ಜೂನ್-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು
June 1, 2016ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ
ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು
ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ
ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ,
5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
1-6-16.
ನಾನು ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ
ನಿರ್ವಹಿಸುತ್ತಿದ್ದು ನನಗೆ ಇನ್ನೊಂದು ಚಿಕಿತ್ಸಾಲಯದ
ವೈದ್ಯಾಧಿಕಾರಿ ಹುದ್ದೆಗೆ ಪ್ರಭಾರ ವಹಿಸಲಾಗಿದೆ. ನಾನು
ಪ್ರಯಾಣ ಭತ್ಯೆ ಪಡೆಯುತ್ತಿದ್ದು ಪ್ರಭಾರ ಭತ್ಯೆ
ಪಡೆಯಬಹುದೇ?
| ಡಾ. ಸುಶೀಲಾ ಪಿ. ಬೆಳಗಾವಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 32ನ್ನು
ಓದಿಕೊಂಡಂತೆ ನಿಯಮ 68ರ ಮೇರೆಗೆ ನಿಮ್ಮ ವೇತನ ಶ್ರೇಣಿಯ
ಕನಿಷ್ಠ ವೇತನಕ್ಕೆ ಶೇ. 7.5 ಪ್ರಭಾರ ಭತ್ಯೆ ಪಡೆಯಬಹುದು.
ನೀವು ಪ್ರಯಾಣ ಭತ್ಯೆ ಪಡೆಯುತ್ತಿದ್ದರೂ ಹೆಚ್ಚುವರಿಯಾದ
ಪ್ರಭಾರವನ್ನು ವಹಿಸಿಕೊಂಡಿರುವುದರಿಂದ ನೀವು ಪ್ರವಾಸ
ಭತ್ಯೆಯೊಂದಿಗೆ ಈ ಪ್ರಭಾರ ಭತ್ಯೆಯನ್ನು ಪಡೆಯಬಹುದು.
***
2-6-16
ನಾನು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ
ಉಪನ್ಯಾಸಕಿಯಾಗಿದ್ದು ನನ್ನ ಮಗಳ ಬಾಣಂತನದ ಸಲುವಾಗಿ
160 ದಿನಗಳ ಕಾಲ ವೇತನ ರಜೆ ಪಡೆದಿರುತ್ತೇನೆ. ದಿನಾಂಕ
4.1.2016ರಂದು ಕರ್ತವ್ಯಕ್ಕೆ ಹಾಜರಾಗಿದ್ದು ನನ್ನ ವಾರ್ಷಿಕ
ವೇತನ ಬಡ್ತಿಯು 2016 ಆಗಿರುತ್ತದೆ. ವೇತನ ರಹಿತ ರಜೆಯನ್ನು
ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರ ಯಾವುದು? ನನ್ನ
ವಾರ್ಷಿಕ ವೇತನ ಬಡ್ತಿಯು ಯಾವ ತಿಂಗಳಿನಲ್ಲಿ ಬೀಳುತ್ತದೆ?
ಮುಂದೂಡಲ್ಪಟ್ಟ ವಾರ್ಷಿಕ ವೇತನ ಬಡ್ತಿಯು ಮುಂದಿನ
ವರ್ಷಗಳಲ್ಲಿ ಅದೇ ತಿಂಗಳಲ್ಲಿ ಮುಂದುವರಿಯುವುದೇ ಅಥವಾ
ಹಿಂದಿನಂತೆ ಫೆಬ್ರವರಿ ತಿಂಗಳಿನಲ್ಲಿ ಜಮೆಯಾಗುವುದೇ?
|ಕೆ. ನೀರಜಾಬಾಯಿ ಹೊಸಪೇಟೆ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 117ರಂತೆ
ವೇತನ ರಹಿತ ರಜೆಯನ್ನು ರಜೆ ಮಂಜೂರು ಮಾಡುವ
ಅಧಿಕಾರವುಳ್ಳ ಅಧಿಕಾರಿಯೇ ಮಂಜೂರು ಮಾಡಬಹುದು.
ನಿಮ್ಮ ವಾರ್ಷಿಕ ವೇತನ ಬಡ್ತಿಯು ಫೆಬ್ರವರಿಯಿಂದ 160 ದಿನಗಳ
ಕಾಲ ಮುಂದೂಡಲ್ಪಟ್ಟಿದ್ದು ಜುಲೈ 10ರಂದು ಮಂಜೂರು
ಮಾಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಈ ವೇತನ
ಬಡ್ತಿಯನ್ನು ಸೇವಾ ನಿಯಮಾವಳಿಯಂತೆ ಫೆಬ್ರವರಿ ತಿಂಗಳಿನಲ್ಲೇ
ಜಮೆ ಮಾಡಲಾಗುತ್ತದೆ.
***
3-6-16
***
5-6-16
ಮೈಸೂರಿನ ಕಾರಾಗೃಹ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಕೆಲಸ
ಮಾಡುತ್ತಿದ್ದ ನನ್ನ ಪತಿ 2013ರಲ್ಲಿ ಸೇವೆಯಲ್ಲಿರುವಾಗಲೇ
ನಿಧನ ಹೊಂದಿರುತ್ತಾರೆ. ನಾವು ಇಲಾಖೆಯ ಸರ್ಕಾರಿ ವಸತಿ
ಗೃಹದಲ್ಲಿ ವಾಸಮಾಡುತ್ತಿದ್ದು 2015ರ ಮೇ ತಿಂಗಳಿನಲ್ಲಿ ಖಾಲಿ
ಮಾಡಿ ಬಾಡಿಗೆಗೆ ಹೋಗಿರುತ್ತೇವೆ. ನನಗೆ ಅನುಕಂಪದ ಮೇಲೆ
ನೌಕರಿ ನೀಡಬೇಕೆಂದು ಅರ್ಜಿ ಸಲ್ಲಿಸಿದರೂ ಈವರೆಗೂ ನೌಕರಿ
ನೀಡಿರುವುದಿಲ್ಲ. ಅಲ್ಲದೆ ಬರುತ್ತಿರುವ ಕುಟುಂಬ ಪಿಂಚಣಿಯು
ಸಹ ಕಡಿವೆಾಯಾಗಿದ್ದು ನಮ್ಮ ಎರಡೂ ಮಕ್ಕಳ ವಿದ್ಯಾಭ್ಯಾಸದ
ಜೊತೆಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಏತನ್ಮಧ್ಯೆ 2013ರಿಂದ
2015ರವರ ಅವಧಿಯಲ್ಲಿ ನಾವು ಸರ್ಕಾರಿ ವಸತಿ ಗೃಹದಲ್ಲಿ
ವಾಸವಾಗಿದ್ದ ಪ್ರಯುಕ್ತ 2,75,000 ರೂ. ಬಾಡಿಗೆ
ಕಟ್ಟಬೇಕೆಂದು ನೋಟಿಸ್ ನೀಡಿದ್ದಾರೆ. ನಾನು ಎಷ್ಟು ಹಣ
ಸಂದಾಯ ಮಾಡಬೇಕೆಂಬುದು ನನಗೆ ತಿಳಿದಿರುವುದಿಲ್ಲ.
ದಯವಿಟ್ಟು ಸೂಕ್ತ ಸಲಹೆ ನೀಡಿ.
|ಸುಮಾ ಮೈಸೂರು
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಪರಿಶಿಷ್ಟ 4ರಲ್ಲಿರುವ
ಸರ್ಕಾರಿ ನೌಕರರ ನಿವಾಸಿಗಳಿಗಾಗಿ ಬಳಸುವ ಸರ್ಕಾರಿ ಕಟ್ಟಡಗಳ
ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ ನಿಯಮಗಳು 2002ರ
ನಿಯಮ 30 (4) ರಂತೆ ಸರ್ಕಾರಿ ನೌಕರನು ಮರಣ ಹೊಂದಿದ
ದಿನಾಂಕದಿಂದ ಒಂದು ತಿಂಗಳು ಮಾತ್ರ ಬಾಡಿಗೆ ಇಲ್ಲದೆ
ನಿವಾಸವನ್ನು ಇಟ್ಟುಕೊಳ್ಳಲು ಆತನಿಗೆ ಅವಕಾಶವಿರುತ್ತದೆ.
ತದನಂತರ ಮುಂದಿನ 3 ತಿಂಗಳ ಅವಧಿಗೆ 10ನೇ ನಿಯಮದ ಮೇರೆಗೆ
ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರತಕ್ಕದ್ದೆಂದು
ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು ಇಲಾಖೆಯು ಸೂಚಿಸಿದ
ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.
***
7-6-16
ನಾನು ಶಿಸ್ತು ಪ್ರಾಧಿಕಾರಿಯು ಸಿಸಿಎ ನಿಯಮಾವಳಿಯ ನಿಯಮ
11(4)ರ ಮೇರೆಗೆ ಹೊರಡಿಸಿದ ಆರೋಪ ಪಟ್ಟಿಯನ್ನು
ತೆಗೆದುಕೊಳ್ಳಲು ನಿರಾಕರಿಸಿದೆ. ನನ್ನ ಈ ವರ್ತನೆ
ದುರ್ನಡತೆಯಾಗುತ್ತದೆಯೇ?
| ಸುರೇಶ್ಕುಮಾರ್ ಮಂಗಳೂರು
ನಿಮ್ಮ ಈ ವರ್ತನೆ ಅವಿಧೇಯತೆಯಾಗುತ್ತದೆ. ಸರ್ಕಾರಿ ನೌಕರನಿಗೆ
ತಕ್ಕುದಲ್ಲದ ನಡತೆಯಾಗುತ್ತದೆ. ಅಲ್ಲದೆ ನಡತೆ ನಿಯಮಗಳ ನಿಯಮ 3
(ಜಿ) ರ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಇಂತಹ ನಿಮ್ಮ ನಡತೆ
ಸಿಸಿಎ ನಿಯಮಗಳ ನಿಯಮ 8ರ ಉದ್ದೇಶಕ್ಕೆ ವಿರುದ್ಧವಾಗಿದ್ದು
ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದಾಗಿರುತ್ತದೆ.
***
8-6-16
***
9-6-16
ಈಗ ಸರ್ಕಾರದ ಅನುಮತಿ ಪಡೆಯಬಹುದೇ?
ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ 2002ರಿಂದ 5 ವರ್ಷ
ಸೇವೆ ಸಲ್ಲಿಸಿ ನಂತರ 2007ರಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ನೇಮಕ
ಹೊಂದಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಹಿಂದಿನ ಸೇವಾ
ಪುಸ್ತಕವೇ ಮುಂದುವರಿದಿದ್ದು ಪಿಂಚಣಿ ಸೌಲಭ್ಯಕ್ಕಾಗಿ
ಸರ್ಕಾರದ ಅನುಮತಿ ಅಗತ್ಯವೇ? ಈಗ ಸರ್ಕಾರದ ಅನುಮತಿ
ಪಡೆಯಬಹುದೇ?
|ಎಂ. ನಾರಾಯಣರಾವ್ ಮಸ್ಕಿ, ರಾಯಚೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 124 ಬಿ
ರೀತ್ಯ ನಿವೃತ್ತಿ ವೇತನಕ್ಕಾಗಿ ಸರ್ಕಾರಿ ಸೇವೆಗೆ ಸೇರಿದ
ದಿನಾಂಕದಿಂದ 3 ವರ್ಷದೊಳಗಾಗಿ ಸರ್ಕಾರಿ ನೌಕರನು ತನ್ನ ಹಿಂದಿನ
ಸೇವೆಯನ್ನು ಪರಿಗಣಿಸಲು ಕೋರಿ ಅರ್ಜಿಯನ್ನು
ಸಲ್ಲಿಸತಕ್ಕದ್ದು. ಅನಂತರ ನೇಮಕ ಪ್ರಾಧಿಕಾರವು ಸೂಕ್ತ
ಆದೇಶ ಹೊರಡಿಸುವ ಮೊದಲು ಸೂಕ್ತ ದಾಖಲೆಗಳೊಂದಿಗೆ
ಸರ್ಕಾರದ ಅನುಮೋದನೆ ಪಡೆಯಬೇಕು. ಹೀಗಿರುವಲ್ಲಿ
ನೀವು ನಿಮ್ಮ ಹಿಂದಿನ ಸೇವೆಯನ್ನು ಪರಿಗಣಿಸಲು ನಿಮ್ಮ
ನೇಮಕ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
***
10-6-2016
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 1.6.1991ರಿಂದ
31.5.2016ರವರೆಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ
ಕಳೆದ ಮಾರ್ಚ್ನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು
ಕೌನ್ಸಿಲಿಂಗ್ಗೆ ಹೋಗಿದ್ದ ನಾನು ಮತ್ತು ನನ್ನ ಅನೇಕ
ಸಹೋದ್ಯೋಗಿಗಳು ತಾತ್ಕಾಲಿಕವಾಗಿ ಪದೋನ್ನತಿಯನ್ನು
ನಿರಾಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮಗೆ 25 ವರ್ಷಗಳ ಕಾಲ
ಸಲ್ಲಿಸಿದ ಸೇವೆಗೆ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುತ್ತದೆಯೇ? ಇಲ್ಲವಾದಲ್ಲಿ ಆಡಳಿತ ನ್ಯಾಯಮಂಡಳಿಗೆ
ದಾವೆ ಹೂಡಬಹುದೇ*?
|ಎಂ. ಮಂಜುನಾಥ್ ಕೋಲಾರ
ಸರ್ಕಾರವು ದಿನಾಂಕ 14.6.2012ರ ತನ್ನ ಆದೇಶ ಸಂಖ್ಯೆ ಎಫ್ಡಿ
12, ಎಸ್ಆರ್ಪಿ 2012 (8) ರಲ್ಲಿ ಸೇವೆಯಲ್ಲಿ ಒಂದೂ ಪದೋನ್ನತಿ
ಇಲ್ಲದೆ ನಿರಂತರವಾಗಿ 25 ಮತ್ತು 30 ವರ್ಷಗಳು ಕಾರ್ಯ
ನಿರ್ವಹಿಸಿದ್ದರೆ ಅಂತಹ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನಬಡ್ತಿ
ಮಂಜೂರು ಮಾಡಬೇಕೆಂದು ಸೂಚಿಸಿದೆ. ಇದೇ ಆದೇಶದ
ಕಂಡಿಕೆ 6 (ಜಿಜಿ)ರಲ್ಲಿ ಈ ಸೌಲಭ್ಯವನ್ನು ತಮ್ಮ
ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ
ಅನ್ವಯಿಸತಕ್ಕದ್ದಲ್ಲವೆಂದು ತಿಳಿಸಿದೆ. ಹೀಗಾಗಿ ನೀವು
ಪದೋನ್ನತಿಯನ್ನು ಬಿಟ್ಟುಕೊಟ್ಟಿರುವುದರಿಂದ ನಿಮಗೆ ಈ
25ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
ಅಲ್ಲದೆ ನೀವು ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದರಿಂದ
ಯಾವುದೇ ಪ್ರಯೋಜನವಾಗುವುದಿಲ್ಲ.
***
11-6-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ 1.6.1991ರಿಂದ
31.5.2016ರವರೆಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಆದರೆ
ಕಳೆದ ಮಾರ್ಚ್ನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು
ಕೌನ್ಸಿಲಿಂಗ್ಗೆ ಹೋಗಿದ್ದ ನಾನು ಮತ್ತು ನನ್ನ ಅನೇಕ
ಸಹೋದ್ಯೋಗಿಗಳು ತಾತ್ಕಾಲಿಕವಾಗಿ ಪದೋನ್ನತಿಯನ್ನು
ನಿರಾಕರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮಗೆ 25 ವರ್ಷಗಳ ಕಾಲ
ಸಲ್ಲಿಸಿದ ಸೇವೆಗೆ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುತ್ತದೆಯೇ? ಇಲ್ಲವಾದಲ್ಲಿ ಆಡಳಿತ ನ್ಯಾಯಮಂಡಳಿಗೆ
ದಾವೆ ಹೂಡಬಹುದೇ?
|ಎಂ. ಮಂಜುನಾಥ್ ಕೋಲಾರ
ಸರ್ಕಾರವು ದಿನಾಂಕ 14.6.2012ರ ತನ್ನ ಆದೇಶ ಸಂಖ್ಯೆ ಎಫ್ಡಿ
12, ಎಸ್ಆರ್ಪಿ 2012 (8) ರಲ್ಲಿ ಸೇವೆಯಲ್ಲಿ ಒಂದೂ ಪದೋನ್ನತಿ
ಇಲ್ಲದೆ ನಿರಂತರವಾಗಿ 25 ಮತ್ತು 30 ವರ್ಷಗಳು ಕಾರ್ಯ
ನಿರ್ವಹಿಸಿದ್ದರೆ ಅಂತಹ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನಬಡ್ತಿ
ಮಂಜೂರು ಮಾಡಬೇಕೆಂದು ಸೂಚಿಸಿದೆ. ಇದೇ ಆದೇಶದ
ಕಂಡಿಕೆ 6 (ಜಿಜಿ)ರಲ್ಲಿ ಈ ಸೌಲಭ್ಯವನ್ನು ತಮ್ಮ
ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ
ಅನ್ವಯಿಸತಕ್ಕದ್ದಲ್ಲವೆಂದು ತಿಳಿಸಿದೆ. ಹೀಗಾಗಿ ನೀವು
ಪದೋನ್ನತಿಯನ್ನು ಬಿಟ್ಟುಕೊಟ್ಟಿರುವುದರಿಂದ ನಿಮಗೆ ಈ
25ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
ಅಲ್ಲದೆ ನೀವು ನ್ಯಾಯಮಂಡಳಿಯಲ್ಲಿ ಪ್ರಶ್ನಿಸುವುದರಿಂದ
ಯಾವುದೇ ಪ್ರಯೋಜನವಾಗುವುದಿಲ್ಲ.
***
12-6-16
ನಾನು ನ್ಯಾಯಾಂಗ ಇಲಾಖೆಯಲ್ಲಿ ಬೆರಳಚ್ಚುಗಾರನಾಗಿ
2002ರಲ್ಲಿ ನೇಮಕ ಗೊಂಡಿದ್ದು, 2011ರಲ್ಲಿ ಕೆಪಿಎಸ್ಸಿಯಿಂದ
ಕರೆಯಲಾದ ಬೆರಳಚ್ಚುಗಾರರ ಹುದ್ದೆಗೆ ನಿರಾಕ್ಷೇಪಣಾ ಪತ್ರ ಸಹಿತ
ಅರ್ಜಿ ಸಲ್ಲಿಸಿದ್ದೇನೆ. ಅಲ್ಲದೆ ದಿನಾಂಕ 31.5.2015ರಂದು ಕೆಸಿಎಸ್
ಆರ್ 252 (ಬಿ)ರ ಅನ್ವಯ ಬಿಡುಗಡೆ ಹೊಂದಿ ರಾಜ್ಯ ಲೆಕ್ಕಪತ್ರ
ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಆದ್ದರಿಂದ ಯಾವ
ನಿಯಮದಡಿಯಲ್ಲಿ 2002ರಿಂದ 2015ರವರೆಗೆ ಪಡೆದ ವೇತನ
ಮುಂದುವರಿಯುತ್ತದೆ? ನನ್ನ ಈ ಮೊದಲಿನ ಸೇವೆಯನ್ನು
ಅರ್ಹತಾದಾಯಕ ಸೇವೆ ಎಂದು ಪರಿಗಣಿಸಲು ಯಾವ ನಿಯಮದಡಿ
ಅವಕಾಶವಿದೆ? |ಎಸ್.ಎಂ. ರಾಘವೇಂದ್ರ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41-ಎ
ರೀತ್ಯ ನಿಮಗೆ ವೇತನ ರಕ್ಷಣೆ ಲಭ್ಯವಾಗುತ್ತದೆ. ಈ
ನಿಯಮಾವಳಿಯಂತೆ ಹಿಂದೆ ಹೊಂದಿದ್ದ ಹುದ್ದೆಯ
ಸಾದೃಶ್ಯವಾದ ವೇತನ ಶ್ರೇಣಿಯಲ್ಲಿ ನೇಮಕಗೊಂಡ
ವೇತನಕ್ಕೆ ಸಮನಾದ ಹಂತಕ್ಕೆ ವೇತನವನ್ನು
ನಿಗದಿಪಡಿಸಬೇಕೆಂದು ಸೂಚಿಸಲಾಗಿದೆ. ನಿಮ್ಮ ಸೇವೆಯನ್ನು ಈ
ನಿಯಮಾವಳಿಯ 224-ಬಿ ಅಡಿಯಲ್ಲಿ ನೀವು ಹಿಂದಿನ ಸೇವೆಯನ್ನು
ಪರಿಗಣಿಸಲು ನಿಮ್ಮ ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿಯನ್ನು
ಸಲ್ಲಿಸಬೇಕು. ಈ ರೀತಿ ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ಹಿಂದಿನ
ನಿವೃತ್ತಿ ವೇತನ ಸೌಲಭ್ಯಗಳ ನಿಯಮಾವಳಿ ಅನ್ವಯವಾಗುತ್ತವೆ.
***
13-6-16
***
14-6-16
ಸರ್ಕಾರದಿಂದ ಸಹಕಾರ ಇಲಾಖೆಯ ಮೂಲಕ ನೋಂದಾಯಿಸಿದ
ಸಹಕಾರಿ ಸಂಘಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಆಡಳಿತ
ಮಂಡಳಿಯ ಮೂಲಕ ನಡೆಸಲ್ಪಡುತ್ತಿವೆ. ಸಿಬ್ಬಂದಿ ವೃಂದ
ಬಲವರ್ಧನೆ, ವೇತನ ಶ್ರೇಣಿ ಪರಿಷ್ಕರಣೆ ಮುಂತಾದವುಗಳಿಗೆ
ಸಹಕಾರ ಇಲಾಖೆಯ ಅನುಮತಿ ಪಡೆಯುವ ಅಗತ್ಯವೇ?
|ನಾರಾಯಣ ಶೆಟ್ಟಿ ದಕ್ಷಿಣ ಕನ್ನಡ
ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959 ಮತ್ತು
ನಿಯಮಾವಳಿ 1964ರಂತೆ ಆಯಾಯಾ ಸಹಕಾರ ಸಂಘಗಳ ಆಡಳಿತ
ಮಂಡಳಿಗಳೇ ತಮ್ಮ ಕಾರ್ಯಭಾರದ ದೃಷ್ಟಿಯಿಂದ ವೃಂದಬಲ
ಮಾಡಿಕೊಳ್ಳಬಹುದು. ಆದರೆ ವೇತನ ಶ್ರೇಣಿ, ಮತ್ತು ಪರಿಷ್ಕರಣೆ
ಮುಂತಾದವುಗಳನ್ನು ಸಹಕಾರ ಇಲಾಖೆಯ
ಅನುಮೋದನೆಯೊಂದಿಗೆ ಮಾಡಬೇಕಾದುದು
ಅಗತ್ಯವಾಗಿರುತ್ತದೆ.
***
15-6-16
ನಮ್ಮ ಇಲಾಖೆಯಲ್ಲಿ ಸಿ ಗುಂಪಿನ ಹುದ್ದೆಯಲ್ಲಿ ಸೇವೆ
ಸಲ್ಲಿಸುತ್ತಿದ್ದ ನೌಕರರೊಬ್ಬರು 30 ವರ್ಷ ಸೇವೆ ಸಲ್ಲಿಸಿ ನಿಧನ
ಹೊಂದಿದ್ದಾರೆ. ಅವರು ವಿಚ್ಛೇದಿತರಾಗಿದ್ದು, ಸರ್ಕಾರದಿಂದ
ದೊರೆಯಬೇಕಾಗಿದ್ದ ಆರ್ಥಿಕ ಸೌಲಭ್ಯಗಳಿಗೆ ಅವರ ತಾಯಿ ಹೆಸರನ್ನು
ನಾಮ ನಿರ್ದೇಶನ ಮಾಡಿದ್ದರು. ಆದರೆ, ಅವರ ತಾಯಿಯೂ
ನಿಧನರಾಗಿದ್ದು ನಿವೃತ್ತಿ ವೇತನದ ಆರ್ಥಿಕ ಸೌಲಭ್ಯ ನೀಡುವಂತೆ
ನೌಕರನ ಐವರು ಸಹೋದರರು ಒತ್ತಾಯಿಸುತ್ತಿದ್ದಾರೆ. ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿಯ 302(1)ರಂತೆ ಕುಟುಂಬದ ಅರ್ಹ
ಸದಸ್ಯರು ಇಲ್ಲದ ಪ್ರಯುಕ್ತ ಅವರ ಸಹೋದರರಿಗೆ ಆರ್ಥಿಕ
ಸೌಲಭ್ಯಗಳನ್ನು ನೀಡಬಹುದೇ?
|ಸಹಾಯಕ ಕೃಷಿ ನಿರ್ದೇಶಕರು ಯಾದಗಿರಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 302 (1)ರಂತೆ
ಮೃತ ಸರ್ಕಾರಿ ನೌಕರನ ಸಹೋದರರಿಗೆ ನಾಮನಿರ್ದೇಶನ
ಮಾಡದಿದ್ದರೂ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 81ಸಿ
ಪ್ರಕಾರ ವಾರಸುದಾರಿಕೆ ಪ್ರಮಾಣಪತ್ರವನ್ನು
ತಹಸೀಲ್ದಾರರಿಂದ ಪಡೆದು ಸಲ್ಲಿಸಿದರೆ ಮರಣ ಉಪದಾನವನ್ನು
ಮಾತ್ರ ನೀಡಬಹುದಾಗಿರುತ್ತದೆ. ಆದರೆ, ಯಾವುದೇ
ಕುಟುಂಬ ನಿವೃತ್ತಿ ವೇತನವಾಗಲೀ, ಇನ್ನಿತರ ಪಿಂಚಣಿ
ಸೌಲಭ್ಯಗಳಾಗಲೀ ನೀಡತಕ್ಕದ್ದಲ್ಲ.
***
16-6-16
ನಾನು ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯಲ್ಲಿ
ಮುಖ್ಯೋಪಾಧ್ಯಾಯನಾಗಿದ್ದು, ದೂರ ಶಿಕ್ಷಣದ ಮೂಲಕ
ಪಿಎಚ್ಡಿ ಮಾಡುತ್ತಿದ್ದೇನೆ. ಈ ಪಿಎಚ್ಡಿ ಅವಧಿಯಲ್ಲಿಯೇ ಬೇರೆ
ವಿಷಯದಲ್ಲಿ ಸ್ನಾತಕೋತ್ತರ ಪದವಿ ಸೇರಬಹುದೇ?
ಸೇರಬಹುದಾದರೆ ಸರ್ಕಾರದ ಆದೇಶ ಸಂಖ್ಯೆ ಏನು?
|ಪ್ರವೀಣ್ ಮೈಸೂರು
1973ರ ಸರ್ಕಾರಿ ಆದೇಶದಂತೆ ದೂರ ಶಿಕ್ಷಣದ ಮೂಲಕ ಹಾಗೂ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 61ರ ಮೇರೆಗೆ
ವೃತ್ತಿಪರ ಅಥವಾ ತಾಂತ್ರಿಕ ವಿಷಯಗಳಲ್ಲಿ ಉನ್ನತ ವ್ಯಾಸಂಗ
ಮಾಡಲು ಅನುಮತಿ ಅವಶ್ಯಕತೆ ಇಲ್ಲ. ಅಲ್ಲದೆ ನೀವು ದೂರ
ಶಿಕ್ಷಣದ ಮೂಲಕ ಒಂದೇ ಕಾಲಾವಧಿಯಲ್ಲಿ ಎರಡೆರಡು
ಶಿಕ್ಷಣವನ್ನು ಪಡೆಯುವುದಕ್ಕೆ ನಿಯಮಾವಳಿಯಲ್ಲಿ
ಅವಕಾಶವಿರುವುದಿಲ್ಲ.
***
17-6-16
ನಾನು ಪ್ರೌಢಶಾಲಾ ಮುಖ್ಯೋಪಾಧ್ಯಾಯನಾಗಿ 30 ವರ್ಷ 8
ತಿಂಗಳು ಸೇವೆ ಸಲ್ಲಿಸಿ ನನ್ನ ವಯಸ್ಸು 55 ಆಗಿದ್ದಾಗ ಸ್ವಇಚ್ಛಾ
ನಿವೃತ್ತಿ ಪಡೆದಿದ್ದೇನೆ. 50 ವರ್ಷ ಮೀರಿರುವುದರಿಂದ ನಿಯಮ 285
(2) ರಡಿ ಸ್ವಇಚ್ಛಾ ನಿವೃತ್ತಿಗೆ ಅವಕಾಶವಿಲ್ಲ. 285 (3) ರಂತೆ
ಸ್ವಇಚ್ಛಾ ನಿವೃತ್ತಿ ನೀಡಲು ಬರುತ್ತದೆ ಎಂದು ತಿಳಿಸಿ ಅನುಮತಿ
ನೀಡಿದ್ದಾರೆ. ನನಗೆ ಅರ್ಹತಾ ಸೇವೆಗೆ ಸೇರಬೇಕಾದ ಸೇವಾ
ಅಧಿಕ್ಯವನ್ನು (ವೈಟೇಜ್) ನೀಡದೆ ಪಿಂಚಣಿ ಮತ್ತು ಇತರ
ಸೌಲಭ್ಯಗಳಿಂದ ವಂಚಿತನಾಗಿದ್ದೇನೆ. ಆದ್ದರಿಂದ ನಿಜವಾಗಿ ನನಗೆ
ಅನ್ವಯವಾಗುವ ನಿಯಮ ಯಾವುದು? ಈ ಬಗ್ಗೆ ಮುಂದಿನ ಕ್ರಮ
ಏನು ಕೈಗೊಳ್ಳಬೇಕು?
|ಶ್ರೀ ಬಾಲ್ಕೆ ದೇವೇಂದ್ರ ಬೀದರ್
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285(2)ರಂತೆ 15
ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದ ನೌಕರನು
ಕೆಲವೊಂದು ಷರತ್ತುಗಳಿಗನುಸಾರವಾಗಿ ಸ್ವಇಚ್ಛಾ ನಿವೃತ್ತಿ
ಹೊಂದಿದರೆ ಈ ನಿಯಮದ ಪ್ರಕಾರ 5 ವರ್ಷಗಳ ಕಾಲ ಸೇವಾ
ಅಧಿಕ್ಯ ನೀಡಬೇಕಾಗುತ್ತದೆ. ಆದ ಕಾರಣ ನಿಮಗೆ 2 ವರ್ಷ 4
ತಿಂಗಳು ಸೇವಾ ಅಧಿಕ್ಯ ಲಭ್ಯವಾಗುತ್ತದೆ. ಆದರೆ ನಿಮ್ಮ
ಪಿಂಚಣಿ ಪತ್ರಗಳನ್ನು ಮಹಾಲೇಖಪಾಲರಿಗೆ ಕಳುಹಿಸುವಾಗ
285(2)ರಂತೆ ಸ್ವಇಚ್ಛಾ ನಿವೃತ್ತಿಗೆ ಅನುಮತಿ ನೀಡಲಾಗಿದೆ
ಎಂಬುದನ್ನು ನಿಮ್ಮ ನೇಮಕ ಪ್ರಾಧಿಕಾರವು ಮಾಹಿತಿ
ನೀಡಬೇಕು. ಆದರೆ ನಿಮ್ಮ ಪ್ರಕರಣದಲ್ಲಿ 285 (3) ರಡಿ ಅನುಮತಿ
ನೀಡಿರುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದ
ಪುನಃ ಮನವಿ ಸಲ್ಲಿಸಿ ಸೇವಾ ಅಧಿಕ್ಯ ಸೇರಿಸಿ ಪಿಂಚಣಿ ಸೌಲಭ್ಯ
ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ.
***
18-6-16
ನಾನು ಸರ್ಕಾರಿ ನೌಕರಳಾಗಿದ್ದು, ನನ್ನ ವೈಯಕ್ತಿಕ ಬದುಕಿನ ಬಗ್ಗೆ
ಚಾರಿತ್ರ್ಯ ಹರಣ ವರದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ
ಬಿತ್ತರಿಸಲಾಗಿದೆ. ನನ್ನ ನಡತೆಯನ್ನು ಮಾಧ್ಯಮಗಳ ಮೂಲಕ
ಸಮರ್ಥಿಸಿಕೊಳ್ಳಲು ಸರ್ಕಾರದ ಪೂರ್ವಾನುಮತಿ ಅವಶ್ಯಕವೇ?
| ಸುಶೀಲಮ್ಮ ಚಾಮರಾಜನಗರ
ಕರ್ನಾಟಕ ಸಿವಿಲ್ ಸೇವಾ (ನಡತೆ ) ನಿಯಮ 24 (1)ರ ಪ್ರಕಾರ ಅಕೃತ
ಕೃತ್ಯದ ಸಮರ್ಥನೆಗಾಗಿ ಪತ್ರಿಕೆಗೆ ಅಥವಾ ಮಾಧ್ಯಮಗಳಿಗೆ ಮೊರೆ
ಹೋಗಲು ಸರ್ಕಾರದ ಪೂರ್ವಾನುಮತಿ ಅವಶ್ಯಕ. ಆದರೆ ಇದು
ನಿಮ್ಮ ವೈಯಕ್ತಿಕ ಚಾರಿತ್ರ್ಯಧೆಯಾಗಿರುವುದರಿಂದ ಅನುಮತಿ
ಅನವಶ್ಯಕ. ಆದರೆ ನೀವು ಈ ಬಗ್ಗೆ ಖಾಸಗಿ ಚಾರಿತ್ರ್ಯನ್ನು
ಸಮರ್ಥಿಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಕ್ರಮದ ಬಗ್ಗೆ
ಸಕ್ಷಮ ಪ್ರಾಧಿಕಾರಕ್ಕೆ ಒಂದು ವರದಿಯನ್ನು ಸಲ್ಲಿಸಬೇಕು.
***
19-6-16
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ 1981ರಿಂದ
ಕಾರ್ಯ ನಿರ್ವಹಿಸುತ್ತಿದ್ದು 2006ರ ಡಿಸೆಂಬರ್ನಲ್ಲಿ ಮುಖ್ಯ
ಶಿಕ್ಷಕಿಯಾಗಿ ಪದೋನ್ನತಿ ಹೊಂದಿರುತ್ತೇನೆ. ದಿನಾಂಕ
14.7.2006ರವರೆಗೆ ಸತತವಾಗಿ ಒಂದೇ ಹುದ್ದೆಯಲ್ಲಿ ಸಹ
ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿರುವ ಪ್ರಯುಕ್ತ 25 ವರ್ಷದ ವೇತನ
ಬಡ್ತಿ ಸಿಕ್ಕಿರುವುದಿಲ್ಲ. ಈಗ ಅದನ್ನು ಯಾವ ರೀತಿ
ಪಡೆಯಬಹುದು?
|ಶ್ರೀಮತಿ ಎಸ್.ಎಂ. ಹೂಗಾರ ಲಕ್ಷೆ್ಮೕಶ್ವರ
ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12, ಎಸ್
ಆರ್ಪಿ 2012(8) ರಂತೆ ಸತತವಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ
ಸರ್ಕಾರಿ ನೌಕರರಿಗೆ ದಿನಾಂಕ 1.4.2012ರಿಂದ ಜಾರಿಗೆ ಬರುವಂತೆ
ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲು ಸೂಚಿಸಲಾಗಿದೆ. ಆದರೆ
ಇದೇ ಆದೇಶದ ಕಂಡಿಕೆ 6(ಜಿಜಿ)ರಲ್ಲಿ ಈಗಾಗಲೇ ಕನಿಷ್ಠ ಒಂದು
ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಈ ಸೌಲಭ್ಯ
ಲಭ್ಯವಾಗುವುದಿಲ್ಲ. ನೀವು ಇದಕ್ಕಿಂತ ಮೊದಲೇ 25 ವರ್ಷ
ಪೂರೈಸಿದ್ದು ತದನಂತರ ಪದೋನ್ನತಿ ಪಡೆದಿರುವುದಿರಂದ ಈ
ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದಿಲ್ಲ.
***
20-6-16
ವಿನಾಯಿತಿಗೆ ಅರ್ಹನಾಗಿರುತ್ತೇನೆಯೇ?
ನಾನು ಕಿಯೋನಿಕ್ಸ್ ಸಂಸ್ಥೆಯಿಂದ ನಡೆಸಿದ ಆಫೀಸ್
ಮ್ಯಾನೇಜ್ವೆುಂಟ್ ವಿಷಯದಲ್ಲಿ ಕಂಪ್ಯೂಟರ್ ಸಾಕ್ಷರತಾ
ಪರೀಕ್ಷೆಯಲ್ಲಿ ಶೇ. 75 ಅಂಕ ಪಡೆದು ತೇರ್ಗಡೆಯಾಗಿದ್ದೇನೆ.
ಹೀಗಿರುವಾಗ ನಾನು 2012ರ ಕರ್ನಾಟಕ ಸಿವಿಲ್ ಸೇವಾ
(ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಾವಳಿಯಂತೆ
ವಿನಾಯಿತಿಗೆ ಅರ್ಹನಾಗಿರುತ್ತೇನೆಯೇ?
| ಮೊಹಮ್ಮದ್ ಸಿರಾಜುದ್ದೀನ್ ಕೃಷ್ಣಾಪುರ ಕರ್ನಾಟಕ ಸಿವಿಲ್
ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು
2012ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಕಂಪ್ಯೂಟರ್
ಸಾಕ್ಷರತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದುದು
ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯನ್ನು ಸರ್ಕಾರದ ಅಂಗ
ಸಂಸ್ಥೆಯಾದ ಕಿಯೋನಿಕ್ಸ್ ಸಂಸ್ಥೆಯು ಆನ್ಲೈನ್ ಮೂಲಕ
ನಡೆಸುತ್ತದೆ. ಈ ನಿಯಮಾವಳಿಯಲ್ಲಿ ಕಂಪ್ಯೂಟರ್ ಬಗ್ಗೆ ಬೇರೆ
ಯಾವುದೇ ತರಬೇತಿ ಅಥವಾ ಡಿಪ್ಲೋಮೋ ಪಡೆದಿದ್ದರೆ
ನಿಯಮಾವಳಿಯಲ್ಲಿ ಯಾವುದೇ ವಿನಾಯಿತಿಯ
ಅವಕಾಶಗಳಿರುವುದಿಲ್ಲ. ಆದ ಕಾರಣ ನೀವು ಕಿಯೋನಿಕ್ಸ್ನ ಆನ್
ಲೈನ್ ಪರೀಕ್ಷೆಯನ್ನು ತೆಗೆದುಕೊಂಡು
ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ.
***
28-6-16
ನಾನು ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ
ಸಲ್ಲಿಸುತ್ತಿದ್ದು ಕಾಲ ವೇತನ ಬಡ್ತಿಯನ್ನು ಪಡೆದಿರುತ್ತೇನೆ. ನನ್ನ
ಈಗಿನ ಮೂಲ ವೇತನ 17,650-00 ರೂ.ಗಳಾಗಿರುತ್ತವೆ. ನಾನು
ಈಗ ಪಡೆಯುತ್ತಿರುವ ತತ್ಸಮಾನ ವೇತನ ಶ್ರೇಣಿಯ
ಬೇರೊಂದು ಜಿಲ್ಲೆಗೆ ಅರ್ಜಿ ಸಲ್ಲಿಸಲು ಅನುಮತಿ ಅವಶ್ಯಕವೇ?
ಸೇವಾ ಭದ್ರತೆ ಮತ್ತು ಮೂಲ ವೇತನ ನಿಗದಿ ಬಗ್ಗೆ
ಪರಿಹಾರವೇನು?
|ಡಾ. ಬಸವಣ್ಣಪ್ಪ ಗುಂಜಾಳ ಕೊಪ್ಪಳ
ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ
1977ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಬೇರೊಂದು
ನೇಮಕಾತಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅನುಮತಿ
ಪಡೆಯುವುದು ಅವಶ್ಯಕ. ನೀವು ತತ್ಸಮಾನ ವೇತನ ಶ್ರೇಣಿಯ
ಹಿರಿಯ ಪ್ರಾಥಮಿಕ ಶಾಲೆಗೆ ಬೇರೆ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕಾದರೆ ಈ
ಅನುಮತಿ ಪತ್ರ ಪಡೆದು ಸಲ್ಲಿಸಿ ನೇಮಕವಾದರೆ ನಿಮ್ಮ ಹಿಂದಿನ
ಸೇವೆ ಮತ್ತು ವೇತನ ರಕ್ಷಣೆ ದೊರಕುತ್ತದೆ.
***
Saturday, 10 September 2016
Sarkari corner
Labels:
Sarkari corner
Subscribe to:
Post Comments (Atom)
No comments:
Post a Comment