[08/10 7:55 pm] : ವರ್ಣಮಾಲೆ ಮತ್ತು ಧ್ವನ್ಯಂಗಗಳು
ಕನ್ನಡ ವರ್ಣಮಾಲೆ
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಅವುಗಳನ್ನು ಈ
ಕೆಳಗಿನಂತೆ ವರ್ಗೀಕರಿಸಬಹುದು.
ಸ್ವರಗಳು ಮತ್ತು ಸಂಧ್ಯಕ್ಷರಗಳು (13)
ಯೋಗವಾಹಕಗಳು (2)
ವ್ಯಂಜನಗಳು (34)
ಸ್ವರಗಳು: (ಒಟ್ಟು-13) "ಸ್ವತಂತ್ರವಾದ, ಸ್ಪಷ್ಟವಾದ
ಉಚ್ಚಾರಣೆಯನ್ನು ಹೊಂದಿರುವ ಅಕ್ಷರಗಳನ್ನು 'ಸ್ವರಗಳು'
ಎಂದು ಕರೆಯಲಾಗುತ್ತದೆ." ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13
ಸ್ವರಗಳಿದ್ದು ಅವುಗಳಲ್ಲಿ ಎರಡು ಅಕ್ಷರಗಳನ್ನು
ಸಂಧ್ಯಕ್ಷರಗಳೆಂದೂ ಕರೆಯಲಾಗುತ್ತದೆ.
ಅವುಗಳೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಸ್ವರಗಳನ್ನು 'ಹ್ರಸ್ವಸ್ವರ' 'ಧೀರ್ಘಸ್ವರ' ಮತ್ತು 'ಸಂಧ್ಯಕ್ಷರ'
ಎಂದು ಮೂರು ವಿಧಗಳಾಗಿ ವಿಂಗಡಿಸಬಹುದು.
* ಹ್ರಸ್ವಸ್ವರಗಳು:- ಒಂದು ಮಾತ್ರೆಯ ಕಾಲದಲ್ಲಿ
ಉಚ್ಚರಿಸಲಾಗುವ ಸ್ವರಗಳಿಗೆ ಹ್ರಸ್ವಸ್ವರಗಳು ಎನ್ನುವರು.
-ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6)
* ಧೀರ್ಘಸ್ವರಗಳು:- ಎರಡು ಮಾತ್ರೆಗಳ ಕಾಲದಲ್ಲಿ
ಉಚ್ಚರಿಸಲಾಗುವ ಸ್ವರಗಳಿಗೆ ಧೀರ್ಘಸ್ವರಗಳು ಎನ್ನುವರು.
ಅವುಗಳೆಂದರೆ- ಆ ಈ ಊ ಏ ಐ ಓ ಔ (ಒಟ್ಟು 7)
[ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು
ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ
ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ
ಕಾಲದಲ್ಲಿ ಉಚ್ಚರಿಸಲಾಗುವುದರಿಂದ ಇದು ಹ್ರಸ್ವಸ್ವರ ವಾಗಿದೆ.
ಹಾಗೆಯೇ ಈ ಎಂಬ ಅಕ್ಷರವನ್ನು ಉಚ್ಚರಿಸಲು ಹ್ರಸ್ವಸ್ವರದ
ಎರಡರಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇದು
ಧೀರ್ಘಸ್ವರವಾಗಿದೆ]
* ಸಂಧ್ಯಕ್ಷರಗಳು:- ಐ ಔ (ಒಟ್ಟು 2)
[ಸೂಚನೆ:- ಐ ಮತ್ತು ಔ ಅಕ್ಷರಗಳು ಧೀರ್ಘಸ್ವರಗಳೂ
ಸಂಧ್ಯಕ್ಷರಗಳೂ ಆಗಿವೆ ಎಂಬುದನ್ನು ಮರೆಯದಿರಿ]
ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ
ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ ಸ್ವರ ಅಥವಾ
ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ
ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ)
ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ
ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು
ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ
ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ
ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು
ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ.
ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ
ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ,
ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ
ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ
ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು
ಬರುವುದೇ ಇಲ್ಲ.
ಅಂ ಮತ್ತು ಅಃ ಇವುಗಳನ್ನು ಕ್ರಮವಾಗಿ 'ಅನುಸ್ವರ' ಮತ್ತು
'ವಿಸರ್ಗ' ಎಂದು ಕರೆಯಲಾಗುತ್ತದೆ.
1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0'
ಮಾತ್ರ ಅನುಸ್ವರವಾಗಿದೆ.
2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು
ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ
ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ
ಅರ್ಥವನ್ನೂ ಕೊಡುತ್ತವೆ. ಆದ್ದರಿಂದ ಯೋಗವಾಹವೆಂದರೆ,
ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ
ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]
ವ್ಯಂಜನಗಳು:- (ಒಟ್ಟು-34) - ಸ್ವರಗಳ ಸಹಾಯದಿಂದ ಮಾತ್ರ
ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ 34 ಅಕ್ಷರಗಳ
ಗುಂಪಿಗೆ 'ವ್ಯಂಜನಗಳು' ಎಂದು ಕರೆಯಲಾಗುತ್ತದೆ.
ಇವುಗಳನ್ನು 'ವರ್ಗೀಯವ್ಯಂಜನಗಳು' ಮತ್ತು 'ಅವರ್ಗೀಯ
ವ್ಯಂಜನಗಳು' ಎಂದು ಎರಡು ಗುಂಪುಗಳಾಗಿ
ವಿಭಾಗಿಸಲಾಗಿದೆ.
1) ವರ್ಗೀಯವ್ಯಂಜನಗಳು-(25):- ವ್ಯವಸ್ಥಿತವಾಗಿ ಜೋಡಿಸಿ, 5
ವರ್ಗಗಳಾಗಿ ವರ್ಗೀಕರಿಸಲಾಗಿರುವ 'ಕ' ಇಂದ 'ಮ' ವರೆಗಿನ 25
ಅಕ್ಷರಗಳನ್ನು 'ವರ್ಗೀಯ ವ್ಯಂಜನಗಳು' ಎಂದು
ಕರೆಯಲಾಗುತ್ತದೆ. ಅವುಗಳೆಂದರೆ..
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಈ ಮೇಲಿನ ಅಕ್ಷರಗಳನ್ನು ನೋಡಿದಿರಲ್ಲ! ಇವುಗಳನ್ನು ಕ-ವರ್ಗ,
ಚ-ವರ್ಗ, ಟ-ವರ್ಗ, ತ-ವರ್ಗ ಮತ್ತು ಪ-ವರ್ಗ ಎಂದು ಐದು
ವರ್ಗಗಳಾಗಿ ವಿಂಗಡಿಸಲಾಗಿದೆ. ಕ ಇಂದ ಮ ವರೆಗಿನ ಅಕ್ಷರಗಳನ್ನು
ಮತ್ತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅವು ಈ
ಕೆಳಗಿನಂತಿವೆ..
ಅಲ್ಪಪ್ರಾಣಾಕ್ಷರಗಳು (10) :- ಕಡಿಮೆ ಉಸಿರಿನ ಸಹಾಯದಿಂದ
ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ
'ಅಲ್ಪಪ್ರಾಣಾಕ್ಷರಗಳು'.
ಅವುಗಳೆಂದರೆ : ಕ್, ಗ್, ಚ್, ಜ್, ಟ್, ಡ್, ತ್, ದ್, ಪ್, ಬ್
ಮಹಾಪ್ರಾಣಾಕ್ಷರಗಳು (10) :- ಹೆಚ್ಚು ಉಸಿರಿನ ಸಹಾಯದಿಂದ
ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ
'ಮಹಾಪ್ರಾಣಾಕ್ಷರಗಳು'.
ಅವುಗಳೆಂದರೆ: ಖ್, ಘ್, ಛ್, ಝ್, ಠ್, ಢ್, ಥ್, ಧ್, ಫ್, ಭ್
ಅನುನಾಸಿಕಾಕ್ಷರಗಳು (5) :- ಮೂಗಿನ ಸಹಾಯದಿಂದ
ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ
'ಅನುನಾಸಿಕಾಕ್ಷರಗಳು'.
ಅವುಗಳೆಂದರೆ: ಙ್, ಞ್, ಣ್, ನ್, ಮ್
[ಟಿಪ್ಪಣಿ:- ಈ ಐದು ಅನುನಾಸಿಕಾಕ್ಷರಗಳು ಆಯಾ ವರ್ಗದ
ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ) ವಾಗಿ
ಕಾರ್ಯನಿರ್ವಹಿಸುತ್ತವೆ.
ಉದಾ:- 'ಕ' ವರ್ಗದಲ್ಲಿ :- ಅಙ್ಗಳ = ಅಂಗಳ, ಪಙ್ಕಜ = ಪಂಕಜ, ಸಙ್ಘ
= ಸಂಘ
'ಚ' ವರ್ಗದಲ್ಲಿ:- ಅಞ್ಚೆ = ಅಂಚೆ, ಪಞ್ಜರ = ಪಂಜರ, ಇಞ್ಚರ =
ಇಂಚರ
'ಟ' ವರ್ಗದಲ್ಲಿ:- ಗಣ್ಟೆ = ಗಂಟೆ, ಹಿಣ್ಡು = ಹಿಂಡು, ಅಣ್ಟು =
ಅಂಟು
'ತ' ವರ್ಗದಲ್ಲಿ:- ಸನ್ತಸ = ಸಂತಸ, ಆನನ್ದ = ಆನಂದ, ಬನ್ಧನ =
ಬಂಧನ
'ಪ' ವರ್ಗದಲ್ಲಿ:- ಪಮ್ಪ = ಪಂಪ, ತಮ್ಬಾಕು = ತಂಬಾಕು, ಶಮ್ಭು
= ಶಂಭು,
ನಿಮಗಿದು ವಿಚಿತ್ರ ಎನುಸುತ್ತಿದೆಯೆ. ಹೌದು, ಪೂರ್ವದ ಹಳೆಗನ್ನಡದಲ್ಲಿ
(ಸು.6-7ನೇ ಶತಮಾನದಿಂದ ಹಿಂದೆ) ಕನ್ನಡ ಭಾಷೆಯಲ್ಲಿ
ಬಿಂದುವಿನ(ಅನುಸ್ವಾರ/ಸೊನ್ನೆ) ಬಲಕೆ ಇರಲಿಲ್ಲ. ಕನ್ನಡದ
ಮೊಟ್ಟಮೊದಲ ಶಾಸನವಾದ 'ಹಲ್ಮಿಡಿ ಶಾಸನದಲ್ಲಿ ನಾವು ಈ
ರೂಪದ ಪದಗಳನ್ನು ಕಾಣಬಹುದು.
ತಡವೇಕೆ ನೀವೂ ಕೂಡ ಸೊನ್ನೆಯನ್ನು ಬಳಸದೆ ಪದಗಳನ್ನು
ರಚಿಸಿ. ಆನಂದಿಸಿ]
ಧ್ವನ್ಯಂಗಗಳು ಮತ್ತು ಉಚ್ಚಾರಣೆ [ಕೃಪೆ: ಪ್ರೊ.ಜಿ.ವೆಂಕಟಸು
ಬ್ಬಯ್ಯರವರ ಪ್ರಿಸಂ ಕನ್ನಡ ಕನ್ನಡ ನಿಘಂಟು]
ನಾವು ಮಾತನಾಡುವಾಗ ನಮ್ಮ ಧ್ವನಿಯು ಹುಟ್ಟುವುದು
ಹೇಗೆ ಎಂಬುದನ್ನು ನಾವು ತಿಳಿದಿರಬೇಕು. ಇದನ್ನು ಕುರಿತು
ನಮ್ಮ ವೈಯಾಕರಣರು ಏನು ಹೇಳಿದ್ದಾರೆ ಎಂಬುದನ್ನು
ಮೊದಲು ತಿಳಿದುಕೊಳ್ಳೋಣ. ಕನ್ನಡದ ವ್ಯಾಕರಣಕಾರರಲ್ಲಿ
ಪ್ರಮುಖನಾದ ಕೇಶಿರಾಜನು (ಕ್ರಿ. ಶ. ೧೩ನೆಯ ಶತಮಾನ) ಈ ಬಗ್ಗೆ
ಒಂದು ಸೂತ್ರವನ್ನು ರಚಿಸಿದ್ದಾನೆ.
ಅನುಕೂಲ ಪವನನಿಂ ಜೀ
ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ
ಗಿನವೋಲ್ ಶಬ್ದದ್ರವ್ಯಂ
ಜನಿಯಿಸುಗುಂ ಶ್ವೇತಮದಱಕಾರ್ಯಂ ಶಬ್ದಂ
ಮಾತನಾಡಬೇಕೆಂಬ ವ್ಯಕ್ತಿಯ ಅಪೇಕ್ಷೆಯಂತೆ
ಅನುಕೂಲವಾದ ಗಾಳಿಯ ಸಹಾಯದಿಂದ ನಾಭಿಮೂಲದಲ್ಲಿ
ಕಹಳೆಯ ಅಕಾರದಲ್ಲಿ ಶಬ್ದವೆಂಬ ದ್ರವ್ಯವು ಹುಟ್ಟುತ್ತದೆ. ಅದರ
ಬಣ್ಣ ಬಿಳಿ. ಆ ದ್ರವ್ಯದ ಕಾರ್ಯವೇ ಶಬ್ದ (ಜೈನರು ಶಬ್ದಕ್ಕೆ
ದ್ರವ್ಯತ್ವವನ್ನೂ ಧವಳವರ್ಣವನ್ನೂ ಆರೋಪಿಸುತ್ತಾರೆ). ಇದರ
ಜೊತೆಗೆ ಕೇಶಿರಾಜನು ಮತ್ತೂ ಒಂದು ಸೂತ್ರವನ್ನು
ಸೇರಿಸಿದ್ದಾನೆ.
ತನು ವಾದ್ಯಂ ನಾಲಗೆ ವಾ
ದನದಂಡಂ ಕರ್ತೃವಾತ್ಮನವನ ಮನೋವೃ
ತ್ತಿನಿಮಿತ್ತಮಾಗಿ ಶಬ್ದಂ
ಜನಿಯಿಸುಗುಂ ಧವಳವರ್ಣಮಕ್ಷರರೂಪಂ
ದೇಹವೇ ವಾದ್ಯ. ನಾಲಗೆ ಬಾಜನೆ ಮಾಡುವ ಅಂದರೆ
ವಾದ್ಯವನ್ನು ನುಡಿಸುವ ಕುಡುಹು (ದಂಡ). ಬಾಜಿಸುವವನು
ಆತ್ಮ. ಅವನ ಮನಸ್ಸಿನ ಅಪೇಕ್ಷೆಯಂತೆ ಶಬ್ದವು ಬಿಳಿಯ
ಬಣ್ಣದಿಂದ ಅಕ್ಷರದ ರೂಪದಲ್ಲಿ ಉತ್ಪತ್ತಿಯಾಗುತ್ತದೆ.
ಇದು ಆರುನೂರು ವರ್ಷಗಳ ಹಿಂದಿನ ಮಾತು. ಈ ನಾಲ್ಕಾರು
ಶತಮಾನಗಳಲ್ಲಿ ಶರೀರಶಾಸ್ತ್ರದ ವಿಜ್ಞಾನಿಗಳು ಬಹುವಾಗಿ
ಸಂಶೋಧನೆಗಳನ್ನು ನಡೆಸಿ ಈ ಬಗ್ಗೆ ಖಚಿತವಾದ ವಿವರಗಳನ್ನು
ನಿರೂಪಿಸಿದ್ದಾರೆ. ಸಂಗೀತ, ನಾಟಕಾಭಿನಯ, ಭಾಷಣ ಮುಂತಾದ
ಎಲ್ಲ ಕ್ರಿಯೆಗಳಿಗೂ ಬೇರೆ ಬೇರೆ ಸಿದ್ಧತೆಗಳು ಬೇಕಾದರೂ
ಮೂಲಭೂತವಾಗಿ ಧ್ವನಿನಿರ್ಮಾಣ ಎಂಬುದರ ಕ್ರಿಯೆ ಒಂದೇ.
ಧ್ವನಿ ನಿರ್ಮಾಣದಲ್ಲಿ ಕೆಲವು ಅಂಗಗಳು ಸಂಬಂಧ
ಹೊಂದಿರುವುದನ್ನು ಅರಿತರೆ ಆಯಾ ಕ್ಷೇತ್ರದ ಸಾಧನೆಯಲ್ಲಿ
ತುಂಬ ಸಹಾಯ ಒದಗುತ್ತದೆ.
ಶ್ವಾಸಕೋಶವೂ ವಪೆಯೂ ಶ್ವಾಸ ನಿಯಂತ್ರಣದಲ್ಲಿ ಸಹಾಯ
ಮಾಡುವ ಅಂಗಗಳು. ಉಸಿರಿನಿಂದ ಧ್ವನಿಯು ಉತ್ಪತ್ತಿಯಾಗುತ್ತ
ದೆ. ತುಂಬು ಉಸಿರಿನಉಚ್ಛ್ವಾಸ ನಿಶ್ವಾಸಗಳಿಂದ ಉತ್ತಮವಾದ
ಧ್ವನಿ ನಿರ್ಮಾಣವು ಸಾಧ್ಯ. ಇದನ್ನು ನಾವು ನಮ್ಮ
ಹತೋಟಿಯಲ್ಲಿ ಇಟ್ಟುಕೊಂಡಿರಬೇಕು.
ಇಲ್ಲಿರುವ ಎರಡು ಚಿತ್ರಗಳ ಸಹಾಯದಿಂದ ಧ್ವನಿ ನಿರ್ಮಾಣದ
ಮತ್ತು ಅಕ್ಷರಗಳು ಉತ್ಪತ್ತಿಯಾಗುವ ಸ್ಥಾನಗಳ ಪರಿಚಯವನ್ನು
ನಾವು ಮಾಡಿಕೊಳ್ಳಬಹುದು. ಮೊದಲು ಆಯಾ
ಅಂಗಗಳನ್ನು ಸಂಖ್ಯೆಯ ಸಹಾಯದಿಂದ ಗುರುತಿಸಿಕೊಳ್ಳಿ.
ವಪೆಯ ತಳಹದಿಯ ಮೇಲೆ ಗಾಳಿಯ ಸ್ತಂಭವು (Column)
ಸ್ಥಾಪಿತವಾಗಿರುತ್ತದೆ. ಆ ಗಾಳಿಯು ನಮ್ಮ ಧ್ವನ್ಯಂಗಗಳ ಬಳಿಗೆ
ಬರಬೇಕಾದರೆ ಈ ವಪೆಯು ಮೇಲಕ್ಕೆ ಚಲಿಸಬೇಕು. ನಾವು
ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ನಮ್ಮ ಹೊಟ್ಟೆಯ
ಪಕ್ಕೆಗಳು ದೊಡ್ಡವಾಗುತ್ತವೆ. ಗುಮ್ಮಟಾಕಾರದ ವಪೆಯು
(Diaphram) ಸಮತಳವಾಗುತ್ತದೆ. ಅಂದರೆ ಸಪಾಟಾಗುತ್ತದೆ.
ನಾವು ಉಸಿರು ಬಿಟ್ಟಾಗ ವಪೆಯು ಹಿಂದಿನ ಆಕಾರಕ್ಕೆ ಬರುತ್ತದೆ.
ಅಂದರೆ ಸಡಿಲಗೊಂಡ ವಪೆಯು ಮೇಲೆದ್ದು ಕೋಶದ ಉಸಿರನ್ನು
ಹೊರಕ್ಕೆ ನೂಕುತ್ತದೆ. ಹೀಗೆ ಹೊರಕ್ಕೆ ತಳ್ಳಿದ ಗಾಳಿಯೇ
ಧ್ವನಿಯ ನಿರ್ಮಾಣಕ್ಕೆ ಕಾರಣ.
ಗಾಳಿಯು ಮೇಲಕ್ಕೆ ಹೊರಟು ಧ್ವನಿ ತಂತುಗಳನ್ನು
ವಿರಳಗೊಳಿಸಿ ಅವುಗಳ ನಡುವೆ ಮೇಲಕ್ಕೆ ನುಗ್ಗುತ್ತದೆ. ಗಾಳಿಯ
ಚಲನೆ ಮತ್ತು ಘೋಷ ತಂತುಗಳ ಸ್ಥಿತಿಸ್ಥಾಪಕತ್ವ (Elasticity)
ಇವುಗಳಿಂದ ಧ್ವನಿ ತಂತುಗಳು ಕಂಪಿಸುತ್ತವೆ. ಈ ಕಂಪನವೇ
ಶಬ್ದ ನಿರ್ಮಾಣ. ಗಾಳಿಯಿಂದ ತುಂಬಿದ ಬಲೂನಿನ ಬಾಯಿಯನ್ನು
ತೆರೆದಾಗ ಧ್ವನಿ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿ.
ಹಾಗೆಯೇ ಮಾತಿನ ಧ್ವನಿಯೂ ಉಂಟಾಗುತ್ತದೆ. ಈಗ ಆ
ಗಾಳಿಯೂ ಉಂಟಾಗುತ್ತದೆ. ಈಗ ಆ ಗಾಳಿಯು ಮುಂದುವರಿದು
ಗಂಟಲು, ಬಾಯಿ, ಮೂಗುಗಳ ಮೂಲಕ ಹೊರಹೊಮ್ಮಿ
ಮಾತನಾಡುವವನ ಸುತ್ತ ಗಾಳಿಯ ಒತ್ತಡದ
ವ್ಯತ್ಯಾಸವನ್ನುಂಟುಮಾಡುತ್ತದೆ. ಈ ಒತ್ತಡದ
ವ್ಯತ್ಯಾಸವನ್ನೇ ಧ್ವನಿತರಂಗಗಳು ಎನ್ನುತ್ತಾರೆ. ಅವು
ಕೇಳುವವರ ಕಿವಿಗೆ ತಗುಲಿ ಧ್ವನಿಯು ಅನುಭವಕ್ಕೆ ಬರುತ್ತದೆ.
ಧ್ವನ್ಯಂಗಗಳು ಎಂದರೆ ಧ್ವನಿಯನ್ನು ನಿರ್ಮಾಣ ಮಾಡುವ
ಅಂಗಗಳು ಎಂದು ಅರ್ಥ. ಮೊದಲು ಈ ಚಿತ್ರದಲ್ಲಿರುವ
ಸ್ಥಾನಗಳನ್ನು ಗುರುತಿಸಿ. ಬಾಯಿ ಒಂದು ಕುಹರ. ಅದರ
ಒಳಭಾಗದಲ್ಲಿರುವ ಚಲಿಸುವ ಅಂಗಗಳು ಆಕ್ರಮಿಸುವ
ಸ್ಥಳಗಳನ್ನು ಅನುಸರಿಸಿ ಬಾಯಿಯ ಆಕಾರವು ಬದಲಾಗುತ್ತದೆ. ಈ
ವ್ಯತ್ಯಾಸವು ಉಚ್ಚಾರವಾಗುವ ಶಬ್ದದ ಕಾಕು (Tone)ವನ್ನು
ಬದಲು ಮಾಡಬಹುದು. ಅವೇ ನಿರ್ದಿಷ್ಟವಾದ ಧ್ವನಿಯನ್ನೂ
ಉಂಟು ಮಾಡಬಹುದು (Produce or Articulate). ಈ ಅಂಗಗಳು
ಹೀಗಿವೆ. ನಂಗಿಲು (Uvula), ಮೃದುತಾಲು (Soft Palate),
ಕಠಿನತಾಲು (Hard Palate), ಹಲ್ಲುಗಳು (Teeth), ನಾಲಿಗೆ
(Tongue), ತುಟಿಗಳು (Lips), ಮೂಗು (Nose), ಅಲ್ಲದೆ
ನಾಸಾಕುಹರ (Nasal Passage) ಮತ್ತು ಬಟವೆಗಳು (Sinuses)
ಶ್ವಾಸನಿಗ್ರಹಕ್ಕೂ, ಧ್ವನಿಯ ಅನುರಣನಕ್ಕೂ
ಸಹಾಯಕವಾಗುತ್ತವೆ.
ಧ್ವನಿಯನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಬಹು
ಸಂಕೀರ್ಣವಾದ ಕಾರ್ಯ. ಕೊರಳಿನ ಮಾಂಸಖಂಡಗಳ ಬಿಗಿಯು
ಗಂಟಲಿನ ಮೇಲೆ ಪ್ರಭಾವವನ್ನು ಬೀರಬಹುದು. ಕೆಳಗಿನ ದವಡೆಯ
ಚಲನೆ, ಮುಖದ ಕೆಲವು ಮಾಂಸಖಂಡಗಳು ಕೂಡ ಬಾಯಿಯ
ಆಕಾರವನ್ನು ಬದಲಿಸಬಹುದು. ಇದರಿಂದ ಹೊರಡುವ ಧ್ವನಿಯು
ಬದಲಾಗುತ್ತದೆ. ದೇಹದ ಮೇಲ್ಭಾಗವು ಕಂಪಿಸುತ್ತದೆ. ತಲೆಯ
ಮತ್ತು ಎದೆಯ ಮೂಳೆಗಳು ಧ್ವನಿವರ್ಧಕಗಳಾಗಬಹುದು.
ಧ್ವನಿಯನ್ನು ಪ್ರಭಾವಯುತವಾಗಿ ಉಪಯೋಗಿಸುವ ಎಲ್ಲರೂ ಆ
ಅಂಗಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು
ಸಮರ್ಥರಾಗಿರುತ್ತಾರೆ. ಅವರಿಂದ ಭಾಷೆಯ ನಿರ್ದಿಷ್ಟವಾದ ಮತ್ತು
ಸ್ಪಷ್ಟವಾದ ಪ್ರಯೋಗ ಸಾಧ್ಯ. ಭಾವಾವೇಗ,
ವಿಶೇಷಾರ್ಥಗಳುಳ್ಳ ಶಬ್ದಗಳ ಪ್ರಯೋಗ ಇವುಗಳನ್ನು
ಗಮನಿಸಿದರೆ ಈ ಸಾಮರ್ಥ್ಯ ಎಷ್ಟು ಪ್ರೌಢವಾದುದು ಎಂದು
ತಿಳಿದುಬರುತ್ತದೆ.
ಕನ್ನಡದ ಅಕ್ಷರಗಳನ್ನು ಉಚ್ಚಾರಣೆ ಮಾಡುವಾಗ ನಡೆಯುವ
ಕ್ರಿಯೆಯನ್ನು ಸ್ವಲ್ಪ ವಿವರವಾಗಿ ತಿಳಿಯೋಣ.
ಈ ಚಿತ್ರಗಳ ವಿವರವನ್ನು ಸಂಖ್ಯೆಗಳ ಸಹಾಯದಿಂದ
ಗುರುತಿಸಿಕೊಳ್ಳಿ.
ಕನ್ನಡ ಅಕ್ಷರಗಳು ಇರುವ ಪಟ್ಟಿಯನ್ನು ಪರಿಶೀಲಿಸಿ. ಕನ್ನಡದ
ಅಕ್ಷರಗಳನ್ನು ಅವು ಹುಟ್ಟುವ ಸ್ಥಾನಗಳನ್ನು ಗಮನಿಸಿ ಐದು
ವಿಧವಾಗಿ ವಿಂಗಡಿಸಿದ್ದಾರೆ.
೧. ಕಂಠ್ಯ, ೨. ತಾಲವ್ಯ ೩. ಮೂರ್ಧನ್ಯ, ೪. ದಂತ್ಯ, ೫.
ಓಷ್ಠ್ಯ.
ಮೃದು, ಕರ್ಕಶ ಎಂದರೇನು? ಅಕ್ಷರಗಳು ಬಾಯಿಯಲ್ಲಿ
ಉಚ್ಚಾರವಾಗುತ್ತವೆ. ಬಾಯಿಯ ಮೇಲ್ಭಾಗವನ್ನು ಅಂಗಳು
ಅಥವಾ ಅಟ್ಟ ಎಂದು ಕರೆಯುತ್ತಾರೆ. ಆಂಗಳು ಇರುವ ಆಟ್ಟದ
ಮುಂಭಾಗ ಮಾತ್ರ ನಾಲಿಗೆಯು ತಗಲುವಂತೆ ಉಚ್ಚಾರವಾಗುವ
ಅಕ್ಷರಗಳು ಮೃದು. ಉದಾ. ದ, ಧ, ಣ ಇತ್ಯಾದಿಗಳು. ಅಂಗಳ
ಮೇಲ್ಭಾಗಕ್ಕೆ ನಾಲಿಗೆಯು ತಗುಲದೆ ಉಚ್ಚಾರವಾಗುವ
ಅಕ್ಷರಗಳು ಕರ್ಕಶ ವರ್ಣಗಳು. ಉದಾ: ಕ, ಬ, ಟ, ಡ ಇತ್ಯಾದಿಗಳು.
ಕಂಠ ಎಂದರೆ ಗಂಟಲು. ಅದರಲ್ಲಿ ಉಚ್ಚಾರಗೊಳ್ಳುವ
ಅಕ್ಷರಗಳು ಕಂಠ್ಯಗಳು. ತಾಲು ಎಂದರೆ ಅಂಗಳು. ಅಲ್ಲಿ
ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು. ಮೂರ್ಧ ಎಂದರೆ
ನೆತ್ತಿ. ಅಂಗಳಿನ ಮಧ್ಯಭಾಗ. ಅಲ್ಲಿ ಹುಟ್ಟುವ ಅಕ್ಷರಗಳು
ಮೂರ್ಧನ್ಯಗಳು. ದಂತ ಎಂದರೆ ಹಲ್ಲು. ಹಲ್ಲಿನ ಬಳಿ
ಉಚ್ಚಾರವಾಗುವ ಅಕ್ಷರಗಳು ದಂತ್ಯಗಳು. ಓಷ್ಠ ಎಂದರೆ
ತುಟಿ. ತುಟಿಗಳಲ್ಲಿ ಉಚ್ಚಾರವಾಗುವ ಅಕ್ಷರಗಳು ಓಷ್ಠ್ಯಗಳು.
ಈಗ ಅಕ್ಷರಗಳ ಪಟ್ಟಿಯನ್ನು ನೋಡಿ. ಕನ್ನಡದ ಯಾವ ಯಾವ
ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದನ್ನು ಬೇರೆ
ಬೇರೆಯಾಗಿ ಅಲ್ಲಿ ತೋರಿಸಿದೆ. ಇದು ನಿಧಾನವಾಗಿ
ಪ್ರತಿಯೊಂದು ಅಕ್ಷರವನ್ನೂ ಉಚ್ಚರಿಸಿ ಅದು ಹುಟ್ಟುವ
ಸ್ಥಳವನ್ನು ಗುರುತಿಸುವ ಒಂದು ಪ್ರಯೋಗ. ಬೇಗ ಆಗುವ
ಕೆಲಸವಲ್ಲ. ಕೆಲವು ಅಕ್ಷರಗಳು ಎರಡು ಭಾಗಗಳಲ್ಲಿ
ಕಂಡುಬರುತ್ತವೆ. ಅವುಗಳ ಉಚ್ಚಾರಣೆಗೆ ಎರಡು ಅಂಗಗಳ
ಸಹಾಯವೂ ಬೇಕು ಎಂದು ಅರ್ಥ. ನಮ್ಮ ಭಾಷೆಯಲ್ಲಿಲ್ಲದ
ಎಷ್ಟೋ ಧ್ವನಿಗಳು ಪ್ರಪಂಚದ ಇತರ ಭಾಷೆಗಳಲ್ಲಿ ಇವೆ.
ಇವೆಲ್ಲವನ್ನೂ ಗುರುತಿಸುವುದಕ್ಕೆ ಭಾಷಾ ಶಾಸ್ತ್ರಜ್ಞರು The
International Phonetic Alphabet ಎಂಬ ವರ್ಣಮಾಲೆಯನ್ನು
ಸಿದ್ಧಪಡಿಸಿದ್ದಾರೆ. ಅದನ್ನು ಕ್ರಮೇಣ ತಿಳಿದುಕೊಳ್ಳಬಹುದು.
ಕೆಲವು ಪಾರಿಭಾಷಿಕ ಶಬ್ದಗಳ ವಿವರಣೆ:
ಅ. ಊಷ್ಮವರ್ಣ : ಊಷ್ಮ ಎಂದರೆ ಉಷ್ಣ, ಕಾವು ಎಂದರ್ಥ. ಶ. ಷ.
ಸ.—ಈ ಅಕ್ಷರಗಳ ಉಚ್ಚಾರದಲ್ಲಿ ಸ್ವಲ್ಪ ಉಷ್ಣ ನಿರ್ಮಾಣವಿದೆ
ಎಂಬರ್ಥದ ಶಬ್ದ ಇದು. ಇಂಗ್ಲಿಷಿನಲ್ಲಿ ಇಂಥ ವ್ಯಂಜನಗಳನ್ನು
Sibilants ಎಂದು ಕರೆಯುತ್ತಾರೆ. ಇವುಗಳಿಗೆ Whistling
consonants ಎಂದೂ ಹೆಸರಿದೆ. ಅಂಗಳು ಮತ್ತು ನಾಲಗೆಗಳ
ನಡುವೆ ನುಗ್ಗುವ ಗಾಳಿ ಶಿಲ್ಪಿಯ ಹಾಗೆ ಶಬ್ದವನ್ನುಂಟುಮಾಡ
ಬಹುದು—ತುಂಬ ಗಟ್ಟಿಯಾಗಿ ಉಚ್ಚರಿಸಿದರೆ.
ಆ. ಅಂತಸ್ಥವರ್ಣಗಳು : ಯ, ರ, ಲ, ವ ಅಕ್ಷರಗಳಿಗೆ ಈ ಹ³†ಸರಿವೆ.
ಇಂಗ್ಲಿಷಿನಲ್ಲಿ ಇವನ್ನು Semi vovels ಎಂದು ಕರೆಯುತ್ತಾರೆ.
ಇದು ವ್ಯಂಜನವೂ ಸ್ವರವೂ ಆಗಬಹುದಾದ ಗುಣಗಳನ್ನು
ಹೊಂದಿವೆ ಎಂದರ್ಥ.
ಇ. ಧ್ವನಿಪೆಟ್ಟಿಗೆ, Voice Box : ಶ್ವಾಸನಾಳದ ಮೇಲು ತುದಿ ಇದು.
Adams Apple ಎನ್ನುವ ಸಾಮಾನ್ಯ ಹೆಸರು ಇದಕ್ಕೆ ಇದೆ. ಕನ್ನಡದ
ಮೆಟ್ರೆ. ಇದರಲ್ಲಿ ಧ್ವನಿತಂತುಗಳು ಅಥವಾ ಘೋಷ ತಂತುಗಳು
ಇವೆ. Larynx ಎನ್ನುವುದು ಪಾರಿಭಾಷಿಕ ಹೆಸರು. ಇದು ಧ್ವನಿ
ತಂತುಗಳನ್ನು ರಕ್ಷಿಸುತ್ತದೆ. ಹೀಗೆ ಇತರ ವಿವರಗಳನ್ನು ತಿಳಿದು
ಬರಹದಲ್ಲಿ ಇಟ್ಟುಕೊಂಡಿರಬೇಕು.
ಮಹಾಪ್ರಾಣಗಳ ಉಚ್ಚಾರಣೆಯನ್ನು ಮಾಧ್ಯಮಿಕ
ಶಾಲೆಯಿಂದಲೇ ಕಲಿಸಬೇಕು. ಮಹಾಪ್ರಾಣಗಳು ಎಂದರೆ ಖ ಘ
ಛ ಝ ಠ ಢ ಥ ಧ ಫ ಭ ಮತ್ತು ಹ. ಈ ಹನ್ನೊಂದು ಅಕ್ಷರಗಳ
ಜೊತೆಗೆ ಶ ಷ ಸ ಎಂಬ ಅಕ್ಷರಗಳನ್ನು ಉಚ್ಚಾರ
ಮಾಡುವುದನ್ನು ವಿಶೇಷ ಗಮನವಿಟ್ಟು ಹೇಳಿಕೊಡಬೇಕು.
ಅಕ್ಷರಗಳ ಉತ್ಪತ್ತಿ ಸ್ಥಾನಗಳನ್ನು ಚಿತ್ರಗಳ ಮೂಲಕ ವಿವರಿಸಿದ
ಮೇಲೆ ಅಧ್ಯಾಪಕರು ಈ ಅಕ್ಷರಗಳನ್ನು ತಾವೇ ಅನೇಕ ಸಲ
ಉಚ್ಚರಿಸಬೇಕು. ಬಳಿಕ ಮಹಾಪ್ರಾಣಗಳು ಬರುವ,
ಅಲ್ಪಪ್ರಾಣಗಳು ಬರುವ ಎರಡು ಅಥವಾ ಮೂರು ಅಕ್ಷರಗಳ
ಶಬ್ದಗಳನ್ನು ಆರಿಸಿ ಒಂದೊಂದು ಜೊತೆಯನ್ನೂ ಒಂದಾದ
ಮೇಲೆ ಮತ್ತೊಂದರಂತೆ ಒಟ್ಟು ತರಗತಿಯೇ ಉಚ್ಚರಿಸುವಂತೆ
DRILL ಮಾಡಿಸಬೇಕು. ಇದು DRILL ಪಾಠ. DRILL ಎಂದರೆ
ಒಂದೇ ಕಾರ್ಯವನ್ನು ಅನೇಕ ಸಲ ಮಾಡಿಸಿ ತರಬೇತು
ಕೊಡುವುದು ಎಂದು ಅರ್ಥ. ಭರತ-ಬಡವ, ಅಖಾಡ-ವಿಕಾರ, ಧನ-
ದನ, ಗಾಢ-ಬಾಡ ಇತ್ಯಾದಿ ಆರಿಸಬೇಕು.
ಭರತ ಎಂಬುದನ್ನು ತರಗತಿಯ ಅರ್ಧಭಾಗ ಬಲಗಡೆಯವರು
ಉಚ್ಚರಿಸಿದಮೇಲೆ ಬಡವ ಶಬ್ದವನ್ನು ಎಡಗಡೆಯ ಅರ್ಧಭಾಗ
ಉಚ್ಚರಿಸಬೇಕು. ಅಧ್ಯಾಪಕ ಅವರೊಡನೆ ಉಚ್ಚರಿಸಬೇಕು.
ಹೀಗೆ ಮಾಡಿದರೆ, ಪ್ರತಿ ದಿನ ೧೫ ನಿಮಿಷ ಈ DRILL ಮಾಡಿಸಿ ನೋಡಿ;
೧೫ ದಿನಗಳ ಬಳಿಕ ವಿದ್ಯಾರ್ಥಿಗಳು ಹೇಗೆ ಈ ವಿಚಾರದಲ್ಲಿ
ಪರಿಣತರಾಗುತ್ತಾರೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ.
[08/10 7:55 pm] : ಪ್ರಶ್ನೆಗಳು:
೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂ
ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ?
೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?
೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ
ವ್ಯಕ್ತಿ ಯಾರು?
೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ
ರಾಜ್ಯದಲ್ಲಿದೆ?
೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ
ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ?
೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು
ಯಾವುದು?
೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ
ಮಾಡಿದವರು ಯಾರು?
೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ
ಉಪಗ್ರಹ ಯಾವುದು?
೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ
ಉತ್ಪಾದಿಸುವ ಹಣ್ಣು ಯಾವುದು?
೧೦. ರಸಿಕರಂಗ ಇದು ಯಾರ ಕಾವ್ಯ ನಾಮ?
೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ
ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನೀಡಲಾಗಿದೆ?
೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ
ರಾಸಾಯನಿಕ ಯಾವುದು?
೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ
ಇರುವ ಸ್ಥಳ ಯಾವುದು?
೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?
೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು
ನಿರ್ಧರಿಸುವ ಸಂಸ್ಥೆ ಯಾವುದು?
೧೬. ರಾಜಾಜಿ ಎಂದು ಬಿರುದು ಹೊಂದಿದ
ಭಾರತದ ವ್ಯಕ್ತಿ ಯಾರು?
೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು
ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ
ರಾಜ್ಯದಲ್ಲಿದೆ?
೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ
ಯಾವುದು?
೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರು ಯಾರಾಗಿದ್ದರು?
೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿ
ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ
ದೇಶ ಯಾವುದು?
೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?
೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವ
ರಾಜ್ಯದಲ್ಲಿದೆ?
೨೪. ಕಾಫಿಯು ಒಳಗೊಂಡಿರುವ
ಉತ್ತೇಜನಕಾರಕ ಯಾವುದು?
೨೫. ೨೦೧೨ರ ಲಂಡನ್ ಒಲಂಪಿಕ್ಸ್ನಲ್ಲಿ ಹೆಚ್ಚು
ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?
೨೬. ಆಸ್ಟ್ರೇಲಿಯಾದ ರಾಷ್ಟ್ರೀಯ
ಕ್ರೀಡೆ ಯಾವುದು?
೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ
ಸಂಖ್ಯೆ ಎಷ್ಟು?
೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ
ರಾಜ್ಯದಲ್ಲಿದೆ?
೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು?
ಉತ್ತರಗಳು:
೧. ಕೋಲ್ಕತ್ತಾ
೨. ಕುಟುಂಬ ಯೋಜನೆ
೩. ಡಾ|| ರಾಜೇಂದ್ರಪ್ರಸಾದ್
೪. ಮಹಾರಾಷ್ಟ್ರ
೫. ಅಸ್ಸಾಂ
೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ
೩೬೯ಕಿ.ಮೀ ಕೆಳಗೆ)
೭. ವಿಶ್ವಗುರು ಬಸವೇಶ್ವರ
೮. ರಷ್ಯಾದ ಸ್ಪುಟ್ನಿಕ್
೯. ಬಾಳೆಹಣ್ಣು
೧೦. ರಂ.ಶ್ರೀ.ಮುಗಳಿ
೧೧. ಕ್ರಾಂತಿ ಕಲ್ಯಾಣ
೧೨. ಈಥಾನಾಲ್
೧೩. ಸಿಕಂದರಬಾದ್
೧೪. ಅಲ್ಗೆ ಸಸ್ಯಗಳ ಕುರಿತು
೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್
ಇನ್ಸಿಟಿಟ್ಯೂಟ್)
೧೬. ಶ್ರೀ.ಸಿ.ರಾಜಗೋಪಾಲಚಾರಿ
೧೭. ೧೨೦ ಬಾರಿ
೧೮. ಮಧ್ಯಪ್ರದೇಶ
೧೯. ನಾಗ್ಪುರ್
೨೦. ಎಚ್.ವಿ.ನಂಜುಂಡಯ್ಯ
೨೧. ಭಾರತ
೨೨. ಆಸ್ಸಾಂ
೨೩. ತಮಿಳುನಾಡು
೨೪. ಕೆಫೀನ್
೨೫. ಅಮೇರಿಕಾ
೨೬. ಕ್ರಿಕೆಟ್
೨೭. ಏಳು
೨೮. ಗುಜರಾತ್
೨೯. ಜಾರ್ಜ್ ಈಸ್ಟಮನ್ (ಅಮೇರಿಕಾ)
[08/10 7:55 pm] : ಪ್ರಶ್ನೆಗಳು:
೧. ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ
ಏಕೈಕ ಮಹಿಳೆ ಯಾರು?
೨. ಚದುರಂಗ ಇದು ಯಾರ ಕಾವ್ಯ ನಾಮ?
೩. ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೪. ಹೆಲಿಕ್ಟಾಪ್ಟರ್ನ ಸಂಶೋಧಕರು ಯಾರು?
೫. ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ
ಪ್ರಮುಖ ರಾಸಾಯನಿಕ ಯಾವುದು?
೬. ’ಸೆಕೆಂಡ್’ ಗ್ರಂಥದ ಕರ್ತೃ ಯಾರು?
೭. ವಿದ್ಯುತ್ಕಾಂತೀಯ ಪರಿಣಾಮವನ್ನು
ಮೊದಲು ಆವಿಷ್ಕರಿಸಿದವರು ಯಾರು?
೮. ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂ
ಹೆಸರಾದವರು ಯಾರು?
೯. ಗರಿಬಿ ಹಠಾವೋ ಎಂಬ ಘೋಷಣೆಯು ಯಾವ
ಪಂಚವಾರ್ಷಿಕ ಯೋಜನೆಯಲ್ಲಿ ಬರುತ್ತದೆ?
೧೦. ಗ್ರಾಮೊಫೋನ್ ಕಂಡು ಹಿಡಿದವರು ಯಾರು?
೧೧. ಯಾವ ದೇಶವನ್ನು ನೈದಿಲೆಗಳ ನಾಡು ಎಂದು
ಕರೆಯುತ್ತಾರೆ?
೧೨. ೧೯೯೪ರಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಯಾವ
ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೩. ಎಲ್ಲರಂತವನಲ್ಲ ನನ್ನ ಗಂಡ ಕಾವ್ಯದ
ಕರ್ತೃ ಯಾರು?
೧೪. ಬಿ.ಡಿ.ಎ. ನ ವಿಸ್ತೃತ ರೂಪವೇನು?
೧೫. ಟಾವೋ ಧರ್ಮದ ಸಂಸ್ಥಾಪಕ ಯಾರು?
೧೬. ಬೆಕ್ಕಿಗಿರುವ ವೈಜ್ಞಾನಿಕ ಹೆಸರು ಯಾವುದು?
೧೭. ಹಾಕಿ ಎಂಬ ರಾಷ್ಟ್ರೀಯ ಆಟ
ಪ್ರಾರಂಭವಾದ ವರ್ಷ ಯಾವುದು?
೧೮. ಕಾಗದವನ್ನು ಮೊಟ್ಟಮೊದಲ
ಬಾರಿಗೆ ಯಾವ ದೇಶದಲ್ಲಿ ಬಳಸಲಾಯಿತು?
೧೯. ತೆವಳಿಕೊಂಡು ಚಲಿಸುವ ಪ್ರಾಣಿಗಳನ್ನು
ಏನೆಂದು ಕರೆಯುತ್ತಾರೆ?
೨೦. ಬಾಯಲ್ಲಿ ಜೊಲ್ಲು ರಸ ಉತ್ಪತ್ತಿ
ಮಾಡುವ ಗ್ರಂಥಿ ಯಾವುದು?
೨೧. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ
೧೯೭೬ರಲ್ಲಿ ಜಾರಿಗೊಳಿಸಿಲಾದ ಶಾಸನ ಯಾವುದು?
೨೨. ಚಿಕಾಗೋದಲ್ಲಿ ವಿಶ್ವ ಧಾರ್ಮಿಕ ಸಮ್ಮೇಳನ ನಡೆದ
ವರ್ಷ ಯಾವುದು?
೨೩. ೨೦೦೦ನೇ ಸಾಲಿನ ವಿಶ್ವಸುಂದರಿ ಪ್ರಶಸ್ತಿ ಪಡೆದ
ಬೆಂಗಳೂರಿನ ಸುಂದರಿ ಯಾರು?
೨೪. ೧೯೩೦ರಲ್ಲಿ ನಡೆದ ಮೊದಲ ವಿಶ್ವಕಪ್
ಫುಟ್ಬಾಲ್ನ ವಿಜೇತರು ಯಾರು?
೨೫. ೨೦೦೭ರಲ್ಲಿ ಮಾನವ ಜಿತ್ ಸಿಂಗ್ ಸಿಂಧು
ಅವರ ಯಾವ ಕ್ರೀಡೆಗೆ ರಾಜೀವ್ಗಾಂಧಿ
ಖೇಲ್ ರತ್ನ ಪ್ರಶಸ್ತಿ ದೊರೆಯಿತು?
೨೬. ೨೦೧೪ರ ಕಾಮನವೆಲ್ತ್ ಕ್ರೀಡೆಗಳು ನಡೆದ
ಸ್ಥಳ ಯಾವುದು?
೨೭. ಕೀಟಗಳ ಬಗೆಗಿನ ಅಧ್ಯಯನಕ್ಕೆ
ಏನೆಂದು ಕರೆಯುತ್ತಾರೆ?
೨೮. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್
(ಎಐಟಿಯುಸಿ) ಕಾರ್ಮಿಕ ಸಂಘಟನೆ ಸ್ಥಾಪನೆಯಾ ವರ್ಷ
ಯಾವುದು?
೨೯. ಭಾರತದಲ್ಲಿ ಯಾವ ವರ್ಷ ಪ್ರಥಮ
ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ
ನಡೆಯಿತು?
ಉತ್ತರಗಳು:
೧. ಮೇಡಂ ಕ್ಯೂರಿ
೨. ಸುಬ್ರಹ್ಮಣ್ಯ ರಾಜೇ ಅರಸು
೩. ದ್ಯಾವಾ ಪೃಥ್ವಿ
೪. ಇ.ಒಹ್ನಿಚೆನ್ (ಪ್ರಾನ್ಸ್)
೫. ಹೈಡ್ರೋಕ್ಲೋರಿಕ್ ಆಮ್ಲ
೬. ಚರ್ಚಿಲ್
೭. ವೋಲ್ವಾ
೮. ಕಿ.ವ.ಜಗನ್ನಾಥನ್
೯. ೫ನೇಯ
೧೦. ಥಾಮಸ್ – ಆಲ್ವ – ಎಡಿಸನ್
೧೧. ಕೆನಡಾ
೧೨. ವಿಚಾರ ಪ್ರಪಂಚ
೧೩. ಎಚ್.ಎಂ.ಚೆನ್ನಯ್ಯಾ
೧೪. ಬೆಂಗಳೂರು ಡೆವಲಪಮೆಂಟ್ ಅಥಾರಿಟಿ
೧೫. ಲಾವೋ ತ್ಸೊ
೧೬. ಪೆಲಿಸ್ ಡೊಮೆಸ್ಟಿಕ್
೧೭. ೧೮೭೫
೧೮. ಚೀನಾ
೧೯. ಸರಿಸೃಪಗಳು
೨೦. ಲಾಲಾಗ್ರಂಥಿ
೨೧. ಜೀತ ವಿಮುಕ್ತ ಶಾಸನ
೨೨. ೧೮೯೩
೨೩. ಲಾರಾದತ್ತಾ
೨೪. ಉರುಗ್ವೆ
೨೫. ಶೂಟಿರ್
೨೬. ಗ್ಲಾಸ್ಗೋ
೨೭. ಎಂಟಮೊಲಜಿ
೨೮. ೧೯೨೦
೨೯. ೧೯೫೨
[08/10 7:55 pm] : ಪ್ರಶ್ನೆಗಳು:
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ
ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೨. ನ್ಯಾಕೋ (NACO)ನ ವಿಸ್ತೃತ
ರೂಪವೇನು?
೩. ಚಲಿಸುತ್ತಿರುವ ವಾಹನಗಳ ವೇಗವನ್ನು
ಕಂಡು ಹಿಡಿಯಲು ಬಳಸುವ ಸಾಧನ
ಯಾವುದು?
೪. ಧರ್ಮೇಶ್ವರಾ ಇದು ಯಾರ
ಅಂಕಿತನಾಮವಾಗಿದೆ?
೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ
ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೬. ಬರ್ಲಾಂಗ ಇದು ಯಾವ ರಾಜ್ಯದ
ನೃತ್ಯ ಶೈಲಿಯಾಗಿದೆ?
೭. ಧನುರ್ವಾಯು ರೋಗ ಬರಲು
ಕಾರಣವಾಗುವ ಬ್ಯಾಕ್ಟೀರಿಯಾ
ಯಾವುದು?
೮. ಭಾರತದ ರಾಷ್ಟ್ರಪತಿ ಭವನದ
ಉದ್ಯಾನವಕ್ಕೆ ಇರುವ ಹೆಸರು ಯಾವುದು?
೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ
ಕಟ್ಟಲಾಗಿದೆ?
೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್
ಯಾವುದು?
೧೧. ಕರ್ನಾಟಕ ರಾಜ್ಯ ಸಂಸ್ಕೃತ
ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೨. ೨೦೦೭ರಲ್ಲಿ ವಿಶ್ವಗೋ
ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ
ಮಠ ಯಾವುದು?
೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ
ಯಕ್ಷಗಾನ ಕಲಾವಿದ ಯಾರು?
೧೪. ಭಾರತದ ಸಂವಿಧಾನದಲ್ಲಿರುವ
ಮೂಲಭೂತ ಹಕ್ಕುಗಳನ್ನು ಯಾವ ದೇಶದ
ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?
೧೫. ತರಕಾರಿಗಳು ಕೊಳೆತಾಗ
ಬಿಡುಗಡೆಯಾಗುವ ಅನಿಲ ಯಾವುದು?
೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ
ಯಾವುದು?
೧೭. ಧರ್ಮ ಜಲಾಶಯ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
೧೮. ಕರ್ನಾಟಕದಲ್ಲಿ ಮೊಟ್ಟಮೊದಲು
ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ
ಪ್ರಾರಂಭಿಸಲಾಯಿತು?
೧೯. ರಾಜ್ಯಗಳ ಭಾಷಾವರು
ಪುನರ್ವಿಂಗಡೆಯಾದ ವರ್ಷ ಯಾವುದು?
೨೦. ದೂರದರ್ಶಕದ ಸಹಾಯದಿಂದ ಪತ್ತೆ
ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?
೨೧. ಭಾರತದ ಬಾಹ್ಯ ಗೂಡಾಚಾರ ದಳದ
ಹೆಸರೇನು?
೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ
ಮಾರ್ಪಡಿಸುವಾಗ ಬಳಸುವ ಅನಿಲ
ಯಾವುದು?
೨೩. ದೇಶದಲ್ಲಿ ಮೊದಲ ಸಹಕಾರ ಸಂಘ
ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?
೨೪. ಚಿನ್ನ ಇದು ಯಾರ ಕಾವ್ಯನಾಮ?
೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ
ಸಂಗ್ಯಾ ಬಾಳ್ಯಾ ನಾಟಕದ ಕರ್ತೃ
ಯಾರು?
೨೬. ಪೊಚ್ಂಪಾಡೆ ನೀರಾವರಿ ಮತ್ತು
ವಿವಿದೊದ್ದೇಶ ಯೋಜನೆ ಯಾವ ನದಿಗೆ
ಸಂಬಂಧಿಸಿದೆ?
೨೭. ಮಹಾಮಾನವ ಎಂದು ಬಿರುದು ಪಡೆದ
ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ
ಹೆಸರು ಮಾಡಿದವರು?
೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ
ಅತ್ಯವಶ್ಯಕವಾಗಿ ಬೇಕಾಗುವ ಅನಿಲ
ಯಾವುದು?
ಉತ್ತರಗಳು:
೧. ನಾಕು ತಂತಿ
೨. ನ್ಯಾಷನಲ್ ಏಡ್ಸ್ ಕಂಟ್ರೋಲ್
ಆರ್ಗಾನೈಜೇಶನ್
೩. ರಾಡಾರ್ ಗನ್
೪. ಹೆಂಡದ ಮಾರಯ್ಯ
೫. ಡಾ|| ಎಸ್.ರಾಮೇಗೌಡ
೬. ಬಿಹಾರ
೭. ಕ್ಲಾಸ್ಪೀಡಿಯಂ ಟೆಟನೈ
೮. ಮೊಗಲ ಉದ್ಯಾನ್
೯. ಕೃಷ್ಣಾ
೧೦. ವಿಟಮಿನ್ ಸಿ
೧೧. ಬೆಂಗಳೂರು
೧೨. ಚಂದ್ರಾಪುರ ಮಠ
೧೩. ರಾಮ ಗಾಣಿಗ
೧೪. ಅಮೇರಿಕಾ
೧೫. ಜಲಜನಕ ಸಲ್ಫೈಡ್
೧೬. ದಕ್ಷಿಣ ಕನ್ನಡ
೧೭. ಹಾವೇರಿ
೧೮. ಬೆಳಗಾವಿ
೧೯. ೧೯೫೬
೨೦. ಯುರೇನಸ್
೨೧. ಇಂಟಲಿಜೆನ್ಸ್ ಬ್ಯೂರೋ
೨೨. ನೈಟ್ರೋಜನ್
೨೩. ಗದಗ (ಕಣಗಿನಹಾಳ)
೨೪. ಚನ್ನಕ್ಕ ಎಲಿಗಾರ
೨೫. ಡಾ|| ಚಂದ್ರಶೇಖರ ಕಂಬಾರ
೨೬. ಗೋದಾವರಿ
೨೭. ಮದನ್ ಮೋಹನ್ ಮಾಳವೀಯ
೨೮. ಕುದುರೆ ಸವಾರಿ
೨೯. ಇಂಗಾಲದ ಡೈ ಆಕ್ಸೈಡ್
[08/10 7:55 pm] : ೨೦೧೪ರ ಸಾಲಿನ ಪಂಪ
ಪ್ರಶಸ್ತಿ ಯಾರಿಗೆ ನೀಡಲಾಯಿತು?
೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?
೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?
೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ
ಸಂಬಂಧಿಸಿದಾಗಿದೆ?
೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?
೭. ಕೇಳು ಕಿಶೋರಿ ಎಂಬ ವೈದ್ಯಕೀಯ
ಪುಸ್ತಕವನ್ನು ಬರೆದವರು ಯಾರು?
೮. ಭಾರತದ ಮೊದಲ ಖಾಸಗಿ
ವೈದ್ಯಕೀಯ ಕಾಲೇಜು ಯಾವುದು?
೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ
ಎಲ್ಲಿದೆ?
೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ
ಸಂಬಂಧಿಸಿದವರಾಗಿದ್ದಾರೆ?
೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ
ವ್ಯಕ್ತಿ ಯಾರು?
೧೨. ಚಂದ್ರಯಾನ ಮಾಡಿದ ಮೊದಲ ದೇಶ
ಯಾವುದು?
೧೩. ಭಾರತದಲ್ಲಿ ರಚನೆಗೊಂಡ ೨೮ನೇ
ರಾಜ್ಯ ಯಾವುದು?
೧೪. ಬೆನ್ನಹೀನ್ ಯಾವ ದೇಶದವರು?
೧೫. ಪ್ರಥಮ ಭಾರತೀಯ
ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?
೧೬. ಕನಕ ಪುರಂದರ ಪ್ರಶಸ್ತಿ
ಪಡೆದುಕೊಂಡ ಮೊದಲ ಕನ್ನಡಿಗ
ಯಾರು?
೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ
ರಾಜ್ಯಕ್ಕೆ ಸೇರಿದವರು?
೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ
ಸೇರಿದ್ದಾಗಿದೆ?
೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ
ಎಂದರೇನು?
೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ
ಬ್ರಿಟನ್ನಿನ ಪ್ರಧಾನಿ ಯಾರು?
೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ
ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ
ವರ್ಷ ಯಾವುದು?
೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ
ಹೆಸರೇನು?
೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?
೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ
ಪ್ರಸಿದ್ಧನಾದ ದೊರೆ ಯಾರು?
೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ
ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು
ಆರಂಭಿಸಲಾಯಿತು?
೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?
೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ
ನದಿಯ ದಂಡೆಯ ಮೇಲಿದೆ?
೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ
ಗಡಿ ರೇಖೆಯಾಗಿದೆ?
ಉತ್ತರಗಳು:
೧. ಪ್ರೊ.ಜಿ.ವೆಂಕಟಸುಬ್ಬಯ್ಯ
೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
೩. ಉತ್ತರಕನ್ನಡ
೪. ಮಡಿವಾಳ ಮಾಚಯ್ಯ
೫. ಬಿಹಾರ
೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್
೭. ಡಾ||ಅನುಪಮಾ
೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
೯. ಜಿನೀವಾ
೧೦. ಉತ್ತರ ಕನ್ನಡ
೧೧. ಟಿಪ್ಪು ಸುಲ್ತಾನ್
೧೨. ರಷ್ಯಾ
೧೩. ಜಾರ್ಖಂಡ್
೧೪. ಯು.ಎಸ್.ಎ
೧೫. ಇಳಾ ಮಜುಮದಾರ್
೧೬. ತಿಟ್ಟೆ ಅಯ್ಯಂಗಾರ್
೧೭. ಕೇರಳ
೧೮. ಇಂಗ್ಲೆಂಡ್
೧೯. ಮುಕ್ತಿ ಹೊಂದುವುದು
೨೦. ವಿನ್ಸ್ಟನ್ ಚರ್ಚಿಲ್
೨೧. ಉತ್ತರಕನ್ನಡ
೨೨. ೧೯೭೦
೨೩. ಪಂಪಸಾಗರ
೨೪. ನವರತ್ನರಾಂ
೨೫. ೬ನೇ ವಿಕ್ರಮಾದಿತ್ಯ
೨೬. ಮಹಾರಾಷ್ಟ್ರ
೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್
೨೮. ತುಂಗಭದ್ರಾ
೨೯. ರಷ್ಯಾ ಪೊಲೇಂಡ್
[08/10 7:55 pm] : ೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ
ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ
ಯಾರು?
೩. ಮೀರಾಬಾಯಿ ಯಾವ ಸಂತತಿಯ ರಾಣಿ?
೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ
ಹೊಂದಿರುವ ನದಿ ಯಾವುದು?
೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?
೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ
ಜಲಪಾತಗಳು ಯಾವುವು?
೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ
ಯಾವುದು?
೮. ಮೂರು ಹಂತದ ಪಂಚಾಯತ್ ರಾಜ್
ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?
೯. ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು?
೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?
೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ
ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ
ನೃತ್ಯ ಯಾವುದು?
೧೪. ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?
೧೫. ತುಘಲಕ್ ವಂಶದ ಸ್ಥಾಪಕ ಯಾರು?
೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ
ಸ್ಥಳ ಯಾವುದು?
೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ
ಯಾರು?
೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ
ರೂಪವೇನು?
೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ
ವಚನಗಳನ್ನು ಬರೆದಿದ್ದಾರೆ?
೨೦. ನೀರನ್ನು ಶುದ್ಧಿಗೊಳಿಸಲು
ಬಳಸುವ ಅನಿಲ ಯಾವುದು?
೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶ
ಎಲ್ಲಿ ನಡೆಯಿತು?
೨೨. ನಿರಂಜನ ಇದು ಯಾವ ಕಾವ್ಯ ನಾಮ?
೨೩. ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ
ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೨೪. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ
ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು.
ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ
ವಿಧಿ ಯಾವುದು?
೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?
೨೭. ಹದಿಬದೆಯ ಧರ್ಮ ಇದು ಯಾರ ಕೃತಿ?
೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಪಡೆದವರು ಯಾರು?
೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?
ಉತ್ತರಗಳು:
೧. ಮಾನ್ವಿನಿ ಭಾವಾಯಿ
೨. ಭಾರತಿಸುತ
೩. ಚೌಹಾನಾ
೪. ಶರಾವತಿ
೫. ಇಂಗ್ಲೀಷ್
೬. ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ
೭. ೧೫೬೫
೮. ಬಲವಂತ್ರಾಯ್ ಮೆಹ್ತಾ ಸಮಿತಿ
೯. ಕುಸುಮ ಬಾಲೆ
೧೦. ಸುಧಾಮೂರ್ತಿ
೧೧. ಬರ್ಲೈನರ್
೧೨. ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ
೧೩. ಮಣಿಪುರಿ
೧೪. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್
೧೫. ಘೀಯಾ ಸಂದ್ಧಿನ್ ತುಘಲಕ್
೧೬. ರಿಯಾಡಿಜನೈರೋ
೧೭. ಕೃತಿವಾಸ
೧೮. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್
೧೯. ಗುಹೇಶ್ವರಾ
೨೦. ಕ್ಲೋರಿನ್
೨೧. ಬೆಲ್ಗ್ರೇಡ್
೨೨. ಕುಳಕುಂದ ಶಿವರಾಮ
೨೩. ದುಂಡುಮಲ್ಲಿಗೆ
೨೪. ಗೋಪಾಲಕೃಷ್ಣ ಅಡಿಗ
೨೫. ೩೫೧ನೇ ವಿಧಿ
೨೬. ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್
ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ
೨೭. ಸಂಚಿಹೊನ್ನಮ್ಮ
೨೮. ಹುಣಸೂರು ಕೃಷ್ಣಮೂರ್ತಿ
೨೯. ಕುವೆಂಪು
[08/10 7:55 pm] : ಪ್ರಶ್ನೆಗಳು:
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ
ದೊಡ್ಡ ರೈಲು ಸಂಪರ್ಕ
ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ
ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ
ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ
ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ
ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ
ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ
ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ
ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ
ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು
ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ
ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ
ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು
ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ
ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ
ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ
ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ
ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ
ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ
(ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ
ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ
ಸಾಧನ ಯಾವುದು?
ಉತ್ತರಗಳು:
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ
ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್
[08/10 7:55 pm] : ಪ್ರಶ್ನೆಗಳು:
೧. ಪರಮ್ – ೧೦೦೦೦ ಎಂಬ ಸೂಪರ್
ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ
ಯಾವುದು?
೨. ವನಮಹೋತ್ಸವವನ್ನು ಆರಂಭಿಸಿದವರು
ಯಾರು?
೩. ಗಗನಚುಕ್ಕಿ ಮತ್ತು ಭರಚುಕ್ಕಿ
ಜಲಪಾತಗಳು ಕಂಡು ಬರುವ ಜಿಲ್ಲೆ
ಯಾವುದು?
೪. ಗೊರುಚ ಇದು ಯಾರ
ಕಾವ್ಯನಾಮವಾಗಿದೆ?
೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್
ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜು
ಕರ್ನಾಟಕದಲ್ಲಿ ಎಲ್ಲಿದೆ?
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ
ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್
ಕಂಡು ಬರುವ ದೇಶ ಯಾವುದು?
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ
ಅಂಕಿತನಾಮ ವಾಗಿದೆ?
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು
ರಾಜ್ಯ ಸರ್ಕಾರ ಘೋಷಿಸಿದ ವರ್ಷ
ಯಾವುದು?
೧೦. ಪೊಲಾರ್ ಪ್ರಶಸ್ತಿ ವಿಜೇತರಾದ
ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ
ಸಾಧಿಸಿದವರು?
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ
ರಾಜನ ಆಸ್ಥಾನದಲ್ಲಿದ್ದರು?
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ
ಸಂಶೋಧನೆ ಯಾವುದು?
೧೩. ಆಕಾಶವಾಣಿಯಲ್ಲಿ ಮಾತನಾಡಿದ
ಮೊದಲ ಕನ್ನಡಿಗ ಯಾರು?
೧೪. ನಿದ್ರಾ ರೋಗಕ್ಕೆ ಕಾರಣವಾಗುವ
ಸೂಕ್ಷ್ಮ ಜೀವಿ ಯಾವುದು?
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ
ಪ್ರಧಾನ ಮಂತ್ರಿ ಯಾರು?
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ
ಬಳಸುವ ರಂಜಕ ಯಾವುದು?
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ
ಮೊದಲ ಕನ್ನಡಿಗ ಯಾರು?
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ
ಹೆಸರು ಯಾವುದು?
೧೯. ನಾಟಕರತ್ನ ಬಿರುದು ಹೊಂದಿದ
ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ
ಯಾವುದು?
೨೧. ಸಾಪೇಕ್ಷತಾವಾದವನ್ನು ಮಂಡಿಸಿದ
ವಿಜ್ಞಾನಿ ಯಾರು?
೨೨. ಖಾಸಿ ಜನಾಂಗ ಭಾರತದ ಯಾವ
ರಾಜ್ಯಕ್ಕೆ ಸೇರಿದವರು?
೨೩. ಸತ್ಯಾಶ್ರಯ ಎಂದು ಬಿರುದು
ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪. ಭಾರತದ ಮೊದಲ ಉಪಗ್ರಹ
ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ
ಸ್ಥಾಪಿಸಿದ ವರ್ಷ ಯಾವುದು?
೨೫. ನೈಲ್ ನದಿಯ ಕೊಡುಗೆ ಎಂದು ಯಾವ
ದೇಶವನ್ನು ಕರೆಯುತ್ತಾರೆ?
೨೬. ಭಾರತಕ್ಕೆ ಮೊದಲು ಗುಲಾಬಿ
ಗಿಡವನ್ನು ತಂದು ಬೆಳೆಸಿದವರು ಯಾರು?
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ
ಚಾಲುಕ್ಯ ದೊರೆ ಯಾರು?
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ
ಸಂಘವನ್ನು ಸ್ಥಾಪಿಸಿದವರು ಯಾರು?
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ
ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
ಉತ್ತರಗಳು:
೧. ಭಾರತ
೨. ಡಾ|| ಕೆ.ಎಂ.ಮುನಿಶ
೩. ಚಾಮರಾಜನಗರ
೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ಬೆಂಗಳೂರು
೬. ಹಿಮಾಚಲ ಪ್ರದೇಶ
೭. ಕ್ಯೂಬಾ
೮. ಸೊನಲಿಗ ಸಿದ್ಧರಾಮ
೯. ೧೯೬೩
೧೦. ವಾದ್ಯ ಸಂಗೀತ
೧೧. ಶ್ರೀ ಕೃಷ್ಣದೇವರಾಯ
೧೨. ಲೋಲಕ
೧೩. ಕುವೆಂಪು
೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫. ಜವಹರಲಾಲ್ ನೆಹರು
೧೬. ಕೆಂಪು ರಂಜಕ
೧೭. ತಿಟ್ಟೆ ಕೃಷ್ಣಯ್ಯಂಗಾರ್
೧೮. ನೇಫಾ
೧೯. ಗುಬ್ಬಿ ವೀರಣ್ಣ
೨೦. ಅಂಟಾರ್ಟಿಕಾ
೨೧. ಆಲ್ಬರ್ಟ್ ಐನ್ ಸ್ಟೀನ್
೨೨. ಮೇಘಾಲಯ
೨೩. ಕೀರ್ತಿವರ್ಮ
೨೪. ೧೯೭೫
೨೫. ಈಜಿಪ್ಟ್
೨೬. ಬಾಬರ್
೨೭. ವಿಕ್ರಮಾದಿತ್ಯ
೨೮. ಎಂ.ಕೆ.ಗಾಂಧಿ
೨೯. ೧೯೫೭
[08/10 7:55 pm] : ಪ್ರಶ್ನೆಗಳು:
೧. ಕೇಂದ್ರ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨. ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ
ರೂಪವೇನು?
೩. ಕಬುಕಿ ನೃತ್ಯ ಶೈಲಿ ಯಾವ
ದೇಶದ್ದಾಗಿದೆ?
೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ
೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ
ಯಾವುದು?
೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ
ಯಾರ ಆಸ್ಥಾನದಲ್ಲಿದ್ದಳು?
೬. ಭಾರತದ ಮೊಟ್ಟಮೊದಲ
ಮೀನುಗಾರಿಕೆಯ ಕಾಲೇಜನ್ನು
ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?
೭. ಆರ್ಯುವೇದದ ಪಿತಾಮಹ ಯಾರು?
೮. ವಿಜಯನಗರದ ವಾಟರ್ ಲೂ ಎಂದು
ಕರೆಯಲ್ಪಡುವ ಸ್ಥಳ ಯಾವುದು?
೯. ಪೋಪ್ ಅರಮನೆ ವಿಶ್ವದ ಯಾವ
ನಗರದಲ್ಲಿದೆ?
೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟು
ಕೊಠಡಿಗಳಿವೆ?
೧೧. ಕಾಕೆಮನಿ ಇದು ಯಾರ
ಕಾವ್ಯನಾಮವಾಗಿದೆ?
೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರು ಯಾರಾಗಿದ್ದರು?
೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್
ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?
೧೪. ಮುಂಬೈ ಷೇರು ವಿನಿಮಯ
ಸೂಚ್ಯಾಂಕದ ಹೆಸರೇನು?
೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು
ಕುರಿತು ಬರೆದ ಪುಸ್ತಕವಾಗಿದೆ?
೧೬. ರಾಸಾಯನಿಕವಾಗಿ ಶುದ್ಧ ಚಿನ್ನವು
ಎಷ್ಟು ಕ್ಯಾರೆಟ್ದಾಗಿರುತ್ತದೆ?
೧೭. ಟಾಡಾ ಕಾಯಿದೆ ಯಾವುದಕ್ಕೆ
ಸಂಬಂಧಿಸಿದೆ?
೧೮. ಕುಕ್ ಆಂದೋಲನವನ್ನು ಬ್ರಿಟೀಷರ
ವಿರುದ್ಧ ಸಂಘಟಿಸಿದವರು ಯಾರು?
೧೯. ಚೆನ್ನರಾಯ ಇದು ಯಾರ
ಅಂಕಿತನಾಮವಾಗಿದೆ?
೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ
ಚಾಲಿತ ಕಾರು ಯಾವುದು?
೨೧. ಬಡವರ ಊಟಿ ಎಂದು ಕರೆಯುವ
ಕರ್ನಾಟಕದ ಜಿಲ್ಲೆ ಯಾವುದು?
೨೨. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ
ಯಾರು?
೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲ
ಮಹಿಳಾ ಕುಲಪತಿ ಯಾರು?
೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್
’ಡಿ’ ದೊರೆಯುತ್ತದೆ?
೨೫. ವಾಯುಭಾರ ಮಾಪಕದಲ್ಲಿ ಬಳಸುವ
ದ್ರವ ಯಾವುದು?
೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ
ಯಾರು?
೨೭. ಪರಮಾಣುವಿನ ಮೂಲಭೂತ ಕಣಗಳು
ಯಾವುವು?
೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ
ಯಾವುದು?
೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕ
ಹಾಯ್ದು ಹೋಗುವ ನದಿ ಯಾವುದು?
ಉತ್ತರಗಳು:
೧. ಡಾ||ವಿ.ಕೃ.ಗೋಕಾಕ್
೨. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್
ಡೆವಲಪ್ಮೆಂಟ್ ಕಾರ್ಪೋರೇಶನ್
೩. ಜಪಾನ್
೪. ಜೀತ ವಿಮುಕ್ತಿ ಶಾಸನ
೫. ಚಿಕ್ಕದೇವರಾಜ ಒಡೆಯರ್
೬. ಮಂಗಳೂರು
೭. ಚರಕ
೮. ತಾಳಿಕೋಟೆ
೯. ವ್ಯಾಟಿಕನ್ ಸಿಟಿ
೧೦. ೩೪೦ ಕೊಠಡಿಗಳು
೧೧. ಬಿ.ಡಿ.ಸುಬ್ಬಯ್ಯ
೧೨. ಡಾ||ಸಿದ್ಧಲಿಂಗಯ್ಯ
೧೩. ೨೦೦೧
೧೪. ಸೆನ್ಸೆಕ್ಸ್
೧೫. ಪುಟ್ಟಪುರ್ತಿ ಸಾಯಿಬಾಬಾ
೧೬. ೨೪ ಕ್ಯಾರೆಟ್
೧೭. ಟೆರೆರಿಸಮ್
೧೮. ರಾಮ್ಸಿಂಗ್
೧೯. ಏಕಾಂತ ಮಾರಯ್ಯ
೨೦. ರೇವಾ
೨೧. ಹಾಸನ
೨೨. ಅನುರಾಧ ಪಾಲ್
೨೩. ಶ್ರೀಮತಿ ಸಯೀದಾ ಆಖ್ತರ್
೨೪. ಸೂರ್ಯನ ಬೆಳಕು
೨೫. ಪಾದರಸ
೨೬. ಮಹಾವೀರಾಚಾರ್ಯ
೨೭. ನ್ಯೂಟ್ರಾನ್
೨೮. ದ್ರವರೂಪದ ಜಲಜನಕ
೨೯. ಕುಂತೀಪುಳ
[08/10 7:55 pm] : ೧) ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ
ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨) ಸತ್ಯಕಾಮ ಇದು ಯಾರ ಕಾವ್ಯನಾಮ ?
೩) ಬಾ೦ಗ್ಲಾದೇಶದ ರಾಷ್ಟ್ರೀಯ
ಕ್ರೀಡೆ ಯಾವುದು ?
೪) ಕೃಷ್ಣನದಿಯ ಉಗಮಸ್ಥಳ ಯಾವುದು ?
೫) ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು
ಕ೦ಡುಹಿಡಿದವರು ಯಾರು ?
೬) ಐಎಸ್ಐ (ಇ೦ಡಿಯನ್ ಸ್ಟಾಂಡರ್ಡ್
ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ
ಯಾವುದು?
೭) ನೀರಿನಲ್ಲಿ ಆಮ್ಲಜನಕವವನ್ನು
ಹೀರಿಕೊಳ್ಳಲು ಮೀನಿಗೆ
ಸಹಾಯ ಮಾಡುವ ಅ೦ಗ ಯಾವುದು ?
೮) ಇ೦ದಿರಾ ಪಾಯಿ೦ಟ್ಗಿರುವ ಮತ್ತೊ೦ದು
ಹೆಸರೇನು ?
೯) ಲೋಮನಾಳಗಳು ಮಾನವನ ದೇಹದ ಯಾವ ಅ೦ಗದಲ್ಲಿ
ಕ೦ಡುಬರುತ್ತವೆ ?
೧೦) ಎಷ್ಟನೇಯ ಪ೦ಚವಾರ್ಷಿಕ ಯೋಜನೆಯ
ಅವಧಿಯಲ್ಲಿ ಕರ್ನಾಟಕದ ತು೦ಗಭದ್ರಾ
ಆಣೆಕಟ್ಟನ್ನು ನಿರ್ಮಿಸಲಾಯಿತು?
೧೧) ಪ್ಯಾರಿಸ್ನ ಐಫೆಲ್ ಟವರನ್ನು
ನಿರ್ಮಿಸಿದವರು ಯಾರು?
೧೨) ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ ?
೧೩) ಪ್ರಸಿದ್ಧವಾದ ಕಾಮಾಕ್ಯ ದೇವಾಲಯ
ಎಲ್ಲಿದೆ ?
೧೪) ಪ್ರಥಮ ಸಾರ್ವಜನಿಕ ಅಂಚೆ
ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
೧೫) ಅತಿದೊಡ್ಡ ಥರ್ಮಲ್ ವಿದ್ಯುಚ್ಥಕ್ತಿ
ಕೇ೦ದ್ರ ಕರ್ನಾಟಕದಲ್ಲಿ ಎಲ್ಲಿದೆ ?
೧೬) ಪುಲಿಟ್ಜರ್ ಪ್ರಶಸ್ತಿ ಯಾದ ಕ್ಷೇತ್ರದಲ್ಲಿ
ಸಾಧನೆ ಮಾಡಿದವರಿಗೆ
ನೀಡಲಾಗುತ್ತದೆ ?
೧೭) ಜೇಮ್ಸಬಾ೦ಡ್ ಕಾದ೦ಬರಿಗಳ ಮೂಲಕ ಜನಪ್ರಿಯರಾದ
ಲೇಖಕರು ಯಾರು ?
೧೮) ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ
ಸ್ಧಾಪನೆಗೆ ಅವಕಾಶವಾದ ವರ್ಷ ಯಾವುದು ?
೧೯) ಭಾರತದಲ್ಲಿ ಶಾಖೆ ತೆರೆದ
ಪ್ರಥಮ ವಿದೇಶಿ ಬ್ಯಾ೦ಕ್ ಯಾವುದು ?
೨೦) ಕೊಡಗಿಗೆ ಇ೦ಗ್ಲೀಷ್ನಲ್ಲಿ
ಏನೆ೦ದು ಕರೆಯುತ್ತಾರೆ ?
೨೧) ನವೋದಯ ಶಾಲೆಗಳು ಜಾರಿಗೆ ಬ೦ದ
ವರ್ಷ ಯಾವುದು ?
೨೨) ರಾವಣನು ಸೀತೆಯನ್ನು
ಅಪಹರಿಕೊ೦ಡು ಹೋಗಲು ಉಪಯೋಗಿಸಿದ ಹಾರುವ
ರಥದ ಹೆಸರೇನು?
೨೩) ಹುಚ್ಚುನಾಯಿ ಕಡಿತದಿ೦ದ ಉ೦ಟಾಗುವ ರೋಗ
ಯಾವುದು ?
೨೪) ಮೊಟ್ಟಮೊದಲಿಗೆ
ಪ್ಯಾರಾಚೂಟ್ ಬಳಸಿದವರು ಯಾರು ?
೨೫) ನಟ ಉದಯಕುಮಾರ ಯಾವ ಚಿತ್ರದ ಮೂಲಕ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ
ಮಾಡಿದರು?
೨೬) ಸೆನ್ಸಾರ್ ಬೋರ್ಡ್ ನೀಡುವ "ಯು"
ಸರ್ಟಿಪಿಕೇಟ್ ನಲ್ಲಿಯ "ಯು" ಅಕ್ಷರ ಏನನ್ನು
ಸೂಚಿಸುತ್ತದೆ?
೨೭) ಅತೀ ದೀರ್ಘಕಾಲ ಗರ್ಭಧರಿಸುವ
ಪ್ರಾಣಿ ಯಾವುದು ?
೨೮) ೨೦೧೪ ರ ಕಾಮನ್ ವೆಲ್ತ್ ಕ್ರೀಡಾ
ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ
ಕ್ರೀಡೆಗೆ ಚಿನ್ನದ ಪದಕ
ದೊರೆಯಿತು ?
೨೯) ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್
ಮ್ಯೂಸಿಯ೦ ಇರುವ ಕರ್ನಾಟಕದ ಸ್ಥಳ ಯಾವುದು ?
ಉತ್ತರಗಳು :-
೧) ಮಬ್ಬಿನಹಾಗೆ ಕಣಿವೆ ವಾಸಿ
೨) ಅನ೦ತಕೃಷ್ಣ ಶಹಾಪುರ
೩) ಕಬಡ್ಡಿ
೪) ಮಹಾರಾಷ್ಟ್ರದ ಮಹಾಬಳೇಶ್ವರ
೫) ಡಾರ್ವಿನ್
೬) ೧೯೪೭
೭) ಕಿವಿರು
೮) ಪಿಗ್ಮೇಲಿಯನ್ ಪಾಯಿ೦ಟ್
೯) ಶ್ವಾಸಕೋಶ
೧೦) ಒ೦ದನೇಯ ಪ೦ಚವಾರ್ಷಿಕ ಯೋಜನೆ
೧೧) ನೈಜೇರಿಯಾ
೧೨) ಅಲೆಗ್ಸಾ೦ಡರ್ ಗುಸ್ತೇನ್ ಐಫೆಲ್
೧೩) ಗುವಾಹಟಿ (ಅಸ್ಸಾಂ)
೧೪) ೧೮೩೭
೧೫) ರಾಯಚೂರು
೧೬) ವಿಜ್ಞಾನ
೧೭) ಐಯಾನ್ ಪ್ಲೇಮಿ೦ಗ್
೧೮) ೧೯೮೪
೧೯) ಚಾರ್ಟ್ರ್ಡ್ ಬ್ಯಾ೦ಕ್
೨೦) ಕೂರ್ಗ
೨೧)೧೯೮೬
೨೨) ಪುಷ್ಜಕ
೨೩) ರೇಬಿಸ್
೨೪) ಜೆ.ಪಿ.ಬ್ಲಾ೦ಚಾಡ್ (೧೯೭೩)
೨೫) ಭಾಗ್ಯೋದಯ (೧೯೫೬)
೨೬)ಅನರಿಸ್ಟಿಕ್ಟಡ್ ಪಬ್ಲಿಕ್ ಎಗ್ಜಿಬಿಷನ್ (ನಿರಾತಂಕ
ಪ್ರದರ್ಶನ )
೨೭) ಆನೆ
೨೮)ಡಿಸ್ಕನ್ ಥ್ರೋ
೨೯) ಬೆ೦ಗಳೂರು
Saturday, 8 October 2016
Kannada gk 08/10/2016
Labels:
GK
Subscribe to:
Post Comments (Atom)
No comments:
Post a Comment