Saturday, 10 September 2016

Sarkari corner

[28/08 5:10 pm] Basayya M Jamalur: ಆಗಸ್ಟ್-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು.
August 2, 2016ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ
ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು
ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ
ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ,
5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
2-8-16
ನಾನು ಸರ್ಕಾರಿ ಸೇವೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ 20
ವರ್ಷ ಸೇವೆ ಸಲ್ಲಿಸಿದ್ದು, ಶೀಘ್ರದಲ್ಲೇ ಕಚೇರಿ ಅಧೀಕ್ಷಕ
ಹುದ್ದೆಗೆ ಪದೋನ್ನತಿ ಲಭ್ಯವಾಗಲಿದೆ. ಆದರೆ ನನಗೆ 2014-15ನೇ
ಸಾಲಿನ ಕಾರ್ಯನಿರ್ವಹಣಾ ವರದಿಯನ್ನು ಹಿಂದಿನ ಅಧಿಕಾರಿಗಳು
ನೀಡದೇ ಇರುವುದರಿಂದ ಇಲಾಖಾ ಪದೋನ್ನತಿ ಸಮಿತಿಗೆ ನನಗೆ
ಪದೋನ್ನತಿ ನೀಡಲು ಶಿಫಾರಸು ಮಾಡಿಲ್ಲ. ನಾನು ಈ ಸಾಲಿನ
ಕಾರ್ಯನಿರ್ವಹಣಾ ವರದಿಯನ್ನು ಪಡೆಯುವುದು ಹೇಗೆ? ಇದಕ್ಕೆ
ಸೂಕ್ತ ಪರಿಹಾರ ಉಂಟೇ?
ಜಗದೀಶ್ ಚಿತ್ರದುರ್ಗ
ಕರ್ನಾಟಕ ಸರ್ಕಾರಿ ಸೇವಾ (ಕಾರ್ಯನಿರ್ವಾಹಣಾ ವರದಿಗಳು)
ನಿಯಮಗಳು 2000ರ ನಿಯಮ 7 ರೀತ್ಯಾ ವರದಿ ಮಾಡುವ
ಅಧಿಕಾರಿಯು ನಿಗದಿತ ಅವಧಿಯೊಳಗೆ ಸರ್ಕಾರಿ ನೌಕರನ
ಕಾರ್ಯನಿರ್ವಹಣಾ ವರದಿಯನ್ನು ಪರಿಶೀಲನಾ ಪ್ರಾಧಿಕಾರಕ್ಕೆ
ಮತ್ತು ಅಂಗೀಕಾರ ಪ್ರಾಧಿಕಾರಕ್ಕೆ ಸಲ್ಲಿಸದಿದ್ದಲ್ಲಿ ವಿಶೇಷ
ವರದಿಯನ್ನು ಪಡೆಯಬಹುದೆಂದು ಸೂಚಿಸಲಾಗಿದೆ. ಆದುದರಿಂದ
ನೀವು ಈ ನಿಯಮಾವಳಿಯಂತೆ ವಿಶೇಷ ವರದಿಯನ್ನು ಪಡೆದು
ಇಲಾಖಾ ಪದೋನ್ನತಿ ಸಮಿತಿಗೆ ಕಳುಹಿಸಲು ವಿನಂತಿಸಬಹುದು.
***
3-8-16
ನಾನು ದಿನಾಂಕ: 25.06.2007ರಲ್ಲಿ ಪ್ರಾಥಮಿಕ ಶಾಲಾ
ಶಿಕ್ಷಕಿಯಾಗಿ ಸರ್ಕಾರಿ ಸೇವೆಗೆ ಸೇರಿದ್ದು, 2010ರಲ್ಲಿ ಒಂದು
ತಾಲೂಕಿನಿಂದ ಇನ್ನೊಂದು ತಾಲೂಕಿಗೆ (ಒಂದು ಘಟಕದಿಂದ
ಇನ್ನೊಂದು ಘಟಕಕ್ಕೆ) ವರ್ಗಾವಣೆ ಪಡೆದಿರುತ್ತೇನೆ. ನಾನು ನನ್ನ
ಪತಿಯೂ ಸರ್ಕಾರಿ ನೌಕರರಾಗಿದ್ದು, ಈಗ ಪತಿ-ಪತ್ನಿ ಪ್ರಕರಣದಲ್ಲಿ
ನಾನು ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಲು ಅವಕಾಶ
ಇದೆಯೇ?
ಆಶಾರಾಣಿ.ಎ.ಎಸ್ ಹಾಸನ ಜಿಲ್ಲೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ
ನಿಯಂತ್ರಣ) ಅಧಿನಿಯಮ 2007ರ ಸೆಕ್ಷನ್ 6 (2) (1)ರ ರೀತ್ಯಾ ಪತಿ-
ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಮತ್ತು ಶಿಕ್ಷಕರು
ಪ್ರಸ್ತುತ ಇರುವ ಜ್ಯೇಷ್ಠತಾ ಘಟಕದಲ್ಲಿ ಕನಿಷ್ಠ 3 ವರ್ಷಗಳ
ಸೇವೆಯನ್ನು ಸಲ್ಲಿಸಿದ್ದಲ್ಲಿ ಕೌನ್ಸಿಲಿಂಗ್ ಮೂಲಕ ಪತ್ನಿ ಅಥವಾ
ಪತಿಯು ಸೇವೆ ಸಲ್ಲಿಸುತ್ತಿರುವ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ
ಸ್ಪಷ್ಟ ಖಾಲಿ ಸ್ಥಳದ ಲಭ್ಯತೆ ಆಧಾರದ ಮೇಲೆ ಸೇವಾ
ಅವಧಿಯಲ್ಲಿ ಎರಡು ಬಾರಿಗಿಂತ ಹೆಚ್ಚಿಲ್ಲದೆ ವರ್ಗಾವಣೆ
ಮಾಡಬಹುದು ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ನೀವು
ಮತ್ತೊಮ್ಮೆ ಇನ್ನೊಂದು ಘಟಕಕ್ಕೆ ವರ್ಗಾವಣೆ ಪಡೆಯಬಹುದು.
***
4-8-16
20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುವೆನೆ?
ನಾನು ದಿನಾಂಕ: 12.05.2016ರಂದು ಹಿರಿಯ ಆರೋಗ್ಯ
ಸಹಾಯಕರ ಹುದ್ದೆಗೆ ಸ್ಥಾನಪನ್ನ ಪದೋನ್ನತಿಯನ್ನು
ಪಡೆದುಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತೇನೆ
ಹಾಗೂ ಹಿಂದಿನ ವೇತನದಲ್ಲಿಯೇ ಅಕ್ಟೋಬರ್-2016ರವರೆಗೆ
ಮುಂದುವರೆಯುವುದಾಗಿ ಘೊಷಣೆ ಪತ್ರವನ್ನು
ಬರೆದುಕೊಟ್ಟಿರುತ್ತೇನೆ. ಒಂದು ವೇಳೆ ನನಗೆ ಪದೋನ್ನತಿ
ಬಾರದೆ ಇದ್ದಲ್ಲಿ ದಿನಾಂಕ: 20.10.2016ಕ್ಕೆ 20 ವರ್ಷದ ಕಾಲಮಿತಿ
ಬಡ್ತಿಗೆ ಅರ್ಹನಿರುತ್ತಿದ್ದೆ. ಈಗ ನಾನು ಸ್ಥಾನಪನ್ನ ಪದೋನ್ನತಿ
ಪಡೆದಿರುವುದರಿಂದ 20 ವರ್ಷದ ಕಾಲಮಿತಿ ಬಡ್ತಿಗೆ ಅರ್ಹನಿರುವೆನೆ?
ಇದ್ದಲ್ಲಿ ಯಾವ ನಿಯಮದ ಪ್ರಕಾರ ಇರುತ್ತದೆ.
ವೆಂಕಟನರಸಪ್ಪ.ಎಂ.ವಿ ಚಿಕ್ಕಬಳ್ಳಾಪುರ.
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ:
ಎಫ್.ಡಿ.13.ಎಸ್.ಆರ್.ಪಿ.2002 ರಂತೆ ಮೊದಲ ಹದಿನಾಲ್ಕು ವೇತನ
ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ
ಅವಧಿಯಲ್ಲಿ ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ
ಸರ್ಕಾರಿ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ
ಅಥವಾ ಆಯ್ಕೆಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ
ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ನೀಡಬಹುದೆಂದು
ಸೂಚಿಸಲಾಗಿದೆ. ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ
ಈಗಾಗಲೇ ಒಂದು ಪದೋನ್ನತಿಯನ್ನು ಪಡೆದಿರುವ ಸರ್ಕಾರಿ
ನೌಕರರಿಗೆ ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ
ಹಿನ್ನೆಲೆಯಲ್ಲಿ ನೀವು ಐದು ತಿಂಗಳಗಿಂತ ಮೊದಲೇ 20
ವರ್ಷವಾಗುವ ಮೊದಲು ಪದೋನ್ನತಿ ಪಡೆದಿರುವುದರಿಂದ ಈ
ಹೆಚ್ಚುವರಿ ವೇತನ ಬಡ್ತಿಗೆ ಅರ್ಹರಾಗಿರುವುದಿಲ್ಲ.
***
5-8-16.
***
6-8-16
ಆರಂಭದ ದಿನದಿಂದ 180 ದಿನಗಳವರೆಗೆ ಮಂಜೂರು ಮಾಡಬಹುದು.
ನಮ್ಮ ಕಚೇರಿಯಲ್ಲಿ ಎಸ್​ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ
ಒಬ್ಬರಿಗೆ ಮದುವೆಯಾಗಿ ಒಂದು ತಿಂಗಳಿಗೆ ಅವರ ಪತಿ ಮರಣ
ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ಈ ಕೆಲಸ
ಕೊಡಲಾಗಿದೆ. ಸುಮಾರು 5-6 ವರ್ಷಗಳ ನಂತರ ಇವರು
ಮತ್ತೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಇವರು
ಗರ್ಭಿಣಿಯಾದರೆ ನಿಯಮಾವಳಿ ರೀತ್ಯಾ ಪ್ರಸೂತಿ ರಜೆ
ಮಂಜೂರು ಆಗುವುದಿಲ್ಲ ಎಂದು ಕಚೇರಿಯಲ್ಲಿ ಎಲ್ಲರೂ
ಹೇಳುತ್ತಿದ್ದಾರೆ. ಈ ಗೊಂದಲಕ್ಕೆ ಪರಿಹಾರ ತಿಳಿಸಿ.
* ನೇತ್ರಾವತಿ ಗಂಗಾವತಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ
ರೀತ್ಯಾ ಮಹಿಳಾ ಸರ್ಕಾರಿ ನೌಕರರಿಗೆ ಸಕ್ಷಮ ಅಧಿಕಾರಿಯು ಹೆರಿಗೆ
ರಜೆಯನ್ನು ಆರಂಭದ ದಿನಾಂಕದಿಂದ 180 ದಿನಗಳವರೆಗೆ
ಮಂಜೂರು ಮಾಡಬಹುದು. ಈ ರಜೆಯನ್ನು ಎರಡು ಜೀವಂತ
ಮಕ್ಕಳಿಗೆ ಮಾತ್ರ ಮಹಿಳಾ ಸರ್ಕಾರಿ ನೌಕರರಿಗೆ ಲಭ್ಯವಾಗುತ್ತದೆ.
ಆದರೆ ಇವರು ಎರಡನೇ ಮದುವೆ ಆಗುವುದಕ್ಕೆ ಕರ್ನಾಟಕ ಸರ್ಕಾರಿ
ಸೇವಾ (ನಡತೆ) ನಿಯಮಗಳು ನಿಯಮ 28ರಂತೆ ಸಕ್ಷಮ ಅಧಿಕಾರಿಯ
ಅನುಮತಿಯನ್ನು ಪಡೆಯಬೇಕು.
***
7-8-16
ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಬೇಕಾಗುತ್ತದೆ.
1995ರಿಂದ ರಾಜ್ಯ ಸರ್ಕಾರದಲ್ಲಿ ದ್ವಿ.ದ.ಸ ಆಗಿ ಕಾರ್ಯ
ನಿರ್ವಹಿಸುತ್ತಿದ್ದೇನೆ. ಈ ಹಿಂದೆ 1991ರಿಂದ ಸ್ಟೈಫಂಡರಿ
ಪದವೀಧರನಾಗಿ ಕಾರ್ಯನಿರ್ವಹಿಸಿದ್ದೇನೆ. ನಾನೀಗ 2016ರ
ಸೆಪ್ಟಂಬರ್ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ. ನನಗೆ ನಿವೃತ್ತಿ
ವೇತನ ಸೌಲಭ್ಯ ನೀಡುವಾಗ ಸ್ಟೈಫಂಡರಿ ಪದವಿ ಸೇವೆ
ಪರಿಗಣಿಸಲಾಗುತ್ತದೆಯೇ?
ಐ ಎಲ್.ಬೈರಪ್ಪಾಜಿ, ಮೈಸೂರು.
ದಿನಾಂಕ: 08.01.1998ರ ಸರ್ಕಾರಿ ಆದೇಶ ಸಂಖ್ಯೆ:
ಎಸ್.ಡಬ್ಲೂ್ಯ.ಎಸ್.18ಎಲ್​ಇಟಿ94 ರಂತೆ ಸರ್ಕಾರವು ಸವೋಚ್ಛ
ನ್ಯಾಯಾಲಯವು ದಿನಾಂಕ: 26.08.1992ರ ತೀರ್ಪಿನಂತೆ
ಸರ್ಕಾರಿ ನೌಕರರು ದಿನಾಂಕ: 01.05.1991ರಿಂದ ಸ್ಟೈಪಂಡರಿ
ಪದವೀಧರರಾಗಿ ಸಲ್ಲಿಸಿದ ಸೇವೆಯನ್ನು ನಿವೃತ್ತಿ ವೇತನದ
ಸೌಲಭ್ಯಗಳಿಗಾಗಿ ಅರ್ಹತಾದಾಯಕ ಸೇವೆಯೆಂದು ಪರಿಗಣಿಸಲು
ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೀವು ದಿನಾಂಕ:
01.05.1991ರಿಂದ ಸಲ್ಲಿಸಿದ ಸ್ಟೈಪಂಡರಿ ಪದವಿಯ ಅರ್ಹತೆಯನ್ನು
ನಿಮ್ಮ ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸಬೇಕಾಗುತ್ತದೆ.
***
8-8-16.
20 ವರ್ಷದ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದೇ?
ದಿನಾಂಕ: 27.08.1998ರಲ್ಲಿ ಸೇವೆಗೆ ಸೇರಿದ್ದು, 18
ವರ್ಷಗಳಾಗಿದೆ. ನಾನು ಕೆಎಸ್​ಓಯು ಮೈಸೂರಿನಲ್ಲಿ ಬಿ.ಇಡಿ (ಕನ್ನಡ)
ಮಾಡಿದ್ದೇನೆ. ನನ್ನ ಬಿ.ಇಡಿ ವಿವರವನ್ನು ಸೇವಾ ಪುಸ್ತಕದಲ್ಲಿ
ನಮೂದಿಸಬೇಕೆಂದಿದ್ದೇನೆ. ಸೇವಾವಧಿ ಪುಸ್ತಕದಲ್ಲಿ
ನಮೂದಿಸಿದ ನಂತರ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2, ಬಡ್ತಿ
ಬಂದಲ್ಲಿ, ನನಗೆ ಸ್ಥಳದ ಆಯ್ಕೆ ಸರಿಬರಲಿಲ್ಲವೆಂದರೆ
ತಿರಸ್ಕರಿಸಬೇಕೆಂದಿದ್ದೇನೆ. ತಿರಸ್ಕರಿಸಿದರೆ 20 ವರ್ಷದ ಹೆಚ್ಚುವರಿ
ವೇತನ ಬಡ್ತಿ ಪಡೆಯಬಹುದೇ?
| ರಾಮಕೃಷ್ಣ ಎಸ್. ರಾಮನಗರ
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ 13 ಎಸ್​
ಆರ್​ಪಿ 2002 ರಂತೆ ಮೊದಲ ಹದಿನಾಲ್ಕು ವೇತನ ಶ್ರೇಣಿಗಳಲ್ಲಿ
ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಅವಧಿಯಲ್ಲಿ
ಒಂದು ಪದೋನ್ನತಿ ಪಡೆಯದೆ ಮುಂದುವರೆದಿರುವ ಸರ್ಕಾರಿ
ನೌಕರರಿಗೆ ಆ ಹುದ್ದೆಗೆ ನಿಗಧಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ
ಆಯ್ಕೆ ಕಾಲಿಕ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಒಂದು
ಹೆಚ್ಚುವರಿ ವೇತನ ಬಡ್ತಿ ನೀಡಬಹುದೆಂದು ಸೂಚಿಸಲಾಗಿದೆ.
ಆದರೆ, ಇದೇ ಆದೇಶದ ಕಂಡಿಕೆ 6(2)ರ ರೀತ್ಯಾ ಸ್ವ-ಇಚ್ಛೆಯಿಂದ
ತಮ್ಮ ಪದೋನ್ನತಿ ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ
ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಅಂಶದ ಹಿನ್ನೆಲೆಯಲ್ಲಿ
ನೀವು 20 ವರ್ಷವಾಗುವ ಮೊದಲು ಪದೋನ್ನತಿ
ತಿರಸ್ಕರಿಸಿದಲ್ಲಿ ಈ ಹೆಚ್ಚುವರಿ ವೇತನ ಬಡ್ತಿಗೆ
ಅರ್ಹರಾಗಿರುವುದಿಲ್ಲ.
***
9-8-16
ಅವಳಿಗೆ ಕುಟುಂಬ ಪಿಂಚಣಿ ಸಿಗುತ್ತದೆಯೇ?
ಸರ್ಕಾರಿ ಸೇವೆಯಲ್ಲಿದ್ದ ನನ್ನ ಪತಿ ನಿಧನರಾಗಿದ್ದು, ಸುಮಾರು
15 ವರ್ಷಗಳಿಂದ ಕುಟುಂಬ ಪಿಂಚಣಿ ಪಡೆಯುತ್ತಿದ್ದೇನೆ.
ನಾಲ್ವರು ಮಕ್ಕಳಿದ್ದು, ಒಬ್ಬಳು(45) ಅವಿವಾಹಿತಳಾಗಿದ್ದು,
ಮಾನಸಿಕವಾಗಿ ಸುಸ್ಥಿತಿಯಲ್ಲಿಲ್ಲ. ನನ್ನ ನಂತರ ಅವಳಿಗೆ ಕುಟುಂಬ
ಪಿಂಚಣಿ ಸಿಗುತ್ತದೆಯೇ? ಅದಕ್ಕಾಗಿ ಏನು ಮಾಡಬೇಕು?
ಮೀನಾಕ್ಷಮ್ಮ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿ ವೇತನ)
ನಿಯಮಗಳು 2002ರ ನಿಯಮ 9 (ಡಿ) ರೀತ್ಯಾ ಕುಟುಂಬ ನಿವೃತ್ತಿ
ವೇತನವನ್ನು ಮಾನಸಿಕವಾಗಿ ಅಸ್ವಸ್ಥರಾಗಿರುವ ಅಥವಾ
ಮನೋವೈಕಲ್ಯದಿಂದ ಬಳಲುತ್ತಿರುವ ಮಗ ಅಥವಾ ಮಗಳ
ಹೆಸರಿಗೆ ನೀಡತಕ್ಕದ್ದು. ಅದನ್ನು ಜೀವಿತ ಅವಧಿಯವರೆಗೆ ಸಂದಾಯ
ಮಾಡತಕ್ಕದ್ದೆಂದು ತಿಳಿಸಿದೆ. ಈ ಹಿನ್ನೆಲೆ ನೀವು ನಿಮ್ಮ ಮಗಳ
ಮನೋ ವೈಕಲ್ಯತೆಗೆ ನಿಮ್ಹಾನ್ಸ್​ನಿಂದ ಪ್ರಮಾಣ ಪತ್ರ ಪಡೆದು
ಕುಟುಂಬ ಪಿಂಚಣಿ ಪಡೆಯುತ್ತಿರುವ ಸರ್ಕಾರಿ ಖಜಾನೆಗೆ ಮತ್ತು
ಮಹಾಲೇಖಪಾಲಕರಿಗೆ ನಿಮ್ಮ ನಿಧನದ ನಂತರ ಮಗಳಿಗೆ
ನೀಡುವಂತೆ ಈಗಲೇ ಮನವಿ ಸಲ್ಲಿಸಿ.
***
10-8-16
ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸುವುದು
ಸಾಧ್ಯವಿದೆಯೆ?
ನಾನು ಬಿಎಂಸಿಆರ್​ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಗಸ್ಟ್
2012ರಿಂದ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು,
ಮೂಲತಃ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿ. ಅರ್ಜಿ
ಸಲ್ಲಿಸುವಾಗ ಮೀಸಲಾತಿಯಲ್ಲಿ ಶುಶ್ರೂಷಕಿ ಹುದ್ದೆಗೆ ಅರ್ಜಿ
ಸಲ್ಲಿಸಿರುತ್ತೇನೆ. ಆದರೆ ಹೆಚ್ಚು ಅಂಕ ಗಳಿಸಿರುವ ಕಾರಣ ನನ್ನನ್ನು
ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ ಸಾಮಾನ್ಯ
ವರ್ಗದಲ್ಲಿ ನೇಮಕಾತಿ ಮಾಡಿದ್ದಾರೆ. ಸರ್ಕಾರದ ಆದೇಶದ ಮೇರೆಗೆ
ಜೂನ್ ತಿಂಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ್ದು
ಅದರಲ್ಲಿ ನನ್ನನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಪರಿಗಣಿಸದೆ
ಸಾಮಾನ್ಯ ವರ್ಗದ ಅಭ್ಯರ್ಥಿ ಎಂದು ಪರಿಗಣಿಸಿ, ನನಗಿಂತ ಕಡಿಮೆ
ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ
ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ, ನನ್ನನ್ನು ಪರಿಶಿಷ್ಟ ಜಾತಿಯ
ಮೀಸಲಾತಿಯಲ್ಲಿ ಪರಿಗಣಿಸುವುದು ಸಾಧ್ಯವಿದೆಯೆ?
ಐ ಶ್ರೀಮತಿ ಪಾಪತಿ ಪಿ. ಬೆಂಗಳೂರು
ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ ನಿಯಮಗಳು) 1957ರ
ನಿಯಮ 4(ಎ)ರಂತೆ ಆಯ್ಕೆ ಮಾಡುವ ನೇಮಕಾತಿ ಪ್ರಾಧಿಕಾರವು
ಅಭ್ಯರ್ಥಿಗಳನ್ನು ಯಾವ ಅರ್ಹತಾ ಕ್ರಮದಲ್ಲಿ
ವ್ಯವಸ್ಥೆಗೊಳಿಸಿದೆಯೋ, ಆ ಆದೇಶದ ವೃಂದಗಳು ಅಥವಾ
ಹುದ್ದೆಯ ವರ್ಗದಿಂದ ಆಯ್ಕೆ ಮಾಡುವ ಮೂಲಕ ಹುದ್ದೆಯ
ವರ್ಗಕ್ಕೆ ಬಡ್ತಿ ನೀಡುವಾಗ ಅವರ ಜೇಷ್ಠತೆ ಪರಿಗಣಿಸಬೇಕು
ಎಂದು ತಿಳಿಸಿದೆ. ಅಲ್ಲದೆ 1990ರ ಅನುಸೂಚಿತ ಜಾತಿಗಳು,
ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ(ನೇಮಕಾತಿಗಳು)
ಮುಂತಾದವುಗಳ ಮೀಸಲಾತಿ ಅಧಿನಿಯಮದಂತೆ ಅಭ್ಯರ್ಥಿಯು
ಮೀಸಲಾತಿಯಡಿ ಆಯ್ಕೆಯಾಗಿದ್ದರೆ, ಅದೇ ಮೀಸಲಾತಿಯಲ್ಲಿ
ಪದೋನ್ನತಿ ಪರಿಗಣಿಸಬೇಕು. ಆದರೆ, ಪರಿಶಿಷ್ಟ ಜಾತಿ ವರ್ಗದ
ಅಭ್ಯರ್ಥಿಯು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಲ್ಲಿ,
ಪದೋನ್ನತಿ ನೀಡುವಾಗ ಪರಿಶಿಷ್ಟ ಜಾತಿ ಮೀಸಲಾತಿ
ಪರಿಗಣಿಸಲು ಸೂಚಿಸಿದೆ. ಅಲ್ಲದೆ ಸೇವಾ ಪುಸ್ತಕದಲ್ಲಿ
ಸಂಬಂಧಿಸಿದ ಅಂಕಣದಲ್ಲಿ ಪರಿಶಿಷ್ಟ ಜಾತಿ ನಮೂದಿಸಬೇಕು. ಆದ
ಕಾರಣ ನಿಮ್ಮ ನೇಮಕಾತಿ ಪ್ರಾಧಿಕಾರಿಯವರು ನಿಮಗಿಂತ ಕಡಿಮೆ
ಅಂಕ ಹೊಂದಿರುವ ಪರಿಶಿಷ್ಟ ಜಾತಿಯ ನೌಕರನಿಗೆ ಜೇಷ್ಠತಾ
ಪಟ್ಟಿಯಲ್ಲಿ ಹೆಸರು ಸೇರಿಸಿರುವುದು ಸರಿಯಾದ ಕ್ರಮವಲ್ಲ.
***
11-8-16
ಎನ್​ಪಿಎಸ್ ಮಾಡಿಸಲು ಏನು ಮಾಡಬೇಕು?
ನಾನು ಮೊದಲು ಆಸ್ಪತ್ರೆಯಲ್ಲಿ ಗ್ರೂಪ್ ಡಿಯಾಗಿ 16 ತಿಂಗಳು
ಕಾರ್ಯನಿರ್ವಹಿಸಿದ್ದು, ದಿನಾಂಕ: 21.07.2015ರಂದು ವೈಯಕ್ತಿಕ
ಕಾರಣಗಳಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ನಂತರ
ಶಿಕ್ಷಕಿಯಾಗಿ ನೇಮಕವಾಗಿ ದಿನಾಂಕ: 15.03.2016ರಂದು ಕೆಲಸಕ್ಕೆ
ಹಾಜರಾಗಿದ್ದೇನೆ. ಹಿಂದೆ ಮಾಡಿಸಿದ್ದ ಎನ್​ಪಿಎಸ್ ಕ್ಲೋಸ್
ಮಾಡಲು ಅರ್ಜಿ ಸಲ್ಲಿಸಿದ್ದು, ಇದರಿಂದ ಮತ್ತೊಂದು ಎನ್​ಪಿಎಸ್
ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗ ನಾನು ಎನ್​ಪಿಎಸ್
ಮಾಡಿಸಲು ಏನು ಮಾಡಬೇಕು? ದಯವಿಟ್ಟು ಪರಿಹಾರ ತಿಳಿಸಿ.
ಐ ಸುಮತಿ, ಮೈಸೂರು.
ದಿನಾಂಕ: 29.03.2010ರ ಸರ್ಕಾರಿ ಅದೇಶದಂತೆ ಸಂಖ್ಯೆ: ಎಫ್​ಡಿ
(ಎಫ್​ಪಿಎಲ್) 28 ಪಿಇಎನ್ 2009ರಂತೆ ನೂತನ ಪಿಂಚಣಿ ಯೋಜನೆಗೆ
ನೀವು ನೋಂದಣಿ ಮಾಡಿಸಿರುವುದರಿಂದ ಹಾಗೂ ದಿನಾಂಕ:
10.01.2012ರ ಸರ್ಕಾರಿ ಸುತ್ತೋಲೆ ಆ.ಇ.(ವಿಶೇಷ)01 ಪಿಇಎನ್
2010ರಂತೆ ಟ್ರಾನ್ ನಂ. ಪಡೆದಿರುವುದರಿಂದ ನೀವು ಹಿಂದಿನ
ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಪ್ರಾಥಮಿಕ
ಶಾಲಾ ಶಿಕ್ಷಕರಾಗಿ ನೇಮಕಗೊಂಡಿರುವುದರಿಂದ ಹೊಸ ಎನ್​
ಪಿಎಸ್ ಖಾತೆ ಮಾಡಬೇಕು. ಇದಕ್ಕೆ ಕಾರಣ, 9 ತಿಂಗಳ ಕಾಲ ನೀವು
ಸರ್ಕಾರಿ ಸೇವೆಯಲ್ಲೇ ಇಲ್ಲದ್ದರಿಂದ ನಿಮ್ಮ ಹಿಂದಿನ ಖಾತೆ
ಮುಕ್ತಾಯಗೊಂಡಿದ್ದು, ಅದನ್ನು ವಾಪಸ್ಸು ಪಡೆಯಬೇಕು.
ಆದ್ದರಿಂದ ಈ ಆದೇಶಗಳ ಹಿನ್ನೆಲೆ ನೀವು ಹೊಸದಾಗಿ ಎನ್​ಪಿಎಸ್
ಲೆಕ್ಕ ತೆರೆಯಬೇಕೆಂದು ಸಕ್ಷಮ ವೇತನ ಬಟವಾಡೆ ಅಧಿಕಾರಿಗಳಿಗೆ
ವಿನಂತಿಸಬೇಕು.
***
12-8-16
ನಾನು ಸರ್ಕಾರಿ ನೌಕರನಾಗಿದ್ದು ನನ್ನ ಮೇಲೆ ಆರೋಪ ಹೊರಿಸಿ
ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನಡೆಸುತ್ತಿದ್ದಾರೆ.
ನನ್ನ ಮೇಲಿನ ಆರೋಪಗಳು ಕ್ಷುಲ್ಲಕವಾಗಿದ್ದು, ಈ ಇಲಾಖಾ
ವಿಚಾರಣೆಗೆ ಸರ್ಕಾರದ ಕಾರ್ಯದರ್ಶಿ ಅಥವಾ ಸಂಬಂಧಿಸಿದ ಸಚಿವರು
ಮಧ್ಯಂತರ ತಡೆಯಾಜ್ಞೆ ನೀಡಬಹುದೆ?
ಐ ವಿರೂಪಾಕ್ಷ ಗೌಡ ಗದಗ
ಸಿಸಿಎ ನಿಯಮಾವಳಿಗಳಲ್ಲಾಗಲೀ ಅಥವಾ ಇತರೆ ಯಾವುದೇ
ಕಾನೂನಿನಲ್ಲಾಗಲೀ ಯಾವುದೇ ಕಾರಣಕ್ಕೆ ಪ್ರಗತಿಯಲ್ಲಿರುವ
ಶಿಸ್ತು ನಡವಳಿಕೆಗಳನ್ನು ತಡೆಹಿಡಿಯುವ ಅಧಿಕಾರ ಯಾವುದೆ
ಆಡಳಿತಾತ್ಮಕ ಪ್ರಾಧಿಕಾರಕ್ಕೆ ಇಲ್ಲ. ಇಲ್ಲಿ ಆಡಳಿತಾತ್ಮಕ
ಪ್ರಾಧಿಕಾರವೆಂದರೆ ನ್ಯಾಯಾಲಯವಲ್ಲದ ಪ್ರಾಧಿಕಾರ ಮತ್ತು
ಸಿಸಿಎ ನಿಯಮಾವಳಿಗಳ ರೀತಿ ಅಪೀಲು ಮತ್ತು
ಪುನರಾವಲೋಕನ ಪ್ರಾಧಿಕಾರಗಳು ಒಳಗೊಳ್ಳುತ್ತಾರೆ.
ಕಾನೂನು ಬದ್ಧ ಶಿಸ್ತು ಪ್ರಾಧಿಕಾರಿ ಸಿಸಿಎ ನಿಯಮಗಳಡಿಯಲ್ಲಿ
ಕ್ರಮ ಜರುಗಿಸಲು ಸ್ವತಂತ್ರ ಪ್ರಾಧಿಕಾರಿಯಾಗಿರುತ್ತಾರೆ.
ಯಾವುದೇ ಆಡಳಿತಾತ್ಮಕ ಶ್ರೇಣಿಯ ಅಧಿಕಾರಿಯ ಹಿಡಿತದಲ್ಲಿ
ಅವನು ಬರುವುದಿಲ್ಲ. ತಿಳಿದೋ ಅಥವಾ ತಿಳಿಯದೆಯೋ
ಅವನು ತಪ್ಪುಗಳನ್ನು ಮಾಡುತ್ತಿದ್ದರೂ ಸಹ ಅವನ
ಮೇಲಾಧಿಕಾರಿಗಳು ಮಧ್ಯೆ ಪ್ರವೇಶಿಸುವಂತಿಲ್ಲ. ಶಿಸ್ತು
ಪ್ರಾಧಿಕಾರಿ ಶಿಸ್ತು ನಡವಳಿಗಳಲ್ಲಿ ಅಂತಿಮ ಆದೇಶ ಮಾಡಿದಾಗ
ಮಾತ್ರ ಸಿಸಿಎ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿದ ಅಪೀಲು
ಪ್ರಾಧಿಕಾರಗಳು ಅಂತಹ ಅಂತಿಮ ಆದೇಶವನ್ನು
ಹೊರಡಿಸಬಹುದು. ಅಲ್ಲದೆ ದುರುದ್ದೇಶಪೂರಿತ ಶಿಸ್ತು
ನಡವಳಿಗಳೆಂದು ನ್ಯಾಯಾಲಯ ಭಾವಿಸದ ಹೊರತು
ನ್ಯಾಯಾಲಯಗಳೂ ಸಹ ಪ್ರಗತಿಯಲ್ಲಿರುವ ಶಿಸ್ತು ಕ್ರಮಗಳಿಗೆ
ಮಧ್ಯೆ ಪ್ರವೇಶಿಸುವಂತಿಲ್ಲ. ಹೀಗಾಗಿ ಸರ್ಕಾರದ
ಕಾರ್ಯದರ್ಶಿಯಾಗಲೀ ಅಥವಾ ಸಚಿವರಾಗಲೀ ಮಧ್ಯಂತರ
ತಡೆಯಾಜ್ಞೆ ನೀಡಲು ಬರುವುದಿಲ್ಲ.
***
13-8-16.
ಯಾವ ದಿನಾಂಕದಂದು ಪದೋನ್ನತಿಗೆ ಅರ್ಹನಾಗುತ್ತೇನೆ?
ನಾನು ಸರ್ಕಾರಿ ನೌಕರನಾಗಿದ್ದು, ಕರ್ನಾಟಕ ಲೋಕಸೇವಾ
ಆಯೋಗ ನಡೆಸಿದ 2016ರ ಪ್ರಥಮ ಅಧಿವೇಶನದಲ್ಲಿ ಅಕೌಂಟ್ಸ್
ಹೈಯರ್ ಜನರಲ್ ಲಾ ಭಾಗ 1 ಮತ್ತು 2ನ್ನು ತೇರ್ಗಡೆ
ಯಾಗಿದ್ದೇನೆ. ನನಗಿಂತ ಕಿರಿಯರು ಈ ಮೊದಲೇ ಈ ಪರೀಕ್ಷೆ
ತೇರ್ಗಡೆಯಾಗಿದ್ದು ಅವರನ್ನು ಪದೋನ್ನತಿಗೆ ಅರ್ಹರೆಂದು
ಪರಿಗಣಿಸಲಾಗಿದೆ. ಪರೀಕ್ಷೆಯ ಫಲಿತಾಂಶವನ್ನು ಆಯೋಗವು
22.7.2016ರಂದು ಪ್ರಕಟಿಸಿದೆ. ಪರೀಕ್ಷೆಯು 27.4.2016ರಂದು
ನಡೆದಿರುತ್ತದೆ. ಈ ಹಿನ್ನೆಲೆ ಯಲ್ಲಿ ನಾನು ಯಾವ ದಿನಾಂಕದಂದು
ಪದೋನ್ನತಿಗೆ ಅರ್ಹನಾಗುತ್ತೇನೆ?
| ಮಹೇಶ ಚಂದ್ರ ಚಿಕ್ಕಮಗಳೂರು
1974ರ ಕರ್ನಾಟಕ ಸಿವಿಲ್ ಸೇವಾ (ಕನ್ನಡ ಭಾಷಾ ಮತ್ತು ಸೇವಾ
ಪರೀಕ್ಷೆಗಳು) ನಿಯಮಾವಳಿ ರೀತ್ಯ ಸರ್ಕಾರಿ ಸೇವೆಗೆ ಸೇರಿದ
ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದಂತೆ
ಪದೋನ್ನತಿ ಪಡೆಯಲು ಇಲಾಖಾ ಪರೀಕ್ಷೆಗಳನ್ನು
ತೇರ್ಗಡೆಯಾಗಬೇಕಾದುದು ಕಡ್ಡಾಯವಾಗಿರುತ್ತದೆ. ಈ
ಹಿನ್ನೆಲೆಯಲ್ಲಿ ನೀವು ಇಲಾಖಾ ಪರೀಕ್ಷೆಗಳಲ್ಲಿ
ತೇರ್ಗಡೆಯಾಗಿರುವುದು ನಿಮ್ಮ ಪರೀಕ್ಷಾರ್ಥ ಅವಧಿ ಮತ್ತು
ಪದೋನ್ನತಿಗೆ ಅವಶ್ಯಕ. ದಿನಾಂಕ 13.4.2010ರ ಸರ್ಕಾರಿ
ಸುತ್ತೋಲೆ ಸಂಖ್ಯೆ ಸಿಆಸುಇ 01, ಸೆಸೆನಿ 2010ರಲ್ಲಿ ಸರ್ಕಾರಿ
ನೌಕರನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ
ಪದೋನ್ನತಿಗೆ ಪರಿಗಣಿಸುವಾಗ ಅವನು ಇಲಾಖಾ ಪರೀಕ್ಷೆಯ
ದಿನಾಂಕವನ್ನು ಪರಿಗಣಿಸದೇ ಆಯೋಗವು ಫಲಿತಾಂಶ
ಪ್ರಕಟಿಸಿದ ದಿನಾಂಕವನ್ನು ಪದೋನ್ನತಿಗೆ
ಅರ್ಹತಾದಾಯಕವೆಂದು ಪರಿಗಣಿಸಲು ಸೂಚಿಸಲಾಗಿದೆ. ಆದ ಕಾರಣ
ನೀವು ದಿನಾಂಕ 22.7.2016ರಿಂದ ಅರ್ಹರಾಗಿರುತ್ತೀರಿ.
***
14-8-16
ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?
ನಾನು ಉಡುಪಿ ಜಿಲ್ಲೆಯಲ್ಲಿ ಗ್ರಾಮಕರಣಿಕನಾಗಿ ದಿನಾಂಕ
31.10.2013ರಂದು ಕರ್ತವ್ಯಕ್ಕೆ ಸೇರಿದ್ದು ಅಲ್ಲಿ ನನ್ನ ಖಾಯಂ
ಪೂರ್ಣಾವಧಿ ಪೂರ್ಣಗೊಂಡಿರುತ್ತದೆ. ಅಲ್ಲಿ
ಸೇವೆಯಲ್ಲಿರುವಾಗಲೇ ನಾನು ಜಿಲ್ಲಾಧಿಕಾರಿಯವರಿಂದ
ನಿರಾಕ್ಷೇಪಣಾ ಪತ್ರ ಪಡೆದು ರಾಯಚೂರು ಜಿಲ್ಲೆಗೆ
ಗ್ರಾಮಕರಣಿಕನಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದು ದಿನಾಂಕ
14.1.2016ರಂದು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ನಾನು ಈ
ಹಿಂದೆ ಮಾಡಿದ ಸೇವೆಯು ಪರಿಗಣಿತವಾಗುತ್ತದೆಯೇ? ಮತ್ತೆ
ಮೊದಲಿನಿಂದ ಪರೀಕ್ಷಾರ್ಥ ಅವಧಿ ಪೂರ್ಣಗೊಳಿಸಬೇಕೇ?
ನನ್ನ ಹಿಂದಿನ ವೇತನವೇ ಮುಂದುವರಿಯುತ್ತದೆಯೇ?
ಐ ಸೋಮರಾಯ ರಾಯಚೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮವಳಿಯ ನಿಯಮ 252 ಬಿ ರಂತೆ
ಉಡುಪಿ ಜಿಲ್ಲೆಯಲ್ಲಿ ಕರ್ತವ್ಯದಿಂದ ಬಿಡುಗಡೆ ಹೊಂದಿ
ರಾಯಚೂರು ಜಿಲ್ಲೆಗೆ ಕರ್ತವ್ಯಕ್ಕೆ ಹಾಜರಾಗಿದ್ದರೆ ನಿಮ್ಮ ಹಿಂದಿನ
ಸೇವೆಯು ಪರಿಗಣಿತವಾಗುತ್ತದೆ. ನೀವು ಬೇರೊಂದು
ನೇಮಕಾತಿ ಪ್ರಾಧಿಕಾರಕ್ಕೆ ಅದೇ ಹುದ್ದೆಗೆ ನಿಯುಕ್ತಿ
ಗೊಂಡಿರು ವುದರಿಂದ ಮತ್ತೆ ಪರೀಕ್ಷಾರ್ಥ ಅವಧಿಯನ್ನು
1977ರ ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಾವಳಿ
ರೀತ್ಯ ಪೂರ್ಣಗೊಳಿಸಬೇಕಾಗಿರುತ್ತದೆ. ನೀವೇ ತಿಳಿಸಿದಂತೆ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 41ಎ ರಂತೆ
ನಿಮಗೆ ವೇತನ ರಕ್ಷಣೆ ದೊರಕಲಿದ್ದು ನೀವು ಉಡುಪಿಯಲ್ಲಿ ಪಡೆದ
ಅಂತಿಮ ವೇತನವೇ ಪ್ರಸ್ತುತ ಹೊಸ ಹುದ್ದೆಗೂ
ಅನ್ವಯವಾಗುತ್ತದೆ.
***
15-8-16.
ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ?
ನಾನು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ 2014ರಲ್ಲಿ
ನೇಮಕಹೊಂದಿ ದಿನಾಂಕ 7.2.2014ರಂದು ಕರ್ತವ್ಯಕ್ಕೆ
ಹಾಜರಾಗಿ ನನ್ನ ಪರೀಕ್ಷಾರ್ಥ ಅವಧಿಯು 8.2.2016ಕ್ಕೆ
ಮುಕ್ತಾಯವಾಗಿದೆ. ಈಗ ನಾನು ಇದೇ ಇಲಾಖೆಯಲ್ಲಿ ಕಿರಿಯ
ಆರೋಗ್ಯ ಸಹಾಯಕನಾಗಿ ಆಯ್ಕೆಗೊಂಡಿದ್ದೇನೆ. ಈಗ ಪುನಃ
ನಾನು ಖಾಯಂ ಪೂರ್ವ ಸೇವೆಗಾಗಿ ಸೇವೆ ಸಲ್ಲಿಸಬೇಕೆ?
ಅಥವಾ ಡಿ ದರ್ಜೆ ನೌಕರನಾಗಿ ಸಲ್ಲಿಸಿದ ಸೇವೆಯನ್ನು
ಪರಿಗಣಿಸಲಾಗುತ್ತದೆಯೇ.
ಐರಾಜು ಬೆಣ್ಣೆ ಉಡುಪಿ ಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್ ) ನಿಯಮಗಳು
1977ರಡಿಯಲ್ಲಿ ಸರ್ಕಾರಿ ಸೇವೆಯ ಪ್ರತಿಯೊಂದು ಗುಂಪಿನ
ಮತ್ತು ವೃಂದಕ್ಕೆ 2 ವರ್ಷಗಳ ಕಾಲ ಪ್ರೊಬೇಷನ್ ಅವಧಿ
ನಿಗದಿಪಡಿಸಲಾಗಿದೆ. ನೀವು ಆರೋಗ್ಯ ಇಲಾಖೆಯಲ್ಲಿ ಡಿ ದರ್ಜೆ
ನೌಕರರಾಗಿ ಸಿ ಗುಂಪಿನ ಕಿರಿಯ ಆರೋಗ್ಯ ಸಹಾಯಕರ ಹುದ್ದೆಗೆ
ಆಯ್ಕೆಯಾಗಿರುವುದು ಸರಿ. ಆದರೆ ನೀವು ಡಿ ದರ್ಜೆ ವೃಂದವೇ
ಬೇರೆ, ಕಿರಿಯ ಆರೋಗ್ಯ ಸಹಾಯಕರ ವೃಂದವೇ ಬೇರೆ
ಬೇರೆಯಾಗಿರುವುದರಿಂದ ನೀವು ಮತ್ತೆ 2 ವರ್ಷಗಳ ಕಾಲ ಹೊಸ
ಹುದ್ದೆಯಲ್ಲಿ ಪೊಬೇಷನ್ ಅವಧಿಯನ್ನು
ಪೂರೈಸಬೇಕಾಗುತ್ತದೆ.
***
16-8-16
ಸರ್ಕಾರಿ ನೌಕರನೊಬ್ಬ ಜಿಲ್ಲಾಧಿಕಾರಿಗಳಿಂದ ಸ್ಪೋಟಕ ವಸ್ತುಗಳ
ಪರವಾನಗಿ ಪತ್ರವನ್ನು ಪಡೆದು ಪಟಾಕಿ ಮಾರಾಟ
ಮಾಡಬಹುದೇ?
| ಕುಮಾರಸ್ವಾಮಿ ಸಾಗರ
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ
16ರಲ್ಲಿ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ
ಪಡೆಯದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ
ರೀತಿಯ ವ್ಯಾಪಾರ ಅಥವಾ ವ್ಯವಹಾರದಲ್ಲಿ
ತೊಡಗತಕ್ಕದ್ದಲ್ಲ. ಯಾವುದೇ ಇತರೇ ಉದ್ಯೋಗವನ್ನು
ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಈ ನಿಯಮಾವಳಿಯ
ಹಿನ್ನೆಲೆಯಲ್ಲಿ ನೀವು ಕೋರಿದಂತೆ ಸರ್ಕಾರಿ ನೌಕರನು ಪಟಾಕಿ
ಮಾರಾಟ ಮಾಡುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದ್ದು
ಶಿಸ್ತುಕ್ರಮಕ್ಕೆ ಒಳಗಾಗುತ್ತಾನೆ.
***
17-8-16.
ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗಕ್ಕೆ ನಿರ್ಬಂಧ
ಇರುವುದಿಲ್ಲ.
ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ
ಸೇವೆ ಸಲ್ಲಿಸುತ್ತಿದ್ದು 5 ವರ್ಷ ಪೂರ್ಣಗೊಂಡಿದೆ. ನಾನು
ಉನ್ನತ ವ್ಯಾಸಂಗ ಮಾಡಲು ಬಯಸಿದ್ದು ಬೋಧಕೇತರ
ಸಿಬ್ಬಂದಿ ವರ್ಗದವರಿಗೆ ಸಂಬಳ ಸಹಿತ ಉನ್ನತ ವ್ಯಾಸಂಗ ಮಾಡಲು
ಅವಕಾಶವಿದೆಯೇ? ಇದ್ದರೆ ಮುಂದೆ ನಾನು ಯಾವ ಕ್ರಮ
ಅನುಸರಿಸಬೇಕು ?
ಐ ಅಶ್ವಂತ ಬಿ.ಎಸ್ ಮೈಸೂರು
ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4, ಎಸ್​ಆರ್​ಸಿ 73, ದಿನಾಂಕ
5.2.1973ರಲ್ಲಿ ಸರ್ಕಾರಿ ನೌಕರನು ಬಾಹ್ಯ ಅಥವಾ ಅಂಚೆ ತೆರಪಿನ
ಮೂಲಕ ಉನ್ನತ ವ್ಯಾಸಂಗ ಮಾಡಲು ಯಾವುದೇ ನಿರ್ಬಂಧ
ಇರುವುದಿಲ್ಲ. ಆದರೆ ನೀವು ಬಯಸಿದಂತೆ ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ಪರಿಶಿಷ್ಟ 2ಎರಂತೆ ಸಂಬಳ ಸಹಿತವಾಗಿ
ಉನ್ನತ ವ್ಯಾಸಂಗ ಮಾಡಲು ಅವಕಾಶವಿರುವುದಿಲ್ಲ. ಇದಕ್ಕೆ
ಕಾರಣ ನಿಮ್ಮ ಹುದ್ದೆಗೆ ಅಂತಹ ಉನ್ನತ ವ್ಯಾಸಂಗ
ಅವಶ್ಯಕವಾಗಿರುವುದಿಲ್ಲ. ನೀವು ಬಾಹ್ಯ ಅಭ್ಯರ್ಥಿಯಾಗಿ
ಅಥವಾ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿ ನಿಮ್ಮ
ಮೇಲಾಧಿಕಾರಿಗೆ ಮಾಹಿತಿ ನೀಡುವುದು.
***
18-8-16.
ಅಂಗವೈಕಲ್ಯದ ಬಗ್ಗೆ ವಿಶೇಷ ಭತ್ಯೆ ಪಡೆಯುತ್ತಿಲ್ಲ, ಇದಕ್ಕೆ
ನಾನು ಅರ್ಹನೇ?
ನಾನು ವಕ್ಪ್ ಮಂಡಳಿಯಲ್ಲಿ ಅಂಗವಿಕಲರ ಮೀಸಲಾತಿ ಅಡಿಯಲ್ಲಿ
ದ್ವಿತೀಯದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ.
ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ನಾನು ವೇತನ ಭತ್ಯೆ
ಪಡೆಯುತ್ತಿದ್ದೇನೆ. ಆದರೆ ನಾನು ಅಂಗವೈಕಲ್ಯದ ಬಗ್ಗೆ
ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಇದಕ್ಕೆ ನಾನು
ಅರ್ಹನೇ?
ಐಅಬ್ದುಲ್ ಖಾದಿರ್ ಹಾನಗಲ್
ದಿನಾಂಕ 13.2.2013ರಿಂದ ಅಂಗವಿಕಲ ಸರ್ಕಾರಿ ನೌಕರನಿಗೆ ಅವನ
ಮೂಲ ವೇತನಕ್ಕೆ ಅನುಗುಣವಾಗಿ ಶೇ. 6ರಷ್ಟು ವಿಶೇಷ ಭತ್ಯೆ
ನೀಡಲಾಗುವುದು. ಅಲ್ಲದೆ ಅವನು ಅಂಧ ಮತ್ತು
ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ ಮಾಸಿಕವಾಗಿ ರೂ.
500-00 ವಿಶೇಷ ಭತ್ಯೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ
ನೀವು ನಿಮ್ಮ ನೇಮಕಾತಿ ಅಧಿಕಾರಿಯವರಿಗೆ ನಿಮ್ಮ
ಅಂಗವೈಕಲ್ಯದ ಸ್ವರೂಪದ ಆಧಾರದ ಮೇಲೆ ವಿಶೇಷ ಭತ್ಯೆ
ಮಂಜೂರು ಮಾಡಲು ಕೋರಬಹುದು.
****
19-8-16.
ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು
ಕಡ್ಡಾಯ.
ನಾನು ಇತ್ತೀಚೆಗಷ್ಟೇ ಸರ್ಕಾರಿ ಸೇವೆಗೆ ಸೇರಿದ್ದು ನನ್ನ
ನೇಮಕಾತಿ ಆದೇಶದಲ್ಲಿ ಅಕೌಂಟ್ಸ್ ಹೈಯರ್, ರೆವಿನ್ಯೂ ಹೈಯರ್
ಮತ್ತು ಜನರಲ್ ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು
ಸೂಚಿಸಲಾಗಿದೆ. ನಾನು ಈ ಪರೀಕ್ಷೆಗಳನ್ನು ಪರೀಕ್ಷಾರ್ಥ
ಅವಧಿಯೊಳಗೆ ಪೂರೈಸಬೇಕಾಗಿದ್ದು ಇದೇ ವರ್ಷ ಆಗಸ್ಟ್
ತಿಂಗಳಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ
ಈ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ಈ ಪರೀಕ್ಷೆಗಳಲ್ಲಿ
ತೇರ್ಗಡೆಯಾಗುವುದು ಹೇಗೆ? ಯಾವ್ಯಾವ ಪುಸ್ತಕಗಳನ್ನು
ಅಧ್ಯಯನ ಮಾಡಬೇಕು? ದಯವಿಟ್ಟು ವಿವರ ನೀಡಿ.
|ಸುಮಿತ್ರಾ ಬಿ.ಎನ್. ದಾವಣಗೆರೆ.
ಕರ್ನಾಟಕ ಸರ್ಕಾರಿ ಸೇವಾ (ಕನ್ನಡಭಾಷೆ ಮತ್ತು ಸೇವಾ
ಪರೀಕ್ಷೆ) ನಿಯಮಗಳು 1974ರ ರೀತ್ಯ ಪ್ರತಿಯೊಬ್ಬ ಸರ್ಕಾರಿ
ನೌಕರನು ಪರೀಕ್ಷಾರ್ಥ ಅವಧಿಯೊಳಗೆ ತನಗೆ ನಿಗದಿಪಡಿಸಿದ ಇಲಾಖಾ
ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ. ಈ
ನಿಯಮಾವಳಿಯಲ್ಲಿ ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮ, ವಿಧಾನ
ಇತ್ಯಾದಿ ವಿವರಗಳನ್ನು ನೀಡಲಾಗಿದೆ. ನೀವು
ಹಾಜರಾಗುತ್ತಿರುವ ಇಲಾಖಾ ಪರೀಕ್ಷೆಗಳನ್ನು ಆಯೋಗವು
ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತಿರುವುದರಿಂದ ಒಮ್ಮೆ
ನೀವು ಈ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಅವುಗಳ
ವಿಷಯಸೂಚಿಕೆ ಮತ್ತು ಪರಿವಿಡಿಯನ್ನು ಅಧ್ಯಯನ
ಮಾಡುವುದರೊಂದಿಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಹ
ಅವಲೋಕಿಸಬೇಕು. ಈ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು
ತೆಗೆದುಕೊಂಡು ಹೋಗಿ ಉತ್ತರಿಸಲು ಅವಕಾಶವಿರುವುದರಿಂದ
ಇತ್ತೀಚಿನವರೆಗಿನ ತಿದ್ದುಪಡಿಗಳನ್ನು ಅಳವಡಿಸಿದ ಪುಸ್ತಕಗಳನ್ನೇ
ನೀವು ಅಧ್ಯಯನ ಮಾಡಬೇಕಾಗುತ್ತದೆ. ಬೆಂಗಳೂರಿನ ಶ್ರೀ
ರಾಘವೇಂದ್ರ ಪ್ರಕಾಶನದವರು ಅಕೌಂಟ್ಸ್ ಹೈಯರ್ ವಿಷಯಗಳಿಗೆ
ಸಂಬಂಧಿಸಿದ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಆರ್ಥಿಕ
ಸಂಹಿತೆ, ಖಜಾನೆ ಸಂಹಿತೆ, ಬಜೆಟ್ ಕೈಪಿಡಿ, ರೆವಿನ್ಯೂ ಹೈಯರ್ (ಭಾಗ
1 ಮತ್ತು 2 ಕ್ಕೆ) ಸಂಬಂಧಿಸಿದಂತೆ ರೆವಿನ್ಯೂ ಹೈಯರ್ ಪಠ್ಯ
ಪುಸ್ತಕಗಳನ್ನು ಹಾಗೂ ಜನರಲ್ ಲಾ ಭಾಗ 1, 2ಕ್ಕೆ
ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ಅಧ್ಯಯನ
ಮಾಡಬಹುದು. ***
21-8-16.
ಮಂಜೂರಾಗಿರುವ 180 ದಿನಗಳ ಪ್ರಸೂತಿ ರಜೆ
ಬಳಸಿಕೊಳ್ಳಬಹುದು.
ನನ್ನ ಪತ್ನಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕಿ. ನಮಗೆ ಮೊದಲನೇ
ಮಗುವಾಗಿದ್ದಾಗ ಅವಳು 180 ದಿನಗಳ ಪ್ರಸೂತಿ ರಜೆ
ತೆಗೆದುಕೊಂಡಿದ್ದಾಳೆ. ಈಗ ನಮಗೆ 2ನೇ ಮಗು ಜನಿಸಿದ್ದು ಮತ್ತೆ
ನನ್ನ ಪತ್ನಿ ಮಾತೃತ್ವ ರಜೆಯಲ್ಲಿ ಇದ್ದಾಳೆ. ಆದರೆ
ದುರದೃಷ್ಟವಶಾತ್ ನಮಗೆ 2ನೇ ಮಗು 45 ದಿನಗಳವರೆಗೆ ಬದುಕಿ
ಮರಣಿಸಿದೆ. ಈಗ ನನ್ನ ಪತ್ನಿ ಸೇವೆಗೆ ಹಾಜರಾಗಬೇಕೆ? ಅಥವಾ 180
ದಿನಗಳು ಮುಗಿದ ಮೇಲೆ ಸೇವೆಗೆ ಹಾಜರಾಗಬೇಕೆ? ಹೀಗೆ
ಪ್ರಸೂತಿ ರಜೆ ತೆಗೆದುಕೊಂಡು ಮತ್ತೊಮ್ಮೆ ಈ ರಜೆ ನನ್ನ ಪತ್ನಿಗೆ
ದೊರಕುತ್ತದೆಯೇ?
| ಮಾ.ವಿ. ರಾಜಶೇಖರ, ಬೀದರ್
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರಂತೆ
ನಿಮ್ಮ ಪತ್ನಿ 2ನೇ ಬಾರಿ ಮಾತೃತ್ವ ರಜೆ ಪಡೆದಿರುವುದು
ಕ್ರಮಬದ್ಧ. ಆದರೆ ಮಗು ಅಕಾಲಿಕ ಮರಣ ಹೊಂದಿದ್ದು, ತಾಯಿಯ
ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಲಗೊಳ್ಳಲು ಪ್ರಸ್ತುತ
ಮಂಜೂರಾಗಿರುವ 180 ದಿನಗಳ ಪ್ರಸೂತಿ ರಜೆ
ಬಳಸಿಕೊಳ್ಳಬಹುದು. ಆದುದರಿಂದ ಮತ್ತೆ ನಿಮ್ಮ ಪತ್ನಿ
ಕರ್ತವ್ಯಕ್ಕೆ ಹಾಜರಾಗದೆ 180 ದಿನಗಳ ನಂತರ ಕೆಲಸಕ್ಕೆ
ಹೋಗಬಹುದು. ಈ ನಿಯಮಾವಳಿ ರೀತ್ಯ 2 ಜೀವಂತ
ಮಗುವಿರುವವರೆಗೂ ಹೆರಿಗೆ ರಜೆ ಪಡೆಯಬಹುದು.
***
23-8-16
ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ?
ನಾನು ಸಹ್ಯಾದ್ರಿ ಕನ್ನಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ.
1998ರಿಂದ ನೇಮಕಾತಿ ಹೊಂದಿದ್ದೇನೆ. ಆದರೆ ಈ ಶಾಲೆಯು
2014ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿದೆ. ನನ್ನ
ಹುದ್ದೆಯು ಸಹ ಅನುದಾನಕ್ಕೊಳಪಟ್ಟಿದ್ದು, ಈಗ
ಪ್ರೊಬೇಷನರಿ ಅವಧಿ ಬಗ್ಗೆ ಗೊಂದಲಗಳಿವೆ. ನೇಮಕಾತಿ
ದಿನಾಂಕದಿಂದ 2 ವರ್ಷ ಪ್ರೊಬೇಷನರಿಅವಧಿಯೇ? ಅಥವಾ
ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ ಎಂಬ
ಗೊಂದಲಗಳಿವೆ. ಸೂಕ್ತ ಪರಿಹಾರ ಸೂಚಿಸಿ.| ಬಿ. ಸುಧೀಂದ್ರ
ಕುಮಾರ್, ಭದ್ರಾವತಿಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ
ಸೇವಾ ಷರತ್ತುಗಳು) ನಿಯಮಾವಳಿ 1999ರ ಮೇರೆಗೆ ಅನುದಾನಿತ
ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿ
ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ
ನಿಮ್ಮ ಪ್ರೊಬೇಷನರಿ ಅವಧಿ 2014ರ ಫೆಬ್ರವರಿಯಿಂದ
ಆರಂಭವಾಗಿ 2 ವರ್ಷಗಳಿರುತ್ತವೆ. ಅನುದಾನವನ್ನು ಸರ್ಕಾರವು
ನೀಡುತ್ತಿದ್ದು, ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ
ಅವಧಿಯನ್ನು 2 ವರ್ಷಗಳ ಕಾಲ ನಿಗದಿಪಡಿಸಲಾಗುತ್ತದೆ.
***
24-8-16.
ನಾನು 2010ರಲ್ಲಿ ಮುಖ್ಯೋಪಾಧ್ಯಾಯ
ಹುದ್ದೆಯಪದೋನ್ನತಿ ಬೇಡವೆಂದು, ನನ್ನ ಅಂಗವೈಕಲ್ಯ
ಕಾರಣದಿಂದಾಗಿ ಸ್ವ ಇಚ್ಚೆಯಿಂದ ನಿರಾಕರಿಸಿದ್ದೆ. 20, 25 ವರ್ಷ
ಮತ್ತು 30 ವರ್ಷದ ವೇತನ ಬಡ್ತಿಗೆ ಅರ್ಹನಾಗಿದ್ದೇನೆಯೇ?|
ಪಿ.ಎಚ್.ಪಾಟೀಲ್, ಬೆಳಗಾವಿದಿನಾಂಕ 9.5.2002ರ ಸರ್ಕಾರಿ ಆದೇಶ
ಸಂಖ್ಯೆ ಎಫ್​ಡಿ 13, ಎಸ್​ಆರ್​ಪಿ 2002, ಹಾಗೂ ದಿನಾಂಕ
14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ
2012ರಂತೆ ಈಗಾಗಲೇ ಸ್ವ ಇಚ್ಛೆಯಿಂದ ತಮ್ಮ ಪದೋನ್ನತಿ
ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ 20, 25, ಮತ್ತು 30 ವರ್ಷಗಳ
ಹೆಚ್ಚುವರಿ ವೇತನ ಬಡ್ತಿಗಳನ್ನು ನೀಡಬಾರದೆಂದು ಸೂಚಿಸಿದೆ.
ಆದ್ದರಿಂದ ನೀವು ಈ ಹೆಚ್ಚುವರಿ ವೇತನ ಬಡ್ತಿಗಳಿಗೆ ಅರ್ಹರಲ್ಲ.
***
25-8-16.
ನೆನಾನು ಇಲಾಖೆಯ ಪೂರ್ವಾನುಮತಿ ಪಡೆದು (ಎನ್​ಓಸಿ)
ಕೇಂದ್ರೀಯ ದಾಖಲಾತಿ ಘಟಕವು ನಡೆಸಿದ ಪರೀಕ್ಷೆಯಲ್ಲಿ
ಪದವಿಪೂರ್ವ ಕಾಲೇಜಿಗೆ ನೇರ ನೇಮಕಾತಿ ಹೊಂದಿದ್ದೇನೆ.
ನಾನು ಈ ಹಿಂದೆ ಜನವರಿ 2012ರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ
ನೇಮಕಗೊಂಡಿದ್ದು, ನಿವೃತ್ತಿ ವೇತನದ ಹುದ್ದೆಯನ್ನು ಧಾರಣೆ
ಮಾಡಿದ್ದೆ. ನಾನೀಗ ಪದವಿಪೂರ್ವ ಕಾಲೇಜಿನಲ್ಲಿ 3 ವರ್ಷ ಸೇವೆ
ಸಲ್ಲಿಸಿದ್ದು, 2 ವೇತನ ಬಡ್ತಿಗಳನ್ನು ಪಡೆದಿದ್ದು, 3ನೇ ವೇತನ
ಬಡ್ತಿ ಪಡೆಯಲು ಪುನಃ ತರಬೇತಿ ಅವಧಿ ಪೂರ್ಣಗೊಳಿಸಬೇಕೇ?
ನನಗೆ ಮೊದಲಿನ ನಿವೃತ್ತಿ ವೇತನ ಸೌಲಭ್ಯ ಈ ಇಲಾಖೆಯಲ್ಲೂ
ಮುಂದುವರಿಯುವುದೇ?| ವನಿತಾ ರಾಯೇಶ್ವರ್ ಶೆಟ್ಟಿ,
ಶಿರಸಿಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳ
ಹುದ್ದೆಗೆ ನೇಮಕ ಮಾಡುವಾಗ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ
4 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿ ನಿಗದಿಪಡಿಸಲಾಗಿರುತ್ತದೆ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51ರಂತೆ
ಮೊದಲ 3 ವೇತನ ಬಡ್ತಿಗಳನ್ನು ಯಾವುದೇ ಅಡೆತಡೆ ಇಲ್ಲದೆ
ಮಂಜೂರು ಮಾಡಬಹುದು. ಆದರೆ ಪದವಿಪೂರ್ವ ಕಾಲೇಜಿನ
ಉಪನ್ಯಾಸಕರಿಗೆ ಪ್ರಸ್ತುತ ಬಿ.ಎಡ್ ಶಿಕ್ಷಣ ತರಬೇತಿ
ಕಡ್ಡಾಯಗೊಳಿಸಿರುವುದರಿಂದ, ಮತ್ತೆಬಿಎಡ್ ತರಬೇತಿಯನ್ನು
ಪ್ರೌಢಶಾಲಾ ಶಿಕ್ಷಕರಾಗಿ ನೇಮಕವಾಗುವ ಮೊದಲೇ
ಪಡೆದಿರುವುದರಿಂದ, ಮತ್ತೆ ತರಬೇತಿ ಪಡೆಯಬೇಕಾದ ಅವಶ್ಯಕತೆ
ಇಲ್ಲ. ಆದರೆ ನಿಮ್ಮ 4ನೇ ವೇತನ ಬಡ್ತಿಯನ್ನು ಪ್ರೊಬೇಷನರಿ
ಅವಧಿ ನಂತರ ಮಂಜೂರು ಮಾಡಲಾಗುತ್ತದೆ. ನೀವು
ಇಲಾಖೆಯ ಪೂರ್ವಾನುಮತಿ ಪಡೆದು ಕರ್ನಾಟಕ ಸರ್ಕಾರಿ ಸೇವಾ
ನಿಯಮಾವಳಿಯ ನಿಯಮ 252 (ಬಿ)ರಂತೆ ಕಾರ್ಯ ವಿಮುಕ್ತಿ ಹೊಂದಿ
ಪದವಿಪೂರ್ವ ಕಾಲೇಜಿಗೆ ನೇಮಕವಾಗಿರುವುದರಿಂದ ನಿಮಗೆ
ಸರ್ಕಾರಿ ಸೇವಾ ನಿಯಮಾವಳಿಯ 224ಬಿರಂತೆ ಪಿಂಚಣಿಗಾಗಿ
ಹಿಂದಿನ ಸೇವೆ ಪರಿಗಣಿಸಲು ನಿಮ್ಮ ನೇಮಕಾತಿಪ್ರಾಧಿಕಾರಕ್ಕೆ
ನೀವು ಮನವಿ ಸಲ್ಲಿಸಬೇಕು. ನಿಮ್ಮ ಮನವಿಯ ಆಧಾರದ ಮೇಲೆ
ನೇಮಕಾತಿ ಪ್ರಾಧಿಕಾರಿಯವರು ನೀವು ಪ್ರೌಢಶಾಲೆಯಲ್ಲಿ
12.1.2006ರಿಂದ ಸೇವೆ ಸಲ್ಲಿಸಿರುವುದರಿಂದ ನಿಮ್ಮ
ಹುದ್ದೆಯನ್ನು ಪಿಂಚಣಿಯುಕ್ತ ಹುದ್ದೆಯೆಂದು ಪರಿಗಣಿಸಿ
ಮಂಜೂರು ಮಾಡಲಾಗುತ್ತದೆ.
***
[28/08 5:13 pm] Basayya M Jamalur: ಜುಲೈ-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು.
July 1, 2016ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ ಸರ್ಕಾರಿ
ಕಾರ್ನರ್. ಸೇವಾ ಕಾನೂನು ತಜ್ಞ ಲ. ರಾಘವೇಂದ್ರ ಅವರು
ಸರ್ಕಾರಿ ಉದ್ಯೋಗಸ್ಥರ ಸಮಸ್ಯೆಗಳಿಗೆ ಪರಿಹಾರ
ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ,
5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
1-7-16.
ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ತಪಾಸಣೆ ಕಾರ್ಯ
ನಿರ್ವಹಿಸಬಹುದು.
ಒಬ್ಬ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ, ಹತ್ತಿರದ
ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಿಕ್ಷಕರ ದಿನಚರಿ, ಮೌಲ್ಯಮಾಪನ
ತಪಾಸಣೆ ಮಾಡುವ ಅಧಿಕಾರ ಇದೆಯೇ?
| ಸಂತೋಷ್ ಎಂ.ಎಸ್. ಶಿವಮೊಗ್ಗ
ಒಬ್ಬ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ
ಹೆಚ್ಚುವರಿಯಾಗಿ ಸಹಾಯಕ ಶಿಕ್ಷಣಾಧಿಕಾರಿಯೆಂದು
ಪದನಾಮಕರಿಸಿ ನಿಯೋಜಿತರಾದ ಮುಖ್ಯ ಶಿಕ್ಷಕರು ದಿನಾಂಕ
1.8.2007ರ ಸರ್ಕಾರಿ ಆದೇಶ ಸಂಖ್ಯೆ ಇಡಿ 109, ಡಿಪಿಐ 2007ರಂತೆ
ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಹಿತದೃಷ್ಟಿಯಿಂದ
ಶಾಲಾ ತಪಾಸಣೆ ಮುಂತಾದ ಕಾರ್ಯ ನಿರ್ವಹಿಸಬಹುದು.
***
2-7-16.
ಸರ್ಕಾರಿ ನೌಕರನಾಗಿರುವ ನನಗೆ ದಿನ ಪತ್ರಿಕೆ, ವಾರಪತ್ರಿಕೆಗಳಿಗೆ ಪತ್ರ
ಬರೆಯಲು ಶಿಸ್ತು ಪ್ರಾಧಿಕಾರಿಯ ಅನುಮತಿ ಅವಶ್ಯಕವೇ?
ಕರ್ನಾಟಕ ಸಿವಿಲ್ ಸೇವಾ(ನಡತೆ ) ನಿಯಮಾವಳಿ 1966ರ ನಿಯಮ 9(2)
ರ ಪ್ರಕಾರ ಅನುಮತಿ ಅವಶ್ಯಕ. ನೀವು ಬರೆಯುವ ಪತ್ರವನ್ನು,
ನಿಮ್ಮ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಅನುಮತಿ ಪಡೆದು
ಬರೆಯಬೇಕು. ಇಲ್ಲದಿದ್ದರೆ ನೀವು ಶಿಸ್ತು ಕ್ರಮಕ್ಕೆ
ಒಳಗಾಗುತ್ತೀರಿ.
***
3-7-16.
ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್
ಮೊಕದ್ದಮೆ
ನನ್ನ ಸಹೋದ್ಯೋಗಿಯೊಬ್ಬರು ಆಹಾರ ಮತ್ತು ನಾಗರಿಕ
ಸರಬರಾಜು ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ
ಸಲ್ಲಿಸುತ್ತಿರುವಾಗ ಲೋಕಾಯುಕ್ತ ಟ್ರಾ್ಯಪ್​ನಲ್ಲಿ
ಸಿಕ್ಕಿಹಾಕಿಕೊಂಡಿದ್ದರು. ತದನಂತರ ನೇರ ನೇಮಕಾತಿ ಮೂಲಕ
ವಿಶ್ವವಿದ್ಯಾನಿಲಯವೊಂದರ ಸಹಾಯಕ ಪ್ರಾಧ್ಯಾಪಕರ
ಹುದ್ದೆಗೆ ತನ್ನ ವಿದ್ಯಾರ್ಹತೆ ಮತ್ತು ಅನುಭವದ ಹಿನ್ನೆಲೆಯಲ್ಲಿ
ನೇಮಕವಾದರು. ಅತ್ತ ಸಿ.ಸಿ.ಎ ನಿಯಮಾವಳಿಯ ನಿಯಮ 14 (ಎ)
ಅಡಿ ವಿಚಾರಣೆಯನ್ನು ಲೋಕಾಯುಕ್ತಕ್ಕೆ ವಹಿಸಲು
ಲೋಕಾಯುಕ್ತರು ಸರ್ಕಾರದ ಕಾರ್ಯದರ್ಶಿಯವರಿಗೆ (ಆಹಾರ
ಮತ್ತು ನಾಗರಿಕ ಸೇವೆಗಳು) ಶಿಫಾರಸ್ಸು ಮಾಡಿದ್ದಾರೆ. ಇವರ
ವಿರುದ್ಧ 14 (ಎ) ಅಡಿ ಲೋಕಾಯುಕ್ತಕ್ಕೆ ವಿಚಾರಣೆಗೆ ವಹಿಸಿ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ
ಸಚಿವಾಲಯದ ಇಲಾಖೆ ಆದೇಶಿಸಬೇಕೋ? ಅಥವಾ
ವಿಶ್ವವಿದ್ಯಾಲಯದ ನಿಯಂತ್ರಣ ಹೊಂದಿರುವ ಸರ್ಕಾರದ ಉನ್ನತ
ಶಿಕ್ಷಣ ಇಲಾಖೆ ಆದೇಶಿಸಬೇಕೊ ತಿಳಿಸಿ?
| ಬಿ.ಎಸ್.ರಮೇಶ್ ಕುಮಾರ್ ಕೋಲಾರ
ಎರಡೂ ಅಲ್ಲ. ಕಾರಣ ಸರ್ಕಾರಿ ಸೇವೆಯಿಂದ ಬಿಡುಗಡೆಯಾದ
ಕೂಡಲೆ ಆ ನೌಕರ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ,
1957ರ ಮೇರೆಗೆ ಇದರ ವ್ಯಾಪ್ತಿಯಿಂದ ಹೊರಗೆ
ಹೋಗಿರುತ್ತಾರೆ (ಸಿಸಿಎ ನಿಯಮ). ಹೀಗಾಗಿ 14 (ಎ)
ವ್ಯಾಪ್ತಿಯಲ್ಲಿ ಆ ನೌಕರ ಬರುವುದಿಲ್ಲ. ವಿಶ್ವವಿದ್ಯಾಲಯದಲ್ಲಿ
ಸಲ್ಲಿಸುವ ಸೇವೆ ರಾಜ್ಯ ಸರ್ಕಾರಿ ಸೇವೆಯಲ್ಲ. ಆದ್ದರಿಂದ ಸಿಸಿಎ
ನಿಯಮಾವಳಿಯ ನಿಯಮ 100 (1)ರ ಪ್ರಕಾರ ವಿಶ್ವವಿದ್ಯಾನಿಲಯದ
ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಆ ವ್ಯಕ್ತಿ ಭ್ರಷ್ಟಾಚಾರ
ಪ್ರತಿಬಂಧಕ ಅಧಿನಿಯಮ 1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗೆ
ಒಳಗಾಗುತ್ತಾನೆ.
***
4-7-16
ನಾನು ಅನುದಾನಿತ ಪ್ರೌಢಶಾಲೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿದ್ದು, ವೃತ್ತಿಗೆ ಸೇರುವ ಮೊದಲು ಹೆರಿಗೆಯಾಗಿ
ಅವಳಿ ಮಕ್ಕಳನ್ನು ಹೊಂದಿರುತ್ತೇನೆ. ಈಗ ವೃತ್ತಿ
ಖಾಯಂಗೊಂಡ ನಂತರ 2ನೇ ಹೆರಿಗೆಯಾಗಿದ್ದು, ಒಂದು
ಮಗುವಿಗೆ ಜನ್ಮ ನೀಡಿದ್ದೇನೆ. ಆದರೆ ಹೆರಿಗೆ ರಜೆ ಮಂಜೂರಾತಿ ಬಗ್ಗೆ
ಇಲಾಖೆ ವಿಚಾರಿಸಿದಾಗ ಈಗಾಗಲೇ 2 ಜೀವಂತ ಮಕ್ಕಳು ಇರುವ
ಕಾರಣ ಹೆರಿಗೆ ರಜೆ ಮಂಜೂರು ಮಾಡಲಾಗುವುದಿಲ್ಲ
ಎಂದಿದ್ದಾರೆ. ಆದರೆ ಕೆಸಿಎಆರ್ ನಿಯಮದಂತೆ 2ನೇ ಹೆರಿಗೆ ರಜೆಗೆ
ಅವಕಾಶ ಇದೆಯೇ ಇಲ್ಲವೇ ಅಥವಾ ನಿಯಮ ತಿದ್ದುಪಡಿ
ಮಾಡಲಾಗಿದೆಯೇ?
|ಯಾಸ್ಮಿನ್ ಎಂ. ಪುತ್ತೂರು, ದ.ಕ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135(3)ರಂತೆ
2 ಅಥವಾ ಜೀವಂತ ಮಕ್ಕಳನ್ನು ಹೊಂದುವ ಮಹಿಳಾ ಸರ್ಕಾರಿ
ನೌಕರರಿಗೆ ಈ ಪ್ರಸೂತಿ ರಜೆ ಅಥವಾ ಗರ್ಭಪಾತ ಸಂಬಂಧದ ರಜೆ
ಮಂಜೂರು ಮಾಡುವುದಿಲ್ಲ. ನಿಮಗೆ ಮೊದಲನೇ ಹೆರಿಗೆಯಲ್ಲಿ
ಅವಳಿ ಮಕ್ಕಳಾಗಿದ್ದು ಎರಡೂ ಮಕ್ಕಳು
ಜೀವಂತವಾಗಿದ್ದುದರಿಂದ ಈ ಹೆರಿಗೆ ರಜೆ ಮಂಜೂರು
ಮಾಡಲಾಗುವುದಿಲ್ಲ. ಆದರೆ, ನೀವು ಎರಡನೇ ಹೆರಿಗೆ ರಜೆಗೆ
ವೈದ್ಯಕೀಯ ಆಧಾರದ ಮೇರೆಗೆ ನಿಮ್ಮ ಖಾತೆಯಲ್ಲಿರುವ ರಜೆ
ಮಂಜೂರು ಮಾಡಿಸಿಕೊಳ್ಳಬಹುದು.
***
5-7-16
ನಾನು ಸರ್ಕಾರಿ ಸೇವೆಯಲ್ಲಿದ್ದು, ಸರ್ಕಾರಿ ವಸತಿ ಗೃಹದಲ್ಲಿ
ವಾಸಿಸುತ್ತಿದ್ದೇನೆ. ನಾನು ದಿನಾಂಕ: 28.10.2016ರಂದು
ವಯೋನಿವೃತ್ತಿ ಹೊಂದುವವನಿದ್ದೇನೆ. ನಿವೃತ್ತಿಯ ನಂತರ
ನಾನು ಸರ್ಕಾರಿ ವಸತಿ ಗೃಹದಲ್ಲಿ ಕಾನೂನಿನ ಪ್ರಕಾರ ಎಷ್ಟು ದಿನ
ಇರಬಹುದು ಎಂಬ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.
|ಚಂದ್ರಕಾಂತ ನಾಯ್ಕ, ಕುಮಟಾ, ಉ.ಕ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳು
ಪರಿಶಿಷ್ಟ-4ರಲ್ಲಿರುವ ಸರ್ಕಾರಿ ನೌಕರರ ನಿವಾಸಗಳನ್ನು ಬಳಸಲು
ಸರ್ಕಾರಿ ಕಟ್ಟಡಗಳ ಹಂಚಿಕೆ ಮತ್ತು ಲೈಸೆನ್ಸ್ ಶುಲ್ಕ ವಿಧಿಸುವಿಕೆ
ನಿಯಮಗಳು 2002ರ ನಿಯಮ 30ರಂತೆ ಒಂದು ತಿಂಗಳವರೆಗೆ
ವಾಸವಿರಬಹುದು. ತದನಂತರ ಇದ್ದರೆ ನಿಯಮ 10ರಂತೆ ಹೆಚ್ಚುವರಿ
ಬಾಡಿಗೆ ಶುಲ್ಕವನ್ನು ಲೋಕೋಪಯೋಗಿ ಇಲಾಖೆಯು
ವಿಧಿಸುತ್ತದೆ.
***
6-7-16
ನಾನು ನಗರ ಪಾಲಿಕೆಯಲ್ಲಿ ಸಿ ದರ್ಜೆ ನೌಕರನಾಗಿ ಕೆಲಸ
ನಿರ್ವಹಿಸುತ್ತಿದ್ದೇನೆ. ನಾನು ಕೆಲಸಕ್ಕೆ ದಿನಾಂಕ: 02.06.2000ರಲ್ಲಿ
ಸೇರಿದ್ದು ಸ್ವಯಂ ನಿವೃತ್ತಿ ಪಡೆಯಬೇಕೆಂದು ತೀರ್ವನ
ಮಾಡಿದ್ದೇನೆ. ಸ್ವಯಂ ನಿವೃತ್ತಿ ಪಡೆದರೆ ನನಗೆ ಪಿಂಚಣಿ ಸೌಲಭ್ಯ
ಹಾಗೂ ಇತರೆ ಭತ್ಯೆ ಸಿಗಬಹುದೆ. |ನಂಜಪ್ಪ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 185(3)
ರಡಿಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ
ಪಡೆದರೆ ಐದು ವರ್ಷಗಳ ಕಾಲ ಸೇವಾ ಅಧಿಕ್ಯ(ವೇಟೇಜ್)
ಲಭ್ಯವಾಗುತ್ತದೆ. ನಿಮಗೆ 20 ವರ್ಷಗಳ ಪಿಂಚಣಿಗಾಗಿ ಅರ್ಹತೆ
ಪರಿಗಣಿಸಲಾಗುತ್ತದೆ. ನಿಮಗೆ ಲಭ್ಯವಾಗುವ ಕಡೆಯ ವೇತನದ
ಆಧಾರದ ಮೇಲೆ ನಿಯಮಾವಳಿ ರೀತ್ಯಾ ನಿವೃತ್ತಿ ವೇತನ
ಕಮ್ಯುಟೇಷನ್, ಕೌಟುಂಬಿಕ ನಿವೃತ್ತಿ ವೇತನ ಹಾಗೂ ನಿಮ್ಮ
ನಿವೃತ್ತಿ ವೇತನಕ್ಕೆ ಹೊಂದಿಕೆಯಾಗುವ ತುಟ್ಟಿ ಭತ್ಯೆಯು
ಲಭ್ಯವಾಗುತ್ತದೆ.
***
7-7-16
ಜಾತಿ ಸಿಂಧುತ್ವ ಪ್ರಮಾಣ ಪತ್ರವು ಸಂಬಂಧಪಟ್ಟ ಇಲಾಖೆಗೆ
ತಲುಪಿದ ಎಷ್ಟು ದಿನದವರೆಗೆ ನೇಮಕಾತಿ ಆದೇಶ ಪಡೆಯಲು
ಕಾಲಾವಕಾಶವಿದೆ? ನಾವೇನಾದರೂ ಬೇರೆ ಇಲಾಖೆಯಲ್ಲಿ
ಮತ್ತೊಂದು ಕೆಲಸಕ್ಕೆ ಹಾಜರಾಗಬೇಕಾದರೆ, ಮತ್ತೆ ಇದೇ
ಸಿಂಧುತ್ವ ಪ್ರಮಾಣ ಪತ್ರವನ್ನು ಸೇರಬೇಕಾಗಿರುವ ಇಲಾಖೆಗೆ/
ಸರ್ಕಾರಿ ನೌಕರಿಗೆ ಪರಿಗಣಿಸಲು ಸಾಧ್ಯವಿದೆಯೇ ?
ಐಎಸ್.ಎಸ್.ಮೂಡಲದವರ, ಹಾವೇರಿ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ)
ನಿಯಮಗಳು 1977ರಡಿಯಲ್ಲಿ ಸಿಂಧುತ್ವ ಪಡೆದ ದಿನಾಂಕದಿಂದ 6
ತಿಂಗಳೊಳಗೆ ನೇಮಕಾತಿ ಆದೇಶ ಪಡೆಯಬಹುದು.
ನೀವೇನಾದರೂ ಬೇರೆ ಇಲಾಖೆಗೆ ಹಾಜರಾಗಬೇಕಾದಾಗ ಮತ್ತೆ
ಸಿಂಧುತ್ವ ಪ್ರಮಾಣ ಪತ್ರ ಮಾಡಿಸುವ ಅವಶ್ಯಕತೆ ಇಲ್ಲ. ಸರ್ಕಾರಿ
ಅದೇಶದಂತೆ ಹಿಂದುಳಿದ ವರ್ಗಗಳ ಸಿಂಧುತ್ವ ಪ್ರಮಾಣ ಪತ್ರವು
ಐದು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಅದೇ ರೀತಿಯಾಗಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಿಂಧುತ್ವವು
ಶಾಶ್ವತವಾಗಿರುತ್ತದೆ.
***
8-7-16
ನಿವೃತ್ತಿಯಾದ 4 ವರ್ಷಗಳ ನಂತರ ಇಲಾಖಾ ವಿಚಾರಣೆ
ಸರಿಯೇ?
ನಾನು 2011ರಲ್ಲಿ ಸರ್ಕಾರಿ ನೌಕರಿಯಿಂದ ನಿವೃತ್ತನಾಗಿದ್ದು,
ಕೆಲವೊಂದು ಕರ್ತವ್ಯ ಲೋಪಗಳ ಆರೋಪಪಟ್ಟಿ ನೀಡಿ
ಇಲಾಖಾ ವಿಚಾರಣೆ ನಡೆಸಲು ವಿವರಣೆ ಕೇಳಿರುತ್ತಾರೆ.
ನಿವೃತ್ತಿಯಾದ ನಾಲ್ಕು ವರ್ಷಗಳ ನಂತರ ಈ ಇಲಾಖಾ ವಿಚಾರಣೆ
ನಡೆಸುವುದು ನಿಯಮಾವಳಿಯ ರೀತಿ ಸರಿಯೇ?
|ನಾರಾಯಣಸ್ವಾಮಿ, ಬೆಂಗಳೂರು.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 214 (2) (ಬಿ)
ರೀತ್ಯಾ ಸರ್ಕಾರಿ ನೌಕರನು ನಿವೃತ್ತಿಯಾದ 4 ವರ್ಷದ ಮೇಲೆ
ಯಾವುದೇ ಇಲಾಖಾ ವಿಚಾರಣೆ ಮಾಡತಕ್ಕದ್ದಲ್ಲ. ಇಂತಹ
ಇಲಾಖಾ ವಿಚಾರಣೆ ನಡೆಸಲು ಸರ್ಕಾರದ ಪೂರ್ವ ಮಂಜೂರಾತಿ
ಅಗತ್ಯ. ನಿಮ್ಮ ವಿರುದ್ಧ ಆಡಳಿತಾತ್ಮಕವಾದ ಕರ್ತವ್ಯ ಲೋಪ
ಆರೋಪ ಇರುವುದರಿಂದ ಹಾಗೂ ಯಾವುದೇ ಹಣಕಾಸಿನ
ನಷ್ಟವುಂಟಾಗದೇ ಇರುವುದರಿಂದ ನಿಯಮಾವಳಿಯ ರೀತ್ಯಾ
ಕ್ರಮಬದ್ಧವಾಗುವುದಿಲ್ಲ.
***
9-7-16
ಸ ರ್ಕಾರಿ ನೌಕರನ ಪತ್ನಿ ವ್ಯಾಪಾರ ವಹಿವಾಟನ್ನು ಮಾಡಲು
ಅವಕಾಶವಿದೆ.
ಒಬ್ಬ ಸರ್ಕಾರಿ ಉದ್ಯೋಗಿ ಅಂಗಡಿ ಮಳಿಗೆ ಹೊಂದುವುದು
ಅಥವಾ ಖರೀದಿಸುವುದು ಹಾಗೂ ಒಬ್ಬ ಉದ್ಯೋಗಿಯ ಪತಿ
ಅಥವಾ ಪತ್ನಿ ವ್ಯಾಪಾರ ವಹಿವಾಟು ಮಾಡಲು ಕಾನೂನಿನಲ್ಲಿ
ಅನುಮತಿಯಿದೆಯೇ?
|ಸುರೇಂದ್ರ ಕುಮಾರ್ ನಾಯಕ್ ಮಂಗಳೂರು
1966ರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳ ನಿಯಮ 16ರ
ಅಡಿಯಲ್ಲಿ ಯಾವುದೇ ಸರ್ಕಾರಿ ನೌಕರನು ಸರ್ಕಾರದ ಪೂರ್ವ
ಮಂಜೂರಾತಿಯಿಲ್ಲದ ಹೊರತು ಪ್ರತ್ಯಕ್ಷವಾಗಿಯೇ ಆಗಲೀ
ಪರೋಕ್ಷವಾಗಿಯೇ ಆಗಲೀ ವ್ಯಾಪಾರ ಮಾಡತಕ್ಕದ್ದಲ್ಲ
ಅಥವಾ ಇತರ ಉದ್ಯೋಗ ಕೈಗೊಳ್ಳತಕ್ಕದ್ದಲ್ಲ. ಆದರೆ, ಸರ್ಕಾರಿ
ನೌಕರನ ಪತ್ನಿ ತಾನೇ ಸ್ವತಃ ಬಂಡವಾಳ ಹೂಡಿ ವ್ಯಾಪಾರ
ವಹಿವಾಟನ್ನು ಮಾಡಲು ನಿಯಮಾವಳಿಯಲ್ಲಿ ಅವಕಾಶವಿದೆ.
***
10-7-16
ಮಗ ಮೃತ ತಾಯಿಯ ವೈದ್ಯಕೀಯ ಚಿಕಿತ್ಸಾ ವೆಚ್ಚ
ಪಡೆಯಬಹುದೇ?
ಒಬ್ಬ ಸರ್ಕಾರಿ ನೌಕರನ ತಾಯಿ ಗೃಹಿಣಿ ಆಗಿದ್ದು, ತಂದೆ ನಿವೃತ್ತ
ಸರ್ಕಾರಿ ನೌಕರನಾಗಿದ್ದಾಗ, ಮಗ ಮೃತ ತಾಯಿಯ ವೈದ್ಯಕೀಯ
ಚಿಕಿತ್ಸಾ ವೆಚ್ಚ ಪಡೆಯಬಹುದೇ. ದಯವಿಟ್ಟು ತಿಳಿಸಿ.
|ಎನ್.ಶ್ರೀನಿವಾಸ್ ಬೆಂಗಳೂರು
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸಾ ನಿಯಮಗಳು)
1963ರ ನಿಯಮ 2ರಂತೆ ಸರ್ಕಾರಿ ನೌಕರರ ತಂದೆ-ತಾಯಿ ಸರ್ಕಾರಿ
ನೌಕರನೊಂದಿಗೆ ವಾಸಿಸುತ್ತಿದ್ದರೆ ಅವರು ಸರ್ಕಾರಿ ಸೇವೆಯಿಂದ
ನಿವೃತ್ತರಾಗಿದ್ದರೂ ಅವರ ಮಾಸಿಕ ಆದಾಯವು 6,000
ರೂ.ಗಳನ್ನು ಮೀರದಿದ್ದರೆ ಅಂತಹ ತಂದೆ-ತಾಯಿಯವರ
ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಪಡೆಯಬಹುದು.
ಆದುದರಿಂದ ಮೃತರಾದ ನಿಮ್ಮ ತಾಯಿ ನಿಮ್ಮ
ಅವಲಂಬಿತರಾಗಿದ್ದರಿಂದ ನೀವು ವೈದ್ಯಕೀಯ ವೆಚ್ಚಕ್ಕೆ ಈ
ನಿಯಮಾವಳಿಯ ರೀತ್ಯಾ ಸಕ್ಷಮ ಪ್ರಾಧಿಕಾರಕ್ಕೆ ನಿಗದಿತ
ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
***
11-7-16
ಎಸ್.ಡಿ.ಎ. ಹುದ್ದೆಗೆ ಬದಲಾವಣೆ ಮಾಡಿಕೊಳ್ಳಬಹುದೇ?
ನಾನು ಭೂಮಾಪನ ಇಲಾಖೆಯಲ್ಲಿ ಭೂಮಾಪಕಳಾಗಿ ದಿನಾಂಕ:
05.11.2013ರಂದು ಸೇವೆಗೆ ಸೇರಿದ್ದು, ಮೂಲ ವೇತನ
ರೂ.12,500/- ಇದೆ. ಈಗ ನಾನು ಇಲಾಖೆ ಬದಲಾವಣೆ
ಮಾಡಿಕೊಳ್ಳಲು ಇಚ್ಛಿಸಿದ್ದೇನೆ. ನನ್ನ ಮೂಲ ವೇತನಕ್ಕೆ
ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿ ಯಾವುದಾದರೂ
ಬೇರೆ ಹುದ್ದೆಗಳಿಗೆ ಅಥವಾ ನನ್ನ ಮೂಲ ವೇತನಕ್ಕಿಂತ ಕಡಿಮೆ
ಇರುವ ಎಸ್.ಡಿ.ಎ. ಹುದ್ದೆಗೆ (ಕಂದಾಯ ಇಲಾಖೆಯಲ್ಲಿ) ಬದಲಾವಣೆ
ಮಾಡಿಕೊಳ್ಳಬಹುದೇ?
ಭಾರತಿ.ಟಿ.ಜೆ, ತುಮಕೂರು
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ)
ನಿಯಮಗಳು 1977ರ ನಿಯಮ 16ರ ಅಡಿಯಲ್ಲಿ ನೀವು
ಹೊಂದಿರುವ ಹುದ್ದೆಗೆ ಅಸಮರ್ಥರಾಗಿದ್ದರೆ, ಆ ಅಸಮರ್ಥತೆ
ಸಾಬೀತುಪಡಿಸುವ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದರೆ
ನಿಮ್ಮನ್ನು ನಿಮ್ಮ ವೇತನ ಶ್ರೇಣಿಯ ತತ್ಸಮಾನ ವೇತನ
ಶ್ರೇಣಿಯ ಹುದ್ದೆಗೆ ಸರ್ಕಾರವು ವರ್ಗಾಯಿಸಬಹುದು ಅಥವಾ
ನೀವೇ ಕೋರಿದಂತೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರ್ಗಾವಣೆ
ಮಾಡಿಸಿಕೊಳ್ಳಬಹುದು. ಆದರೆ ನಿಮಗೆ ದ್ವಿತೀಯ ದರ್ಜೆ ಸಹಾಯಕರ
ಹುದ್ದೆಗೆ ವರ್ಗಾವಣೆಗೊಂಡರೆ ವೇತನ ರಕ್ಷಣೆ ದೊರಕುವುದಿಲ್ಲ.
***
12-7-16
ನಾನು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ, ನನ್ನ ಸೇವಾವಧಿ 18
ವರ್ಷವಾದಾಗ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ
ಹೊಂದಿದೆ.ನಂತರ ನನಗೆ 20 ವರ್ಷದ ಹೆಚ್ಚುವರಿ ವಾರ್ಷಿಕ ಬಡ್ತಿ
ಸಿಗಲಿಲ್ಲ. ಈಗ ನಾನು ಮುಖ್ಯ ಶಿಕ್ಷಕಿಯಾಗಿ ಏಳು ವರ್ಷ
ಪೂರ್ತಿಗೊಳಿಸಿದ್ದೇನ.ಸೇವಾವಧಿ ಕೂಡ 25 ವರ್ಷ ಕಳೆದಿದೆ. ಆದರೆ
ನನಗೆ 25 ವರ್ಪದ ಬಡ್ತಿಯೂ ಸಿಗಲಿಲ್ಲ. ಮುಂದೆ 30 ವರ್ಷದ್ದು
ಸಿಗುವುದಿಲ್ಲವಾದರೆ ಇದು ಅನ್ಯಾಯ ಅಲ್ಲವೆ? ಕಾನೂನಿನಲ್ಲಿ ಈ
ತಾರತಮ್ಯದ ಬಗ್ಗೆ ಯಾವುದೇ ತಿದ್ದುಪಡಿ ಇಲ್ಲವೇ? ನನಗಿಂತ
ಕಡಿಮೆ ಸೇವೆ ಮಾಡುವವರು ಹೆಚ್ಚಿಗೆ ಸಂಬಳ ಪಡೆಯುತ್ತಿದ್ದಾರೆ
ಇದು ನ್ಯಾಯವೇ?
ಶ್ರೀಮತಿ
ಪಿ.ಎನ್.ಮುಕ್ರಿ.ರಾಣೇಬೆನ್ನೂರು.ಹಾವೇರಿ.
ದಿನಾಂಕ: 09.05.2002ರ ಸರ್ಕಾರಿ ಆದೇಶ ಸಂಖ್ಯೆ ಎಫ್.ಡಿ.13
ಎಸ್.ಆರ್.ಪಿ.2002 ರ ಕಂಡಿಕೆ 6 ರಲ್ಲಿ ಈಗಾಗಲೇ ಕನಿಷ್ಟ 1
ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಈ 20 ವರ್ಷದ ಹೆಚ್ಚುವರಿ
ವೇತನ ಬಡ್ತಿ ನೀಡಲಾಗುವುದಿಲ್ಲ.ಅಂತೆಯೇ
ದಿನಾಂಕ:14.06.2012ರ ಆದೇಶ
ಸಂಖ್ಯೆ:ಎಫ್.ಡಿ.12.ಎಸ್.ಆರ್.ಪಿ.2012 ರ ಕಂಡಿಕೆ 6 ರಂತೆ
ಈಗಾಗಲೇ ಪದೋನ್ನತಿ ಪಡೆದಿರುವ ನೌಕರರಿಗೆ ಈ 25 & 30 ವರ್ಷಗಳ
ಹೆಚ್ಚುವರಿ ವೇತನ ಬಡ್ತಿ ನೀಡಲಾಗುವುದಿಲ್ಲ. ಆದರೆ 2005ರ
ಸರ್ಕಾರಿ ಆದೇಶದಂತೆ ವೇತನ ತಾರತಮ್ಯದ ಬಗ್ಗೆ ಸಕ್ರಮ
ಪ್ರಾಧಿಕಾರಕ್ಕೆ ಸಮಾನ ಹುದ್ದೆಯಲ್ಲಿ ಸೇವಾ ಜೇಷ್ಠತೆಯಲ್ಲಿ
ಕಿರಿಯರಾದ ನೌಕರರಿಗೆ ವೇತನ ಉನ್ನತಿಗೊಳಿಸಲು ನೀವು ಸಕ್ಷಮ
ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು.
***
13-7-16
ನಾನು ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ
ಸಹಾಯಕನಾಗಿ 19 ವರ್ಷ 6 ತಿಂಗಳಾಗಿವೆ. ಪ್ರಸ್ತುತ ಇಲಾಖೆಯಲ್ಲಿ
ಪದೋನ್ನತಿ ನೀಡುತ್ತಿದ್ದು, ನಾನೀಗ 20 ವರ್ಷದ ಹೆಚ್ಚುವರಿ
ವೇತನ ಬಡ್ತಿ ಸನಿಹದಲ್ಲಿರುತ್ತೇನೆ. ಕೇವಲ 6 ತಿಂಗಳ ಹತ್ತಿರದಲ್ಲೇ
ಹೆಚ್ಚುವರಿ ವೇತನ ಬಡ್ತಿ ದೊರೆಯದಂತಾಗುತ್ತದೆ. 20 ವರ್ಷದ
ಹೆಚ್ಚುವರಿ ವೇತನ ಪಡೆದು ತದನಂತರ ಪದೋನ್ನತಿ ಹುದ್ದೆಯ
ವೇತನ ಶ್ರೇಣಿ ಹೊಂದಬಹುದೇ?
ಪ್ರಸಾದ್ ಕೆ. ಚೆನ್ನಪಟ್ಟಣ, ರಾಮನಗರ
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 13, ಎಸ್​ಆರ್​ಪಿ 2002ರ ದಿನಾಂಕ
9.5.200ರ ಪ್ರಕಾರ 20 ವರ್ಷಗಳ ಸೇವಾವಧಿಯಲ್ಲಿ ಒಂದೂ
ಪದೋನ್ನತಿ ಇಲ್ಲದೆ ಮುಂದುವರಿದಿರುವ ಸರ್ಕಾರಿ ನೌಕರನಿಗೆ
ಅವನು ಹೊಂದಿರುವ ವೇತನ ಶ್ರೇಣಿಯಲ್ಲಿ ಒಂದು ಹೆಚ್ಚುವರಿ
ಬಡ್ತಿ ನೀಡಬೇಕೆಂದು ಸೂಚಿಸಿದೆ. ಈ ಆದೇಶದಂತೆ 6 ತಿಂಗಳ
ಕಾಲ ಹೆಚ್ಚುವರಿ ವೇತನ ಬಡ್ತಿ ಪಡೆದು ನಂತರ ಪದೋನ್ನತಿಯ
ವೇತನ ಬಡ್ತಿ ಪಡೆಯಲು ಅವಕಾಶವಿಲ್ಲ. ಆದುದರಿಂದ ನೀವು
ಮೊದಲು 20 ವರ್ಷಗಳ ಹೆಚ್ಚುವರಿ ವೇತನ ಪಡೆದು ತದನಂತರ
ಪದೋನ್ನತಿ ಪಡೆದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ
ನಿಯಮ 42-ಬಿರಂತೆ ವೇತನ ನಿಗದಿ ಪಡಿಸಿಕೊಳ್ಳಬಹುದು. ಆಗ ನಿಮಗೆ
ಹೆಚ್ಚಿನ ಆರ್ಥಿಕ ಸೌಲಭ್ಯ ಲಭ್ಯವಾಗುತ್ತದೆ.
***
14-7-16
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ಸಹ ಶಿಕ್ಷಕಿಯಾಗಿ
ಕರ್ತವ್ಯಕ್ಕೆ ಹಾಜರಾಗಿದ್ದೆ. ಕಳೆದ ತಿಂಗಳು ನನಗೆ ಒಂದು
ಮಗುವಾಗಿದ್ದು ಪ್ರಸೂತಿ ರಜೆ ಮಂಜೂರಾಗಿದ್ದು ನನ್ನ ಮಗು
ಕೇವಲ 15 ದಿನ ಮಾತ್ರ ಬದುಕಿ ನಿಧನಹೊಂದಿರುತ್ತದೆ. ಈ
ಹಿನ್ನೆಲೆಯಲ್ಲಿ ನಮ್ಮ ಶಾಲಾ ಮುಖ್ಯೋಪಾಧ್ಯಾಯರು
ಮಗು ನಿಧನ ಹೊಂದಿರುವುದರಿಂದ ಹಾಗೂ ನಾನು
ಪ್ರೊಬೇಷನರಿ ಅವಧಿಯಲ್ಲಿ ಇರುವುದರಿಂದ ಕರ್ತವ್ಯಕ್ಕೆ
ಹಾಜರಾಗಲು ಮೌಖಿಕವಾಗಿ ಸೂಚಿಸಿದ್ದಾರೆ. ಆದರೆ ಮಾನಸಿಕ
ಹಾಗೂ ದೈಹಿಕ ಅನಾರೋಗ್ಯದ ನಿಮಿತ್ತ ಕರ್ತವ್ಯಕ್ಕೆ
ಹಾಜರಾಗಲು ಸಾಧ್ಯವಾಗುತ್ತಿಲ್ಲ. ನಾನು 180 ದಿನಗಳ
ಪ್ರಸೂತಿ ರಜೆಯನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳಬಹುದೇ?
ವಿಜಯ ಎಂ. ಕುಲಕರ್ಣಿ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮವಳಿಯ ನಿಯಮ 135ರಡಿಯಲ್ಲಿ
ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ಕಾಲ ಹೆರಿಗೆ ರಜೆಯನ್ನು
ಮಂಜೂರು ಮಾಡಲು ಸೂಚಿಸಲಾಗಿದೆ. ನಿಮಗೆ ಈ 180 ದಿನಗಳ
ಹೆರಿಗೆ ರಜೆ ಮಂಜೂರಾಗಿರುವುದರಿಂದ ಹಾಗೂ ನಿಮ್ಮ ದೈಹಿಕ
ಮತ್ತು ಮಾನಸಿಕ ದೃಷ್ಟಿಯಿಂದ ವಿಶ್ರಾಂತಿ ಪಡೆಯುವುದು
ಅಗತ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ
ಮುಖ್ಯೋಪಾಧ್ಯಾಯರು ಸೂಚಿಸಿದಂತೆ ಕರ್ತವ್ಯಕ್ಕೆ
ಹಾಜರಾಗದೆ ನಿಮಗೆ ಮಂಜೂರಾಗಿರುವ 180 ದಿನಗಳ ಹೆರಿಗೆ
ರಜೆಯನ್ನು ಬಳಸಿಕೊಳ್ಳಲು ನಿಯಮಾವಳಿಯಲ್ಲಿ ಯಾವುದೇ
ಅಡ್ಡಿ ಇಲ್ಲ. ಪ್ರೊಬೇಷನ್ ಅವಧಿಗೂ ಈ ರಜೆ ಬಳಕೆಗೂ
ಯಾವುದೇ ಸಂಬಂಧವಿಲ್ಲ. ಆದ ಕಾರಣ ನಿಮ್ಮ ಮೇಲಧಿಕಾರಿಗೆ
ಈ ಬಗ್ಗೆ ಮನವರಿಕೆ ಮಾಡಿ ಮನವಿಯನ್ನು ಸಲ್ಲಿಸಬಹುದು.
***
15-7-16
ಮೀಸಲಾತಿಯನ್ನು ಅಭ್ಯರ್ಥಿ ಎಷ್ಟು ಬಾರಿಯಾದರೂ
ಬಳಸಿಕೊಳ್ಳಬಹುದು.
ನಾನು ಇತ್ತೀಚೆಗೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ
ಯೋಜನಾ ನಿರಾಶ್ರಿತ ವ್ಯಕ್ತಿಯ ಮೀಸಲಾತಿಯಲ್ಲಿ(ಪಿಡಿಪಿ)
ಆಯ್ಕೆಯಾಗಿರುತ್ತೇನೆ. ನಾನು ಮತ್ತೆ ಈ ಪಿಡಿಪಿ ಮೀಸಲಾತಿ
ಸೌಲಭ್ಯದಡಿ ಬೇರೆ ಹುದ್ದೆಗಳಿಗೆ ಮತ್ತೆ ಆಯ್ಕೆಯಾಗಬಹುದೇ?
ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
| ಶ್ರೀಶೈಲ, ಹುಬ್ಬಳ್ಳಿ
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ)
ನಿಯಮಾವಳಿಯ ನಿಯಮ 1977ರ ನಿಯಮ 9(1 ಎಎ) ಅಡಿಯಲ್ಲಿ
ಶೇ.5ರಷ್ಟು ಹುದ್ದೆಗಳನ್ನು ಯೋಜನೆ ನಿರಾಶ್ರಿತರ ವ್ಯಕ್ತಿಗಳಿಗೆ
(ಪಿಡಿಪಿ) ಅವರ ನೇರ ಮೀಸಲಾತಿ ಅಡಿ ನೀಡಲಾಗುತ್ತದೆ. ಈ
ಮೀಸಲಾತಿಯು ‘ಎ’ ಮತ್ತು ‘ಬಿ’ ಗುಂಪಿನ ಗೆಜೆಟೆಡ್ ಹುದ್ದೆಗಳಿಗೆ
ಅನ್ವಯಿಸುವುದಿಲ್ಲ. ಆದರೆ ಈ ಮೀಸಲಾತಿಯನ್ನು ಅಭ್ಯರ್ಥಿಯು
ಎಷ್ಟು ಬಾರಿಯಾದರೂ ಬಳಸಿಕೊಳ್ಳಬಹುದು. ಈ ಮೀಸಲಾತಿ
ಸೌಲಭ್ಯದ ಬಗ್ಗೆ ತಹಸೀಲ್ದಾರರಿಂದ ಪ್ರಮಾಣಪತ್ರ ಪಡೆದು ಆಯ್ಕೆ
ಪೂರ್ವ ಸಂದರ್ಭದಲ್ಲಿ ಸಲ್ಲಿಸಬೇಕು. ನೀವು ಮತ್ತೊಮ್ಮೆ
ಇದೇ ಮೀಸಲಾತಿಯಲ್ಲಿ ಬೇರೆ ಹುದ್ದೆಗಳಿಗೂ ಅರ್ಜಿ
ಸಲ್ಲಿಸುವಾಗ ನಮೂದಿಸಬಹುದು.
***
16-7-16
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ
ನಿರ್ವಹಿಸುತ್ತಿದ್ದು, ನನಗೀಗ ಆರೂವರೆ ತಿಂಗಳ ಮಗುವಿದೆ. ನಾನು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 135ರಂತೆ ಹೆರಿಗೆ
ರಜೆ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ಆದರೆ
ಮಗುವಿಗೆ ಆರೈಕೆ ಮಾಡಲು ಶಾಲೆಯಿಂದ ಮನೆಗೆ ಬೇಗ
ಹೋಗಲು ಸರ್ಕಾರಿ ಆದೇಶವಿದೆಯೇ? ಅಥವಾ ನಿಯಮಾವಳಿ
ಇದೆಯೇ ?
| ವರಲಕ್ಷ್ಮಿ, ಮೈಸೂರು
1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಸೆಕ್ಷನ್ 11ರಡಿಯಲ್ಲಿ
ಮಹಿಳಾ ಸರ್ಕಾರಿ ನೌಕರರಿಗೆ ಮಗುವಿಗೆ 15 ತಿಂಗಳು ಆಗುವವರೆಗೆ
ಪ್ರತಿದಿನ ಶಾಲಾ ಕರ್ತವ್ಯದ ಅವಧಿಯಲ್ಲಿ ಎರಡು ಬಿಡುವುಗಳನ್ನು
ಪಡೆಯಲು ಅವಕಾಶವಿರುತ್ತದೆ. ಆದುದರಿಂದ ನೀವು ಈ
ಬಿಡುವನ್ನು ಪಡೆಯಲು ನಿಮ್ಮ ಮುಖ್ಯೋಪಾಧ್ಯಾಯರ
ಮೂಲಕ ನಿಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಈ
ಸಂಬಂಧವಾಗಿ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದು. ಈ
ಅನುಮತಿಯ ಹಿನ್ನೆಲೆಯಲ್ಲಿ ನೀವು ಮಗುವಿನ ಆರೈಕೆಗಾಗಿ ಮೇಲಿನ
ಅಧಿನಿಯಮದಡಿಯಲ್ಲಿ ಸೂಚಿಸಿದಂತೆ ಬಿಡುವುಗಳನ್ನು
ಪಡೆಯಬಹುದು.
***
17-7-16
ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆಯಿಂದ ವಿನಾಯಿತಿ ಇದೆಯೇ?
ನಾನು ಸರ್ಕಾರಿ ನೌಕರನಾಗಿದ್ದು ನನಗೀಗ 57 ವರ್ಷ. ನಮ್ಮ
ಮೇಲಾಧಿಕಾರಿಗಳು ಕಂಪ್ಯೂಟರ್ ಸಾಕ್ಷರತೆಯನ್ನು
ಕಡ್ಡಾಯವಾಗಿ ಪಡೆಯಬೇಕೆಂದು ಸೂಚಿಸಿ ಮುಂದಿನ ವರ್ಷದಿಂದ
ವಾರ್ಷಿಕ ವೇತನ ಬಡ್ತಿ, ಪದೋನ್ನತಿ ಇತ್ಯಾದಿಗಳನ್ನು
ತಡೆಹಿಡಿಯಲಾಗುತ್ತದೆಂದು ಸೂಚಿಸುತ್ತಿದ್ದಾರೆ. ನಾನೀಗ
ಇಷ್ಟರಲ್ಲೇ ಸ್ವಯಂ ನಿವೃತ್ತಿ ಹೊಂದಲು ಇಚ್ಛಿಸಿದ್ದು 50
ವರ್ಷಗಳು ದಾಟಿದ ಸರ್ಕಾರಿ ನೌಕರರಿಗೆ ಈ ಕಂಪ್ಯೂಟರ್ ಸಾಕ್ಷರತೆ
ಪರೀಕ್ಷೆಯಿಂದ ವಿನಾಯಿತಿ ಇದೆಯೇ?
| ಎಂ. ಎಸ್.ರಾಮಚಂದ್ರರಾವ್ ದಾವಣಗೆರೆ
ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ
ಪರೀಕ್ಷೆ) ನಿಯಮಾವಳಿ 2012ರ ನಿಯಮ 3ರ ಪರಂತುಕದಲ್ಲಿ ಈ
ನಿಯಮ ಜಾರಿಗೆ ಬಂದ ದಿನಾಂಕ 7.3.2012ಕ್ಕೆ 50 ವರ್ಷ ಪೂರೈಸಿದ
ಸರ್ಕಾರಿ ನೌಕರರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ
ಈಗಾಗಲೇ 57 ವರ್ಷಗಳಾಗುತ್ತಿರುವುದರಿಂದ ಕಂಪ್ಯೂಟರ್
ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರಿಂದ
ವಿನಾಯಿತಿ ದೊರಕುತ್ತದೆ. ಆದಕಾರಣ ನಿಮಗೆ ಎಲ್ಲಾ ವೇತನ ಬಡ್ತಿ ,
ಪದೋನ್ನತಿಗಳನ್ನು ನಿಯಮಾವಳಿ ರೀತ್ಯ
ನೀಡಬೇಕಾಗುತ್ತದೆ.
***
18-7-16
ನಾನು ಡಿ ಗುಂಪಿನ ಸರ್ಕಾರಿ ನೌಕರನಾಗಿ 25 ವರ್ಷ ಸೇವೆ
ಸಲ್ಲಿಸಿರುತ್ತೇನೆ. ಆದರೆ ಇತ್ತೀಚೆಗೆ ನಮ್ಮ ಮೇಲಧಿಕಾರಿಗಳು 2015
-16ನೇ ಸಾಲಿನ ಆಸ್ತಿದಾಯಿತ್ವದ ವಿವರ ಪಟ್ಟಿಕೆ ಸಲ್ಲಿಸಬೇಕೆಂದು
ಸೂಚಿಸಿರುತ್ತಾರೆ. ಡಿ ಗುಂಪಿನ ನೌಕರರಿಗೆ ಕರ್ನಾಟಕ ಸಿವಿಲ್ ಸೇವಾ
(ನಡತೆ) ನಿಯಮಗಳು 23 (1)ರಡಿಯಲ್ಲಿ
ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ. ಹೀಗಿರುವಲ್ಲಿ
ನಾನು ಆಸ್ತಿದಾಯಿತ್ವದ ವಿವರ ಪಟ್ಟಿಕೆಯನ್ನು ಯಾವ
ನಿಯಮದಡಿಯಲ್ಲಿ ಸಲ್ಲಿಸಬೇಕು?
| ಬಿ.ಎನ್. ಮಂಜುನಾಥ ಚಿಕ್ಕಮಗಳೂರು.
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 23
(1)ರಂತೆ ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವುದೇ ಸೇವೆಗೆ
ಅಥವಾ ಹುದ್ದೆಗೆ ಅವನ ಮೊದಲು ನೇಮಕವಾದಾಗಮತ್ತು
ತದನಂತರ ಪ್ರತಿ ವರ್ಷ ಮಾರ್ಚ್ 31ರ ಅಂತ್ಯಕ್ಕೆ ತನ್ನ ಮತ್ತು ತನ್ನ
ಕುಟುಂಬದ ಎಲ್ಲಾ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ
ವಿವರ ಪಟ್ಟಿಕೆಯನ್ನು ನಿಗದಿ ಪಡಿಸಿದ ನಮೂನೆಯಲ್ಲಿ
ಸಲ್ಲಿಸತಕ್ಕದೆಂದು ಸೂಚಿಸಲಾಗಿದೆ. ಇದೇ ನಿಯಮಾವಳಿಯ ನಿಯಮ
23 (1) (ಡಿ) ಟಿಪ್ಪಣಿ 1ರಲ್ಲಿ ಡಿ ಗುಂಪಿನ ನೌಕರರು ಸಾಮಾನ್ಯವಾಗಿ
ಈ ಆಸ್ತಿ ಋಣ ವಿವರ ಪಟ್ಟಿಕೆಯನ್ನು ಸಲ್ಲಿಸುವುದು
ಅಗತ್ಯವಿಲ್ಲವೆಂದು ಸೂಚಿಸಲಾಗಿದೆ. ಆದರೆ ದಿನಾಂಕ 1.8.2015ರ
ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 90, ಸೆನಿಸಿ 2014ರಂತೆ ಡಿ
ಗಂಪಿನ ನೌಕರರೂ ಸಹ ಆಸ್ತಿದಾಯಿತ್ವದ ವಿವರ ಪಟ್ಟಿಕೆಯನ್ನು
ಸಲ್ಲಿಸಲು ಸೂಚಿಸಲಾಗಿದೆ. ಆದ ಕಾರಣ ನೀವು 2015-16ನೇ
ಸಾಲಿನ ನಿಮ್ಮ ಮತ್ತು ನಿಮ್ಮ ಕುಟುಂಬದ ಆಸ್ತಿ ಉತ್ತರದಾಯಿತ್ವ
ವಿವರ ಪಟ್ಟಿಕೆಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
***
19-7-16
ನಾನು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ
ನೇಮಕಗೊಂಡು 6 ತಿಂಗಳು ಸೇವೆ ಸಲ್ಲಿಸಿರುತ್ತೇನೆ. ಇದೀಗ
ಸರ್ಕಾರದಿಂದ ಕರೆಯುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹುದ್ದೆಗೆ (ಪಿಡಿಓ) ಅರ್ಜಿ ಸಲ್ಲಿಸಲು ಬಯಸಿದ್ದು, ನಮ್ಮ
ಮೇಲಧಿಕಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಕೋರಿದಾಗ
ಅವರು ನಿಮ್ಮ ಪರೀಕ್ಷಾರ್ಥ ಅವಧಿ ಮುಗಿಯುವವರೆಗೂ
ನೀಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದಾರೆ. ಇದಕ್ಕೆ ಸೇವಾ
ಕಾನೂನು ರೀತ್ಯ ಪರಿಹಾರ ಇದೆಯೇ?
| ಪವಿತ್ರಾ ಎಂ. ತಿಪಟೂರು.
ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೌಕರಿ ಭರ್ತಿ)
ನಿಯಮಗಳು1977ರ ನಿಯಮ 11ರಡಿಯಲ್ಲಿ ಯಾವುದೇ ಸೇವೆ
ಅಥವಾ ಹುದ್ದೆಗೆ ಅರ್ಜಿ ಸಲ್ಲಿಸುವ ಸರ್ಕಾರಿ ನೌಕರನು ಸಾರ್ವಜನಿಕ
ಹಿತದೃಷ್ಟಿಯಿಂದ ಸಲ್ಲಿಸುವಾಗ ಅನುಮತಿಯನ್ನು ನೇಮಕಾತಿ
ಪ್ರಾಧಿಕಾರವು ನೀಡಬೇಕಾಗುತ್ತದೆ. 1977ರ ಕರ್ನಾಟಕ ಸಿವಿಲ್
ಸೇವಾ (ಪ್ರೊಬೇಷನ್) ನಿಯಮಾವಳಿ ರೀತ್ಯ ಬೇರೆ
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿರಾಕರಿಸುವುದು
ಕ್ರಮಬದ್ಧವಾಗಿರುವುದಿಲ್ಲ. ಸೇವೆಗೆ ಸೇರಿದ ದಿನದಿಂದ
ಪ್ರತಿಯೊಬ್ಬ ವ್ಯಕ್ತಿ ಎಲ್ಲಾ ಸೇವಾ ನಿಯಮಗಳಿಗೆ
ಬದ್ಧನಾಗಿರುತ್ತಾನೆ. ಪರೀಕ್ಷಾರ್ಥ ಅವಧಿ ಕೇವಲ ಅವನ
ಕಾರ್ಯಕ್ಷಮತೆ ಮತ್ತು ನಡವಳಿಕೆಯನ್ನು
ಅವಲೋಕಿಸುವುದಕ್ಕೋಸ್ಕರ ನಿಗದಿಪಡಿಸಲಾಗಿರುತ್ತದೆ.
ಹೀಗಿರುವುದರಿಂದ ನಿಮ್ಮ ಮೇಲಧಿಕಾರಿಯವರು
ನಿರಾಕ್ಷೇಪಣಾಪತ್ರ (ಎನ್​ಓಸಿ) ನೀಡಲು ನಿರಾಕರಿಸುವುದು
ನಿಯಮಗಳ ಉಲ್ಲಂಘನೆಯಾಗುತ್ತದೆ.
***
20-7-16
ದೈಹಿಕ ತೊಂದರೆಗಳು ಹೆಚ್ಚಾಗಿವೆ ನಾನು ಏನು ಮಾಡಬೇಕು?
ನಾನು ಒಬ್ಬ ಅಂಗವಿಕಲ ಸರ್ಕಾರಿ ನೌಕರ(ಶೇ.80
ಕೇಳಿಸುವುದಿಲ್ಲ). ನನ್ನ ಅಧಿಕಾರಿಗಳು ಅನವಶ್ಯಕವಾಗಿ ನನಗೆ
ತೊಂದರೆ ಕೊಡುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ
ಕಚೇರಿ ಕೆಲಸ, ಅಲ್ಲದೆ ಬೇರೆ ಪ್ರಭಾರಿ ಕೆಲಸ ಅಂದರೆ ಸಂಘದ
ಸಮಾಪನಾಧಿಕಾರಿ ಹುದ್ದೆ ನಿರ್ವಹಣೆಗೆ ಆದೇಶಿಸಿರುತ್ತಾರೆ. ಕೆಲಸದ
ಒತ್ತಡದಿಂದ ಹಾಗೂ ನನ್ನ ಕಿವಿಯ ಅಂಗವಿಕಲತೆಯಿಂದ ನನಗೆ
ತುಂಬಾ ಮಾನಸಿಕ ತೊಂದರೆ ಕೊಡುವ ಉದ್ದೇಶದಿಂದ ನನ್ನ
ಮೇಲೆ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಯಾರಿ
ನಡೆಸಲಾಗಿದೆ. ಇದು ಅಲ್ಲದೆ ನನಗೆ 285 ನಿಯಮದಡಿಯಲ್ಲಿ
ಸೇವೆಯಿಂದ ತೆಗೆದುಹಾಕಲು ಪ್ರಸ್ತಾವನೆ ಸಹ ತಯಾರಿ
ನಡೆಸಲಾಗಿದೆ. ಇದರಿಂದ ನಾನು ತುಂಬಾ ಮಾನಸಿಕ
ತೊಂದರೆಯಲ್ಲಿದ್ದು, ನನ್ನ ದೈಹಿಕ ತೊಂದರೆಗಳು ಸಹ
ಹೆಚ್ಚಾಗಿವೆ. ನನಗೀಗ 58 ವರ್ಷ ಕಳೆದಿದೆ. ದಯವಿಟ್ಟು ಈ ಬಗ್ಗೆ
ನಾನು ಏನು ಮಾಡಬೇಕು ತಿಳಿಸಿ.
ಶಿವಶಂಕರ ಶಾಬಾದಿ, ಯಾದಗಿರಿ.
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 277ರಂತೆ
ಸರ್ಕಾರಿ ನೌಕರ ತನ್ನ ಹುದ್ದೆಗೆ ಅಸಮರ್ಥನಾಗಿದ್ದಾನೆಂದು
ವೈದ್ಯಾಧಿಕಾರಿಗಳು ಶಿಫಾರಸ್ಸು ಮಾಡಿದರೆ ಹಾಗೂ ಈ
ರೀತಿಯಾಗಿ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸರ್ಕಾರದ
ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸುವ
ಉನ್ನತಾಧಿಕಾರಿಗಳ ಸಭೆಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ
ಪ್ರಸ್ತಾವನೆ ಹಿನ್ನೆಲೆಯಲ್ಲಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಚಿವ
ಸಂಪುಟವು ತೀರ್ವನ ಕೈಗೊಳ್ಳಬೇಕಾಗುತ್ತದೆ.
ಹೀಗಾಗಿರುವುದರಿಂದ ನಿಮ್ಮ ವಿರುದ್ಧ ಶಿಸ್ತು ಕ್ರಮ
ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆನೀವು ಈಗಾಗಲೇ 58
ವರ್ಷ ದಾಟಿರುವುದರಿಂದ ನೀವು ಸ್ವಯಂ ನಿವೃತ್ತಿ ಪಡೆದರೂ
ಸೇವಾ ಅಧಿಕ್ಯವು ಲಭ್ಯ.
***
21-7-16
***
22-7-16
ನಮ್ಮ ತಾಯಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅವರಿಗೆ ಖಾಸಗಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡುತ್ತಿದ್ದೇನೆ. ಈ ಚಿಕಿತ್ಸೆಗೆ
ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು ಇದನ್ನು ಯಾವ
ರೀತಿ ಮರುಪಾವತಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆ?
ಐ ಬಿ.ಎನ್. ಬಿರಾದಾರ್ ವಿಜಯಪುರ
ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ
ಸದಸ್ಯರುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು
ಜ್ಯೋತಿ ಸಂಜೀವಿನಿ ಎಂಬ ನೂತನ ಯೋಜನೆ
ಜಾರಿಗೊಳಿಸಿದೆ. ಈ ಯೋಜನೆಯಡಿ 7 ಮಾರಣಾಂತಿಕ ಕಾಯಿಲೆಗೆ
ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಅಥವಾ
ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಕೊಡಿಸಿದರೆ ಸುವರ್ಣ ಆರೋಗ್ಯ
ಟ್ರಸ್ಟ್ ಮುಖಾಂತರ ವೆಚ್ಚವಾಗಿರುವ ಮೊಬಲಗನ್ನು ಆಯಾ
ಆಸ್ಪತ್ರೆಗೆ ನೇರವಾಗಿ ಸಂದಾಯ ಮಾಡಲು ಸೂಚಿಸಲಾಗಿದೆ.
ಹೀಗಾಗಿ ಜ್ಯೋತಿ ಸಂಜೀವಿನಿ ಯೋಜನೆಯಡಿ ನೀವು
ಸರ್ಕಾರವು ಮಾನ್ಯ ಮಾಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ
ಆ ಆಸ್ಪತ್ರೆ ಮೂಲಕ ಮರು ಸಂದಾಯಕ್ಕೆ ನಿಗದಿತ ನಮೂನೆಯಲ್ಲಿ
ಅರ್ಜಿ ಸಲ್ಲಿಸಬೇಕು. ಆಗ ನಿಮಗೆ ಈ ವೈದ್ಯಕೀಯ ವೆಚ್ಚದ
ಮೊಬಲಗು ನಗದು ರಹಿತವಾಗಿ ಲಭ್ಯವಾಗುತ್ತದೆ.
***
25-7-16
ಮರಣ ಉಪದಾನ ಮಾತ್ರ ನೀಡಿದ್ದಾರೆ ಕಮ್ಯುಟೇಷನ್
ನೀಡಿರುವುದಿಲ್ಲ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನನ್ನ ಪತಿ ದಿನಾಂಕ:
31.01.2016ರಂದು ನಿವೃತ್ತಿ ಹೊಂದಿ ದಿನಾಂಕ:
04.02.2016ರಂದು ನಿಧನರಾಗಿರುತ್ತಾರೆ. ನನ್ನ ಪತಿಯವರು
ಲಿಖಿತವಾಗಿ ನಿವೃತ್ತಿ ಹೊಂದಲು ಅನುಮತಿ ಕೋರಿದಾಗ ಅದಕ್ಕೆ
ಸ್ಪಂದಿಸದೇ ಇದ್ದುದರಿಂದ ಪಿಂಚಣಿ ದಾಖಲೆಗಳಿಗೆ ನಾನೇ ಸಹಿ
ಮಾಡಿದ್ದು ನನಗೆ ಮರಣ ಉಪದಾನ ಮಾತ್ರ ನೀಡಿದ್ದಾರೆ
ಕಮ್ಯುಟೇಷನ್ ನೀಡಿರುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರ
ಸೂಚಿಸಿ.
|ವಿಜಯಲಕ್ಷ್ಮಿ, ಕಲಬುರಗಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292 (ಬಿ)
ರೀತ್ಯಾ ನಿವೃತ್ತಿ ವೇತನದ ಸೌಲಭ್ಯಗಳನ್ನು ಪಡೆಯುವ
ಮೊದಲೇ ಸರ್ಕಾರಿ ನೌಕರ ನಿಧನರಾದರೆ ಅವನ ಕುಟುಂಬಕ್ಕೆ ಮರಣ
ಉಪದಾನ ನೀಡಬೇಕೆಂದು ನಿಯಮಾವಳಿಯು ಸೂಚಿಸುತ್ತದೆ. ಈ
ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
376ರಂತೆ ಕಮ್ಯುಟೇಷನ್ ಮೊಬಲಗನ್ನು ನೀಡಲು
ಬರುವುದಿಲ್ಲ. ಆದ್ದರಿಂದ ನಿಮಗೆ ಕುಟುಂಬ ಪಿಂಚಣಿ ಹಾಗೂ
ಮರಣ ಉಪದಾನ ನೀಡಿರುವುದು ನಿಯಮಾವಳಿ ರೀತ್ಯಾ
ಕ್ರಮಬದ್ಧವಾಗಿದೆ.
***
26-7-16
ನಾನು ಅನುದಾನಿತ ಪ್ರೌಢಶಾಲೆಯಲ್ಲಿ ದಿನಾಂಕ:
23.11.1983ರಿಂದ ಶಿಕ್ಷಕಿಯಾಗಿ ಸೇರಿ ದಿನಾಂಕ: 23.11.2013ಕ್ಕೆ
30 ವರ್ಷಗಳ ಸೇವೆ ಪೂರ್ಣಗೊಳಿಸಿದ್ದೇನೆ. ಏತನ್ಮಧ್ಯೆ
24.04.2014ಕ್ಕೆ ನನಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ
ದೊರಕಿದೆ. ದಿನಾಂಕ: 31.05.2016ರಂದು ನಾನು ಸೇವೆಯಿಂದ
ನಿವೃತ್ತಿ ಹೊಂದಿದ್ದು ಮಹಾಲೇಖಪಾಲರು ನನ್ನ ನಿವೃತ್ತಿ
ವೇತನ ನಿಗದಿಪಡಿಸುವಾಗ 30 ವರ್ಷದ ವಿಶೇಷ ವೇತನ
ಬಡ್ತಿಯನ್ನು ಕಡಿತಗೊಳಿಸಿರುವರು. ನಾನು 30 ವರ್ಷದ ವಿಶೇಷ
ಬಡ್ತಿಗೆ ಅರ್ಹಳೇ, ಇಲ್ಲವೋ ದಯವಿಟ್ಟು ತಿಳಿಸಿ.
ದಿನಾಂಕ: 14.06.2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ12ಎಸ್​
ಆರ್​ಪಿ2012 ರಂತೆ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 15
ಶ್ರೇಣಿಗಳಲ್ಲಿರುವ ಯಾವುದೇ ಒಂದು ಹುದ್ದೆಯಲ್ಲಿ 30
ವರ್ಷಗಳ ಕಾಲ ಒಂದೂ ಪದೋನ್ನತಿಯನ್ನು ಪಡೆಯದೆ
ಮುಂದುವರೆದಿರುವ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ
ಶ್ರೇಣಿಯಲ್ಲಿ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು
ಮಾಡಬಹುದೆಂದು ಸೂಚಿಸಲಾಗಿದೆ. ಈ ಹೆಚ್ಚುವರಿ ವೇತನ
ಬಡ್ತಿಯನ್ನು ನೇಮಕಾತಿ ಪ್ರಾಧಿಕಾರವೇ ಷರತ್ತುಗಳು
ಪೂರ್ಣಗೊಂಡಿದ್ದಲ್ಲಿ ಮಂಜೂರು ಮಾಡಬಹುದೆಂದು
ಸೂಚಿಸಿದೆ. ಆದರೆ ಆರನೇ ಕಂಡಿಕೆಯಲ್ಲಿ ಈಗಾಗಲೇ ಕನಿಷ್ಟ 1
ಪದೋನ್ನತಿಯನ್ನು ಪಡೆದಿರುವ ನೌಕರರಿಗೆ ಈ ಆದೇಶವು
ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ
30 ವರ್ಷಗಳ ಒಂದೇ ಹುದ್ದೆಯಲ್ಲಿನ ಸೇವಾ ಹುದ್ದೆ ಮುಗಿದ
ನಂತರ ಮುಖ್ಯೋಪಾಧ್ಯಾಯರ ಪದೋನ್ನತಿ
ಲಭ್ಯವಾಗಿರುವುದರಿಂದ ಈ ವಿಶೇಷ ವೇತನ ಬಡ್ತಿಯನ್ನು
ಮಹಾಲೇಖಪಾಲರು ಕಡಿತಗೊಳಿಸಿರುವುದು
ಕ್ರಮಬದ್ಧವಾಗಿಲ್ಲ.
***
27-7-16
***
28-7-16
ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಬಹುದೇ?
2005ರಲ್ಲಿ ನನ್ನ ಪತಿ ಸರ್ಕಾರಿ ನೌಕರರಾಗಿ ಸೇವೆಗೆ ಸೇರಿರುತ್ತಾರೆ.
2008ರಲ್ಲಿ ನಮ್ಮ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಕ್ಷುಲ್ಲಕ ಕಾರಣಗಳಿಂದ ಪತಿ ವಿವಾಹ ವಿಚ್ಛೇದನಕ್ಕೆ
ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ
ಹಂತದಲ್ಲಿದ್ದಾಗ, ದಿನಾಂಕ 10.06.2016ರಂದು
ಹೃದಯಾಘಾತದಿಂದ ಪತಿ ನಿಧನರಾಗಿದ್ದಾರೆ. ಇದರಿಂದ ನನಗೆ
ಪಿಂಚಣಿ ಕುಟುಂಬ ಸೌಲಭ್ಯ ಸಿಗಲಿದೆಯೇ? ಅನುಕಂಪ ಆಧಾರದಲ್ಲಿ
ಸರ್ಕಾರಿ ನೌಕರಿ ಪಡೆಯಬಹುದೇ?
ಐ ಜ್ಯೋತಿ ಎಸ್.ಪಾಟೀಲ್ ಬೆಳಗಾವಿ.
ವಿವಾಹ ವಿಚ್ಛೇದನ ಆಗದಿರುವುದರಿಂದ ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ನಿಯಮ 292ಬಿಯಂತೆ ನಿಮಗೆ ಮರಣ
ಉಪದಾನ ಹಾಗೂ ಕರ್ನಾಟಕ ಸರ್ಕಾರಿ ಸೇವಾ(ಕುಟುಂಬ
ಪಿಂಚಣಿ) ನಿಯಮಗಳು 2002ರಂತೆ ಕುಟುಂಬ ನಿವೃತ್ತಿ ವೇತನ
ಲಭ್ಯ. ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕ)
ನಿಯಮಗಳು 1996 ನಿಯಮ 3ರಂತೆ ನಿಮಗೆ ಅನುಕಂಪದ ಮೇರೆಗೆ
ಉದ್ಯೋಗಾವಕಾಶ ಲಭ್ಯ. ಈ ದೃಷ್ಟಿಯಿಂದ ಒಂದು
ವರ್ಷದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.
***
29-7-16
ತಂದೆಯವರ ನೌಕರಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ನಾನು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದು, ತಂದೆ
ಅನಾರೋಗ್ಯದ ನಿಮಿತ್ತ 8 ತಿಂಗಳು ಕರ್ತವ್ಯಕ್ಕೆ
ಗೈರಾಗಿದ್ದೇನೆ. ಏತನ್ಮಧ್ಯೆ ಇಲಾಖೆಯಿಂದ ನನ್ನನ್ನು ಡಿಚಾರ್ಜ್
ಮಾಡಿದ್ದಾರೆ. ತಂದೆ ನಿಧನರಾಗಿದ್ದು, ಅವರು ಆರೋಗ್ಯ
ಇಲಾಖೆಯಲ್ಲಿ ನೌಕರರಾಗಿದ್ದರು. ಅನುಕಂಪದ ಮೇರೆಗೆ ತಂದೆಯವರ
ನೌಕರಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ಐ ಬಸವರಾಜ್, ಮೈಸೂರು.
ಕರ್ನಾಟಕ ಸಿವಿಲ್ ಸೇವೆ(ಪ್ರೊಬೆಷನ್ ನಿಯಮಾವಳಿ ನಿಯಮ 2(1)ರ
ಪ್ರಕಾರ ಪ್ರೊಬೆಷನ್ ಮೇರೆಗೆ ನೇಮಿಸಲಾದ ಎಂದರೆ
ಪರೀಕ್ಷಾರ್ಥವಾಗಿ ನೇಮಿಸಿದ್ದು ಎಂದರ್ಥ. ನೇಮಕವಾದ
ಹುದ್ದೆಗೆ ಸೂಕ್ತವೋ ಅಥವಾ ಅಲ್ಲವೋ ಎಂಬುದನ್ನು
ಪರೀಕ್ಷಿಸುವುದಕ್ಕಾಗಿ ನೇಮಕವಾಗಿರುವ ವ್ಯಕ್ತಿಗೆ
(ಪ್ರೊಬೇಷನರ್) ಸರದಿ ನಿಯಮ 3ರ ಪ್ರಕಾರ ವಿಶೇಷ ನಿಯಮಯದ
ಹೊರತು ಕರ್ನಾಟಕ ಸರ್ಕಾರಿ ಸೇವೆಗೆ ನೇಮಕವಾಗುವ
ಪ್ರತಿಯೊಬ್ಬ ನೌಕರ 2 ವರ್ಷಗಳ ಪ್ರೊಬೆಷನ್ ಅವಧಿಯಲ್ಲಿರುತ್ತಾನೆ.
ಪ್ರೊಬೆಷನ್ ಅವಧಿಯಲ್ಲಿ ನೌಕರ ಅನಧಿಕೃತವಾಗಿ ಗೈರು ಹಾಜರಾದರೆ
ಅಥವಾ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ
ಹೊಂದದಿದ್ದರೆ ತನ್ನ ಹುದ್ದೆಯನ್ನು ಹೊಂದುವುದಕ್ಕೆ
ಸೂಕ್ತವಲ್ಲವೆಂದು ನಿರ್ಧಾರಕ್ಕೆ ನೇಮಕಾತಿ ಪ್ರಧಿಕಾರ ಬಂದಲ್ಲಿ
ಅವನನ್ನು ಸಿಸಿಎ ನಿಯಮಾವಳಿಯಲ್ಲಿ ಕ್ರಮ ಕೈಗೊಳ್ಳದೆ
ಪ್ರೊಬೆಷನ್ ಅವಧಿಯ ಯಾವುದೇ ಹಂತದಲ್ಲಿ ಸೇವೆಯಿಂದ
ಬಿಡುಗಡೆ ಮಾಡಬಹುದು. ಆದರೆ ಈ ರೀತಿ ಸೇವೆಯಿಂದ
ತೆಗೆದುಹಾಕಲ್ಪಟ್ಟ ಸರ್ಕಾರಿ ನೌಕರನು ಕರ್ನಾಟಕ ಸಿವಿಲ್ ಸೇವೆ
(ಅನುಕಂಪದ ಮೇರೆಗೆ) ನೇಮಕ ನಿಯಮಗಳು 1996ರ ಮೇರೆಗೆ ನೌಕರಿ
ಪಡೆಯಲು ಅರ್ಹ. ಆದಕಾರಣ ನಿಮ್ಮ ತಂದೆಯವರ ನೌಕರಿಯನ್ನು ಈ
ನಿಯಮಾವಳಿ ರೀತ್ಯ ಪಡೆಯಬಹುದು.
***
31-7-16
ಕಳೆದ ವರ್ಷ ಡಿಸೆಂಬರ್​ನಲ್ಲಿ ಸರ್ಕಾರಿ ಸೇವೆಯಿಂದ
ನಿವೃತ್ತನಾಗಿದ್ದೇನೆ. ಇತ್ತೀಚೆಗೆ ನನ್ನ ಪತ್ನಿ ಅನಾರೋಗ್ಯ
ಪೀಡಿತಳಾಗಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲು ಪಿಂಚಣಿ ಹಣ
ಸಾಲದಂತಾಗಿದೆ. ಹೀಗಿರುವಾಗ ಸರ್ಕಾರಿ ನೌಕರರಿಗೆ ವೈದ್ಯಕೀಯ
ವೆಚ್ಚದ ಮರುಪಾವತಿ ಪಡೆಯಲು ನಿಯಮಗಳಲ್ಲಿ ಅವಕಾಶಗಳಿವೆಯೇ?
ಐ ಬಸವಾರಾಧ್ಯ, ದಾವಣಗೆರೆ
ಕರ್ನಾಟಕ ಸರ್ಕಾರಿ ನೌಕರರ ಸರ್ಕಾರಿ ನಿವೃತ್ತಿ ವೇತನಗಳ
ವೈದ್ಯಕೀಯ ಚಿಕಿತ್ಸಾ ನಿಯಮಗಳು 1969ರಂತೆ ನಿವೃತ್ತ ಸರ್ಕಾರಿ
ನೌಕರರಿಗೆ ಈ ನಿಯಮಾವಳಿ ನಿಯಮ 5ರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ
ನೌಕರನ ಪತ್ನಿಗೆ ಚಿಕಿತ್ಸೆ ಕೊಡಿಸಬಹುದು. ಅಲ್ಲದೆ ನಿವೃತ್ತಿ ಸರ್ಕಾರಿ
ನೌಕರನು ಅಥವಾ ಅವನ ಪತ್ನಿ ಅನಾರೋಗ್ಯ ಪೀಡಿತವಾಗಿ
ಆಸ್ಪತ್ರೆಗೆ ಸೇರಿದರೆ ವಾರ್ಡ್ ವೆಚ್ಚ ಇತ್ಯಾದಿಗಳನ್ನು ವಿನಾಯಿತಿ
ನೀಡಲು ಸೂಚಿಸಿದೆ. ಆದ್ದರಿಂದ ನೀವು ಈ ನಿಯಮಾವಳಿಯಂತೆ
ನಿವೃತ್ತ ಸರ್ಕಾರಿ ನೌಕರನಿಗೆ ದೊರಕುವ ಎಲ್ಲ ಸೌಲಭ್ಯಗಳನ್ನು
ಪಡೆಯಬಹುದು.

1 comment:


  1. ಸರ್
    ತಮ್ಮ ಗಮನಕ್ಕೆ.........
    ನಾನು ಅನುದಾನಿತ ಪ್ರೌಢಶಾಲೆಯ ಚಿತ್ರ ಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿಗೆ ಒಂದು ತಿಂಗಳ ಅವಧಿಯಿದ್ದು ನಾನು ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವ್ಯಾಜ್ಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಸದರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸರ್ಕಾರಿ ಕಚೇರಿಗಳಿಗೆ ಮೀಸಲಾದ ನಿವೇಶನ ಮತ್ತು ಕಟ್ಟಡಗಳಲ್ಲಿ ನಡೆಯುತ್ತಿರುವುದು ಸರ್ಕಾರಿ ವಿಚಾರಣೆ ವರದಿಯಿಂದ ದೃಢಪಟ್ಟಿದೆ ಸರ್ಕಾರಿ ನಿವೇಶನ ಮತ್ತು ಕಟ್ಟಡಗಳ ದುರುಪಯೋಗ ಪಡಿಸಿಕೊಂಡ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ ಇದು ವಿಚಾರಣೆ ನಡೆಯುತ್ತಿದೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಡೆಸುತ್ತಿರುವ ನಮ್ಮ ಪ್ರೌಢಶಾಲೆಗೆ ಆಡಳಿತ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿ ನೀಡುವಂತೆ ಉಪನಿರ್ದೇಶಕರು ಅಧಿಕಾರಿಗಳನ್ನು ನೇಮಿಸಲಾಗಿದೆ ಆದರೆ ನನ್ನ ನಿವೃತ್ತಿಗೆ ಕೆಲವೇ ಒಂದು ತಿಂಗಳು ಬಾಕಿ ಉಳಿದಿದೆ ಅಷ್ಟರಲ್ಲಿ ನನ್ನ ಪಿಂಚಣಿ ಕುರಿತು ಸಂಬಂಧಿಸಿದ ಶಿಕ್ಷಣಾಧಿಕಾರಿಗಳು ಆಡಳಿತ ಅಧಿಕಾರಿಗಳ ನೇಮಕ ಆಗುವವರೆಗೆ ಪಿಂಚಣಿ ಕುರಿತು ತೀರ್ಮಾನ ಕೈಗೊಳ್ಳಲಾಗದು ಎಂದು ಪ್ರಸ್ತಾವನೆ ಕಳುಹಿಸಲಾಗಿದೆ ನಾನು ಪಿಂಚಣಿ ಹೇಗೆ ಪಡೆಯಲು ನಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ತೀರ್ಮಾನ ಕೈಗೊಳ್ಳಬಹುದೆ? ಅಥವಾ ನಾನು ಈ ಸಂದರ್ಭದಲ್ಲಿ ಪಿಂಚಣಿ ಪಡೆಯಲು ಮಾರ್ಗ ತಿಳಿಸಲು ವಿನಂತಿಸುತ್ತೇನೆ 🙏

    ReplyDelete