[09/10 12:01 pm] : ಭೂಗೋಳ
ಭೂಗೋಳ
ಸಂಗಮ ಸ್ಥಳ :- ಎರಡು ನದಿಗಳು ಸೇರುವ ಸ್ಥಳ
ಬೆಟ್ಟ :- ನೆಲ ಮಟ್ಟಕ್ಕಿಂತ ಅತಿ ಎತ್ತರವಾದ ಭೂ ಭಾಗ
ಪ್ರಸ್ಥಭೂಮಿ :- ಸಮುದ್ರ ಮಟ್ಟಕ್ಕಿಂತ ಕನಿಷ್ಠ ಸಾವಿರ ಅಡಿ
ಎತ್ತರವಿರುವ ಪ್ರದೇಶ
ಕಣಿವೆ :- ಎರಡೂ ಬೆಟ್ಟಗಳ ನಡುವಿನ ಕಿರಿದಾದ ಓಣಿಯಂತಹ ಪ್ರದೇಶ
ಜಲಸಂಧಿ :- ಎರಡು ಸಾಗರಗಳನ್ನು ಸೇರಿಸುವ ಅಥವಾ ಎರಡು
ವಿಶಾಲ ಭೂ ಭಾಗಗಳನ್ನು ಬೇರ್ಪಡಿಸುವ ಜಲ ವಿಭಾಗ
ಮರುಭೂಮಿ :- ಮರಳಿನ ಹರಳಿನಿಂದ ಕೂಡಿದ ಪ್ರದೇಶ
ಓಯಸಿಸ್ :- ಮರುಭೂಮಿಯಲ್ಲಿ ನೀರು ಕಂಡು ಬರುವ ಸ್ಥಾನ
ಕರಾವಳಿ :- ಸಮುದ್ರ ತೀರ ಪ್ರದೇಶ
ಮೈದಾನ :- ವಿಶಾಲವಾದ ಸಮತಟ್ಟಾದ ಪ್ರದೇಶ
ಮಾರುತ :- ಭೂಮಿಯ ಮೇಲ್ಮೈಯಲ್ಲಿ ಸಮತಲದಲ್ಲಿ ಚಲಿಸುವ
ಗಾಳಿ
ಭೂಶಿರ :- ಭೂಮಿಯ ಒಂದು ಭಾಗ ಸಮುದ್ರದೊಳಕ್ಕೆ ಚಾಚಿಸುವ
ತುದಿಯ ಭಾಗ
ಪ್ರಸ್ಥಭೂಮಿ :- ವಿಸ್ತಾರವಾದ ಸಮತಟ್ಟಾದ ಮತ್ತು ಎತ್ತರವಾದ
ಪ್ರದೇಶ
ಅಕ್ಷ :- ಗ್ರಹಗಳು ಅದರ ಮೇಲೆ ಸುತ್ತವ ಊಹಾರೇಖೆ
ಪರ್ವತ :- ತಪ್ಪಲು ಪ್ರದೇಶದಿಂದ ಸುಮಾರು 900
ಮೀಟರುಗಳಿಗೂ ಎತ್ತರದಲ್ಲಿರುವ ಭೂ ರಾಶಿ
ಮ್ಯಾಗ್ಮಾ :- ಭೂಗರ್ಭದಲ್ಲಿನ ಶಿಲಾಪಾಕ
ಲಾವಾ :- ಭೂಮಿಯ ಮೇಲ್ಮೈನ ಶಿಲಾರಸ
ಅಳಿವೆ :- ನದಿಯು ಸಮುದ್ರಕ್ಕೆ ಸೇರುವ ಜಾಗದಲ್ಲಿರುವ ಆಳವಾದ
ಜಲಭಾಗ
[09/10 12:02 pm] : ಸಾಮಾನ್ಯ ಜ್ಞಾನ
1) ಉಪ್ಪಿನ ಸತ್ಯಾಗ್ರಹದ ದಟ್ಟ ಚಿತ್ರಣವನ್ನು ಕೊಡುವ
"ಭಾರತದ ಬೃಹತ್ ಬೇಲಿ" ಎಂಬ ಪುಸ್ತಕವನ್ನು ಬರೆದ ಅನಿವಾಸಿ
ಭಾರತೀಯ ಯಾರು?
1. ಡಾ. ವಿ. ರಾಮಯ್ಯ
2. ಭಾಗವತ್ ಚಂದ್ರಶೇಖರ್
3. ಡಾ. ಎಚ್. ಕೆ. ಚಂದ್ರಶೇಖರ ★
4. ಕೆ.ಎಫ್. ಎಲ್ವಿರಾ ರಿಯೋ
●■●■●■●■●■●■●■●■●■●■●■
2) ರಾಷ್ಟ್ರಪತಿಯೆಂದರೆ 'ಎಮರ್ಜೆನ್ಸಿ ಲೈಟ್' ಇದ್ದಂತೆ. 'ಪವರ್'
ಹೋದ ತಕ್ಷಣ ತನ್ನಿಂತಾನೇ ಉರಿಯಬೇಕು. ನಂತರ
ತನ್ನಿಂತಾನೇ ಆಫ್ ಆಗಬೇಕು ಎಂದು ಹೇಳಿದವರು ಯಾರು ?
1. ಡಾ. ರಾಜೇಂದ್ರ ಪ್ರಸಾದ್
2. ಆರ್. ವೆಂಕಟರಾಮನ್ ★
3. ಕೆ.ಆರ್. ನಾರಾಯಣನ್
4. ಎ.ಪಿ.ಜೆ. ಅಬ್ದುಲ್ ಕಲಾಂ
●■●■●■●■●■●■●■●■●■●■●■
3) ವಿಮಾನವೊಂದು ಮೊದಲಬಾರಿಗೆ ಖಾದ್ಯ ತೈಲ ಬಳಸಿ
ಬರ್ಮಿಂಗ್ ಹ್ಯಾಂನಿಂದ ಲ್ಯಾಂಚಾರೋಟ್ ಗೆ ಸಂಚರಿಸಿ
ಇತಿಹಾಸ ನಿರ್ಮಿಸಿತು ಅಂದ ಹಾಗೆ ಈ ವಿಮಾನವು ಕೆಳಗಿನವುಗಳಲ್ಲಿ
ಯಾವುದಕ್ಕೆ ಸಂಬಂಧಿಸಿದ್ದು ?
1. ಬ್ರಿಟನ್ ನ ವಾಣಿಜ್ಯ ವಿಮಾನ ★
2. ಬ್ರಿಟನ್ ನ ಸೇನಾ ವಿಮಾನ
3. ಬ್ರಿಟನ್ ನ ಖಾಸಗಿ ವಿಮಾನ
4. ಬ್ರಿಟನ್ ನ ಸರ್ಕಾರಿ ವಿಮಾನ
●■●■●■●■●■●■●■●■●■●■●■
4) ಕೆಳಗಿನವುಗಳಲ್ಲಿ ಯಾವುದನ್ನು 'ದಿ ಲಾಸ್ಟ್ ಸಿಟಿ ಆಫ್ ದಿ
ಇನ್ಕಾಸ್' ಎಂದು ಕರೆಯುವರು ?
1. ಕೊಲೋಸಿಯಂ
2. ಕ್ರಿಸ್ತ ದಿ ರೆಡಿಮೀರ್
3. ಪೆರು
4. ಮಾಚು ಪಿಚ್ಚು ★
●■●■●■●■●■●■●■●■●■●■●■
5) ಕೆಳಗಿನ ಯಾವ ನಾಗರೀಕತೆ ಜನರು ಮೂಷಿಕಗಳನ್ನು
ಆರಾಧಿಸುತ್ತಿದ್ದರು?
1.ಈಜಿಪ್ಟ್ ★
2. ಇಂಕಾ
3. ಮೆಸಪಟೋಮಿಯಾ
4. ಮೇಲಿನ ಎಲ್ಲಾ
●■●■●■●■●■●■●■●■●■●■●■
6) ಕೆಳಗಿನವುಗಳಲ್ಲಿ ಅಲೆಗ್ಸಾಂಡರ್ ನಿಂದ ನಿರ್ಮಿಸಲ್ಪಡದ ನಗರ
ಯಾವುದು ?
1. ಕಂದಹಾರ್
2. ಬೆಗ್ರಾಮ್
3. ಕೊರಾಟಿಸ್
4. ಜದ್ರೋಸಿಯಾ ★
●■●■●■●■●■●■●■●■●■●■●■
7) ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ
ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು
ಎರವಲು ಪಡೆದುಕೊಂಡಿದೆ ?
1. ಐರ್ಲೆಂಡ್ ಸಂವಿಧಾನ ★
2. ಕೆನಡಾ ಸಂವಿಧಾನ
3. ಆಸ್ಟ್ರೇಲಿಯಾ ಸಂವಿಧಾನ
4. ಅಮೇರಿಕಾ ಸಂವಿಧಾನ
●■●■●■●■●■●■●■●■●■●■●■
8) ಕೆಳಗೆ ಕೊಟ್ಟಿರುವ ವಿವರಣೆಗಳನ್ನು ಗಮನಿಸಿ ಸರಿಯುತ್ತರ ಆಯ್ಕೆ
ಮಾಡಿ ?
1. ಎಲ್ಲ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ
ತಳದಲ್ಲಿದ್ದವು
2. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರ
3. ಯಾವ ಜಲಜ ಶಿಲೆಯೂ ಯಾವ ಕಾಲದಲ್ಲೂ ಸಮುದ್ರದ
ತಳದಲ್ಲಿರಲಿಲ್ಲ
4. ಎಲ್ಲಾ ಅಗ್ನಿ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ
ತಳದಲ್ಲಿದ್ದವು
1. 1 ಮಾತ್ರ ಸರಿ ★
2. 2 ಮಾತ್ರ ಸರಿ
3. 3&4 ಸರಿ
4. 3 ಮಾತ್ರ ಸರಿ
●■●■●■●■●■●■●■●■●■●■●■
9) "ಅಂತರರಾಷ್ಟ್ರೀಯ ಸಾಗರಿಕ ಸಲಹಾ ಸಂಸ್ಥೆ"ಯು ಕೆಳಗಿನ
ಯಾವ ಪಟ್ಟಣದಲ್ಲಿದೆ?
1. ಲಿಸ್ಬನ್
2. ರೋಮ್
3. ಜಿನೇವಾ
4. ಲಂಡನ್ ★
●■●■●■●■●■●■●■●■●■●■●■
10) ರಕ್ತದ ಒತ್ತಡವು ಕೆಳಗಿನವುಗಳಲ್ಲಿ ಯಾವುದರಲ್ಲಿ
ಹೆಚ್ಚಾಗಿರುತ್ತದೆ ?
1. ಮಲಿನ ರಕ್ತನಾಳ
2. ಶುದ್ಧ ರಕ್ತನಾಳ ★
3. ಲೋಮನಾಳ
4. ಯಾವುದೂ ಅಲ್ಲ
●■●■●■●■●■●■●■●■●■●■●■
11) ಕ್ರೋಮೋಸೋಮ್ ನ ಸಂಯೋಜನೆ ಮಾನವರಲ್ಲಿ
ಎಷ್ಟಿರುತ್ತದೆ ?
1. 44AA + XY ★
2. 44AA + XX
3. 22AA + X
4. 22AA + Y
●■●■●■●■●■●■●■●■●■●■●■
12) ಓಲಿಂಪಿಕ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 302
ಸ್ಪರ್ಧೆಗಳನ್ನು ಎಲ್ಲಿ ನಡೆದ ಕ್ರೀಡಾ ಕೂಟದಲ್ಲಿ
ಹಮ್ಮಿಕೊಳ್ಳಲಾಗಿತ್ತು ?
1. 2000- ಸಿಡ್ನಿ
2. 2004- ಅಥೆನ್ಸ್
3. 2008- ಬೀಜಿಂಗ್ ★
4. 2012-ಲಂಡನ್★
●■●■●■●■●■●■●■●■●■●■●■
13) ತ್ರಿಶೂಲದ ಶಿರದ ರಾಷ್ಟ್ರೀಯ ಚಿನ್ಹೆಯನ್ನು ಹೊಂದಿರುವ
ದೇಶ ಯಾವುದು ?
1. ಬಾರ್ಬಡಸ್ ★
2. ಮಂಗೋಲಿಯಾ
3. ಪಾಪುವ ನ್ಯೂಗಿನಿ
4. ಲೆಬನಾನ್
●■●■●■●■●■●■●■●■●■●■●■
14) ಕ್ವಿಜ್ ಎಂಬ ಶಬ್ಧವನ್ನು ಮೊದಲಿಗೆ ಗುರ್ತಿಸಿದವರು
ಯಾರು ?
1. ಜಿಮ್ ಢಾಲೀ ★
2. ನೀಲ್ಸ್ ಬೋರ್
3. ಹಾರ್ವರ್ಡ್ ಜಾಕೋಬ್ಸನ್
4. ಎ. ಪಿಸುರಿಡ್ಸ್
●■●■●■●■●■●■●■●■●■●■●■
15) ಮೊದಲು ಹಳ್ಳಿಗಾಡು ಪ್ರದೇಶದಲ್ಲಿ ಆಡುತ್ತಿದ್ದ
ಕಬಡ್ಡಿಯ ಪದ್ಧತಿಗಳಾವುವು ?
1. ಸಂಜೀವಿನಿ ★
2. ಗಾಮಿನಿ ★
3. ಅಮರ ★
4. ಚೆಡುಗುಡು ★
●■●■●■●■●■●■●■●■●■●■●■
16) ದಿನದ ಒಂದು ನಿಗದಿತ ವೇಳೆಯಲ್ಲಿ 80 ಮೀ ಉದ್ದವಿರುವ
ಮರದ ನೆರಳು 200 ಮೀ ಇದೆ. ಅದೇ ವೇಳೆಯಲ್ಲಿ 32 ಮೀ
ಉದ್ದದ ಕಂಬದ ನೆರಳೆಷ್ಟು?
1. 70 ಮೀ
2. 80 ಮೀ ★
3. 50 ಮೀ
4. 60 ಮೀ
●■●■●■●■●■●■●■●■●■●■●■
17) ಕೆಳಗಿನ ಸಾಂಕೇತಿಕ ಭಾಷೆಯನ್ನು ಓದಿ ಅರ್ಥೈಸಿಕೊಂಡು
ಉತ್ತರ ನೀಡಿ.
Que cui heer means boy is good
lai que mea means Meena is fair
Ruo lev mea means All are fair
Si hai cui means Dog is good
ಇದರ ಪ್ರಕಾರ BOY ಅನ್ನು ಯಾವ ಪದ ಸಂಕೇತಿಸುತ್ತದೆ
1. MEA
2. QUE
3. HEER ★
4. CUI
●■●■●■●■●■●■●■●■●■●■●■
18) ಕೆಳಗಿನ ಸರಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಗುರ್ತಿಸಿ ...
8,27,125,343,1381
1. 27
2. 8
3. 343
4. 1381 ★
●■●■●■●■●■●■●■●■●■●■●■
[09/10 12:03 pm] : ಶಾತವಾಹನರು
ಶಾತವಾಹನರು
ಶಾತವಾಹನರು ನೂತನ ಶಾಲಿವಾಹನ ಶಕೆ ಅಥವಾ ಶಕವರ್ಷ
(ಕ್ರಿ.ಶ. 78) ವನ್ನು ಆರಂಭಿಸಿದರು.
ಮೊಟ್ಟಮೊದಲ ದಕ್ಷಿಣ ಭಾರತದ ರಾಜಮನೆತನ.
ಪ್ರಾಕೃತ ಭಾಷೆಯ ಹಾಲನ "ಗಥಾಸಪ್ತಸತಿ" ಆಧಾರ ಗ್ರಂಥ.
ಶಾತವಾಹನರು ಆಂಧ್ರದವರು ಎಂದವರು ರಾಪ್ಸನ್,
ಡಾ.ಸ್ಮಿತ್, ಆರ್.ಜಿ. ಭಂಡಾರ್ಕರ್.
ಅಶೋಕನ 12ನೇ ಶಾಸನದಲ್ಲಿ ಶಾತವಾಹನರನ್ನು
"ಆಂಧ್ರಭೃತ್ಯ"ರೆಂದು ಕರೆಯಲಾಗಿದೆ.
ಶಾತವಾಹನರ ರಾಜಧಾನಿ ಗೋದಾವರಿ ನದಿತೀರದಲ್ಲಿನ
ಪೈಠಾಣ (ಪ್ರತಿಷ್ಠಾನ).
ಶಾತವಾಹನ ವಂಶದ ಸ್ಥಾಪಕ ಸಿಮುಖ.
ಇವನ ಉತ್ತರಾಧಿಕಾರಿ ಕನ್ಹ ( ಕೃಷ್ಣ) . ಇವನು ನಾಸಿಕದಲ್ಲಿ
ಬೌದ್ಧ ಗುಹಾಲಯವೊಂದನ್ನು ನಿರ್ಮಿಸಿದನು.
ಇವನ ನಂತರ ಒಂದನೇ ಶಾತಕರ್ಣಿ ಅಧಿಕಾರ
ವಹಿಸಿಕೊಂಡನು. ಇವನು ವಿಂಧ್ಯ ಪರ್ವತದಿಂದ
ಕೊಂಕಣದವರೆಗೂ ಸಾಮ್ರಾಜ್ಯ ವಿಸ್ತರಿಸಿದ ಕುರುಹುಗಾಗಿ
"ಅಶ್ವಮೇಧಯಾಗ" ವನ್ನು ಆಚರಿಸಿದ.
ಒಂದನೇ ಶಾತಕರ್ಣಿ "ದಕ್ಷಿಣಪಥಾಪಥ ಸಾರ್ವಭೌಮ" ಎಂಬ
ಬಿರುದನ್ನು ಹೊಂದಿದ್ದನು.
ಇವನ ಪತ್ನಿ ನಾಗನಿಕ "ನಾನಾಘಟ್" ನ ಗುಹಾಂತರ
ದೇವಾಲಯದಲ್ಲಿ ಒಂದು ಶಾಸನವನ್ನು ಕೆತ್ತಿಸಿದ್ದಾಳೆ.
ಶಾತವಾಹನರ 17 ನೇ ಅರಸ ಹಾಲ.
ಗೌತಮೀಪುತ್ರ ಶಾತಕರ್ಣಿ (ಕ್ರಿ.ಶ70-95) ಶಾತವಾಹನ
ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾದವನು.
ಇವನು ಶಕರ ನಹಪಾನನ್ನು ಸೋಲಿಸಿದನು. ಇವನ ತಾಯಿ
ಗೌತಮಿ ಬಾಲಶ್ರೀ ಹೊರಡಿಸಿರುವ ನಾಸಿಕ ಶಾಸನದಲ್ಲಿ "ತ್ರೈ
ಸಮುದ್ರತೋಯ ಪಿತಾವಾಹನ" ಎಂಬ ಬಿರುದು
ಹೊಂದಿದ್ದನೆಂದು ತಿಳಿಸಲಾಗಿದೆ.
"ಸುವರ್ಣ", "ದೀನಾರ" ಎಂಬುವು ಚಿನ್ನದ
ನಾಣ್ಯಗಳಾಗಿದ್ದವು.
" ಕುಷಣ" ಎಂಬ ಬೆಳ್ಳಿಯ ನಾಣ್ಯ ಜಾರಿಯಲ್ಲಿತ್ತು.
ಪ್ರಥಮ ಬಾರಿಗೆ ಬ್ರಾಹ್ಮಣರಿಗೆ ಭೂದಾನ ಮಾಡಿದ
ರಾಜವಂಶ ಶಾತವಾಹನರು.
ಆಧುನಿಕ ಬ್ಯಾಂಕುಗಳಂತೆ ಕಾರ್ಯ ನಿರ್ವಹಿಸುತ್ತಿದ್ದ
ಶಾತವಾಹನರ ಸಂಸ್ಥೆ "ನಿಷ್ಕಾನಿಧಿ".
ಇವರು ಶೈವ ಮತ್ತು ವೈಷ್ಣವ ಮತದ ಆರಾಧಕರಾಗಿದ್ದರು.
"ಕಾರ್ಲೆಯ ಮಹಾಚೈತ್ಯ", "ಕನ್ಹೇರಿಯ
ಗುಹಾಸಮುಚ್ಛಯ", ಅಜಂತಾ, ನಾಸಿಕ್, ಮತ್ತು ಸನ್ನತಿ ಬೌದ್ಧ
ಧರ್ಮದ ಕೇಂದ್ರಗಳಾಗಿದ್ದವು.
ವೃತ್ತಿಗಳಲ್ಲಿ "ನಿಗಮ" / "ನಿಕಾಯ" ಎಂಬ ಶ್ರೇಣಿಗಳಿದ್ದವು.
ಇವರ ರಾಜಧಾನಿ ಬಟ್ಟೆ ಕೈಗಾರಿಕೆಗೆ ಪ್ರಸಿದ್ಧವಾಗಿತ್ತು.
"ಸರ್ವವರ್ಮ"ನು ಸಂಸ್ಕೃತದಲ್ಲಿ "ಕಾತಂತ್ರ ವ್ಯಾಕರಣ"
ಬರೆದನು.
ಕಾರ್ಲೆಯ ಮಹಾಚೈತ್ಯವನ್ನು ಬನವಾಸಿಯ "ಭೂತ
ಪಾಲಶೆಟ್ಟಿ" ಕಟ್ಟಿಸಿದನು.
ಆಂಧ್ರಪ್ರದೇಶದ ಗೋಲಿ, ಜಗ್ಗಯ್ಯಪೇಟ,
ಭಟ್ಟಿಪ್ರೋಲು, ಘಂಟಸಾಲ, ಅಮರಾವತಿಗಳಲ್ಲಿ ಇವರ ಕಾಲದ
ಸ್ಥೂಪಗಳಿದ್ದವು.
ಹಾಲನ ಕೃತಿಯಾದ "ಗಾಥಾ ಸಪ್ತ ಶತಿ" ಶಾತವಾಹನರ ಕಾಲದ
ಜನ ಜೀವನವನ್ನು ತಿಳಿಸಿಕೊಡುತ್ತದೆ.
ಗುಣಾಡ್ಯನ "ಬೃಹತ್ಕಾಥಾ" ಕೃತಿಯು ಇವರ ಬಗ್ಗೆ
ಮತ್ತಷ್ಟು ಮಾಹಿತಿ ನೀಡುತ್ತದೆ.
ಹಿರೇ ಹಡಗಲಿಯ ಶಾಸನದ ಪ್ರಕಾರ 'ಶತಾಹನಿ ರಟ್ಟಿ' ಅಥವಾ
ಇಂದಿನ ಬಳ್ಳಾರಿ ಜಿಲ್ಲೆ ಶಾತವಾಹನರ ಮೂಲ ಎಂದು ತಿಳಿದು
ಬರುತ್ತದೆ.
ಇವರ ಸಮಯದಲ್ಲಿ ಇಂದ್ರ, ಸಂಕರ್ಷಣ ವಾಸುದೇವ,
ಕುಬೇರ, ವರುಣ, ಯಮ, ಮುಂತಾದ ದೇವರುಗಳನ್ನು
ಆರಾದಿಸುತ್ತಿದ್ದರೆಂದು ತಿಳಿದಿದೆ.
ರಾಜ್ಯದ ಪ್ರಮುಖ ಆಡಳಿತಾಧಿಕಾರಿಯಾಗಿ
"ಭಾಂಡಾಗಾರಿಕ"(ಉಗ್ರಾಣಾಧಿಕಾರಿ) , "ಹೇರಣಿಕ" ( ಹಣಕಾಸು
ಅಧಿಕಾರಿ) , "ಲೇಖಕ" ( ರಾಜ್ಯ ಮುಖ್ಯ ಕಾರ್ಯದರ್ಶಿ) ,
"ನಿಬಂಧಕ" (ಲೇಖಕ ಸಿದ್ಧಪಡಿಸಿದ ದಾಖಲೆ
ವ್ಯವಸ್ಥಿತವಾಗಿಡುವವನು) ಕಾರ್ಯನಿರ್ವಹಿಸುತ್ತಿದ್ದರು.
[09/10 12:03 pm] : ಸಂಗಂ ಯುಗ
⚡ "ಸಂಗಂ" ಎಂಬುದು ತಮಿಳು ಸಾಹಿತ್ಯರಾಶಿಯನ್ನು
ಸೃಷ್ಟಿಸಿದ ಒಂದು ಸಂಸ್ಥೆ.
⚡ ತಮಿಳುನಾಡನ್ನಾಳಿದ ಚೇರ, ಪಾಂಡ್ಯ, ಚೋಳರಲ್ಲಿ ಇವರಿಗೆ
ಆಶ್ರಯ ನೀಡಿ ಪೋಷಿಸಿದವರಲ್ಲಿ ಪಾಂಡ್ಯರು ಪ್ರಮುಖರು.
⚡ ಇವರ ಕಾಲ ಕ್ರಿ.ಪೂ. 3 ರಿಂದ ಕ್ರಿ.ಶ. 3 ಎಂದು ತಿಳಿಸಿದವರು
ಎನ್. ಸುಬ್ರಮಣ್ಯಂ.
⚡ ಒಟ್ಟು ಮೂರು ಸಂಗಂಗಳು ಅಸ್ತಿತ್ವದಲ್ಲಿದ್ದುದು
ಕಂಡುಬಂದಿದೆ. ಒಂದೊಂದು ಸಂಗಂ ಯುಗ ನೂರು ವರ್ಷ
ಪೋಷಿಸಲ್ಪಟ್ಟಿತ್ತು.
⚡ ಮೊದಲ ಸಂಗಂ "ತಿನ್ಮಧುರೆ" (ಹಳೆ ಮಧುರೆ) ಯಲ್ಲಿ
ಸ್ಥಾಪಿತವಾಯಿತು.
⚡ ಉತ್ತರ ಭಾರತದಿಂದ ದಕ್ಷಿಣಕ್ಕೆ ಆರ್ಯ ಸಂಸ್ಕೃತಿಯನ್ನು
ಹರಡಿದ "ಅಗಸ್ತ್ಯ" ಇದರ ಅಧ್ಯಕ್ಷ.
⚡ ಈ ಯುಗದ 4498 ವಿದ್ವಾಂಸರನ್ನು 88 ಮಂದಿ ಪಾಂಡ್ಯ
ಅರಸರು ಪೋಷಿಸಿದರು.
⚡ ಎರಡನೇ ಸಂಗಂ "ಕಪಾಟಪುರಂ" ಎಂಬಲ್ಲಿ
ಸ್ಥಾಪಿತವಾಯಿತು. ಇದರ ಸ್ಥಾಪಕನೂ ಅಗಸ್ತ್ಯ ನೆಂದೇ
ಹೇಳಲಾಗಿದೆ.
⚡ ಈ ಕಾಲದಲ್ಲಿ 59 ಮಂದಿ ಪಾಂಡ್ಯ ಅರಸರ ಆಶ್ರಯದಲ್ಲಿ
ಬೃಹತ್ ಸಾಹಿತ್ಯ ರಾಶಿ ಸೃಷ್ಟಿಯಾಯಿತು.
⚡ "ತೊಳ್ಕಾಪಿಯಂ", "ಮಾಪುರಾಣಂ", "ಭೂತ ಪುರಾಣಂ"
ಮುಂತಾದವು ಈ ಕಾಲಕ್ಕೆ ಸೇರುದ ಗ್ರಂಥಗಳಾಗಿವೆ.
⚡ ಮೂರನೇ ಸಂಗಂ ಇಂದಿನ "ಮಧುರೆ" ಯಲ್ಲಿ
ಸ್ಥಾಪಿತವಾಯಿತು.
⚡ ಈ ಕಾಲದಲ್ಲಿ 49 ಮಂದಿ ಪಾಂಡ್ಯ ಅರಸರು ಈ ಕಾಲದ
ಕವಿಗಳನ್ನು ಪೋಷಿಸಿದ್ದಾರೆ.
⚡ ಈ ಕಾಲದಲ್ಲಿ "ತಿರುವಳ್ಳವರ್" ಎಂಬ ಶ್ರೇಷ್ಠ ಕವಿ "ತಿರುಕ್ಕರಳ್"
ಎಂಬ ಗ್ರಂಥವನ್ನು ರಚಿಸಿದನು.
⚡ "ಪಟ್ಟುಪಾಟು", "ಪದಿನೇಲ್ ಕೀಲ್ ಣಕ್ಕು",
"ಶಿಲಪ್ಪಾಧಿಗಾರಂ"(ಇಳಂಗೊವಡಿಗಲ್),
"ಮಣಿಮೇಖಲೈ"(ಸತ್ತಾರ್) ಮುಂತಾದವು ಈ ಕಾಲಕ್ಕೆ ಸೇರಿದ
ಗ್ರಂಥಗಳಲ್ಲಿ ಮುಖ್ಯವಾದವು.
⚡ ತಮಿಳುನಾಡಿನ ಪ್ರಾಚೀನ ಇತಿಹಾಸ ತಿಳಿಯಲು ಸಂಗಂ
ಸಾಹಿತ್ಯ ಸಹಾಯಕವಾಗಿದೆ. ಈ ಯುಗವನ್ನು ತಮಿಳು
ಸಾಹಿತ್ಯದ "ಸುವರ್ಣ ಯುಗ" ಎಂದು ಕರೆಯಲಾಗಿದೆ.
⚡ "ಪತ್ತು ಪಾಟ್ಟು", "ಪದಿರುಪಾಟ್ಟು" ಈ ಕಾಲದ ಪ್ರಮುಖ
ಕೃತಿಗಳು.
⚡ ಸಂಗಂ ರಾಜ್ಯಾಡಳಿತದಲ್ಲದ್ದ ಪ್ರಮುಖ ಅಧಿಕಾರ
ವರ್ಗವೆಂದರೆ
➡ ಅಮೈಚ್ಛಾರ್ (ಮಂತ್ರಿಗಳು)
➡ ಪುರೋಹಿತರ್ (ಪುರೋಹಿತರು)
➡ ಸೇನಾಪತಿಯರ್ (ಸೇನಾಪತಿ)
➡ ದೂತರ್ (ಧೂತರು)
➡ ಒರ್ರರ್ (ಗೂಢಾಚಾರರು)
⚡ ಭೂಕಂದಾಯವನ್ನು "ಕರೈ" ಎಂದು ಕರೆಯುತ್ತಿದ್ದರು.
⚡ ಭೂಮಿಯನ್ನು ಅಳೆಯಲು "ಮ" ಮತ್ತು "ವೇಲಿ" ಎಂಬ
ಮಾಪನಗಳನ್ನು ಬಳಸುತ್ತಿದ್ದರು.
⚡ ಸೈನಿಕ ದಂಡನಾಯಕರಿಗೆ 'ಎನಾಡಿ' ಎಂಬ ಬಿರುದನ್ನು,
ಮಂತ್ರಿಗಳಿಗೆ 'ಕವಿಡಿ' ಎಂಬ ಬಿರುದನ್ನೂ, ಆಳರಸರ ವರ್ಗಕ್ಕೆ 'ಅರಸರ್'
ಎಂದು ಕರೆಯಲಾಗುತ್ತಿತ್ತು.
⚡ ದೇವಾಲಯಗಳನ್ನು 'ಸಿಗರ್', 'ಕೊಟ್ಟಂ', 'ಕೊಯಿಲ್',
'ಪುರೈ', ಅಥವಾ 'ದೇವಾಲಯಂ' ಎಂದು ಕರೆಯಲಾಗುತ್ತಿತ್ತು.
⚡ ಸಂಗಂ ಯುಗದ ಮುಖ್ಯ ದೇವತೆಯೆಂದರೆ "ಮುರುಗನ್"
ಅಥವಾ "ಸುಬ್ರಹ್ಮಣ್ಯ".
⚡ಚೇರ, ಪಾಂಡ್ಯ, ಚೋಳ ಸಂತತಿಗಳು ಮರೆಯಾಗುತ್ತಲೇ
ಸಂಗಂ ಯುಗವೂ ಅಂತ್ಯಗೊಂಡಿತು.
⚡ ಈ ಮೂರು ರಾಜ ಸಂತತಿಗಳ ಅವನತಿಗೆ "ಕಳಭ್ರರು" (ಕಳಪ್ಪರ್)
ಎನ್ನುವ ಹೊಸ ಗುರ್ತಿಸಲಾಗದ ವೈರಿಶಕ್ತಿ ಕಾರಣವಾಯಿತು.
[09/10 12:04 pm] : ಚೋಳರು
ಚೋಳರು
ದಕ್ಷಿಣ ಭಾರತವನ್ನಾಳಿದ ಪ್ರಾಚೀನ ಮನೆತನಗಳಾದ
ಚೋಳರು, ಚೇರರು, ಪಾಂಡ್ಯರು, ಇವರ ಬಗ್ಗೆ
ಮೊತ್ತಮೊದಲ ಐತಿಹಾಸಿಕ ದಾಖಲೆ ಸಿಗುವುದು ಅಶೋಕನ
ಶಾಸನಗಳಲ್ಲಿ.
ಇವರ ಲಾಂಛನ "ವ್ಯಾಘ್ರ" ಅಥವಾ "ಹುಲಿ".
"ಇಳೈಯಾಳ್ ಚೋಳ" ಎಂಬುವನು ಸಂಗಂ ಸಾಹಿತ್ಯದ
ಕಾಲದ ಚೋಳ ಸಂತತಿಯ ಮೊದಲ ಅರಸ.
ಇವನ ನಂತರ ಅಧಿಕಾರಕ್ಕೆ ಬಂದವನು "ಕರಿಕಾಲ ಚೋಳ".
ಕರಿಕಾಲ ಚೋಳನ ದಿಗ್ವಿಜಯಗಳ ಬಗ್ಗೆ "ಪುರನಾನೂರು",
"ಪೋರುನರರು" ಕೃತಿಗಳು ಬೆಳಕು ಚೆಲ್ಲುತ್ತವೆ.
"ಉರೈಯೂರ್" ಕರಿಕಾಲ ಚೋಳನ ರಾಜಧಾನಿಯಾಗಿತ್ತು.
ಇವನು ಶಸ್ತ್ರಸಜ್ಜಿತವಾದ ನೌಕಾಪಡೆಯನ್ನು ಕಟ್ಟಿ ಅದರ
ಸಹಾಯದಿಂದ "ಸಿಂಹಳ" ದ್ವೀಪವನ್ನು ವಶಪಡಿಸಿಕೊಂಡನು.
ಕರಿಕಾಳ ಚೋಳನು ಹಿಮಾಲಯ ಪರ್ವತ ದವರೆಗೂ
ದಂಡಯಾತ್ರೆ ಕೈಗೊಂಡಿದ್ದನೆಂದು "ಶಿಲಪ್ಪದಿಕಾರಂ" ನಲ್ಲಿ
ತಿಳಿಸಲಾಗಿದೆ.
ಕಾವೇರಿ ಪಟ್ಟಣವನ್ನು ಎರಡನೇ ರಾಜಧಾನಿಯಾಗಿ
ಮಾಡಿಕೊಂಡ ಇವನು ಅದನ್ನು ಪ್ರಮುಖ ವ್ಯಾಪಾರ ಮತ್ತು
ವಾಣಿಜ್ಯ ಕೇಂದ್ರವನ್ನಾಗಿ ಮಾಡಿದನು.
ಈತನಿಂದ ನಿರ್ಮಾಣವಾದ 1080 ಅಡಿ ಉದ್ದದ ಕಲ್ಲಿನಿಂದ
ನಿರ್ಮಾಣವಾದ "ಕಲ್ಹಣೆ" ಅಣೆಕಟ್ಟು ದಕ್ಷಿಣ ಭಾರತದಲ್ಲಿ
ನಿರ್ಮಾಣವಾದ ಪ್ರಥಮ ನೀರಾವರಿ ಅಣೆಕಟ್ಟು ಎಂದು
ಭಾವಿಸಲಾಗಿದೆ.
ಇವನ ನಂತರ ಅಧಿಕಾರಕ್ಕೆ ಬಂದ ವಿಜಯಾಲಯ ಚೋಳ
"ವರಕೇಸರಿ", "ರಾಜಕೇಸರಿ" ಎಂಬ ಬಿರುದುಗಳನ್ನು
ಹೊಂದಿದ್ದ.
ಒಂದನೇ ಪರಾಂತಕನನ್ನು ಗಂಗರು ಮತ್ತು
ರಾಷ್ಟ್ರಕೂಟರು (ಮುಮ್ಮಡಿ ಕೃಷ್ಣ) ಸೇರಿ ಕ್ರಿ.ಶ. 949 ರಲ್ಲಿ
"ತಕ್ಕೋಲಂ" ಕದನದಲ್ಲಿ ಸೋಲಿಸಿದರು.
ಚೇರರು ಶಾಲ ಬಂದರಿನಲ್ಲಿ ಹೊಂದಿದ್ದ ಪ್ರಬಲ
ನೌಕಾಪಡೆಯನ್ನು ಧ್ವಂಸ ಮಾಡಿದ ಒಂದನೇ ರಾಜ ರಾಜ ಚೋಳ
ಕೇರಳವನ್ನು ವಶಪಡಿಸಿಕೊಂಡು "ಕಾನ್ದಳೂ ರ್ಶಾಲೈಕ್ಕಳ
ಮರತ " ಎಂಬ ಬಿರುದನ್ನು ಪಡೆದನು.
ಇವನು ತಂಜಾವೂರಿನಲ್ಲಿ "ಬೃಹದೇಶ್ವರ
ದೇವಾಲಯ"ವನ್ನು ನಿರ್ಮಿಸಿದನು. ಇದು "ರಾಜರಾಜೇಶ್ವರ"
ದೇವಾಲಯವೆಂದು ಪ್ರಸಿದ್ಧಿಯಾಗಿದೆ.
ನಂತರದ ಪ್ರಸಿದ್ಧ ಅರಸರುಗಳಲ್ಲಿ ಒಂದನೇ
ಕುಲೋತ್ತುಂಗ ಚೋಳ ಪ್ರಮುಖನಾಗಿದ್ದಾನೆ.
ಜನಾನುರಾಗಿಯಾಗಿದ್ದ ಇವನು ಜನರ ಮೇಲಿದ್ದ ಅನೇಕ
ತೆರಿಗೆಗಳನ್ನು ರದ್ದುಗೊಳಿಸಿ "ಸುಗಂಧ ವೃತ್ತ " ಎಂಬ
ಬಿರುದನ್ನು ಪಡೆದನು.
ಶೈವ ಸಂಪ್ರದಾಯ ಕ್ಕೆ ಹೆಚ್ಚು ಮನ್ನಣೆ ಕೊಟ್ಟ ಇವನು
ಚಿದಂಬರದ ನಟರಾಜ ದೇವಾಲಯಕ್ಕೆ ಅನೇಕ ದಾನದತ್ತಿಗಳನ್ನು
ನೀಡಿದನು.
ಅಲ್ಲದೇ ತನ್ನ ರಾಜ್ಯದಲ್ಲಿ ವೈಷ್ಣವ ಸಂಪ್ರದಾಯ
ಪ್ರಚಾರ ಮಾಡುತ್ತಿದ್ದ "ರಾಮಾನುಜಾಚಾರ್ಯ" ರನ್ನು
ರಾಜ್ಯದಿಂದ ಹೊರ ಅಟ್ಟಿದನು.
ಚೋಳ ರಾಜರಿಗೆ ಆಪ್ತ ಅಧಿಕಾರ ವರ್ಗವಿದ್ದು, ಅದನ್ನು
"ಉದನಕುಟುಂ" ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.
ರಾಜನು ಸೇನೆಯ ಸರ್ವ ಶ್ರೇಷ್ಠ
ದಂಡನಾಯಕನಾಗಿದ್ದನು.
ಸೇನಾಪತಿ, ದಂಡನಾಯಕ, ಮತ್ತು ಮಹಾ ಪ್ರಚಂಡ
ದಂಡನಾಯಕರು ಸೈನ್ಯದ ಮೇಲ್ವಿಚಾರಣೆ
ನೋಡಿಕೊಳ್ಳುತ್ತಿದ್ದರು.
ಚೋಳ ಚಕ್ರಾಧಿಪತ್ಯವನ್ನು "ಮಂಡಲ" ಮತ್ತು
"ಪ್ರಾಂತ್ಯ"ಗಳಾಗಿ ವಿಂಗಡಿಸಲಾಗಿತ್ತು.
ಪ್ರಾಂತ್ಯಗಳನ್ನು ಬಿರುದುಗಳನ್ನನುಸರಿಸಿ "ರಾಜರಾಜ
ಚೋಳ ಮಂಡಲ" , "ಮುದಿಕೊಂಡ ಚೋಳ ಮಂಡಲ"
ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು.
"ಉರ್" ಉಂಬ ಸಭೆಯು ಸಾಮಾನ್ಯ ಸಭೆಯಾಗಿದ್ದು,
ಬ್ರಾಹ್ಮಣರಿಗೆ ದತ್ತಿ ಕೊಡಲಾದ ಗ್ರಾಮಗಳಲ್ಲಿ ಇದು
ವಿಶೇಷವಾಗಿ ಕಂಡುಬರುತ್ತಿದ್ದು ಆ ಗ್ರಾಮ ತೆರಿಗೆ ಕೊಡುವ
ನಿವಾಸಿಗಳನ್ನೊಳಗೊಂಡಿತ್ತು.
ಉತ್ತರ ಮೆರೂರು ಶಿಲಾಶಾಸನವನ್ನು ಚಿಂಗಲ್ ಪುಟ್
ಜಿಲ್ಲೆಯ ವೈಕುಂಠ ದೇವಸ್ಥಾನದ ಗೋಡೆಯ ಮೇಲೆ
ಕೊರೆಯಲ್ಪಟ್ಟಿದೆ.
"ಧರ್ಮ ವರಿಯಮ್" ಎಂಬ ಸಮಿತಿಯು ದಾನದತ್ತಿಗಳ
ಮೇಲ್ವಿಚಾರಣೆ ನೋಡಿಕೊಳ್ಳುತ್ತಿತ್ತು.
ಸತಿ ಅಥವಾ ಸಹಗಮನ ಪದ್ಧತಿ ರೂಡಿಯಲ್ಲಿತ್ತು.
ರಾಜೇಂದ್ರ ಚೋಳ ಮರಣ ಹೊಂದಿದಾಗ ಅವನ ರಾಣಿ
ವೀರಮಹಾದೇವಿ ಸಹಗಮನ ಅನುಸರಿಸಿದಳು.
ಸೆಕ್ಕಿಲಾರ್ ಕವಿ ರಚಿಸಿದ "ಪೆರಿಯಾಪುರಾಣ" ವು ತಮಿಳು
ಸಾಹಿತ್ಯದ ಐದನೇ ವೇದವೆಂದು ಪರಿಗಣಿಸಲಾಗಿದೆ.
➡ ಬುಧಮಿಶ್ರ --- ವೀರಸೋಳಿಯಂ
➡ ಕಂಬನ್ ----- ತಮಿಳು ರಾಮಾಯಣ
➡ ಜಯಗೊಂಡರ್ --- ಕಳಿಂಗತ್ತು ಪೆಪರಣಿಗಳ್
[09/10 12:05 pm] : ಭಾರತದ ಸಂವಿಧಾನ
ಸಂವಿಧಾನ
'ಒಂದು ಪ್ರದೇಶದ ಅಥವಾ ದೇಶದ ಮೂಲಭೂತ ಕಾನೂನೇ
ಸಂವಿಧಾನ'. ಇದು ಆಯಾ ಪ್ರದೇಶದ ಅಥವಾ ದೇಶದ ಜನರು
ನೇರವಾಗಿ ಅಥವಾ ತಮ್ಮ ಪ್ರತಿನಿಧಿಗಳ ಮೂಲಕ
ರಚಿಸಿಕೊಂಡಿರುದ್ದಾಗಿರುತ್ತದೆ.
ಈ ಕೆಳಗಿನ ಅವಧಿಯಲ್ಲಿ ಸಂವಿಧಾನದ ಮೂಲವಿಕಾಸವನ್ನು
ಕಾಣಬಹುದು.
1) 1773 ರ ರೆಗ್ಯುಲೇಟಿಂಗ್ ಕಾಯ್ದೆ.
2) 1784 ರ ಪಿಟ್ಸ್ ಇಂಡಿಯಾ ಕಾಯ್ದೆ.
3) 1813,1833,1853 ರ ಚಾರ್ಟರ್ ಕಾಯ್ದೆಗಳು.
4) 1861,1892, ರ ಕಾಯ್ದೆಗಳು.
5) 1909 ರ ಮಿಂಟೋ- ಮಾರ್ಲೆ ಕಾಯ್ದೆ.
6) 1919 ರ ಮಾಂಟೆಗೊ ಚೆಲ್ಮ್ಸ್ ಫೋರ್ಡ್ ಕಾಯ್ದೆ.
7) 1935 ರ ಕಾಯ್ದೆ.
ಕ್ಯಾಬಿನೆಟ್ ಮಿಷನ್ ಪ್ಲಾನ್ 1946 ರ ಅನ್ವಯ ಸಂವಿಧಾನ ರಚನಾ
ಸಭೆಯನ್ನು ರಚಿಸಲಾಯಿತು. ಇದಕ್ಕೆ ಡಾ. ರಾಜೇಂದ್ರ ಪ್ರಸಾದ್
ಅಧ್ಯಕ್ಷರಾಗಿದ್ದರು. ಡಾ. ಬಿ.ಆರ್. ಅಂಬೇಡ್ಕರ್
ಅಧ್ಯಕ್ಷತೆಯಲ್ಲಿ 'ಕರಡು ಸಮಿತಿ' ಯನ್ನು ರಚಿಸಲಾಯಿತು.
ಅಂತಿಮವಾಗಿ ಸಿದ್ಧಪಡಿಸಿದ ಸಂವಿಧಾನವನ್ನು ನವೆಂಬರ್ 26, 1949
ರಂದು ಅಂಗೀಕರಿಸಲಾಯಿತು. ಜನವರಿ 26, 1950 ರಂದು ಭಾರತ
ಸಂವಿಧಾನವು ಜಾರಿಗೆ ಬಂದಿತು. ಇದು 8 ಅನುಸೂಚಿಗಳು,
ಮತ್ತು 395 ವಿಧಿಗಳನ್ನು ಒಳಗೊಂಡಿತ್ತು.
ಭಾರತ ಸಂವಿಧಾನವು ಪ್ರಮುಖವಾಗಿ ಗೌವರ್ನಮೆಂಟ್ ಆಫ್
ಇಂಡಿಯಾ ಆಕ್ಟ್ 1935, ಬ್ರಿಟಿಷ್, ಅಮೇರಿಕಾ, ಕೆನಡಾ ಮತ್ತು ಐರಿಷ್
ಸಂವಿಧಾನಗಳಿಂದ ಅನೇಕ ಪ್ರಮುಖ ವಿಷಯಗಳನ್ನು
ತೆಗೆದುಕೊಂಡಿದೆ.
1935 ರ ಗೌವರ್ನಮೆಂಟ್ ಆಫ್ ಇಂಡಿಯಾ ಆಕ್ಟ್
️ ಪ್ರಾಂತೀಯ ಸ್ವಾಯತ್ತತೆಯನ್ನು ಹೊಂದಿದ
ಸಂಯುಕ್ತ ಪದ್ಧತಿ
️ ಪೂರ್ಣ ಜವಾಬ್ದಾರಿಯುತವಾದ ಕೇಂದ್ರ ಸರ್ಕಾರ
️ ಕೇಂದ್ರ ಮತ್ತು ಪ್ರಾಂತಗಳಲ್ಲಿ ದ್ವಿಸದನ ಪದ್ಧತಿ
️ ರಾಷ್ಟ್ರಪತಿಗಳಿಗಿರುವ ಕೆಲವು ತುರ್ತು ಪರಿಸ್ಥಿತಿಯ
ಅಧಿಕಾರಗಳು ಮತ್ತು ರಾಜ್ಯಪಾಲರುಗಳ ವಿಚಕ್ಷಣಾ
ಅಧಿಕಾರಗಳು.
ಬ್ರಿಟನ್ನಿನ ಸಂವಿಧಾನ
ಸರಕಾರದ ಸಂಸದೀಯ ಸ್ವರೂಪ
ಏಕಸ್ವಾಮ್ಯ ಪೌರತ್ವ
ನ್ಯಾಯದ ಪ್ರಭುತ್ವ
ಲೋಕಸಭಾಧ್ಯಕ್ಷ ಮತ್ತವರ ಪಾತ್ರ
ಶಾಸನೆ ರಚನೆಯ ವಿಧಾನ
ನ್ಯಾಯ ನಿರ್ಧರಿಸುವ ಕಾರ್ಯವಿಧಾನ
ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ
ಮೂಲಭೂತ ಹಕ್ಕುಗಳು
ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ
ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ
ನ್ಯಾಯ ನಿರ್ಧರಿಸುವ ಕಾರ್ಯವಿಧಾನ
ಐರ್ಲೆಂಡ್ ದೇಶದ ಸಂವಿಧಾನ
ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು
ಫ್ರಾನ್ಸ್ ದೇಶದ ಸಂವಿಧಾನ
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆದರ್ಶಗಳು
ಕೆನಡಾ ದೇಶದ ಸಂವಿಧಾನ
ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ
ಮಾದರಿ
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು
ರೆಸಿಡ್ಯುಯರಿ ಪವರ್
ಆಸ್ಟ್ರೇಲಿಯ ದೇಶದ ಸಂವಿಧಾನ
ಪ್ರಸ್ತುತ ವಿಷಯಗಳ ಪಟ್ಟಿ
ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪಾರ - ವಹಿವಾಟಿಗೆ
ಸ್ವಾತಂತ್ರ್ಯ
ಸೋವಿಯಟ್ ಒಕ್ಕೂಟದ ಸಂವಿಧಾನ
ಮೂಲಭೂತ ಕರ್ತವ್ಯಗಳು
ಸರ್ಕಾರಿ ಕಾರ್ಯನೀತಿಯ ತಾಕೀತುಗಳು
ಜಪಾನ್ ದೇಶದ ಸಂವಿಧಾನ
ಮೂಲಭೂತ ಕರ್ತವ್ಯಗಳು
ಜರ್ಮನಿ ದೇಶದ ಸಂವಿಧಾನ
ತುರ್ತು ಪರಿಸ್ಥಿತಿಯ ಏರ್ಪಾಡು
ಮೂಲಭೂತ ಹಕ್ಕುಗಳನ್ನು ಕೆಲವು ವಿಶೇಷ ತುರ್ತು
ಪರಿಸ್ಥಿತಿಗಳಲ್ಲಿ ರಾಷ್ಟ್ರಪತಿಗಳು ರದ್ದುಪಡಿಸುವ ಅಧಿಕಾರವನ್ನು
ಜರ್ಮನಿಯ 'ವೀಮರ್' ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ.
#ಅನುಸೂಚಿಗಳು:-
1 ರಾಜ್ಯ ಸರ್ಕಾರ ಹಾಗು ಕೇಂದ್ರಾಡಳಿತ ಪ್ರದೇಶಗಳ
ಅಧಿಕಾರ ಪರಮಾವದಿ
2 ಉನ್ನತ ಅಧಿಕಾರಿಗಳ ಸಂಬಳ(ವರಮಾನ)
3 ಪ್ರಮಾಣವಚನಗಳ ವಿಧಗಳು
4 ರಾಜ್ಯಸಭೆ(ರಾಜ್ಯಗಳ ಪರಿಷತ್ತು - ಸಂಸತ್ತಿನ
ಮೇಲ್ಮನೆ)ಯಲ್ಲಿ ಪ್ರತಿ ರಾಜ್ಯ ಹಾಗು ಕೇಂದ್ರಾಡಳಿತ
ಪ್ರದೇಶಗಳಿಗೆ ಇಂತಿಷ್ಟು ಎಂದು ಸ್ಥಾನಗಳನ್ನು
ನಿಗದಿಪಡಿಸುವುದು.
5 ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಡಳಿತ
ಮತ್ತು ನಿಯಂತ್ರಣಕ್ಕೆ ವಿಶೇಷ ಏರ್ಪಾಟು ಕಲ್ಪಿಸುವುದು
6 ಅಸ್ಸಾಮಿನಲ್ಲಿರುವ ಬುಡಕಟ್ಟು ಪ್ರದೇಶಗಳ ಆದಳಿತಕ್ಕೆ
ಏರ್ಪಾಟು ಕಲ್ಪಿಸುವುದು
7 ಕೇಂದ್ರ(ಕೇಂದ್ರ ಸರ್ಕಾರ),ರಾಜ್ಯ ಹಾಗು ದ್ವಂದ್ವ
ಜವಾಬ್ದಾರಿಗಳ ಪಟ್ಟಿಗಳು
8 ಅಧಿಕೃತ ಭಾಷೆಗಳು
9. ಸ್ಥಳ ಮತ್ತು ಅವಧಿಯ ಸುಧಾರಣೆ
10 ಸಂಸತ್ ಸದಸ್ಯರು ಮತ್ತು ವಿಧಾನ ಸಭಾ ಸದಸ್ಯರ
ಪಕ್ಷಾಂತರ ವಿರುದ್ದ ವಿಶೇಷ ಏರ್ಪಾಟು ಕಲ್ಪಿಸುವುದು
11.ಪಂಚಾಯತ್ ರಾಜ್ ವ್ಯವಸ್ಥೆ
12 ಗ್ರಾಮೀಣ ಅಭಿವೃದ್ಧಿ ; ಮತ್ತು ನಗರ ಯೋಜನೆ.
ಸಂವಿಧಾನದ ಭಾಗಗಳು ಮತ್ತು ಪ್ರಮುಖ ಅಧ್ಯಾಯಗಳು
#ಭಾಗ_1. ಕೇಂದ್ರ ಮತ್ತು ಅದರ ಆಡಳಿತದ ಮೇಲೆ.
( ಲೇಖನಗಳು 1-4).
#ಭಾಗ_2. ಪೌರತ್ವ ದ ಮೇಲೆ. (ಲೇಖನಗಳು 5-11).
#ಭಾಗ_3. ಮೂಲಭೂತ ಹಕ್ಕುಗಳು
(ಲೇಖನಗಳು 12-35).
14-18 ಸಮಾನತೆಯ ಹಕ್ಕು,
19-22 ಸ್ವಾತಂತ್ರ್ಯದ ಹಕ್ಕು,
23-24 ಶೋಷಣೆಯ ವಿರುದ್ಧ ಹಕ್ಕು,
25-28 ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,
29-31 ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,
32-35 ಸಾಂವಿಧಾನಿಕ ಪರಿಹಾರದ ಹಕ್ಕು.
#ಭಾಗ_4. ರಾಜ್ಯನೀತಿ ನಿರ್ದೇಶಕ ತತ್ವಗಳು.
ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ
ತಾಕೀತುಗಳನ್ನೊಳಗೊಂಡ ಲೇಖನಗಳು 36 - 51.
#ಭಾಗ_4(A). ಪ್ರತಿ ಭಾರತೀಯ ನಾಗರಿಕನ ಮೂಲಭೂತ
ಕರ್ತವ್ಯಗಳು.
#ಭಾಗ_5. ಭಾರತದ ಒಕ್ಕೂಟ.
ಅಧ್ಯಾಯ 1 - ಕಾರ್ಯಾಂಗ ದ ಬಗ್ಗೆ .
(ಲೇಖನಗಳು 52-78)
ಅಧ್ಯಾಯ 2 - ಸಂಸತ್ತು ಬಗ್ಗೆ.
(ಲೇಖನಗಳು 79-122)
ಅಧ್ಯಾಯ 3- ರಾಷ್ಟ್ರಪತಿಗಳ ಶಾಸಕಾಂಗ ಅಧಿಕಾರಗಳ ಬಗ್ಗೆ.
( ಲೇಖನ ೧೨೩ ಸಂಸತ್ತಿನ ವಿರಾಮಕಾಲದಲ್ಲಿ ರಾಷ್ಟ್ರಪತಿಗಳು
ಸುಗ್ರೀವಾಜ್ಝ್ನೆ ಹೊರಡಿಸುವ ಬಗ್ಗೆ)
ಅಧ್ಯಾಯ 4- ಕೇಂದ್ರ ನ್ಯಾಯಾಂಗದ ಬಗ್ಗೆ.
( ಲೇಖನಗಳು 124-147)
ಅಧ್ಯಾಯ 5- ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್
ಬಗ್ಗೆ.
( ಲೇಖನಗಳು 148-151)
# ಭಾಗ_6. ರಾಜ್ಯಗಳ ಬಗ್ಗೆ ಲೇಖನಗಳು.
#ಭಾಗ_7. ಮೊದಲನೆ ಅನುಚ್ಛೇಧದ 'ಬಿ' ಭಾಗದಲ್ಲಿರುವ
ರಾಜ್ಯಗಳ ಬಗ್ಗೆ ಲೇಖನಗಳು.
#ಭಾಗ_8. ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ.
#ಭಾಗ_9. ಪಂಚಾಯತಿ ಪದ್ಧತಿಯ ಬಗ್ಗೆ ಲೇಖನಗಳು.
#ಭಾಗ_9.(A). ನಗರಪಾಲಿಕೆಗಳ ಬಗ್ಗೆ ಲೇಖನಗಳು.
#ಭಾಗ_10. ಪರಿಶಿಷ್ಟ ಪಂಗಡಗಳಿರುವ ಪ್ರದೇಶಗಳ ಬಗ್ಗೆ
ಲೇಖನಗಳು.
# ಭಾಗ_11. ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳ ಬಗ್ಗೆ.
#ಭಾಗ_12. ಹಣಕಾಸು, ಸ್ವತ್ತು, ಒಪ್ಪಂದಗಳು ಮತ್ತು
ದಾವೆಗಳ ಬಗ್ಗೆ.
#ಭಾಗ_13. ಭಾರತದ ಸಂಸ್ಥಾನದ ಒಳಗೆ ವ್ಯಾಪಾರ ಮತ್ತು
ವಾಣಿಜ್ಯಗಳ ಬಗ್ಗೆ ಲೇಖನಗಳು.
#ಭಾಗ_14. ರಾಜ್ಯ ಮತ್ತು ಕೇಂದ್ರದಡಿಯಲ್ಲಿರುವ ಸೇವೆಗಳ
ಬಗ್ಗೆ ಲೇಖನಗಳು.
#ಭಾಗ_14(A). ಆಯೋಗಗಳ ಬಗ್ಗೆ ಲೇಖನಗಳು.
#ಭಾಗ_15. ಚುನಾವಣೆಗಳ ಬಗೆಗಿನ ಲೇಖನಗಳನ್ನು
ಒಳಗೊಂಡಿದೆ.
#ಭಾಗ_16. ಕೆಲ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ
ಬಗ್ಗೆ ಲೇಖನಗಳು.
#ಭಾಗ_17. ಅಧಿಕೃತ ಭಾಷೆಗಳ ಬಗ್ಗೆ ಲೇಖನಗಳು.
#ಭಾಗ_18. ತುರ್ತುಪರಿಸ್ಥಿತಿಗಳ ಮುನ್ನೇರ್ಪಾಡಿನ ಬಗ್ಗೆ
ಲೇಖನಗಳು.
#ಭಾಗ_19. ಇತರೆ ವಿಷಯಗಳು.
#ಭಾಗ_20. ಸಂವಿಧಾನದ ತಿದ್ದುಪಡಿಯ ಬಗೆಗಿನ ಲೇಖನಗಳು.
#ಭಾಗ_21. ತಾತ್ಕಾಲಿಕ, ಹಂಗಾಮಿ ಮತ್ತು ವಿಶೇಷ
ಮುನ್ನೇರ್ಪಾಡುಗಳ ಬಗ್ಗೆ ಲೇಖನಗಳು.
# ಭಾಗ_22. ಸಂಕ್ಷಿಪ್ತ ಶೀರ್ಷಿಕೆ, ಪ್ರಾರಂಭದ ದಿನ, ಹಿಂದಿ
ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆಯ ಬಗ್ಗೆ
ಲೇಖನಗಳು.
[09/10 12:05 pm] : ಸಾಮಾನ್ಯ ಕನ್ನಡ
ಕನ್ನಡ ವಿಶೇಷ
1) 'ಕೆಂಗದಿರ' ಎಂಬುದರ ಸಮಾನಾರ್ಥಕ ಪದ
1. ಚಂದ್ರ
2. ಧೂಮಕೇತು
3. ಸೂರ್ಯ
4. ನಕ್ಷತ್ರ
2) ಕನ್ನಡದಲ್ಲಿ ವಾಕ್ಯರಚನೆಯನ್ನು ಈ ಕೆಳಗಿನವುಗಳಲ್ಲಿ
ಯಾವುದು ನಿರ್ಧರಿಸುತ್ತದೆ ?
1. ಕತೃ, ಕರ್ಮ, ಕಾರಕ
2. ಕತೃ, ಕ್ರಿಯೆ, ಕರ್ಮ
3. ಕತೃ, ಕರ್ಮ, ಕ್ರಿಯೆ
4. ಕತೃ, ಕರ್ಮ, ವಿಭಕ್ತಿ
3) ' ಚೇದ್ಬಿಂಬ ಪ್ರತಿಬಿಂಬತ್ವಂ' ಎಂಬ ವ್ಯಾಖ್ಯೆ ಯಾವ
ಅಲಂಕಾರವನ್ನು ಕುರಿತದ್ದು?
1. ಶ್ಲೇಷೆ
2. ದೃಷ್ಟಾಂತ
3. ಉತ್ಪ್ರೇಕ್ಷೆ
4. ರೂಪಕ
4) ಈ ಕೃತಿ ಸಂಸ್ಕೃತದ ಶ್ರೀಹರ್ಷನ 'ರತ್ನಾವಳಿ' ನಾಟಕದ
ಭಾಷಾಂತರವಾದರೂ ಕನ್ನಡದ ಪ್ರಥಮ ನಾಟಕ ಎನಿಸಿಕೊಂಡಿದೆ?
1. ಮಂಡೋದರಿ
2. ಮಿತ್ರಾವಿಂದಾ ಗೋವಿಂದ
3. ಕುರುಕ್ಷೇತ್ರ
4. ಕೀಚಕ
5) ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಗಳ ಚೇಷ್ಟೆಗೆ
ಮನವೇ ಬೀಜ' ಎಂಬುದು ಯಾರ ವಚನದ ಸಾಲು ?
1. ಮುಕ್ತಾಯಕ್ಕ
2. ಬಸವಣ್ಣ
3. ಜೇಡರ ದಾಸಿಮಯ್ಯ
4. ಅಕ್ಕಮಹಾದೇವಿ
6) ಸುಕುಮಾರ ಸ್ವಾಮಿಯ ಕಥೆ ಎಂಬ ಉಪಕಥೆಯು ಕೆಳಗಿನ ಯಾವ
ಕಾವ್ಯದಲ್ಲಿನ ಪ್ರಥಮ ಕಥೆಯಾಗಿದೆ ?
1. ಪಂಚತಂತ್ರ
2. ಪಂಪಭಾರತ
3. ಧರ್ಮಾಮೃತ
4. ವಡ್ಡಾರಾಧನೆ
7) ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ
ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ
ಮಾಡಿ;
ಪಟ್ಟಿ I ಪಟ್ಟಿ II
A. ಸಖೀಗೀತ 1. ದಲಿತ ಸಾಹಿತ್ಯ
B. ವರ್ಧಮಾನ 2. ನವೋದಯ ಸಾಹಿತ್ಯ
C. ಚಿರಸ್ಮರಣೆ 3. ನವ್ಯ ಸಾಹಿತ್ಯ
D. ಒಡಲಾಳ 4. ಪ್ರಗತಿಶೀಲ ಸಾಹಿತ್ಯ
ಸಂಕೇತಗಳು
A B C D
1. 3 1 2 4
2. 1 4 3 2
3. 4 2 1 3
4. 2 3 4 1
8) ಕನ್ನಡಕ್ಕೆ ಅನುವಾದಗೊಂಡ "ಭೂಮಿಗಿಳಿದ ಬೃಹಸ್ಪತಿ" ಶೇಕ್ಸ್
ಪಿಯರ್ ನ ಯಾವ ನಾಟಕದ ಅನುವಾದವಾಗಿದೆ ?
1. ಮರ್ಚೆಂಟ್ ಆಫ್ ವೆನಿಸ್
2. ಕಿಂಗ್ ಲಿಯರ್
3. ಒಥೆಲೋ
4. ಹ್ಯಾಮ್ಲೆಟ್
9) "ಬಟಾಟೆ' ಎಂಬುದು ಯಾವ ಭಾಷೆಯ ಪದ.
1. ಅರಬ್ಬೀ
2. ಪೋರ್ಚ್ ಗೀಸ್
3. ಪರ್ಷಿಯನ್
4. ಕನ್ನಡ
10) 'ಘೃತ' ಎಂಬ ಪದದ ಅರ್ಥ ಯಾವುದು ?
1. ನೀರು
2. ಎಣ್ಣೆ
3. ಹಾಲು
4. ತುಪ್ಪ
11) 'ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು' ಎಂಬ
ವಾಕ್ಯದಲ್ಲಿ ಬಳಕೆಯಾಗಿರುವ ಅಲಂಕಾರ ಯಾವುದು ?
1. ದೀಪಕಾಲಂಕಾರ
2. ಉಪಮಾಲಂಕಾರ
3. ಉತ್ಪ್ರೇಕ್ಷಾಲಂಕಾರ
4. ರೂಪಕಾಲಂಕಾರ
12) ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ
ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ
ಮಾಡಿ.
ಪಟ್ಟಿ I ಪಟ್ಟಿ II
A. ವಿಸ್ಮಯ 1. ಕರುಣ
B. ರತಿ 2. ವೀರ
C. ಶೋಕ 3. ಶೃಂಗಾರ
D. ಉತ್ಸಾಹ 4. ಅದ್ಭುತ
ಸಂಕೇತಗಳು
A B C D
1. 1 2 4 3
2. 2 4 3 1
3. 3 1 2 4
4. 4 3 1 2
13) ಕೆಳಗಿನ I ಮತ್ತು II ಪಟ್ಟಿಗಳನ್ನು ಹೊಂದಿಸಿ ಸರಿ
ಹೊಂದಾಣಿಕೆಗಳನ್ನು ಕೆಳಗೆಕೊಟ್ಟಿರುವ ಸಂಕೇತಗಳಿಂದ ಆಯ್ಕೆ
ಮಾಡಿ;
ಪಟ್ಟಿ I ಪಟ್ಟಿ II
A. ನಾಗಚಂದ್ರ 1. ಕನ್ನಡ ಮೆನಿಪ್ಪ ನಾಡು ಚೆಲ್ವಾಯ್ತು
B. ಪಂಪ 2. 'ಅಬ್ದಿಯುಂ ಒರ್ಮೆಕಾಲವಶದಿಂದ
ಮರ್ಯಾದೆಯಂ ದಾಂಟದೆ'
C. ಜನ್ನ 3. 'ಪರಮ ಜಿನೇಂದ್ರ ವಾಣಿಯೇ ಸರಸ್ವತಿ'
D. ಆಂಡಯ್ಯ 4. 'ಮರುಳೆ ಪೊಲ್ಲಮೆಯೆ ಲೇಸು ನಲ್ಲರ
ಮೈಯೊಳ್'
ಸಂಕೇತಗಳು
A B C D
1. 1 4 3 2
2. 4 2 1 3
3. 2 3 4 1
4. 3 1 2 4
14) "ಶ್ರಾವಣ ಪ್ರತಿಭೆಯ ಕವಿ" ಎಂದು ಹೆಸರಾದವರು ಯಾರು?
1. ಕುವೆಂಪು
2. ಕೆ.ಎಸ್. ನರಸಿಂಹ ಸ್ವಾಮಿ
3. ದ.ರಾ. ಬೇಂದ್ರೆ
4. ವಿ.ಕೃ.ಗೋಕಾಕ್
15) 'ಮಧ್ವರಿ' ಎಂಬುದು ಯಾವ ಸಂಧಿ ?
1. ಆಗಮಸಂಧಿ
2. ಯಣ್ ಸಂಧಿ
3. ಲೋಪ ಸಂಧಿ
4. ವೃದ್ಧಿ ಸಂಧಿ
ಇದು ಸರಿಯುತ್ತರದ ಸಂಕೇತವಾಗಿದೆ.
[09/10 12:06 pm] : 1) ಭಾರತದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ "ಕೌನ್
ಬನೇಗಾ ಕರೋಡ್ ಪತಿ" ಪ್ರಾರಂಭವಾದ ವರ್ಷ ಯಾವುದು?
1. 1999
2. 2000 ★
3. 2001
4. 2002
□●□●□●□●□●□●□●□●□●□●□●
2) " ಗುಡ್ ಪೀಪಲ್ ಟು ಗ್ರೋ ವಿಥ್" ಎಂಬ ಅಡಿ ಟಿಪ್ಪಣಿ
ಹೊಂದಿರುವ ಬ್ಯಾಂಕ್ ಯಾವುದು?
1. ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ
2. ಆಕ್ಸಿಸ್ ಬ್ಯಾಂಕ್
3. ಬ್ಯಾಂಕ್ ಆಫ್ ಲುಧಿಯಾನಾ
4. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ★
□●□●□●□●□●□●□●□●□●□●□●
3) ಕೆಳಗಿನವುಗಳಲ್ಲಿ ಯಾವ ಆಯ್ಕೆ ಉಳಿದೆಲ್ಲವುಗಳಿಗಿಂತ
ಭಿನ್ನವಾಗಿದೆ ?
1. ಸನ್ ಶೈನ್ ಟವರ್
2. ಪ್ಲಾನೆಟ್ ಗೋದ್ರೇಜ್
3. ಗಿಪ್ಟ್ ವನ್ ★
4. ಅಶೋಕ್ ಟವರ್ಸ್
□●□●□●□●□●□●□●□●□●□●□●
4) ಕೆಳಗಿನ ನದಿಗಳಲ್ಲಿ ಯಾವ ನದಿಯು ಪೂರ್ವದಿಂದ ಪಶ್ಚಿಮಕ್ಕೆ
ಹರಿಯುತ್ತದೆ ?
1. ಗೋದಾವರಿ
2. ನರ್ಮದಾ ★
3. ಯಮುನಾ
4. ಗಂಗಾ
□●□●□●□●□●□●□●□●□●□●□●
5) ಕೆಳಗಿನ ಕ್ಷಿಪಣಿಗಳಲ್ಲಿ ಯಾವ ಕ್ಷಿಪಣಿಯು ಭಾರತ ಹಾಗೂ
ರಷ್ಯಾದ ಸಂಯುಕ್ತ ಪರಿಶ್ರಮದಿಂದ
ನಿರ್ಮಾಣವಾಗಿರುವುದಾಗಿದೆ ?
1. ಅಗ್ನಿ
2. ಪೃಥ್ವಿ
3. ಎಬಿಎಂ.3
4. ಬ್ರಹ್ಮೋಸ್ ★
□●□●□●□●□●□●□●□●□●□●□●
6) ಕೆಳಗಿನ ಭಾರತೀಯ ಚಲನಚಿತ್ರಗಳಲ್ಲಿ ಯಾವುದು ಅಸ್ಕರ್
ಪ್ರಶಸ್ತಿಯ ಹೊಸ್ತಿಲನ್ನು ತಲುಪಿರಲಿಲ್ಲ ?
1. ಮದರ್ ಇಂಡಿಯಾ
2. ಶೋಲೆ ★
3. ಲಗಾನ್
4. ಸ್ಲಂ ಡಾಗ್ ಮಿಲಿಯೇನಿಯರ್
□●□●□●□●□●□●□●□●□●□●□●
7) ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಎರಡೂ
ರಾಜ್ಯಗಳಿಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು
ಯಾರು ?
1. ಬಿ.ಸಿ.ಖಂಡೂರಿ
2. ಭಗತ್ ಸಿಂಗ್ ಕೋಷಿಯಾರಿ
3. ಎನ್.ಡಿ. ತಿವಾರಿ ★
4. ಅಶೋಕ್ ಚಂದ್ ಗೆಹ್ಲೋಟ್
□●□●□●□●□●□●□●□●□●□●□●
8) ಭಾರತ ನೌಕಾ ಸೇನೆಯ ಅಡ್ಮಿರಲ್ ಆಗಿ ಸೇವೆ ಸಲ್ಲಿಸುತ್ತಾ
ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಭಾರತೀಯ ಯಾರು ?
1. ಅಡ್ಮಿರಲ್ ವಿಜಯ್ ಸಿಂಗ್ ಶೇಖಾವತ್
2. ಅಡ್ಮಿರಲ್ ಜಯಂತ್ ಗಣಪತಿ ನಾಡಕರ್ಣಿ
3. ಅಡ್ಮಿರಲ್ ವಿಷ್ಣು ಭಾಗವತ್
4. ಅಡ್ಮಿರಲ್ ಲಕ್ಷ್ಮಿನಾರಾಯಣ ರಾಮದಾಸ್ ★
□●□●□●□●□●□●□●□●□●□●□●
9) ಯಾವ ಜ್ವಾಲಾಮುಖಿಯನ್ನು ಪ್ರಪಂಚದ 'ವಾಚ್ ಟವರ್'
ಎಂದು ಕರೆಯುತ್ತಾರೆ ?
1. ಮೆಕ್ಸಿಕೋ ದ ಪಾರಿಕುಟಿನ್
2. ಅಂಡಿಸ್ ಪರ್ವತದ ಕೋಟೋಪಾಕ್ಸಿ
3. ಹವಾಯಿ ದ್ವೀಪದ ಮೌನಲೋವಾ
4. ಅಮೇರಿಕಾದ ಚಿಂಬರೋಜೋ ★
□●□●□●□●□●□●□●□●□●□●□●
10) ಭಾರತ ಸಂವಿಧಾನದ ಕರಡು ಪುನರಾಮರ್ಶನಾ ಸಮಿತಿಯ
ಅಧ್ಯಕ್ಷರು ಯಾರಾಗಿದ್ದರು ?
1. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ★
2. ಡಾ|| ಬಾಬು ರಾಜೇಂದ್ರ ಪ್ರಸಾದ್
3. ಸರ್ದಾರ್ ವಲ್ಲಭಬಾಯಿ ಪಟೇಲ್
4. ಬೆನಗಲ್ ನರಸಿಂಹರಾವ್
□●□●□●□●□●□●□●□●□●□●□●
11) ಜಪಾನಿನ ಪೂರ್ವ ತೀರದ ಪ್ರದೇಶವನ್ನು ಏನೆಂದು
ಕರೆಯುತ್ತಾರೆ?
1. ಓಯಾಶಿವೋ
2. ಮೋಟಾಶಿವೋ
3. ಕ್ಯೂರೊಶಿವೋ ★
4. ಕೊಟಾಶಿವೋ
□●□●□●□●□●□●□●□●□●□●□●
12) ಪ್ರತಿಪಕ್ಷದ ಮುಖಂಡನನ್ನು "ಪರ್ಯಾಯ ಪ್ರಧಾನಮಂತ್ರಿ"
ಎಂದು ಹೆಸರಿಸಿದವರು ಯಾರು ?
1. ಅರ್ನಾಲ್ಡ್ ಟಾಯ್ನಾಬಿ
2. ಪ್ರೋ.ಮನ್ರೋ
3. ರೇ ಜನ್ನಿಂಗ್ಸ್ ★
4. ಹರ್ಮನ್ ಫೈನರ್
□●□●□●□●□●□●□●□●□●□●□●
13)ಕೆಳಗಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಾಗಿದೆ .
1. ಪುದುಚೆರಿ - ಎನ್.ರಂಗಸ್ವಾಮಿ
2. ಮಣಿಪುರ - ಮುಕುಲ್ ಸಂಗ್ಮಾ ★
3. ಹಿಮಾಚಲ ಪ್ರದೇಶ- ವೀರಭದ್ರಸಿಂಗ್
4. ಬಿಹಾರ್- ಜಿತನ್ ರಾಂ ಮಂಝಿ
□●□●□●□●□●□●□●□●□●□●□●
14) ಮಹಾಭಾರತ ಯುದ್ಧದಲ್ಲಿ ಕೆಳಗಿನ ಯಾರು ಕೌರವ ಸೇನೆಯ
ನಾಯಕತ್ವ ವಹಿಸಿರಲಿಲ್ಲ?
1. ಶಲ್ಯ
2. ಸಾತ್ಯಕಿ ★
3. ಕರ್ಣ
4. ದ್ರೋಣಾಚಾರ್ಯ
□●□●□●□●□●□●□●□●□●□●□●
15) ಸಾರ್ಕ್ ನ ಪ್ರಸ್ತುತ ಸೆಕ್ರೆಟರಿ ಜನರಲ್ ಆಗಿ
ಕಾರ್ಯನಿರ್ವಹಿಸುತ್ತಿರುವವರು ಯಾರು?
1. ಸಿಂಗೇಯಿ ಡೋರ್ಜಿ
2. ಫಾತೀಮಾ ನಜ್ವಾ
3. ಅರ್ಜುನ್ ಬಹದ್ದೂರ್ ಥಾಪಾ★
4. ದಾನ್ ಬಹದ್ದೂರ್ ಓಲಿ
□●□●□●□●□●□●□●□●□●□●□●
16) Ananthapur district In Andrapradesh is famous for
1. Iron ore
2. Aluminum
3. Gold ★
4. Copper
□●□●□●□●□●□●□●□●□●□●□●
17) Which of the following is not a department of Finance
Ministry?
1. Department Of Economic Affairs
2. Department of Revenue 3. Department of Expenditure
4. Department of Central Exise ★
□●□●□●□●□●□●□●□●□●□●□●
18) Who introduced the first printing machine in England?
1. Jhon Guttenberg
2. Dunlop
3. Cockstan ★
4. Edward Louis
□●□●□●□●□●□●□●□●□●□●□●
19) Controller General of Accounts in India works
1. Under CAG
2. Under The Finance Ministry ★
3. Under the Audit and Accounts department
4. Is an Indipendent
□●□●□●□●□●□●□●□●□●□●□●
20) Among the follwing Which one is wrongly matched ?
1. Abu to barama- Shivarama karantha
2. Karthika - Vaidehi ★
3. Naaku thanthi - Bendre
4. Theertavani - G.S. Shivarudrappa
□●□●□●□●□●□●□●□●□●□●□●
21) Which institute secured no 1 rank in the list of top 500
institutes as per the QS World University
Rankings, published in Sep 2014?
A) National University of Singapore
B) Massachusetts Institute of Technology ★
C) Oxford University
D) Harvard University
□●□●□●□●□●□●□●□●□●□●□●
22) Prime Minister Narendra
Modi appointed former McKinsey India Chairman
___________ as the Chairman of Quality Council of India (QCI)
in Sep 2014 for a period of three years from the date of
taking full responsibility.
1. Adil Zainulbhai ★
2. Kaustubh Chakraborty
3. Navtez Singh Bal
4. Kushe Bahl
□●□●□●□●□●□●□●□●□●□●□●
23) Which of these metals or non metals is the main
constituent of both brass and bronze ?
1. carbon
2. lead
3. Copper ★
4. Silver
□●□●□●□●□●□●□●□●□●□●□●
24) On which of these routes does India's fastest
passenger train run ?
1. Delhi - Jaipur
2. Mumbai - Pune
3. Delhi - Lucknow
4. Delhi - Bhopal ★
□●□●□●□●□●□●□●□●□●□●□●
25) Which is the first Indian Army war aircraft ?
1. Varahi
2. Pushpak
3. Vapathi ★
4. Drhuv
□●□●□●□●□●□●□●□●□●□●□●
26) Which country in the world first to conducted on open
compitative exams for recruitment to civil services ?
1. USSR
2. FINLAND
3. GERMANY
4. CHINA ★
□●□●□●□●□●□●□●□●□●□●□●
27) Sariska and Ranathombore are the reserves for which
of the following animal?
1. Lion
2. Peacock
3. Tiger ★
4. Hippopotamus
□●□●□●□●□●□●□●□●□●□●□●
28) In China which city called as the Manchester of China?
1. Beijing
2. Shangai ★
3. Guangzhou
4. Changsha
□●□●□●□●□●□●□●□●□●□●□●
29) Who has emerged winner of Malawi's presidential
election in May 2014 after getting 36.4% of the total votes.
Post election result, he was also
sworn in as Malawi's president in May 2014.
1. Lazarus Chakwera
2. Peter Mutharika ★
3. Atupele Muluzi
4. Joyce Banda
□●□●□●□●□●□●□●□●□●□●□●
30) Complete the series .....
735,766,799,834,871,_____
1. 907
2. 908
3. 909
4. 910 ★
□●□●□●□●□●□●□●□●□●□●□●
[09/10 12:07 pm] : ಸಾಮಾನ್ಯ ಜ್ಞಾನ
1) ಮಳೆಯ ಹನಿಗಳು ಗುಂಡಾಕಾರವಾಗಿರುತ್ತದೆ. ಏಕೆಂದರೆ___
1. ಹೈಡ್ರೋಸ್ಟಾಟಿಕ್ ಒತ್ತಡ
2. ಮೇಲ್ಮೈ ಎಳೆತ ■
3. ಸ್ನಿಗ್ಧತೆ
4. ಮೇಲಿನ ಎಲ್ಲವೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
2) ತಂದೆಯ ರಕ್ತದ ಗುಂಪು "A" ಮತ್ತು ತಾಯಿಯ ರಕ್ತದ
ಗುಂಪು "O" ಆದರೆ ಅವರ ಮಗನಲ್ಲಿ ಯಾವ ಗುಂಪಿನ ರಕ್ತವನ್ನು
ಕಾಣುತ್ತೇವೆ?
1. B
2. AB
3. O ■
4. B,AB ಅಥವಾ O
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
3) ಮಾನವನ ದೇಹದ ಬೆನ್ನುಹುರಿಯಲ್ಲಿ ಕಂಡುಬರುವ
ಮೂಳೆಗಳ ಸಂಖ್ಯೆ ಎಷ್ಟು?
1. 24 ■
2. 26
3. 13
4. 20
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
4) ಕೆಳಗೆ ನೀಡಿರುವ ಹೆಸರುಗಳಲ್ಲಿ ಒಬ್ಬರ ಹೆಸರು ಈ ಪಟ್ಟಿಗೆ
ಸಂಬಂಧ ಪಡದು ಅದು ಯಾವುದು?
1. ಸಿದ್ಧೇಶ್ವರಿ
2. ಗಿರಿಜಾದೇವಿ
3. ಎಂ.ಎಲ್. ವಸಂತ ಕುಮಾರಿ ■
4. ಬಸವರಾಜ್ ರಾಜಗುರು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
5) ಚಿತ್ತರಂಜನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಎಲ್ಲಿದೆ?
1. ಡೆಹರಾಡೂನ್
2. ಚಿತ್ತರಂಜನ್
3. ಮುಂಬೈ
4. ಕೋಲ್ಕತಾ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
6) ಕೆಳಗಿನ ವಿದೇಶಿ ದಾಳಿಕೋರರನ್ನು ಕಾಲಾನುಕ್ರಮದಲ್ಲಿ
ಬರೆಯಿರಿ
1. ಬ್ಯಾಕ್ಟಿಯನ್ನರು
2. ಕುಷಾಣರು
3. ಶಕರು
ಎ. 3,2,1
ಬಿ. 1,3,2 ■
ಸಿ. 2,1,3
ಡಿ. ಎಲ್ಲವೂ ಒಮ್ಮೆಗೆ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
7) ಚಿತ್ತಗಾಂಗ್ ನ ಶಸ್ತ್ರಾಗಾರವನ್ನು ವಶಪಡಿಸಿಕೊಂಡ
ಕ್ರಾಂತಿಕಾರಿಗಳ ನಾಯಕ ಯಾರು?
1. ಸೂರ್ಯಸೇನ್ ■
2. ಜನಿತ್ ದಾಸ್
3. ಚಂದ್ರಶೇಖರ ಆಜಾದ್
4. ಭಗತ್ ಸಿಂಗ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
8) "ಖುಸಾಲತ್ - ಉಲ್ - ತವಾರಿಕ್ " ಗ್ರಂಥದ ಕರ್ತೃ ಯಾರು?
1. ಮಹಮ್ಮದ್ ಸಾಖಿ
2. ದಾರಾಷಿಕೋ
3. ಸುರ್ಜಸ್ ರಾಯ್ ■
4. ಖಾಫಿಖಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
9) ಕೆಳಗಿನ ಯಾವ ರಾಜ್ಯ ತನ್ನೆಲ್ಲಾ ನಾಗರೀಕರಿಗೆ ಸಾಮಾನ್ಯ
ನಾಗರೀಕ ಸಂಹಿತೆಯನ್ನು ಜಾರಿಗೆ ತಂದಿದೆ?
1. ಗೋವಾ ■
2. ಜಮ್ಮು ಮತ್ತು ಕಾಶ್ಮೀರ
3. ಕೇರಳ
4. ಅಸ್ಸಾಂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
10) ಯಾವ ಸಮಿತಿಯಲ್ಲಿ ಎರಡು ಸದನದ ಸದಸ್ಯರಿರುತ್ತಾರೆ?
1. ಯೋಜನಾ ಸಮಿತಿ
2. ಸಾರ್ವಜನಿಕ ಲೆಕ್ಕ ಪತ್ರಸಮಿತಿ ■
3. ಹಣಕಾಸು ಸಮಿತಿ
4. ರಕ್ಷಣಾ ಸಮಿತಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
11) ಮೂಲಭೂತ ಹಕ್ಕುಗಳು ಮೂಲಭೂತವಾದವು ಎಂದು
ಕರೆಯಲ್ಪಡಲು ಕಾರಣವೇನು?
1. ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಿಸಲ್ಪಡುವುದು
2. ಸರ್ಕಾರದ ಕಾನೂನಿನ ಮೂಲಕ ತೆಗೆದು ಹಾಕಲು ಸಾಧ್ಯವಿಲ್ಲ
3. ಸಂವಿಧಾನದತ್ತವಾದವು
4. ಮಾನವನ ಬೆಳವಣಿಗೆಗೆ ಅಗತ್ಯವಾದ ಅಂಶಗಳು ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕೆಳಗಿನ ವ್ಯಕ್ತಿಗಳಲ್ಲಿ ಏಳನೇ ಭಾರತದ ಮುಖ್ಯ
ಚುನಾವಣಾ ಆಯುಕ್ತರಾಗಿದ್ದವರು ಯಾರು?
1. ಆರ್.ವಿ.ಎಸ್.ಪೆರಿ ಶಾಸ್ತ್ರಿ
2. ವಿ.ಎಸ್. ರಮಾದೇವಿ
3. ಎಸ್. ಎಲ್. ಶಾಕದರ್
4. ಆರ್. ಕೆ. ತ್ರಿವೇದಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕಾಲಾನುಕ್ರಮದ ಸರಣಿಯನ್ನು ಈ ಕೆಳಗಿನ ಸಂಕೇತಗಳಿಂದ
ಆಯ್ಕೆ ಮಾಡಿ
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ
2. ಪೆಟ್ರೋಲ್ ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ
3. ವಿಮಾನದ ಸಂಶೋಧನೆ
4. ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
ಎ. 3,1,2,4
ಬಿ. 4,3,2,1 ■
ಸಿ. 2,3,1,4
ಡಿ. 4,1,3,2
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
13) "ವಾಕ್ಯಂ ರಸಾತ್ಮಕಂ ಕಾವ್ಯಂ" ಎಂದವರು ಯಾರು?
1. ವಿಶ್ವನಾಥ ■
2. ನಾಗವರ್ಮ
3. ಭಟ್ಟನಾಯಕ
4. ರುದ್ರಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
14) "ಕಾವ್ಯದಲ್ಲಿ ಯಾವ ಯಾವ ವೈಚಿತ್ರಗಳು ಉಂಟೋ,
ಅವೆಲ್ಲವೂ ಪ್ರತಿಭೋದ್ಭವವಾದದ್ದು" ಎಂದವರು ಯಾರು ?
1. ವಾಮನ
2. ರಾಜಶೇಖರ
3. ಕುಂತಕ ■
4. ಮಹಿಮಭಟ್ಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
15) ಯೋಗಿನಾಥ ಎಂಬ ಅಂಕಿತನಾಮವನ್ನು ಹೊಂದಿದ್ದ
ವಚನಕಾರರು ಯಾರು ?
1. ಸಿದ್ಧರಾಮ
2. ಸಕಲೇಶ ಮಾದರಸ
3. ಅಂಬಿಗರ ಚೌಡಯ್ಯ
4. ನಿಜಗುಣ ಶಿವಯೋಗಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
16) ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಗುರ್ತಿಸಿ.
20, 21, 25, 33, 50, 75
1. 25
2. 33 ■
3. 50
4. 75
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
17) ಈ ಕೆಳಗಿನ ಅಕ್ಷರ ಸರಣಿಯನ್ನು ಪೂರ್ಣಗೊಳಿಸಿ.
r s _ u _ s _ _ s p
1. t r p u
2. p u t u
3. p r p u ■
4. t t u p
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
18) ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
| 4 | 2 | 14 |
| 5 | 4 | 21 |
| 6 | ? | 30 |
1. 4
2. 5
3. 6 ■
4. 24
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
19) ಅಲ್ಪಕೋನೀಯ ಬಾಗುವಿಕೆಯನ್ನು ಹೊಂದಿರುವ ಬೆಳಗಿನ
ಬಣ್ಣ ಯಾವುದು ?
1. ನೇರಳೆ
2. ಹಳದಿ
3. ಕೆಂಪು ■
4. ನೀಲಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
20) ಕೆಳಗಿನವುಗಳಲ್ಲಿ ಯಾವುದು ಕಾಂತಿಯುಕ್ತ
(ಲಸ್ಟ್ರಸ್)ವಲ್ಲ ?
1. ಚಿನ್ನ
2. ಬೆಳ್ಳಿ
3. ಐಯೋಡಿನ್
4. ಯಾವುದೂ ಅಲ್ಲ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
21) ನಾವು ಕೇರಂ ಬೋರ್ಡ್ ಮೇಲೆ ಪೌಡರ್ ಸಿಂಪಡಿಸುವುದು,
1. ಘರ್ಷಣೆಯನ್ನು ಹೆಚ್ಚಿಸಲು ■
2. ಘರ್ಷಣೆಯನ್ನು ಕಡಿಮೆ ಮಾಡಲು
3. ಬೋರ್ಡ್ ಚೆನ್ನಾಗಿ ಕಾಣಲು
4. ಕೊಠಡಿಯಲ್ಲಿನ ಕೆಟ್ಟ ವಾಸನೆಯನ್ನು ದೂರಮಾಡಲು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
22) ಟೆರ್ರಿ ವಾಲ್ಶ್ ಮತ್ತು ಹಾವ್ ಗುಡ್ ಇತ್ತೀಚೆಗೆ ಭಾರತೀಯ
ಪುರುಷ ಹಾಗೂ ಮಹಿಳಾ ತಂಡಗಳ ತರಬೇತುದಾರರ
ಸ್ಥಾನದಿಂದ ಕೆಳಗಿಳಿದರು. ಇವರು ಯಾವ ಕ್ರೀಡೆಗೆ
ಸಂಬಂಧಿಸಿದವರಾಗಿದ್ದಾರೆ ?
1. ಹಾಕಿ ■
2. ಬ್ಯಾಡ್ಮಿಂಟನ್
3. ಬಾಕ್ಸಿಂಗ್
4. ಟೇಬಲ್ ಟೆನ್ನಿಸ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
23) "ವನಬಂಧು ಕಲ್ಯಾಣ ಯೋಜನೆ" ಯು ಈ ಕೆಳಗಿನ
ಯಾವುದಕ್ಕೆ ಸಂಬಂಧಿಸಿದೆ ?
1. ಅರಣ್ಯ ಸಂಪತ್ತಿನ ರಕ್ಷಣೆ
2. ವನ್ಯಜೀವಿಗಳ ರಕ್ಷಣೆ
3. ಅರಣ್ಯವಾಸಿಗಳ ರಕ್ಷಣೆ ■
4. ಮೇಲಿನ ಮೂರೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
24) ಒಂದು ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ
ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಇತ್ತೀಚೆಗೆ
ಯಾವ ರಾಜ್ಯ ಅನುಷ್ಠಾನಗೊಳಿಸಿದೆ ?
1. ಬಿಹಾರ
2. ಮಧ್ಯಪ್ರದೇಶ
3. ರಾಜಸ್ಥಾನ ■
4. ಓರಿಸ್ಸಾ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
25) ತಮ್ಮ ಕ್ರೈಂ ಕಾದಂಬರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದ
ಲೇಖಕಿಯರೊಬ್ಬರು ಇತ್ತೀಚೆಗೆ ನಿಧನರಾದರು. ಅವರು
ಯಾರು ?
1. ಅರ್ಥರ್ ಮಿಲ್ಲರ್
2. ಸ್ಟ್ಯಾನ್ಲಿ ಗಾರ್ಡನರ್
3. ಅಗಥಾ ಕ್ರಿಸ್ಟೇ
4. ಪಿ.ಡಿ.ಜೇಮ್ಸ್ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
26) ನವೆಂಬರ್ 2014 ರಲ್ಲಿ UPSC ಯ ನೂತನ ಅಧ್ಯಕ್ಷರಾಗಿ
ಆಯ್ಕೆಯಾದವರು ಯಾರು ?
1. ಡಿ.ಪಿ.ಅಗರವಾಲ್
2. ದೀಪಕ್ ಗುಪ್ತಾ ■
3. ಅಲ್ಕಾ ಸಿರೋಹಿ
4. ರಜನಿ ರಜ್ದಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
27) ಇತ್ತೀಚೆಗೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 58
ವರ್ಷಕ್ಕೆ ಇಳಿಕೆ ಮಾಡಿದ ಭಾರತದ ರಾಜ್ಯ ಯಾವುದು ?
1. ಹರಿಯಾಣ ■
2. ರಾಜಸ್ಥಾನ
3. ಮಹಾರಾಷ್ಟ್ರ
4. ಪಂಜಾಬ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
28) ಇಳಿಮುಖ ಪ್ರತಿಫಲ ನಿಯಮವನ್ನು ಅನುಭವಿಸುತ್ತಿರುವ
ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಿದಂತೆ ಉತ್ಪಾದನ ವೆಚ್ಚವು,
1. ಹೆಚ್ಚುತ್ತದೆ ■
2. ಕಡಿಮೆಯಾಗುತ್ತದೆ
3. ಸ್ಥಿರವಾಗಿರುತ್ತದೆ
4. ಯಾವುದೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
29) ಭಾರತದಲ್ಲಿನ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಸ್ತೆವ್ಯೂಹ
ಯಾವುದು ?
1. ಗ್ರಾಮೀಣ ಸಂಪರ್ಕ ರಸ್ತೆಗಳು ■
2. ಜಿಲ್ಲಾ ರಸ್ತೆಗಳು
3. ರಾಜ್ಯ ಹೆದ್ದಾರಿಗಳು
4. ರಾಷ್ಟ್ರೀಯ ಹೆದ್ದಾರಿಗಳು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
30) ಇತ್ತೀಚೆಗೆ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ
ಕಂಡುಬಂದ ಹೊಸ ಪಕ್ಷಿ ಪ್ರಭೇದಕ್ಕೆ ಭಾರತೀಯ ಮೂಲದ
ವಿಜ್ಞಾನಿ ಒಬ್ಬರ ಹೆಸರನ್ನಿಡಲಾಯಿತು. ಆ ವಿಜ್ಞಾನಿ ಯಾರು ?
1. ನವಜೋತ್ ಸೋಧಿ ■
2. R.K.ಪಚೌರಿ
3. ಡಾ.ಸಲೀಂ ಅಲಿ
4. ಯಾರೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
[09/10 12:08 pm] : ಸಾಮಾನ್ಯ ಜ್ಞಾನ
1) ಅತಿ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ
ಕರ್ನಾಟಕದ ಜಿಲ್ಲೆ ಯಾವುದು?
1. ತುಮಕೂರು
2. ಗುಲ್ಬರ್ಗ
3. ಹಾಸನ
4. ಉತ್ತರ ಕನ್ನಡ ■
☆★☆★☆★☆★☆★☆★☆★☆★☆★☆★
2) ಶ್ರೀ ರಾಜೀವಗಾಂಧಿ ರಾಷ್ಟ್ರೀಯ
ಉದ್ಯಾನವನ ವೆಂದು ಕರ್ನಾಟಕದ ಯಾವ
ರಾಷ್ಟ್ರೀಯ ಉದ್ಯಾನವನ್ನು ಕರೆಯಲಾಗಿದೆ ?
1. ಬಂಡೀಪುರ ರಾಷ್ಟ್ರೀಯ ಉದ್ಯಾನವನ
2. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
3. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ■
4. ಅಂಶಿ ರಾಷ್ಟ್ರೀಯ ಉದ್ಯಾನವನ
☆★☆★☆★☆★☆★☆★☆★☆★☆★☆★
3) ತೆಲಂಗಾಣ ರಾಜ್ಯ ಎಂದು ಉದಯವಾಯಿತು ?
1. ಮೇ 03 , 2014
2. ಆಗಸ್ಟ್ 18, 2014
3. ಜೂನ್ 02, 2014 ■
4. ಸೆಪ್ಟೆಂಬರ್ 17, 2014
☆★☆★☆★☆★☆★☆★☆★☆★☆★☆★
4) ಕೆಳಗಿನ ಯಾವ ಯಾವ ಸ್ಥಳಗಳಲ್ಲಿ
“ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್” ನ
ಕಾರ್ಖಾನೆಗಳಿವೆ ?
1. ಕಾರ್ವ, ಕಾನ್ಪುರ, ಲಕ್ನೋ
2. ಬರಕ್ ಪುರ, ಹೈದ್ರಾಬಾದ್
3. ಬೆಂಗಳೂರು, ಕೋರಾಪತ್, ನಾಸಿಕ್
4. ಮೇಲಿನ ಎಲ್ಲವೂ ■
☆★☆★☆★☆★☆★☆★☆★☆★☆★☆★
5) DRDO ದೇಶೀಯವಾಗಿ ಅಭಿವೃದ್ಧಿಪಡಿಸಿರುವ
ಮಾನವರಹಿತ ವಿಮಾನ ಯಾವುದು ?
1. ಚೀತಾಸ್
2. ಲಕ್ಷ್ಯ ■
3. ಧ್ರುವ
4. ನಿರ್ಭಯ್
☆★☆★☆★☆★☆★☆★☆★☆★☆★☆★
6) ದೇಶದ ಹತ್ತು ಲಕ್ಷ ಜನರನ್ನು ಡಿಜಿಟಲ್
ಕ್ಷೇತ್ರದ ಜ್ಞಾನಿಗಳನ್ನಾಗಿ ಮಾಡುವ
ಉದ್ದೇಶದಿಂದ ಭಾರತದ ಕೇಂದ್ರ ಸರ್ಕಾರದ
ಮಹತ್ವಾಕಾಂಕ್ಷಿ ಯೋಜನೆ ಯಾವುದು?
1. ಡಯಟಿ
2. ನಾಸ್ಕಾಂ
3. ಸೈಯೆಂಟ್
4. ಎನ್ ಡಿ ಎಲ್ ಎಂ ■
☆★☆★☆★☆★☆★☆★☆★☆★☆★☆★
7) ಯಾವ ಲೋಕಸಭೆಯ ಅವಧಿಯನ್ನು ಸಂವಿಧಾನ
ನಿಗದಿಪಡಿಸಿರುವ 5 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ
ವಿಸ್ತರಿಸಲಾಗಿತ್ತು?
1. 3 ನೇ ಲೋಕಸಭೆ
2. 6 ನೇ ಲೋಕಸಭೆ
3. 5 ನೇ ಲೋಕಸಭೆ ■
4. 4 ನೇ ಲೋಕಸಭೆ
☆★☆★☆★☆★☆★☆★☆★☆★☆★☆★
8) ಹಲವಾರು ರಾಜ್ಯಗಳಲ್ಲಿ ಶೆಡ್ಯೂಲ್ಡ್
ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ ಕುರಿತಂತೆ
ಇರುವ ವಿಶೇಷ ಸವಲತ್ತುಗಳನ್ನು ಸಂವಿಧಾನದ
ಯಾವ ಶೆಡ್ಯೂಲ್ ಒಳಗೊಂಡಿದೆ ?
1. 5 ನೇ ಶೆಡ್ಯೂಲ್ ■
2. 6 ನೇ ಶೆಡ್ಯೂಲ್
3. 4 ನೇ ಶೆಡ್ಯೂಲ್
4. 7 ನೇ ಶೆಡ್ಯೂಲ್
☆★☆★☆★☆★☆★☆★☆★☆★☆★☆★
9) ವ್ಯಾಪಾರಿಯೊಬ್ಬನು ವಸ್ತುವೊಂದನ್ನು
ರೂ 240 ಕ್ಕೆ ಮಾರುವುದರಿಂದ ಶೇ 10 ರಷ್ಟು
ನಷ್ಟವನ್ನು ಅನುಭವಿಸುತ್ತಾನೆ. ಅವನು ಶೇ 20
ರಷ್ಟು ಲಾಭ ಪಡೆಯಲು ಆ ವಸ್ತುವನ್ನು ಎಷ್ಟು
ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ?
1. 350
2. 300
3. 340
4. 320 ■
☆★☆★☆★☆★☆★☆★☆★☆★☆★☆★
10) 1, 2, 9, 28, 65, ____ ಈ ಶ್ರೇಣಿಯಲ್ಲಿ ಖಾಲಿ
ಬಿಟ್ಟಿರುವ ಜಾಗದಲ್ಲಿ ತುಂಬಬೇಕಾದ ಸೂಕ್ತ
ಸಂಖ್ಯೆ ಯಾವುದು ?
1. 99
2. 205
3. 126 ■
4. 76
☆★☆★☆★☆★☆★☆★☆★☆★☆★☆★
11) ಮಹೇಂದ್ರಗೌಡ ವೇತನವು ಪ್ರಕಾಶನ ವೇತನದ
ಶೇ 80 ರಷ್ಟು ಮತ್ತು ಮಹೇಶ್ ಗೌಡನ ವೇತನದ
ಶೇ 120 ಆಗಿದೆ. ಪ್ರಕಾಶ್ ವೇತನವು ರೂ 18,000
ಆಗಿದ್ದರೆ ಮಹೇಂದ್ರಗೌಡನ ವೇತನವೆಷ್ಟು ?
1. ರೂ 15,400
2. ರೂ 14,400 ■
3. ರೂ 13,600
4. ರೂ 12,600
☆★☆★☆★☆★☆★☆★☆★☆★☆★☆★
12) ಕೊಠಡಿಯೊಂದರ ಉದ್ದವು ಅದರ ಅಗಲದ 2
ರಷ್ಟಿದೆ. ಆ ಕೊಠಡಿಯ ವಿಸ್ತೀರ್ಣವು 24 ಚ.ಮೀ
ಆಗಿದ್ದರೆ ಅದರ ಅಗಲವೆಷ್ಟು ?
1. 11 ಮೀ ■
2. 12 ಮೀ
3. 14 ಮೀ
4. 16 ಮೀ
☆★☆★☆★☆★☆★☆★☆★☆★☆★☆★
13) ಹಿಂದಿನ ನಹಾನ್ ರಾಜ ಸಂಸ್ಥಾನವು ಈಗ ಯಾವ
ರಾಜ್ಯದ ಒಂದು ಭಾಗವಾಗಿದೆ ?
1. ಉತ್ತರ ಪ್ರದೇಶ
2. ಮಧ್ಯಪ್ರದೇಶ
3. ರಾಜಸ್ತಾನ
4. ಹಿಮಾಚಲ ಪ್ರದೇಶ ■
☆★☆★☆★☆★☆★☆★☆★☆★☆★☆★
14) ಮಂಗೋಲರ ಚೆಂಗೇಸ್ ಖಾನ್ ಭಾರತದ ಮೇಲೆ
ದಾಳಿ ಮಾಡುವ ಭೀತಿಯಿದ್ದ ಸಮಯದಲ್ಲಿ ದೆಹಲಿ
ಸುಲ್ತಾನನಾಗಿದ್ದವನು ಯಾರು?
1. ಬಲ್ಬನ್
2. ಅಲ್ಲಾವುದ್ದೀನ್ ಖಿಲ್ಜಿ
3. ಇಲ್ತಮಿಷ್ ■
4. ಜಲಾಲುದ್ದೀನ್ ಖಿಲ್ಜಿ
☆★☆★☆★☆★☆★☆★☆★☆★☆★☆★
15) ಸೆಪ್ಟೆಂಬರ್ 20, 1932 ರಂದು
ಮಹಾತ್ಮಗಾಂಧಿಯವರು ಯರವಾಡ ಜೈಲಿನಲ್ಲಿ
ಅಮರಣಾಂತ ಉಪವಾಸವನ್ನು ಯಾವುದರ
ವಿರುದ್ಧ ಕೈಗೊಂಡರು ?
1. ಗಾಂಧಿ – ಇರ್ವಿನ್ ಒಪ್ಪಂದ ಪಾಲಿಸದ ವಿರುದ್ಧ
2. ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರ ದಮನಕಾರಿ
ನೀತಿ ವಿರುದ್ಧ
3. ಕೋಲ್ಕತಾದಲ್ಲಿ ನಡೆದ ಕೋಮು ಗಲಭೆ ವಿರುದ್ಧ
4. ಮ್ಯಾಕ್ ಡೊನಾಲ್ಡ್ ನ ತೀರ್ಪಿನ ವಿರುದ್ಧ ■
☆★☆★☆★☆★☆★☆★☆★☆★☆★☆★
16) ಭಾರತದ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ
‘ಡೆಕ್ಕನ್ ಎಜುಕೇಶನಲ್ ಸೊಸೈಟಿ ‘ ಯನ್ನು
ಸ್ಥಾಪಿಸಿದವರು ಯಾರು ?
1. ಬಾಲಗಂಗಾಧರ ತಿಲಕ್ ■
2. ವಿ.ಡಿ. ಸಾವರ್ಕರ್
3. ದಾದಾಬಾಯಿ ನವರೋಜಿ
4. ಎಂ.ಜಿ.ರಾನಡೆ
☆★☆★☆★☆★☆★☆★☆★☆★☆★☆★
17) ಕೆಳಗಿನ ಯಾವುದರ ಮೇಲೆ ಹಬೆಯನ್ನು
ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?
1. ಕೆಂಪಗೆ ಕಾದಿರುವ ತಾಮ್ರ
2. ಕೆಂಪಗೆ ಕಾದಿರುವ ಕಬ್ಬಿಣ
3. ಕೆಂಪಗೆ ಕಾದಿರುವ ಕೋಕ್ ■
4. ಕೆಂಪಗೆ ಕಾದಿರುವ ಆಕ್ಸೈಡ್
☆★☆★☆★☆★☆★☆★☆★☆★☆★☆★
18) ಈ ಕೆಳಗಿನ ಯಾವ ಜೋಡಿಯು ಸರಿಯಾಗಿ
ಹೊಂದಿಕೆಯಾಗಿಲ್ಲ ?
1. ಐಸೋಥರ್ಮ್ – ಉಷ್ಣತೆ
2. ಐಸೋಬಾರ್ – ಒತ್ತಡ
3. ಐಸೋಹೆಲ್ಸ್ – ಬಿಸಿಲಿನ ಅವಧಿ
4. ಐಸೋಹೈಟ್ಸ್ – ಆರ್ದ್ರತೆ ■
☆★☆★☆★☆★☆★☆★☆★☆★☆★☆★
19) “ಹೈಡ್ರಾಲಿಕ್ ಬ್ರೇಕ್” ಗಳು ಯಾವ ನಿಯಮದ
ಮೇಲೆ ಕೆಲಸ ನಿರ್ವಹಿಸುತ್ತವೆ ?
1. ಪ್ಯಾಸ್ಕಲ್ ನ ನಿಯಮ ■
2. ನ್ಯೂಟನ್ ನ ನಿಯಮ
3. ಥಾಮ್ಸನ್ ನ ನಿಯಮ
4. ಬೆರ್ನೋಲಿಯ ನಿಯಮ
☆★☆★☆★☆★☆★☆★☆★☆★☆★☆★
20) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ
ಅಧ್ಯಕ್ಷರು ಪ್ರಧಾನಮಂತ್ರಿಗಳಾಗಿರುತ್ತಾರೆ.
ಹಾಗಾದರೆ ಅದರ ಕಾರ್ಯದರ್ಶಿ ಯಾರಾಗಿರುತ್ತಾರೆ ?
1. ಹಣಕಾಸು ಸಚಿವರು
2. ಸಂಸದೀಯ ಕಾರ್ಯದರ್ಶಿ
3. ರಾಷ್ಟ್ರಪತಿ
4. ಮೇಲಿನ ಯಾರೂ ಅಲ್ಲ ■
☆★☆★☆★☆★☆★☆★☆★☆★☆★☆★
21) 2014 – 15 ರ ಕರ್ನಾಟಕದ ಕಾಂಗ್ರೆಸ್ ಸರ್ಕಾರದ
ಆಯವ್ಯಯವು ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಹಣ
ಮೀಸಲಿರಿಸಿದೆ ?
1. 23,050 ಕೋಟಿ
2. 21,305 ಕೋಟಿ ■
3. 18,200 ಕೋಟಿ
4. 22,100 ಕೋಟಿ
☆★☆★☆★☆★☆★☆★☆★☆★☆★☆★
22) 2011 ರ ಜನಗಣತಿಯ ಪ್ರಕಾರ ರಾಜ್ಯಗಳ
ಜನಸಂಖ್ಯೆಯು ಇಳಿಕೆಯ ಕ್ರಮದಲ್ಲಿರುವ ಸರಿಯಾದ
ಅನುಕ್ರಮವನ್ನು ಗುರ್ತಿಸಿ .
1. ಕರ್ನಾಟಕ – ತಮಿಳುನಾಡು – ಆಂಧ್ರಪ್ರದೇಶ
2. ತಮಿಳುನಾಡು – ಆಂಧ್ರಪ್ರದೇಶ – ಕರ್ನಾಟಕ
3. ತಮಿಳುನಾಡು – ಕರ್ನಾಟಕ – ಆಂಧ್ರಪ್ರದೇಶ
■
4. ಆಂಧ್ರಪ್ರದೇಶ – ಕರ್ನಾಟಕ – ತಮಿಳುನಾಡು
☆★☆★☆★☆★☆★☆★☆★☆★☆★☆★
23) ಕೆಳಗಿನವುಗಳಲ್ಲಿ ಯೂರೋ ನಾಣ್ಯಕ್ಕೆ
ಬದ್ಧವಾಗಿರದ ರಾಷ್ಟ್ರ ಯಾವುದು ?
1. ಫ್ರಾನ್ಸ್
2. ಇಟಲಿ
3. ಜರ್ಮನಿ
4. ರಷ್ಯಾ ■
☆★☆★☆★☆★☆★☆★☆★☆★☆★☆★
24) ಯಾವ ನಗರದಲ್ಲಿ ನಡೆದ ಕಾಂಗ್ರಸ್
ಅಧಿವೇಶನದಲ್ಲಿ ಮೊದಲ ಬಾರಿಗೆ ಗಾಂಧಿಯನ್ನು
ನೆಹರೂರವರು ಭೇಟಿಯಾದರು ?
1. ಲಕ್ನೋ ■
2. ಅಲಹಾಬಾದ್
3. ಮುಂಬಯಿ
4. ಅಹ್ಮದಾಬಾದ್
☆★☆★☆★☆★☆★☆★☆★☆★☆★☆★
25) ದೀಪಾವಳಿ ದಿನದಂದು ಮುಂಬಯಿನ
ಶೇರುಮಾರುಕಟ್ಟೆಯ BSE ಮತ್ತು NSE ಯಲ್ಲಿ
ನಡೆಯುವ ಟ್ರೇಡಿಂಗ್ ಅನ್ನು ಯಾವ ಹೆಸರಿನಿಂದ
ಕರೆಯುತ್ತಾರೆ ?
1. ಶುಭ್ ಟ್ರೇಡಿಂಗ್
2. ಲಕ್ಷ್ಮೀ ಟ್ರೇಡಿಂಗ್
3. ಜನ ಸಾಮಾನ್ಯ್ ಟ್ರೇಡಿಂಗ್
4. ಮುಹೂರತ್ ಟ್ರೇಡಿಂಗ್ ■
☆★☆★☆★☆★☆★☆★☆★☆★☆★☆★
26) ಕೆಳಕಂಡ ಬ್ಯಾಂಕುಗಳಲ್ಲಿ ಯಾವ ಬ್ಯಾಂಕ್
15 ರ ಆಗಸ್ಟ್ 1907 ರಲ್ಲಿನ ಸ್ವದೇಶಿ ಚಳುವಳಿಯ
ಒಂದು ಭಾಗವಾಗಿ ಕಾರ್ಯನಿರ್ವಹಿಸಿತ್ತು ?
1. ಸಿಂಡಿಕೇಟ್ ಬ್ಯಾಂಕ್
2. ಪಂಜಾಬ್ ನ್ಯಾಷನಲ್ ಬ್ಯಾಂಕ್
3. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
4. ಇಂಡಿಯನ್ ಬ್ಯಾಂಕ್ ■
☆★☆★☆★☆★☆★☆★☆★☆★☆★☆★
27) ಯಾವ ವರ್ಷದಿಂದ ಪ್ರತಿಷ್ಠಿತ ನೊಬೆಲ್
ಪ್ರಶಸ್ತಿಯನ್ನು ಹೊಸ ಸೆಂಟರ್ ನಲ್ಲಿ
ನೀಡಲಾಗುವುದೆಂದು ತೀರ್ಮಾನಿಸಲಾಗಿದೆ?
1. 2016
2. 2018
3. 2019 ■
4. 2020
☆★☆★☆★☆★☆★☆★☆★☆★☆★☆★
28) ಭಾರತದಲ್ಲಿನ ಯಾವ ರಾಜ್ಯವು ತನ್ನ
ವ್ಯಾಪ್ತಿಯಲ್ಲಿನ ಎಲ್ಲಾ ಕುಟುಂಬಗಳಿಗೂ
ಬ್ಯಾಂಕ್ ಖಾತೆಯ ಸೌಲಭ್ಯ ಒದಗಿಸಿದ ಪ್ರಥಮ
ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು ?
1. ಕೇರಳ ■
2. ಗುಜರಾತ್
3. ಅರುಣಾಚಲ ಪ್ರದೇಶ
4. ಗೋವಾ
☆★☆★☆★☆★☆★☆★☆★☆★☆★☆★
29) ಸಾಮೂಹಿಕ ಶುಚಿತ್ವ ಕಾರ್ಯಕ್ರಮಕ್ಕಾಗಿ
ನೀಡಲ್ಪಡುವ ” ವೈಸ್ ಲಿಟ್ಜ್ ” ಜಾಗತಿಕ ಪ್ರಶಸ್ತಿಗೆ
ಆಯ್ಕೆಯಾದ ಭಾರತೀಯನಾರು ?
1. ಪ್ರೋ. ಪ್ರದೀಪ್ ಮಜುಂದಾರ್
2. ಡಾ. ಪರಮ್ ವೀರ್ ಸಿಂಗ್
3. ಅಸ್ಮಾ ಜಹಂಗೀರ್
4. ಅನೂಪ್ ಜೈನ್ ■
☆★☆★☆★☆★☆★☆★☆★☆★☆★☆★
30) 2015 ರ ಫೆಬ್ರವರಿ , 22 ರಂದು ನಡೆಯಲಿರುವ
ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ
ಚಿತ್ರವಾಗಿ ಯಾವುದು ಆಯ್ಕೆಯಾಗಿದೆ ?
1. ಪುಣೆ ವಯಾ ಬಿಹಾರ್
2. ಲೈಯರ್ಸ್ ಡೈಸ್ ■
3. ಫೋಸ್ಟರ್ ಬಾಯ್ಸ್
4. ವಿಂಡೋ ಕನೆಕ್ಷನ್
☆★☆★☆★☆★☆★☆★☆★☆★☆★☆★
Sunday, 9 October 2016
Kannada gk 10/10/2016
Labels:
Kannada
Subscribe to:
Post Comments (Atom)
No comments:
Post a Comment