂಬ ಮಾಹಿತಿ ನೀಡಿ.
– ನಾಗಲಾಂಬಿಕಾ ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಬಡ್ತಿ)ನಿಯಮಾವಳಿ
1977ರ ನಿಯಮ 11ರ ಮೇರೆಗೆ ಯಾವುದೇ ಸೇವೆಗೆ ಅಥವಾ
ಹುದ್ದೆಗೆ ಬಡ್ತಿಗಾಗಿ ಅರ್ಜಿ ಸಲ್ಲಿಸುವಾಗ ಈಗಿರುವ ಹುದ್ದೆಗೆ
ನೇಮಕ ಮಾಡಿರುವ ಸಕ್ಷಮ ಪ್ರಾಧಿಕಾರಿಯ ಮೂಲಕ
ಸಲ್ಲಿಸತಕ್ಕದ್ದು. ಅನುಮತಿಸಬೇಕೇ ಬೇಡವೇ ಎಂಬುದನ್ನು
ಪ್ರಾಧಿಕಾರಿಯೇ ನಿರ್ಧರಿಸತಕ್ಕದ್ದು. ಅನುಮತಿ ನೀಡುವುದು
ಸಾರ್ವಜನಿಕ ಹಿತಾಸಕ್ತಿಗೆ ಬಾಧೆ ಉಂಟು ಮಾಡುವುದಿಲ್ಲ ಅಥವಾ
ಅರ್ಜಿದಾರ ಸರ್ಕಾರದೊಡನೆ ಮಾಡಿಕೊಂಡಿರುವ ನಿರ್ದಿಷ್ಟ
ಒಪ್ಪಂದಕ್ಕೆ ಅಸಂಗತವಾಗಿಲ್ಲವೆಂದು ಪ್ರಾಧಿಕಾರಿ ಪರಿಗಣಿಸದ
ಹೊರತು ಅನುಮತಿ ನೀಡತಕ್ಕದ್ದು ಎಂದು ಸೂಚಿಸಲಾಗಿದೆ.
ಹೀಗಿರುವಾಗ ಪ್ರೊಬೇಷನರಿ ಅವಧಿಯಲ್ಲಿ ಆಕ್ಷೇಪಣಾ ರಹಿತ
ಪತ್ರ ನೀಡದಿರುವುದು ನಿಯಮಬಾಹಿರವಾಗುತ್ತದೆ. ಅಲ್ಲದೆ
ನೀವು ಪ್ರಸ್ತುತ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಪಿಡಿಓ
ಹುದ್ದೆಗೆ ಹಾಜರಾದರೆ ನಡತೆ ನಿಯಮಾವಳಿಯ
ಉಲ್ಲಂಘನೆಯಾಗುತ್ತದೆ. ಶಿಸ್ತಿನ ಕ್ರಮಕ್ಕೆ ಒಳಗಾಗುತ್ತೀರಿ. ಪಿಡಿಓ
ಹುದ್ದೆಗೆ ನೂತನ ಪಠ್ಯಕ್ರಮಕ್ಕನುಸಾರವಾಗಿ ಇತ್ತೀಚಿಗೆ
ಪ್ರಕಟವಾಗಿರುವ ಲ.ರಾಘವೇಂದ್ರ ಅವರ ಪಂಚಾಯಿತಿ ಅಭಿವೃದ್ಧಿ
ಅಧಿಕಾರಿ ಮತ್ತು ಗ್ರಾ.ಪಂ. ಕಾರ್ಯದರ್ಶಿ ಸ್ಪರ್ಧಾತ್ಮಕ
ಪರೀಕ್ಷಾ ಮಾರ್ಗದರ್ಶಿಯನ್ನು ತಪ್ಪದೆ ಓದಿದರೆ ಯಶಸ್ಸು ಗಳಿಸಲು
ಸಾಧ್ಯ.
***
15-10-16
ಮಂಜೂರಾತಿ ದಿನಾಂಕದಿಂದಲೇ ಅನ್ವಯ.
-ಎನ್.ಎಂ.ಮಂಜುನಾಥ್ ದಾವಣಗೆರೆ
ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
ಉಪನ್ಯಾಸಕನಾಗಿದ್ದು, 2 ಜೀವಂತ ಮಕ್ಕಳ ನಂತರ ನನ್ನ ಪತ್ನಿಗೆ
ದಿನಾಂಕ 4.4.2014ರಂದು ಸಂತಾನ ಹರಣ ಚಿಕಿತ್ಸೆ
ಮಾಡಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ನನ್ನ
ಮೇಲಾಧಿಕಾರಿಯವರಾದ ಪ್ರಾಚಾರ್ಯರು ದಿನಾಂಕ
1.6.2016ರಂದು ಮಾಸಿಕ ಕುಟುಂಬ ಭತ್ಯೆಯನ್ನು
ಮಂಜೂರು ಮಾಡಿರುತ್ತಾರೆ. ಈಗ ನಾನು 4.4.2014ರಿಂದ ಬಾಕಿ
ಬಿಲ್ಲು ಮಾಡಿಕೊಂಡು, ಅದನ್ನು ಪಡೆದುಕೊಳ್ಳಲು
ನಿಯಮಾವಳಿಯಲ್ಲಿ ಅವಕಾಶವಿದೆಯೇ?
1985ರ ಸರ್ಕಾರಿ ಆದೇಶದಂತೆ ಸರ್ಕಾರವು ಕುಟುಂಬ ಕಲ್ಯಾಣ
ಯೋಜನೆಗೆ ಉತ್ತೇಜನ ನೀಡಲು, ಸರ್ಕಾರಿ ನೌಕರನು ಅದನ್ನು
ಅನುಸರಿಸಲು ಪ್ರಾರಂಭದಿಂದಲೇ ವಿಶೇಷ ವೈಯಕ್ತಿಕ
ವೇತನವನ್ನು ನೀಡಲು ಆದೇಶಿಸಿರುತ್ತದೆ. ನೀವು 2014ರಲ್ಲಿ
ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ನಿಮ್ಮ ಪತ್ನಿಗೆ ಮಾಡಿಸಿದ
ನಂತರ ಅರ್ಜಿ ಸಲ್ಲಿಸಿರುವುದರಿಂದ ಹಾಗೂ ನಿಮ್ಮ
ಮೇಲಾಧಿಕಾರಿಯವರು ಇದನ್ನು 2016ರಲ್ಲಿ ಮಂಜೂರು
ಮಾಡಿರುವುದರಿಂದ ಹಿಂದಿನ ಬಾಕಿ ಮೊಬಲಗನ್ನು ಪಡೆಯಲು
ನಿಯಮಾವಳಿಯಲ್ಲಿ ಅವಕಾಶ. ಮಂಜೂರಾತಿ ದಿನಾಂಕದಿಂದಲೇ
ಇದು ಅನ್ವಯವಾಗುತ್ತದೆ.
***
14-10-16
ಮೂಲ ವೇತನ ಯಾವುದು ಅನ್ವಯವಾಗುತ್ತದೆ?
ನಾನು ದಿನಾಂಕ 11.8.2014ರಿಂದ 9.3.2016ರವರೆಗೆ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಇಲಾಖೆ ಒಪ್ಪಿಗೆ
ಪಡೆದು ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕನಾಗಿ ನೇರ
ನೇಮಕಾತಿ ಮೂಲಕ ದಿನಾಂಕ 10.3.2016ರಂದು ಕರ್ತವ್ಯಕ್ಕೆ
ಹಾಜರಾಗಿರುತ್ತೇನೆ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ
ನಿಯಮ 252ಬಿರಂತೆ ಬಿಡುಗಡೆ ಹೊಂದಿ ಹೊಸ ಹುದ್ದೆಗೆ
ಹಾಜರಾಗಿರುತ್ತೇನೆ. ಪಿಡಿಓ ಹುದ್ದೆಯ ವೇತನ ಶ್ರೇಣಿ ರೂ.
20,000-30,000 ಸಾವಿರವಾಗಿದ್ದು ಪ್ರಸ್ತುತ ಹಿರಿಯ ಪ್ರಾಥಮಿಕ
ಶಾಲಾ ಶಿಕ್ಷಕರ ವೇತನ ಶ್ರೇಣಿ ರೂ. 14,250-26,700 ಇದ್ದು ಈಗ
ನನ್ನ ಮೂಲ ವೇತನ ಯಾವುದು ಅನ್ವಯವಾಗುತ್ತದೆ?
| ಕೆ.ಎಂ. ಮಾಯಮ್ಮನವರ್ ಮುಂಡರಗಿ ಗದಗ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41-ಎರಂತೆ
ಒಬ್ಬ ಸರ್ಕಾರಿ ನೌಕರನು ಮೇಲಿನ ವೇತನ ಶ್ರೇಣಿಯಿಂದ ಅದರ
ಕೆಳಗಿನ ವೇತನ ಶ್ರೇಣಿಗೆ ನಿಯುಕ್ತಿ ಹೊಂದಿದರೆ ಅವನಿಗೆ ಮೇಲಿನ
ವೇತನ ಶ್ರೇಣಿಯಲ್ಲಿ ಯಾವ ದಿನಾಂಕದಿಂದ ವೇತನ
ಪಡೆಯುತ್ತಿದ್ದನೋ ಅದೇ ದಿನಾಂಕದಿಂದ ಕೆಳಗಿನ ವೇತನ
ಶ್ರೇಣಿಯಲ್ಲಿ ವೇತನ ನಿಗದಿಪಡಿಸಲಾಗುತ್ತದೆ. ಆದುದರಿಂದ
ನೀವು ಪಿಡಿಓ ಹುದ್ದೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ
ಕೆಳಗಿನ ಶ್ರೇಣಿಗೆ ನಿಯುಕ್ತರಾಗಿರುವುದರಿಂದ ನಿಮಗೆ ರೂ.
14,550-20,700ರಲ್ಲಿ ದಿನಾಂಕ 1.8.2014ರಿಂದ ವೇತನವನ್ನು
ನಿಗದಿಪಡಿಸಲಾಗುತ್ತದೆ. ನಿಮಗೆ ವೇತನ ರಕ್ಷಣೆ ದೊರಕುವುದಿಲ್ಲ.
***
13-10-16.
ಜೀವನಾಧಾರ ಭತ್ಯೆ ಭರಿಸಿಕೊಡಲು ನಿಯಮಾವಳಿಯಲ್ಲಿ
ಅವಕಾಶವಿದೆಯೇ?
ಒಬ್ಬ ಸರ್ಕಾರಿ ನೌಕರನು ಕೊಲೆ ಆಪಾದನೆ ಮೇಲೆ ಸೆರೆಮನೆ ವಾಸ
ಅನುಭವಿಸುತ್ತಿದ್ದು ಇವರಿಗೆ ಸಂಬಂಧಪಟ್ಟ ಇಲಾಖೆಯವರು
ಅಮಾನತು ಆದೇಶ ಹೊರಡಿಸಿರುತ್ತಾರೆ. ಆದರೆ ಇವರು 3 ತಿಂಗಳ
ನಂತರ ಸೆರೆಮನೆಯಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿ
ಮೇಲ್ಕಂಡ ಅವಧಿಗೆ ಜೀವನಾಧಾರ ಭತ್ಯೆ ಭರಿಸಿಕೊಡಬೇಕೆಂದು
ಮನವಿ ಮಾಡಿರುತ್ತಾರೆ. ಇವರಿಗೆ ಜೀವನಾಧಾರ ಭತ್ಯೆ
ಭರಿಸಿಕೊಡಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
| ಎಸ್.ವೆಂಕಟೇಶ ಶ್ರೀರಾಮಪುರ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ(ಸಿಸಿಎ)ನಿಯಮಾವಳಿಯ ನಿಯಮ 10ರ
ಮೇರೆಗೆ ಸರ್ಕಾರಿ ನೌಕರನು ಕ್ರಿಮಿನಲ್ ಆರೋಪದ ಮೇಲಾಗಲಿ,
ಇನ್ನಿತರೆ ಪ್ರಕರಣಗಳಾಗಲಿ 48 ಗಂಟೆಗಳಿಗಿಂತ ಹೆಚ್ಚು ಅವಧಿಗೆ
ನ್ಯಾಯಾಂಗ ಕಸ್ಟಡಿಯಲ್ಲಿದ್ದರೆ ಅಥವಾ 48 ಗಂಟೆ ಮೀರಿದ
ಕಾರಾಗೃಹ ಶಿಕ್ಷೆ ವಿಧಿಸಿದ್ದರೆ ಸರ್ಕಾರಿ ನೌಕರನನ್ನು ಸಕ್ಷಮ
ಪ್ರಾಧಿಕಾರವು ಅಮಾನತ್ತಿನಲ್ಲಿಡಬಹುದು. ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ನಿಯಮ 98ರ ಮೇರೆಗೆ ಸರ್ಕಾರಿ ನೌಕರನಿಗೆ
ಮೊದಲ 6 ತಿಂಗಳು ಅವನು ಪಡೆಯುತ್ತಿದ್ದ ವೇತನದ
ಅರ್ಧದಷ್ಟು ಹಾಗೂ ಅದಕ್ಕೆ ಅನ್ವಯವಾಗುವ ತುಟ್ಟಿಭತ್ಯೆ
ಹಾಗೂ ಅಮಾನತ್ತಿನ ಪೂರ್ವ ಪಡೆಯುತ್ತಿದ್ದ ಮನೆ ಬಾಡಿಗೆ ಭತ್ಯೆ,
ನಗರ ಪರಿಹಾರ ಭತ್ಯೆ ಜೀವನಾಧಾರ ಭತ್ಯೆಯಾಗಿ
ನೀಡಬೇಕಾಗುತ್ತದೆ. ಸರ್ಕಾರಿ ನೌಕರನು ಅಮಾನತ್ತಿನಲ್ಲಿರುವಾಗ
ನಿಯಮ 100ರಂತೆ ಆತನನ್ನು ವಜಾಗೊಳಿಸುವ ಮೊದಲು ಎಲ್ಲಾ
ಹಕ್ಕುಗಳನ್ನು ಹೊಂದಿರುತ್ತಾನೆ. ಆದ್ದರಿಂದ ಜಾಮೀನಿನ ಮೇಲೆ
ಬಿಡುಗಡೆಗೂ ಮೊದಲು ಸೆರೆಮನೆ ವಾಸದಲ್ಲಿದ್ದ ಅವಧಿಗೆ
ಜೀವನಾಧಾರ ಭತ್ಯೆ ನೀಡಬೇಕಾಗುತ್ತದೆ.
***
10-10-16.
ಸಿನಿಮಾ ನಿರ್ದೇಶನ ಮಾಡಬಹುದೇ?
ನಾನೊಬ್ಬ ಕೆಇಬಿ ನೌಕರ. ಸರ್ಕಾರಿ ನೌಕರಿಯಲ್ಲಿದ್ದುಕೊಂಡು
ಸ್ವಂತ ರಜೆಗಳಲ್ಲಿ ಚಲನಚಿತ್ರದಲ್ಲಿ ನಟಿಸಬಹುದೇ? ಹಾಗೂ
ಸಿನಿಮಾ ನಿರ್ದೇಶನ ಮಾಡಬಹುದೇ?
| ರಾಮಪ್ಪ ಎನ್ ರಾಥೋಡ ಶಿವಮೊಗ್ಗ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ
16ರಂತೆ ಯಾರೇ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವ
ಮಂಜೂರಾತಿ ಪಡೆಯದ ಹೊರತು ಪ್ರತ್ಯಕ್ಷವಾಗಿ,
ಪರೋಕ್ಷವಾಗಿಯಾಗಲೀ ಯಾವುದೇ ವ್ಯಾಪಾರ
ವ್ಯವಹಾರದಲ್ಲಿ ತೊಡಗುವಂತಿಲ್ಲ ಎಂದು ಸೂಚಿಸಲಾಗಿದೆ.
ಅಲ್ಲದೆ ದಿನಾಂಕ 23.1.2001ರ ಸರ್ಕಾರಿ ಸುತ್ತೋಲೆ ಸಂಖ್ಯೆ
ಸಿಆಸುಇ 17, ಸೇನಿಸಿ 2001ರಲ್ಲಿ ಸರ್ಕಾರಿ ನೌಕರರು ನಟಿಸುವುದು
ಒಳಗೊಂಡಂತೆ ಚಲನಚಿತ್ರಕ್ಕೆ ಹಾಗೂ ದೂರದರ್ಶನ
ಧಾರವಾಹಿಗಳಲ್ಲಿ ಸಂಬಂಧಿಸಿದ ಚಟುವಟಿಕೆಯಲ್ಲಿ
ಪಾಲ್ಗೊಳ್ಳುವ ಬಗ್ಗೆ ಪೂರ್ವಾನುಮತಿ ನೀಡಲು ಸೂಚನೆ
ನೀಡಲಾಗಿದೆ. ಅಲ್ಲದೆ 2004ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ
ನೌಕರರು ಯಾವುದೇ ಚಲನಚಿತ್ರದಲ್ಲಾಗಲಿ,
ಧಾರವಾಹಿಯಲ್ಲಾಗಲಿ ನಟಿಸುವುದನ್ನು ನಿಷೇಧಿಸಲಾಗಿದೆ.
ಹೀಗಿರುವಲ್ಲಿ ನಟನೆ, ನಿರ್ದೇಶನ ನಿಯಮಬಾಹಿರವಾಗುತ್ತದೆ. ಇದು
ಮುಂದಿನ ಶಿಸ್ತು ಕ್ರಮಕ್ಕೆ ಕಾರಣವಾಗುತ್ತದೆ.
***
9-10-16.
ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ವಸತಿ ನಿಲಯದ ಮಹಿಳಾ
ವಾರ್ಡನ್ ಆಗಿ ಹುದ್ದೆಗೆ 2002ರಲ್ಲಿ ನೇರ ನೇಮಕಾತಿ
ಹೊಂದಿರುತ್ತೇನೆ. ಈಗ ಸಮಸ್ಯೆಯೇನೆಂದರೆ ನಾನು
ಅವಿವಾಹಿತಳಾಗಿದ್ದು ಈಗಾಗಲೆ ಮದುವೆಯಾಗಿ ಜೀವಂತ ಪತ್ನಿ
ಹೊಂದಿರುವ ಪುರುಷನೊಂದಿಗೆ ಎರಡನೇ ಹೆಂಡತಿಯಾಗಿ
ಮದುವೆಯಾಗಬಹುದೆ. ಇದಕ್ಕೆ ಸರ್ಕಾರದ ಅನುಮತಿ ಬೇಕೆ?
| ಪ್ರಿಯಕುಮಾರಿ ಗಂಗಾವತಿ.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ
28(2)ರ ಮೇರೆಗೆ ಯಾರೇ ಮಹಿಳಾ ಸರ್ಕಾರಿ ನೌಕರರು ಮೊದಲು
ಸರ್ಕಾರದ ಅನುಮತಿ ಪಡೆಯದೆ ಜೀವಂತ ಪತ್ನಿಯನ್ನು
ಹೊಂದಿರುವ ವ್ಯಕ್ತಿಯನ್ನು ವಿವಾಹವಾಗತಕ್ಕದ್ದಲ್ಲ ಎಂದು
ಸೂಚಿಸಿದೆ. ಹೀಗಿರುವಲ್ಲಿ ನೀವು ಈಗಾಗಲೇ ಪತ್ನಿಯನ್ನು
ಹೊಂದಿರುವ ಪುರುಷನನ್ನು ವಿವಾಹವಾಗಲು ಮೊದಲ
ಪತ್ನಿಯ ಅನುಮತಿಯೊಂದಿಗೆ ಸರ್ಕಾರದ
ಪೂರ್ವಾನುಮತಿಯನ್ನು ಸಹ ಪಡೆಯಬೇಕಾಗುತ್ತದೆ. ***
7-10-16.
ನಾನು ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದು, ಎರಡು ಹೆರಿಗೆ ರಜೆ
ಪಡೆದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡು ಪಿ.ಪಿ.ಯನ್ನು ಸಹ
ಪಡೆಯುತ್ತಿದ್ದೇನೆ. ಆದರೆ ನನ್ನ ಮೊದಲ ಮಗು
ತೀರಿಕೊಂಡಿದ್ದರಿಂದ ಈಗ ಇನ್ನೊಂದು ಮಗುವನ್ನು
ಪಡೆಯಲು ಇಚ್ಛಿಸಿದ್ದೇನೆ. ಐ.ವಿ.ಎಫ್. ಮೂಲಕ
ಗರ್ಭಿಣಿಯಾಗಿದ್ದೇನೆ. ನನಗೆ ಹೆರಿಗೆ ರಜೆ ಅವಶ್ಯಕತೆ ಇದ್ದು, ರಜೆ
ಪಡೆಯಲು ಏನು ಮಾಡಬೇಕು? ನಾನು ಪಿ.ಪಿ.ಯನ್ನು
ರದ್ದುಪಡಿಸಬೇಕೆ? ಕ್ಯಾನ್ಸಲ್ ಮಾಡಿಸಲು ಅನುಸರಿಸುವ ಕ್ರಮ
ತಿಳಿಸಿರಿ. ನಾನು ಪುನಃ ಪಿ.ಪಿ. ಪಡೆಯಬಹುದೆ?.
| ಡಿ.ಆರ್. ಸುಭದ್ರಮ್ಮ ಭದ್ರಾವತಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ
ರೀತ್ಯಾ ಮಹಿಳಾ ಸರ್ಕಾರಿ ನೌಕರರು ಎರಡು ಜೀವಂತ ಮಗುವಿಗೆ
180 ದಿನಗಳ ಹೆರಿಗೆ ರಜೆ ಪಡೆಯಲು ಅವಕಾಶವಿದೆ. ನಿಮ್ಮ ಮೊದಲನೇ
ಮಗು ಅಕಾಲಿಕ ಮರಣ ಹೊಂದಿರುವುದರಿಂದ ನೀವು ಐ.ವಿ.ಎಫ್.
ಮೂಲಕ ಗರ್ಭಿಣಿಯಾಗಿರುವುದನ್ನು ತಿಳಿಸಿ ನಿಮ್ಮ ಪಿ.ಪಿ.ಯನ್ನು
ರದ್ದುಗೊಳಿಸಲು ರಜೆ ಮಂಜೂರಾತಿ ಪ್ರಾಧಿಕಾರಕ್ಕೆ ರಜೆ
ಮಂಜೂರಾತಿಯನ್ನು ಸಲ್ಲಿಸಬಹುದು. ತದನಂತರ ನೀವು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯಂತೆ ಹೆರಿಗೆ ರಜೆಯನ್ನು
ಪಡೆಯಬಹುದು ಹಾಗೂ 1985ರ ಸರ್ಕಾರಿ ಆದೇಶದಂತೆ ನೀವು
ಮತ್ತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಬಗ್ಗೆ
ಮಾಹಿತಿ ನೀಡಿ ವೈಯಕ್ತಿಕ ವೇತನವನ್ನು ಪಡೆಯಬಹುದು.
***
6-10-16.
ಹುದ್ದೆಗೆ ಯಾವ್ಯಾವ ಪುಸ್ತಕಗಳನ್ನು ಅಧ್ಯಯನ
ಮಾಡಬೇಕು?
ನಾನು ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಕೆಲಸ
ಮಾಡುತ್ತಿದ್ದು, ನನಗೀಗ 35 ವರ್ಷ. ಈಗಾಗಲೇ 10 ವರ್ಷ ಸೇವೆ
ಸಲ್ಲಿಸಿದ್ದು ಸರ್ಕಾರಿ ಸೇವಾ ನಿಯಮಾವಳಿ ರೀತ್ಯಾ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು
ಬಯಸಿದ್ದೇನೆ. ನನಗೆ ವಯೋಮಿತಿಯಲ್ಲಿ ಎಷ್ಟು ವರ್ಷಗಳ ಕಾಲ
ಸಡಿಲಿಕೆ ದೊರೆಯುತ್ತದೆ? ಹುದ್ದೆಗೆ ಯಾವ್ಯಾವ ಪುಸ್ತಕಗಳನ್ನು
ಅಧ್ಯಯನ ಮಾಡಬೇಕು?
| ರೇವಯ್ಯ ಒಡೆಯ ವಿಜಯಪುರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ
ಖಾಲಿ ಇರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ
ಅರ್ಜಿಯನ್ನು ಆಹ್ವಾನಿಸಿದ್ದು, ತನ್ನ ವೆಬ್​ಸೈಟ್​ನಲ್ಲಿ ಸಂಪೂರ್ಣ
ಮಾಹಿತಿ ನೀಡಿದೆ. ಈ ಅಧಿಸೂಚನೆಯಲ್ಲೇ ಈಗಾಗಲೇ ಸರ್ಕಾರಿ
ನೌಕರರಿಗೆ 10 ವರ್ಷಗಳ ಕಾಲ ಸಡಿಲಿಕೆ ನೀಡಲಾಗುವುದು ಎಂದು
ತಿಳಿಸಲಾಗಿದೆ. ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿಗೆ
ಭರ್ತಿ) ನಿಯಮಗಳು 1977ರ ನಿಯಮ 6 (3) (ಬಿ)ರಂತೆ ಸರ್ಕಾರ ಅಥವಾ
ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಹುದ್ದೆಯನ್ನು
ಹೊಂದಿರುವ ಅಭ್ಯರ್ಥಿಯು ಅವನು ಸಲ್ಲಿಸಿದ
ಸೇವಾವಧಿಯಷ್ಟು ಅಥವಾ ಗರಿಷ್ಠ ಹತ್ತು ವರ್ಷಗಳವರೆಗೆ ಸಡಿಲಿಕೆ
ನೀಡಲಾಗುತ್ತದೆ. ನೀವು ಈ ಪರೀಕ್ಷೆಗೆ ಕರ್ನಾಟಕ ಪರೀಕ್ಷಾ
ಪ್ರಾಧಿಕಾರ ನಿಗದಿಪಡಿಸುವ ಪಠ್ಯಕ್ರಮಕ್ಕನುಸಾರವಾಗಿ
ರಚಿತವಾಗಿರುವ ಲ.ರಾಘವೇಂದ್ರ ಅವರ ಪಂಚಾಯ್ತಿ ಅಭಿವೃದ್ಧಿ
ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-1
ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಪುಸ್ತಕವನ್ನು ಅಧ್ಯಯನ
ಮಾಡಬಹುದು. ಇದರೊಂದಿಗೆ ಇವರೇ ರಚಿಸಿದ ಸಾಮಾನ್ಯ
ಜ್ಞಾನ, ಪ್ರಶ್ನೆಕೋಶ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ
ಪ್ರಶ್ನೆಕೋಶ ಪುಸ್ತಕಗಳನ್ನು ಸಹ ಅಧ್ಯಯನ ಮಾಡಬಹುದು
(ಹೆಚ್ಚಿನ ವಿವರಗಳಿಗೆ ಲ.ರಾಘವೇಂದ್ರ ಅವರ ಪಂಚಾಯ್ತಿ
ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ
ಗ್ರೇಡ್-1 ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಪುಸ್ತಕವನ್ನು
ನೋಡಬಹುದು, ಪ್ರತಿಗಳಿಗಾಗಿ ಮೊ: 9481244434
ಸಂರ್ಪಸಬಹುದು)
***
5-10-16.
ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿ ವೃಂದದ
ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ನನಗೆ 7 ವರ್ಷದ ಮಗನಿದ್ದಾನೆ.
ನಮಗೆ ಒಬ್ಬನೇ ಮಗ ಸಾಕೆನಿಸಿದೆ. ನನ್ನ ಹೆಂಡತಿಗೆ ಬಿ.ಪಿ ಇದೆ ಎರಡು
ಬಾರಿ ಸಿಜೇರಿಯನ್ ಆಗಿದೆ. ನಾನು ಹಾರ್ಟ್ ಪೇಷಂಟ್ ಹೀಗಾಗಿ
ಇಬ್ಬರಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು
ಇಷ್ಟವಿಲ್ಲ. ನನಗೆ 37 ವರ್ಷ ವಯಸ್ಸು, ಸಂತಾನರಹಣ ಚಿಕಿತ್ಸೆಗೆ
ಸಂಬಂಧಿಸಿದ ವಿಶೇಷ ಭತ್ಯೆ ಪಡೆಯಬಹುದೆ?
| ಶರಣ ಪ್ರಕಾಶ್ ಬೀಳಗಿ
ದಿನಾಂಕ: 01.10.1985ರ ಸರ್ಕಾರಿ ಆದೇಶಗಳಂತೆ ಎಫ್.ಡಿ.27
ಎಸ್.ಆರ್.ಎಸ್.85ರಂತೆ ಪುರುಷ ನೌಕರನು 50 ವರ್ಷದೊಳಗಿದ್ದು
ಅವರು 2 ಜೀವಂತ ಮಕ್ಕಳನ್ನು ಹೊಂದಿದ್ದರೆ ಅಂತಹವನ ಶಸ್ತ್ರ
ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆ ಅಥವಾ ನಗರಪಾಲಿಕೆ
ಆಸ್ಪತ್ರೆಯಿಂದ ಮಾಡಿಸಿಕೊಂಡಿರಬೇಕು. ಅಂತಹ ನೌಕರರಿಗೆ ಈ
ಕುಟುಂಬ ಕಲ್ಯಾಣ ಯೋಜನೆ ಅನುಸರಣೆಗೆ ಅವನು
ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಪಡೆಯುತ್ತಿದ್ದ ವೇತನ
ಶ್ರೇಣಿಯ ವೇತನ ಬಡ್ತಿಯನ್ನು ವಿಶೇಷ ಬಡ್ತಿಯಾಗಿ
ನೀಡಲಾಗುವುದು. ಆದರೆ ನೀವು ಈ ಸಂತಾನ ಹರಣ ಚಿಕಿತ್ಸೆ
ಮಾಡಿಸಿಕೊಳ್ಳದೆ ಇರುವುದರಿಂದ ಈ ವಿಶೇಷ ಭತ್ಯೆ
ಲಭ್ಯವಾಗುವುದಿಲ್ಲ.
***
4-10-16.
ವಾಗ್ದಂಡನೆಗೆ ನೌಕರರಿಗೆ ಯಾವುದೇ ಆರ್ಥಿಕ
ನಷ್ಟವುಂಟಾಗುವುದಿಲ್ಲ…
ಅಧಿಕಾರಿ / ನೌಕರರು ಬಡ್ತಿ ಹೊಂದುವ ಸಂದರ್ಭದಲ್ಲಿ ಶಿಸ್ತು
ಪ್ರಾಧಿಕಾರಕ್ಕೆ ಒಳಪಟ್ಟಿದ್ದಲ್ಲಿ ಅಂತಹ ಅಧಿಕಾರಿ / ನೌಕರರ
ಬಡ್ತಿಯನ್ನು ಮುಂದೂಡಲಾಗುತ್ತಿದ್ದು, ನಂತರ ದಿನಗಳಲ್ಲಿ
ಶಿಸ್ತು ಪ್ರಾಧಿಕಾರದ ಆದೇಶದನ್ವಯ ಪ್ರಕರಣವು ವಾಗ್ದಂಡನೆ
ರೂಪದಲ್ಲಿ ಮುಕ್ತಾಯಗೊಂಡಿದ್ದರೆ ಅಂತಹವರನ್ನು ಸರ್ಕಾರಿ
ಸುತ್ತೋಲೆ ಸಂಖ್ಯೆ: ಸಿಆಸುಇ37, ಸೇಇವಿ 2009, ದಿನಾಂಕ:
06.04.2010ರ ಪ್ರಕಾರ ವಾಗ್ದಂಡನೆಯು ವಿಧಿಸಿದ
ದಿನಾಂಕದಂದೇ ಅಂತ್ಯಗೊಳ್ಳುತ್ತಿದ್ದು, ನಂತರದಲ್ಲಿ ನೌಕರನ
ಪ್ರಕರಣವನ್ನು ಪದೋನ್ನತಿಗೆ ಪರಿಗಣಿಸಬಹುದೆಂದು ಕರ್ನಾಟಕ
ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ನಿಯಮ 8ರಲ್ಲಿ ಸ್ಪಷ್ಟವಾಗಿ
ವಿವರಿಸಿದ್ದಾರೆ. ಆದರೆ, ಪ್ರಶ್ನೆ ಏನೆಂದರೆ ಅಧಿಕಾರಿ/ನೌಕರರು
ಪದೋನ್ನತಿಗೆ ಬಡ್ತಿ ಹೊಂದಿದ ನಂತರ ಅವರ ಜೇಷ್ಠತೆಯನ್ನು
ಎಲ್ಲಿ ನಿಗದಿಪಡಿಸಬೇಕು? ಅಧಿಕಾರಿ/ನೌಕರರು ಮೂಲತಃ ಬಡ್ತಿ
ಒರಿಜನಲ್ ಡೇಟ್ ಹಾಗೂ ಆಫ್ ಪ್ರಮೋಷನ್ ಹೊಂದುವ
ಸಂದರ್ಭದಲ್ಲಿದ್ದ ಜೇಷ್ಠತೆಯಲ್ಲಿಯೆ ಮುಂದುವರೆಯಬೇಕೆ?
|ಶ್ರೀಧರ್ ಹೆಗಡೆ ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ನಿಯಮ 400ರಂತೆ ಶಿಸ್ತು
ಪ್ರಾಧಿಕಾರಿಯು ವಿಧಿಸಿದ ವಾಗ್ದಂಡನೆಯನ್ನು ಸೇವಾ
ಪುಸ್ತಕದಲ್ಲಿ ನಮೂದಿಸುವಂತಿಲ್ಲ. ಆದರೆ, ಈ ವಾಗ್ದಂಡನೆ ವಿಧಿಸಿದ
ದಿನಾಂಕದ ನಂತರ ನೌಕರನ ಪ್ರಕರಣವನ್ನು ಪದೋನ್ನತಿಗೆ
ಪರಿಗಣಿಸಬಹುದು. ವಾಗ್ದಂಡನೆಗೆ ನೌಕರರಿಗೆ ಯಾವುದೇ ಆರ್ಥಿಕ
ನಷ್ಟವುಂಟಾಗುವುದಿಲ್ಲ. ಆದರೆ, ಅವನ ಜೇಷ್ಠತೆಯನ್ನು ಅವನ
ಕಿರಿಯ ನೌಕರನು ಈ ಪದೋನ್ನತಿ ತಡೆಹಿಡಿದ ಅವಧಿಯಲ್ಲಿ ಮುಂಬಡ್ತಿ
ಹೊಂದಿದ್ದರೆ ಅವನ ನಂತರ ನಿಗದಿಪಡಿಸಲಾಗುತ್ತದೆ. ಮೂಲತಃ
ಪದೋನ್ನತಿ ಹೊಂದಿದ ಸಂದರ್ಭದಲ್ಲಿನ ಜೇಷ್ಠತೆಯು
ಮುಂದುವರೆಯುತ್ತದೆ.
***
3-10-16.
ರಜೆಯನ್ನು ಪಡೆಯಲು ಅರ್ಹನಿರುತ್ತೇನೆ?
ನಾನು ಕಂದಾಯ ಇಲಾಖೆಯಲ್ಲಿ ಅಕ್ಟೋಬರ್ 2014ರಿಂದ ಸೇವೆ
ಸಲ್ಲಿಸುತ್ತಿದ್ದು, ಪೊ›ಬೇಷನರಿ ಅವಧಿ ಇನ್ನೂ
ಪೂರ್ಣಗೊಂಡಿರುವುದಿಲ್ಲ. ಅನಿವಾರ್ಯ ಕಾರಣಗಳಿಂದ 11
ದಿನಗಳ ಕಾಲ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತೇನೆ. ಇದರಿಂದ
ನನ್ನ ಪೊ›ಬೇಷನರಿ ಪೂರ್ಣಗೊಳ್ಳುವಲ್ಲಿ ಯಾವ ರೀತಿ
ತೊಂದರೆಯಾಗುತ್ತದೆ? ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಿದ್ದು,
ತಯಾರಿ ನಡೆಸಲು ಯಾವ ರೀತಿ ದೀರ್ಘ ರಜೆಯನ್ನು ಪಡೆಯಲು
ಅರ್ಹನಿರುತ್ತೇನೆ?
ಪ್ರವೀಣಕುಮಾರ ಗದಗ
ಕರ್ನಾಟಕ ಸರ್ಕಾರಿ ಸೇವಾ (ಪೊ›ಬೇಷನ್) ನಿಯಮಗಳು 1977ರ
ನಿಯಮ 4ರ ರೀತ್ಯಾ ನೀವು 11 ದಿನಗಳ ಗೈರು ಹಾಜರಿಯನ್ನು
ವೇತನ ರಹಿತ ರಜೆಯೆಂದು ಪರಿಗಣಿಸಲ್ಪಟ್ಟಿದ್ದಲ್ಲಿ ಪೊ›ಬೇಷನ್
ಅವಧಿ ಘೊಷಣೆಯನ್ನು ಮುಂದೂಡಲಾಗುವುದು. ನೀವು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 117ರಂತೆ
ನಿಮ್ಮ ಖಾ. ತೆಯಲ್ಲಿ ಯಾವುದೇ ರಜೆಯಿಲ್ಲದಿದ್ದರೆ ಅಸಾಧಾರಣ
ರಜೆಯನ್ನು ಮಂಜೂರು ಮಾಡಿಸಿಕೊಳ್ಳಬಹುದು.
***
1-10-16.
ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ
ಬೆರಳಚ್ಚುಗಾರನಾಗಿ (ಬಿಡುವು ರಹಿತ) ಕರ್ತವ್ಯ
ನಿರ್ವಹಿಸುತ್ತಿದ್ದು, ನನ್ನ ಖಾತೆಯಲ್ಲಿ ಡಿಸೆಂಬರ್ 2015ಕ್ಕೆ 300 ಗಳಿಕೆ
ರಜೆಗಳಿದ್ದವು. ದಿನಾಂಕ: 01.01.2016 ರಂದು ಮುಂಗಡವಾಗಿ 15
ರಜೆಗಳನ್ನು ಲೆಕ್ಕಕ್ಕೆ ಜಮೆ ಮಾಡಬೇಕಿದೆ. ದ್ವಿತೀಯ ದರ್ಜೆ
ಬೆರಳಚ್ಚುಗಾರರ ಹುದ್ದೆಯಿಂದ ಹಿರಿಯ ದರ್ಜೆ ಬೆರಳಚ್ಚುಗಾರರಾಗಿ
ಸ್ಥಾನಪನ್ನ ಬಡ್ತಿ ಪಡೆದಿರುವುದರಿಂದ ದಿನಾಂಕ:
01.01.2016ರಂದು ಅಪರಾಹ್ನ ಬಿಡುಗಡೆ ಹೊಂದಿ ದಿನಾಂಕ:
02.01.2016ರ ಪೂರ್ವಾಹ್ನ ಕೌನ್ಸಿಲಿಂಗ್ ಮೂಲಕ ಆಯ್ಕೆ
ಮಾಡಿಕೊಳ್ಳಲಾದ ಸ್ಥಳದಲ್ಲಿ ಬಡ್ತಿ ಪಡೆದ ಹುದ್ದೆಗೆ ವರದಿ
ಮಾಡಿಕೊಂಡಿರುತ್ತೇನೆ. ಇಲ್ಲಿ ಸೇರಿಕೆ ಕಾಲವನ್ನು
ಉಪಯೋಗಿಸಿಕೊಂಡಿರುವುದಿಲ್ಲ. 2012ರ ಹೊಸ ಆದೇಶದ
ಪ್ರಕಾರ ಸರ್ಕಾರ ಗಳಿಕೆ ರಜೆಯ ಗರಿಷ್ಠ ಮಿತಿಯನ್ನು 240 ರಿಂದ 300ಕ್ಕೆ
ಹೆಚ್ಚಿಸಿರುವುದು ಸರಿಯಷ್ಟೆ. ಆದರೆ, ಗರಿಷ್ಟ ಮಿತಿ 300 ತಲುಪಿದ
ನೌಕರರ ಗಳಿಕೆ ರಜೆಗಳನ್ನು ಮುಂದಿನ ಅವಧಿಗೆ ಜಮೆ ಮಾಡುವಾಗ +15
ಇಡಬೇಕೆ ಅಥವಾ ಬಿಡಬೇಕೆ, ಮತ್ತು ಗರಿಷ್ಟ ಮಿತಿ 240 ಇದ್ದಾಗ
+15 ಇಡಲು ಪ್ರತ್ಯೇಕವಾಗಿ ಸರ್ಕಾರದಿಂದ ಆದೇಶವಾಗಿತ್ತು.
ಆದರೆ ಹೊಸ ಆದೇಶದಲ್ಲಿ ಈ ಕುರಿತು ಉಲ್ಲೇಖವಿಲ್ಲ ಎಂಬುದು
ಹಲವು ನೌಕರರ/ಅಧಿಕಾರಿಗಳಲ್ಲಿ ಗೊಂದಲಮಯವಾಗಿದೆ.
ಆದ್ದರಿಂದ, ದಯಮಾಡಿ 2012ರ ಹೊಸ ನಿಯಮದನ್ವಯ ಮೇಲ್ಕಂಡ
ರಜೆಗಳನ್ನು ಲೆಕ್ಕಾಚಾರವನ್ನು ತಿಳಿಸಿಕೊಡಬೇಕಾಗಿ ವಿನಂತಿ.
|ಹನುಮಂತಪ್ಪ.ಡಿ ಹೊನ್ನಾಳಿ
ಕರ್ನಾಟಕ ಸರ್ಕಾರಿ ಸೇವಾ ನಿಯಮ 112 (3)ರ ಉಪಬಂಧದಡಿಯಲ್ಲಿ
ಡಿಸೆಂಬರ್ ಅಥವಾ ಜೂನ್ ತಿಂಗಳ ಕೊನೆಯ ದಿನಾಂಕದಂದು
ಸರ್ಕಾರಿ ನೌಕರನ ಖಾತೆಯಲ್ಲಿರುವ ಗಳಿಕೆ ರಜೆಯು 300 ದಿವಸಗಳು
ಅಥವಾ ಅದಕ್ಕಿಂತಲೂ ಹೆಚ್ಚು ಇದ್ದರೆ ನಿಯಮ 112 (2)ರ
ರೀತ್ಯಾ ಜಮಾ ಮಾಡುವ ಹದಿನೈದು ದಿನಗಳ ಗಳಿಕೆ ರಜೆಯನ್ನು
ಅವನ ಖಾತೆಗೆ ಜಮಾ ಮಾಡುವುದರ ಬದಲು 15 ದಿನ
ಪ್ರತ್ಯೇಕವಾಗಿರತಕ್ಕದ್ದು ಎಂದು ಸೂಚಿಸಲಾಗಿದೆ. ಈ
ನಿಯಮಾವಳಿಯ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಆಯಾಯ ಅರ್ಧ
ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚಾಗುವ ಗಳಿಕೆ ರಜೆಯನ್ನು
ನಗದೀಕರಣ ಅಥವಾ ಬಳಸಿಕೊಳ್ಳದಿದ್ದಲ್ಲಿ ಅದು
ವ್ಯಪಗತವಾಗುತ್ತದೆ.

12 comments:

  1. ಇಗಾಗಲೆ ಶೀಘ್ರಲೀಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಯಲ್ಲಿ ಕಾರ್ಯನಿರ್ವಹಿಸುವತ್ತಿರುವವರು. ಮತ್ತೆ ಅದೇ ಹುದ್ದೇಗೆ ಸರಕಾರದ ಅನುಮತಿ ಪಡೆದು/ಪಡೆಯದೇ ಅರ್ಜಿ ಸಲ್ಲಿಸಲು ಬರುತ್ತದೆಯೇ? ನಾನು ಸಮಾನ ಹುದ್ದೆಯಲ್ಲಿದ್ದುಕೊಂಡು ಸಮಾನ ಹುದ್ದೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಕೇಳಿದ್ದೆ. ದಯವಿಟ್ಟು ಮಾಹಿತಿ ನೀಡಿ

    ReplyDelete
  2. ಕುಟಂಬ ಯೋಜನೆ ಪಿ ಪಿ ಯನ್ನು ವಿಶೇಷ ಭತ್ಯಯನ್ನು ಎಷ್ಟು ವರುಷದೋಳಗೆ( ಅಪರೇಷನ್ಆಗಿ)ಸಲ್ಲಿಸಬೇಕು

    ReplyDelete
  3. ಪತಿ ಸರಕಾರಿ ನೌಕರನಾಗಿದ್ದು,ಪತ್ನಿನೌಕರಲ್ಲದಿದ್ದಾಗ ಪತ್ನಿ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಿಸಿಕೊಂಡಾಗ ಪತಿಗೆ ವಿಶೇಷ ವೇತನ ಬಡ್ತಿ ದೊರೆಯುವುದೇ

    ReplyDelete
  4. KCSR ನಿಯಮದ ಪ್ರಕಾರ ಒಂದೇ Notification ನವರಿಗೆ ಮೂಲ ವೇತನ ವ್ಯತ್ಯಾಸವಾಗುವ ಹಾಗಿಲ್ಲ. *ಆ ನಿಯಮದ ಸಂಖ್ಯೆ ಗೊತ್ತಿದ್ದವರು ತಿಳಿಸಿ*

    ReplyDelete
  5. ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ 2 ವರ್ಷಗಳಿಂಧ ರಾತ್ರಿ ಕಾವಲುಗಾರನ ಹುದ್ಧೆಯಲ್ಲಿ ಇದ್ಧು, ಪಿ ಪಿ ಕೂಡ ಡಿಕ್ಲೇರ್ ಆಗಿರುವುಧಿಲ್ಲ , ನನ್ನ ವೈದ್ಯಕೀಯ
    ಕರಣಗಳಿಂಧಮತ್ತು ನನ್ನ ತಂದೇ ಯನ್ನು ಎಚ್ಚಿನ ವೈದ್ಯಕೀಯ ಚಿಕ್ಸ್ತಾಸೆಗಾಗಿ ಹಾಗಾಗ ಸುಮಾರು 1 ವರ್ಷಗಳ ವರೆಗೆ ಗೈರು ಹಾಜರಾಗಿರುತ್ತೇನೆ, ಮತ್ತು ನನ್ನ ವೈದ್ಯಕೀಯ ಪ್ರಮಾಣ ಪತ್ರವನ್ನು ಸಹ ನೀಡುರುತ್ತೇನೆ, ಹಾಗೂ ನನ್ನ ವರ್ಗವಣೆಗೆ ಕೋರಿದ್ಧೇನೆ... ಈಗ ಅವರು ನನ್ನನು ಅಮಾನತು ಮಾಡಬೇಕೆಂಧು ಚಿಂತಿಸಿತ್ತಿದ್ಧಾರೆ, ನಾನು ಏನು madabeku? ಧಯವಿಟ್ಟು ತಿಳಿಸಿಕೊಡಿ

    ReplyDelete
  6. ಸಾರ್ ನಮಸ್ಕಾರ ನಾನು ಪ್ರಥಮ ದರ್ಜೆ ಸಹಾಯಕ ಹುದ್ದೆಯಲ್ಲಿರುತ್ತೇನೆ EST ಸಂಬಂಧಿಸಿದ ಮಾಹಿತಿ ಪುಸ್ತಕಗಳನ್ನು ಹಾಗೂ ಪತ್ರ ವ್ಯವಹಾರ ಅಕ್ಷರ ನಿಘಂಟಿನ ಪುಸ್ತಕ ಗಳು ಇದ್ಧರೆ ಮಾಹಿತಿ ತಿಳಸಿ

    ReplyDelete
  7. ಮಾನ್ಯರೇ ನಾನು ನಿಂಗಪ್ಪ ಪಕಾಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಹೋಂಡಾದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.ನನ್ನ ಹೆಂಡತಿ ಮೊದಲನೆಯ ಹೆರಿಗೆಯಲ್ಲಿ ಒಂದು ಗಂಡು ಮಗು ಹಾಗೂ ಎರಡನೇ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದು. ನಾನು ಸರಕಾರದ ನಿಯಮದ ಪ್ರಕಾರ ಎರಡು ಹೆರಿಗೆ ನಂತರ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ(ಟುಬೆಕ್ಟಮಿ) ಯನ್ನು ಮಾಡಿಸಿರುತ್ತೇವೆ.ಈಗ ನನ್ನ ಪ್ರಶ್ನೆ ಏನೆಂದರೆ ಎರಡು ಹೆರಿಗೆ ನಂತರ ಒಂದು ಬಡ್ತಿ ವೇತನ ನನಗೆ ಸಿಗಬಹುದೇ??????

    ReplyDelete
  8. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಗೂ ನನ್ನ ಎರಡು ದಂಡನಾ ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ ಯಾವಾಗ ಮುಗಿತ್ತವೆ . ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ ದಯಮಾಡಿ ತಿಳಿಸಿ

    ReplyDelete
  9. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಕಿರುದಿಲ್ಲ ಹಾಗೂ ನನ್ನ ಎರಡು ದಂಡನಾಗಳು ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ.ಯಾವ ವರ್ಷದಿಂದಾ ದಂಡನಾ ಪ್ರಾರಂಭ ಆಗುತ್ತವೆ. ಯಾವಾಗ ಮುಗಿತ್ತವೆ. ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ.ಹಾಗೂ ಇಲ್ಲಿ ಕಾಲ್ಪನಿ ವೇತಗಳು ಮತ್ತು ೨೦೧೪ ರೇಗೂಲರ ವೇತಗಳು ಸೇರಿ ಇಗ ನನ್ನ ವೇತನ ಎಷ್ಟೋ ಇರಬೇಕು.ಹಾಗೂ ೧೦ ಹಾಗೂ ೧೫ ಟೈಮಂಬಾಡ ವೇತನ ಬರುತ್ತದೆ ಹೇಗೆ.ನನಗೆ ನೈಜವಾಗಿ ಮುಂಬಡ್ತಿ ಯಾವಾಗ ಸೀಗೂತ್ತೆ ದಯಮಾಡಿ ತಿಳಿಸಿ

    ReplyDelete
  10. ಮುಂದು ವರೆದು ಆದೇಶದಗಳ ಪ್ರತಿ ಪೂರೈಸ ಬೇಕ ಆಗಬೇಕಾಗಿ ವಿಂನತಿ

    ReplyDelete
  11. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಕಿರುದಿಲ್ಲ ಹಾಗೂ ನನ್ನ ಎರಡು ದಂಡನಾಗಳು ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ.ಯಾವ ವರ್ಷದಿಂದಾ ದಂಡನಾ ಪ್ರಾರಂಭ ಆಗುತ್ತವೆ. ಯಾವಾಗ ಮುಗಿತ್ತವೆ. ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ.ಹಾಗೂ ಇಲ್ಲಿ ಕಾಲ್ಪನಿ ವೇತಗಳು ಮತ್ತು ೨೦೧೪ ರೇಗೂಲರ ವೇತಗಳು ಸೇರಿ ಇಗ ನನ್ನ ವೇತನ ಎಷ್ಟೋ ಇರಬೇಕು.ಹಾಗೂ ೧೦ ಹಾಗೂ ೧೫ ಟೈಮಂಬಾಡ ವೇತನ ಬರುತ್ತದೆ ಹೇಗೆ.ನನಗೆ ನೈಜವಾಗಿ ಮುಂಬಡ್ತಿ ಯಾವಾಗ ಸೀಗೂತ್ತೆ ದಯಮಾಡಿ ತಿಳಿಸಿ

    ReplyDelete
  12. ನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ‌ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಕಿರುದಿಲ್ಲ ಹಾಗೂ ನನ್ನ ಎರಡು ದಂಡನಾಗಳು ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ.ಯಾವ ವರ್ಷದಿಂದಾ ದಂಡನಾ ಪ್ರಾರಂಭ ಆಗುತ್ತವೆ. ಯಾವಾಗ ಮುಗಿತ್ತವೆ. ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ.ಹಾಗೂ ಇಲ್ಲಿ ಕಾಲ್ಪನಿ ವೇತಗಳು ಮತ್ತು ೨೦೧೪ ರೇಗೂಲರ ವೇತಗಳು ಸೇರಿ ಇಗ ನನ್ನ ವೇತನ ಎಷ್ಟೋ ಇರಬೇಕು.ಹಾಗೂ ೧೦ ಹಾಗೂ ೧೫ ಟೈಮಂಬಾಡ ವೇತನ ಬರುತ್ತದೆ ಹೇಗೆ.ನನಗೆ ನೈಜವಾಗಿ ಮುಂಬಡ್ತಿ ಯಾವಾಗ ಸೀಗೂತ್ತೆ ದಯಮಾಡಿ ತಿಳಿಸಿ

    ReplyDelete