Basayya Jamalur Kalabhavi
ಮೇ-2016 ರ ಸರ್ಕಾರಿ ಕಾರ್ನರ್ ಪ್ರಶ್ನೆಗಳು
May 1, 2016 ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ
ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ.
ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ
ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ.
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ
ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ,
ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
1-5-16.
ರಜೆ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆಯೇ?
ನಾನು ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದು
ಸಾಂರ್ದಭಿಕ ರಜೆ ಜೊತೆ ನಿರ್ಬಧಿಂತ ರಜೆ ಪಡೆಯಲು
ನಿಯಮಾವಳಿಯಲ್ಲಿ ಅವಕಾಶವಿದೆಯೇ?
| ಶಂಕರ ಮಾಳಗಟ್ಟಿ ಬೆಳಗಾವಿ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ಅನುಬಂಧ ಬಿ
ರೀತ್ಯ ಸಾಂರ್ದಭಿಕ ರಜೆ ಜತೆ ರಜೆ ಪಡೆಯಲು ಅವಕಾಶವಿದೆ.
***
2-5-16.
ಅನುಕಂಪದ ಆಧಾರದಲ್ಲಿ ನೇಮಕಾತಿ ಹುದ್ದೆ
ಲಭ್ಯವಾಗುವುದೇ?
ನನ್ನ ತಂದೆಯವರು 16 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ
ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು,
ಸೇವಾವಧಿಯಲ್ಲೇ ನಿಧನ ಹೊಂದಿದರು. ನಂತರ ನನ್ನ
ತಾಯಿಯವರು ಅನುಕಂಪದ ಆಧಾರದ ಮೇಲೆ ಸಿ ವೃಂದದ
ಹುದ್ದೆಯಲ್ಲಿ ಗುಮಾಸ್ತರಾಗಿ 6 ವರ್ಷಗಳ ಕಾಲ ಸೇವೆ
ಸಲ್ಲಿಸಿದರು. ನಮ್ಮ ತಾಯಿಯವರೂ ಸಹ ಕ್ಯಾನ್ಸರ್
ಪೀಡಿತರಾಗಿ 2 ತಿಂಗಳ ಹಿಂದೆ ನಿಧನ ಹೊಂದಿದರು. ನಾನು
ಒಬ್ಬನೇ ಮಗನಾಗಿರುವುದರಿಂದ ನನಗೆ ಅನುಕಂಪದ
ಆಧಾರದ ಮೇಲೆ ನೇಮಕಾತಿ ಹುದ್ದೆ ಲಭ್ಯವಾಗುವುದೇ?
| ಪ್ರಶಾಂತ ಪಿ.ಎಸ್ ದುರ್ಗದಬೈಲು, ಹುಬ್ಬಳ್ಳಿ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ
ಸರ್ಕಾರಿ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ
ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ಆದ ಕಾರಣ ನೀವು
ಸಹ ಪುನರ್ ಅನುಕಂಪದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ
ಅರ್ಜಿಯನ್ನು ಸಲ್ಲಿಸಬಹುದು.
***
3-5-16.
ಅವಿವಾಹಿತ ಮಹಿಳೆ ಸೇವೆಯಲ್ಲಿದ್ದಾಗ ಮರಣ ಹೊಂದಿದರೆ
ಅವಳ ಅವಿವಾಹಿತ ಸಹೋದರನಿಗೆ ಅನುಕಂಪ ಆಧಾರಿತ ನೌಕರಿ
ದೊರೆಯುವುದೇ?
| ಬಿ.ಡಿ. ಬಳಿಗಾರ ಸೌದತ್ತಿ, ಬೆಳಗಾವಿ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ ) ನಿಯಮಗಳು 1996ರ ನಿಯಮ 3ರ ರೀತ್ಯ ಮೃತ
ಸರ್ಕಾರಿ ನೌಕರನ ಅವಲಂಬಿತರಾದ ಸಹೋದರರೂ ಸಹ
ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು
ಅರ್ಹರಾಗುತ್ತಾರೆ. ಆದ ಕಾರಣ ನೀವು ಸಹ ಅನುಕಂಪದ
ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿಯನ್ನು
ಸಲ್ಲಿಸಬಹುದು.
***
4-5-16.
ಅನುಕಂಪ ಆಧಾರಿತ ಹುದ್ದೆ ದೊರೆಯುವುದೇ?
ನನ್ನ ಗೆಳತಿಯೊಬ್ಬರು ಅನುಕಂಪದ ಆಧಾರದ ಮೇಲೆ
ನೇಮಕಾತಿ ಬಯಸಿ ಅರ್ಜಿ ಸಲ್ಲಿಸಿದ 2 ತಿಂಗಳ ನಂತರ
ಮದುವೆಯಾದರು. ಅವರಿಗೆ ಅನುಕಂಪ ಆಧಾರಿತ ಹುದ್ದೆ
ದೊರೆಯುವುದೇ?
| ಶಾಂತಾ ಮಂಡ್ಯ
ನಿಮ್ಮ ಗೆಳತಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ
ಮೇಲೆ ನೇಮಕ) ನಿಯಮಗಳು 1996ರ ನಿಯಮ 3ರ ರೀತ್ಯ
ಅನುಕಂಪದ ಮೇರೆಗೆ ನೇಮಕ ಮಾಡಿಕೊಳ್ಳಲು ಮದುವೆಗೆ
ಮುಂಚೆಯೇ ಅರ್ಜಿ ಸಲ್ಲಿಸಿರುವುದರಿಂದ ಪ್ರಸ್ತುತ ಅವರು
ಅನುಕಂಪದ ಆಧಾರದ ಮೇಲೆ ಹುದ್ದೆ ಪಡೆಯಲು
ಅರ್ಹರಾಗುತ್ತಾರೆ. ಆದ ಕಾರಣ ಅವರು ಕರ್ತವ್ಯಕ್ಕೆ
ಹಾಜರಾದ ನಂತರ ವೈವಾಹಿಕ ಸ್ಥಿತಿಯನ್ನು ತನ್ನ ಸೇವಾ
ಪುಸ್ತಕದಲ್ಲಿ ನಮೂದಿಸಬೇಕು.
***
5-5-16.
ನನ್ನ ಮಗನಿಗೆ ಆ ಕೆಲಸಕ್ಕೆ ಸೇರಲು ಅವಕಾಶವಿದೆಯೇ?
ಪಶು ವೈದ್ಯ ಸಹಾಯಕರಾಗಿ ನನ್ನ ಪತಿ 20 ವರ್ಷ ಸೇವೆ
ಸಲ್ಲಿಸಿ ಹೃದಯಾಘಾತದಿಂದ 2008ರಲ್ಲಿ ನಿಧನ
ಹೊಂದಿದ್ದಾರೆ. ನನ್ನ ಪತಿ ಕೆಲಸಕ್ಕೆ ಸರಿಯಾಗಿ ಹೋಗದ
ಕಾರಣ ಸೇವೆಯಿಂದ ವಜಾಗೊಂಡಿದ್ದರು. ನನ್ನ ಮಗನಿಗೆ ಆ
ಕೆಲಸಕ್ಕೆ ಸೇರಲು ಅವಕಾಶವಿದೆಯೇ?
|ತ್ರಿವೇಣಿ ಕಲ್ಲೇಶ್ ಹೊಸದುರ್ಗ
ಸರ್ಕಾರಿ ನೌಕರರು ಸರ್ಕಾರಿ ಸೇವೆಯಲ್ಲಿದ್ದಾಗಲೇ
ವಜಾಗೊಂಡಿದ್ದರೆ ಅವರ ಕುಟುಂಬ ವರ್ಗಕ್ಕೆ ಯಾವುದೇ
ಸರ್ಕಾರಿ ಸೇವಾ ಸೌಲತ್ತುಗಳು ಲಭ್ಯವಾಗುವುದಿಲ್ಲ.
ಹೀಗಿರುವಲ್ಲಿ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ
ನೇಮಕಾತಿ) ನಿಯಮಗಳು 1996ರ ರೀತ್ಯ ಅನುಕಂಪದ
ಆಧಾರದ ಮೇಲೆ ನಿಮ್ಮ ಮಗನು ನೇಮಕ ಹೊಂದಲು
ಅರ್ಹನಾಗುವುದಿಲ್ಲ.
***
6-5-16.
ಎಫ್ ಡಿಎ ಹುದ್ದೆಗೆ ಆಯ್ಕೆಯಾದರೆ ವೇತನ ನಿಗದಿಪಡಿಸುವರೇ?
ನಾನು ಪ್ರಸ್ತುತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ
ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ಮೂಲ ವೇತನ 21,000
ಇದೆ. ನಾನು ಎಫ್ಡಿಎ ಹುದ್ದೆಗೆ ಆಯ್ಕೆಯಾದರೆ ವೇತನವನ್ನು
21,000 ರೂ.ಗಳಿಗೆ ನಿಗದಿಪಡಿಸುವರೇ?
|ತಿಲಕ್ರಾಜ್ ಶಿವಮೊಗ್ಗ
ಸರ್ಕಾರಿ ಸೇವಾ ನಿಯಮಾವಳಿ 41ಎ ಪ್ರಕಾರ ನಿಮ್ಮ
ವೇತನವನ್ನು ನೀವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹುದ್ದೆಗೆ ನೇಮಕವಾದ ದಿನಾಂಕದಿಂದ ಎಫ್ಡಿಎ ಹುದ್ದೆಯ
ವೇತನ ಶ್ರೇಣಿಯಲ್ಲಿ ನಿಗದಿ ಪಡಿಸಿಕೊಂಡು ಬರಲಾಗುತ್ತದೆ.
ಆದರೆ ನಿಮಗೆ ರೂ. 21,000 ಮೂಲ ವೇತನ
ನಿಗದಿಗೊಳಿಸಲಾಗುವುದಿಲ್ಲ.
***
7-5-16
ಪಿಂಚಣಿ ದೊರಕುವುದೇ?
ದಿನಗೂಲಿ ನೌಕರರ ಸೇವೆಯನ್ನು ಸಕ್ರಮಗೊಳಿಸುವ
ಮೊದಲೇ ನನ್ನ ಪತಿ ನಿಧನ ಹೊಂದಿದ್ದಾರೆ. ನನ್ನ
ಪತಿಯವರು 11 ವರ್ಷ ಸೇವೆ ಸಲ್ಲಿಸಿದ್ದು, ಅವರ ನೇಮಕಾತಿ
ಆದೇಶ ಸಿಗುವ ಮೊದಲೇ ಮರಣ ಹೊಂದಿದ್ದಾರೆ. ಅವರ
ಅವಲಂಬಿತಳಾದ ನಾನು ಅನುಕಂಪದ ಆಧಾರದ ಮೇಲೆ
ನೇಮಕ ಹೊಂದಲು ಅರ್ಜಿ ಸಲ್ಲಿಸಬಹುದೇ? ಪಿಂಚಣಿ
ದೊರಕುವುದೇ?
|ಡಿ.ಎನ್. ಪುರೋಹಿತ ಕಾರವಾರ
ದಿನಾಂಕ 2.1.1997ರ ಸರ್ಕಾರದ ಸುತ್ತೋಲೆಯಂತೆ
ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರು
ಸಕ್ರಮ ಗೊಳಿಸುವ ಮೊದಲೇ ಮೃತರಾದರೆ ಕರ್ನಾಟಕ ಸಿವಿಲ್
ಸೇವಾ (ಅನುಕಂಪದ ಆಧಾರದ ಮೇಲೆ ನೇಮಕ)
ನಿಯಮಗಳು 1996ರ ರೀತ್ಯ ಮೃತ ಸರ್ಕಾರಿ ನೌಕರನ
ಅವಲಂಬಿತರು ಅನುಕಂಪದ ಆಧಾರದ ಮೇಲೆ ಹುದ್ದೆ
ಪಡೆಯಲು ಅರ್ಹರಾಗುತ್ತಾರೆ. ಆದರೆ ಅವರು 1.7.1984ಕ್ಕಿಂತ
ಮೊದಲು ನೇಮಕವಾಗಿದ್ದು ದಿನಾಂಕ 31.12.1989ಕ್ಕೆ 10
ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಧನರಾದರೆ ಮಾತ್ರ ಈ
ನೇಮಕಾತಿ ದೊರಕುತ್ತದೆ. ಆದರೆ ನಿಮಗೆ ಕುಟುಂಬ ಪಿಂಚಣಿ
ಸೌಲಭ್ಯ ಲಭ್ಯವಾಗುವುದಿಲ್ಲ. ಆದ ಕಾರಣ ನೀವು ಸಹ
ಮರು ಅನುಕಂಪದ ನೇಮಕಕ್ಕೆ ಸಕ್ಷಮ ಪ್ರಾಧಿಕಾರಕ್ಕೆ
ಅರ್ಜಿಯನ್ನು ಸಲ್ಲಿಸಬಹುದು.
***
8-5-16
ಹೆಚ್ಚಿನ ಪಿಂಚಣಿ ಪಡೆಯಬಹುದೇ?
ನನ್ನ ತಂದೆ 1974ರಲ್ಲಿ ನಿವೃತ್ತರಾಗಿ ಕೆಲವು ಕಾಲದ ನಂತರ
ಮರಣ ಹೊಂದಿದರು. ನನ್ನ ತಾಯಿ ಕುಟುಂಬ ಪಿಂಚಣಿ
ಪಡೆಯುತ್ತಿದ್ದು ಅವರಿಗೀಗ 80 ವರ್ಷವಾಗಿರುವ ಕಾರಣ
ಹೆಚ್ಚಿನ ಪಿಂಚಣಿ ಪಡೆಯಬಹುದೇ?
|ಮಲ್ಲಿಕಾರ್ಜುನ ತುಮಕೂರು
ನಿಮ್ಮ ತಾಯಿಯವರು 80 ವರ್ಷ ದಾಟಿ 81ನೇ ವರ್ಷಕ್ಕೆ
ಕಾಲಿಟ್ಟಾಗ ಶೇ.20 ಹೆಚ್ಚಿನ ಕುಟುಂಬ ಪಿಂಚಣಿಯನ್ನು
2010ರ ಸರ್ಕಾರಿ ಆದೇಶದಂತೆ ಪಡೆಯಲು ಅರ್ಹರಾಗುವರು.
***
9-5-16
ನಾನು ಪ್ರಾಥಮಿಕ ಶಾಲೆಯಲ್ಲಿ 1981ರಿಂದ 2010ರವರೆಗೆ 25
ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಆದರೆ
ನನಗೆ 25 ವರ್ಷದ ಒಂದು ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗಿಲ್ಲ. ಇದಕ್ಕೆ ಯಾವ ರೀತಿ ಕ್ರಮ
ಕೈಗೊಳ್ಳಬೇಕು.
|ಶಕುಂತಲಾ ಮುಂಜಿ ಲಕ್ಷೇಶ್ವರ
ದಿನಾಂಕ 14.6.2102ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12,
ಎಸ್ಆರ್ಪಿ 2012(8)ರ ರೀತ್ಯ ದಿನಾಂಕ 1.4.2012ಕ್ಕೆ 25
ವರ್ಷಗಳ ಸೇವೆ ಪೂರೈಸಿರುವ ಸರ್ಕಾರಿ ನೌಕರರು ಹೆಚ್ಚುವರಿ
ವೇತನ ಬಡ್ತಿಗೆ ಅರ್ಹರಾಗುತ್ತಾರೆ. ಆದ ಕಾರಣ ನೀವು
1.4.2012ರಿಂದ ಈ ಹೆಚ್ಚುವರಿ ವೇತನ ಬಡ್ತಿ ಪಡೆಯಬಹುದು.
***
10-5-2016.
ಕೋರ್ಟ್ ಮೊರೆ ಹೋಗಬಹುದೇ?
ನಾನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ
ತಾಂತ್ರಿಕ ಸಹಾಯಕನಾಗಿ ಪ್ರವರ್ಗ 2ಎ ಮೀಸಲಾತಿಯಲ್ಲಿ
ಆಯ್ಕೆಯಾಗಿ 2007ರಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡಿದ
ಮೇಲೆ ನೇಮಕಗೊಂಡಿರುತ್ತೇನೆ. ಈಗ ನಿಗಮದಿಂದ
ಇನ್ನೊಂದು ನಿಗಮಕ್ಕೆ ವರ್ಗಾವಣೆ ನೀಡದ ಕಾರಣ ಅದೇ
ಹುದ್ದೆಗೆ ಇಲಾಖಾ ಅಭ್ಯರ್ಥಿಯಾಗಿ ಈಶಾನ್ಯ ಕರ್ನಾಟಕ
ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಈ ಹಿಂದೆ ನೀಡಿದ
ಸಿಂಧುತ್ವ ಪ್ರಮಾಣ ಪತ್ರ ನೀಡಿರುತ್ತೇನೆ. ಆದರೆ ಈ
ಸಿಂಧುತ್ವ ಪ್ರಮಾಣ ಪತ್ರವನ್ನು ಆಯ್ಕೆ ಸಮಿತಿಯವರು
ತಿರಸ್ಕರಿಸಿರುತ್ತಾರೆ. ನಾನು ಇಲಾಖಾ ಅಭ್ಯರ್ಥಿಯಾಗಿ ಮತ್ತೆ
ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಹೊಸದಾಗಿ
ಸಲ್ಲಿಸಬೇಕೇ? ಕೋರ್ಟ್ ಮೊರೆ ಹೋಗಬಹುದೇ?
|ಅಂಬರೀಷ ಬಿಎಂಟಿಸಿ, ಬೆಂಗಳೂರು
22.2.2012ರ ಸರ್ಕಾರಿ ಸುತ್ತೋಲೆ ಸಂಖ್ಯೆ ಎಸ್ಡಬ್ಲ್ಯು
ಡಿ 155 ಬಿಸಿಎ 2012ರಂತೆ ಸಿಂಧುತ್ವ ಪ್ರಮಾಣ ಪತ್ರದ
ಸಿಂಧುತ್ವವು 5 ವರ್ಷ ಮಾತ್ರ ಆಗಿರುತ್ತದೆ. ಹೀಗಿರುವಲ್ಲಿ
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿ
ಸಂಸ್ಥೆಯು ನಿಮ್ಮ ಸಿಂಧುತ್ವ ಪ್ರಮಾಣ ಪತ್ರವನ್ನು
ತಿರಸ್ಕರಿಸಿರುವುದು ಕ್ರಮಬದ್ಧವಾಗಿರುತ್ತದೆ. ನೀವು
ಇಲಾಖಾ ಅಭ್ಯರ್ಥಿಯಾಗದ್ದರೂ ನಿಮ್ಮ ಜಾತಿ ಮತ್ತು
ಸಿಂಧುತ್ವ ಪ್ರಮಾಣ ಪತ್ರವನ್ನು ನಿಯಮಾವಳಿಯಂತೆ
ಸಲ್ಲಿಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಿರುತ್ತದೆ.
ಆದ ಕಾರಣ ನೀವು ನ್ಯಾಯಾಲಯದ ಮೊರೆ
ಹೊಗುವುದು ಸೂಕ್ತವೆನಿಸುವುದಿಲ್ಲ.
***
12-5-16.
ನನಗೆ ಹೆರಿಗೆ ರಜೆ ದೊರಕುವುದೇ?
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು,
ಹೆರಿಗೆಯಾದ 2 ತಿಂಗಳ ನಂತರ ಸರ್ಕಾರಿ ನೌಕರಿಗೆ ಸೇರಲಿದ್ದೇನೆ.
ನನಗೆ ಹೆರಿಗೆ ರಜೆ ದೊರಕುವುದೇ?
|ವಸಂತಲಕ್ಷ್ಮೀ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ
135(1)ರಂತೆ ಈ ಹೆರಿಗೆ ರಜೆಯನ್ನು ಮಹಿಳಾ ಸರ್ಕಾರಿ ನೌಕರರಿಗೆ
180 ದಿನಗಳವರೆಗೆ ಮಂಜೂರು ಮಾಡಲಾಗುತ್ತದೆ. ಆದರೆ
ನೀವು ಕರ್ತವ್ಯಕ್ಕೆ ಸೇರುವ ಮೊದಲೆ ತಾಯಿ ಆಗಿರುವ
ಕಾರಣ ನಿಮಗೆ ಹೆರಿಗೆ ರಜೆ ಸೌಲಭ್ಯ ಲಭ್ಯವಾಗುವುದಿಲ್ಲ.
***
13-5-16
ಸರ್ಕಾರಿ ಶಿಕ್ಷಕನಾಗಿದ್ದು ತಾಯಿಯ ಶಸ್ತ್ರಚಿಕಿತ್ಸೆಗೆ
ಸಹಾಯ ಸಿಗುತ್ತದೆಯೇ?
ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು
ಇತ್ತೀಚೆಗೆ ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಯಲ್ಲಿ
ನಮ್ಮ ತಾಯಿಯವರಿಗೆ ತುರ್ತಾಗಿ ಹೃದಯ ಶಸ್ತ್ರ ಚಿಕಿತ್ಸೆ
ಮಾಡಿಸಿದ್ದೇನೆ. ಈ ಶಸ್ತ್ರಚಿಕಿತ್ಸೆಗೆ ತಗುಲಿದ ವೆಚ್ಚ ಭರಿಸಲು
ಬರುತ್ತದೆಯೇ? ಬರುವಂತಿದ್ದರೆ ಯಾವೆಲ್ಲಾ ಕ್ರಮಗಳನ್ನು
ಕೈಗೊಳ್ಳಬೇಕು?
ಪ್ರಶಾಂತ್ ಕುನ್ನೂರು ವಿಜಯಪುರ(ಸಿಂದಗಿ)
ನೀವು ನಿಮ್ಮ ತಾಯಿಯವರಿಗೆ ಮಾಡಿಸಿದ ಶಸ್ತ್ರ ಚಿಕಿತ್ಸಾ
ವೆಚ್ಚವನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ
ಪಡೆಯಬಹುದು. ಈ ಮೊಬಲಗನ್ನು ಸರ್ಕಾರವು
ಸ್ಥಾಪಿಸಿರುವ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ನಿಗದಿತ
ಅರ್ಜಿ ಸಲ್ಲಿಸಿ ಈ ವೈದ್ಯಕೀಯ ಸೌಲಭ್ಯದ ವೆಚ್ಚವನ್ನು
ಪಡೆಯಬಹುದು.
***
14-5-16
ಪ್ರಕಟವಾಗಿರವದಿಲ್ಲ
***
15-5-16.
ನಿಯಮಾವಳಿ ರೀತ್ಯ ಯಾವ ಕ್ರಮ ಕೈಗೊಳ್ಳಬೇಕು?
ನನ್ನ ಪತ್ನಿ ವಿಶ್ವವಿದ್ಯಾನಿಲಯವೊಂದರಲ್ಲಿ ಸಹಾಯಕ
ಪ್ರಾಧ್ಯಾಪಕಿಯಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪರೀಕ್ಷಾರ್ಥ ಅವಧಿಯೊಳಗೆ ತತ್ಸಮಾನ ಹುದ್ದೆಗೆ ಅರ್ಜಿ
ಸಲ್ಲಿಸಬಾರದು ಎಂಬ ಷರತ್ತಿನೊಡನೆ ನೇಮಕವಾಗಿದ್ದು
ಅವರು ಬೇರೊಂದು ಇಲಾಖೆಗೆ ಆನ್ಲೈನ್ ಮೂಲಕ
ಅರ್ಜಿಸಲ್ಲಿಸಿದ್ದಾರೆ. ಆದರೆ ವಿಶ್ವವಿದ್ಯಾನಿಲಯವು
ಆಕ್ಷೇಪಣಾ ರಹಿತ ಪ್ರಮಾಣಪತ್ರ ನೀಡಿಲ್ಲ. ನನ್ನ ಪತ್ನಿಗೆ
ಅವರು ಈ ಹುದ್ದೆಯಲ್ಲಿ ಮುಂದುವರಿಯಲು
ಇಷ್ಟವಿಲ್ಲವಾಗಿದ್ದು, ಹೊರ ಹುದ್ದೆಯಲ್ಲಿ
ನೇಮಕಗೊಳ್ಳಲು ಇಚ್ಛಿಸುತ್ತಿರುವುದರಿಂದ ಈ ಹಂತದಲ್ಲಿ
ನಿಯಮಾವಳಿ ರೀತ್ಯ ಯಾವ ಕ್ರಮ ಕೈಗೊಳ್ಳಬೇಕು?
|ಪ್ರಶಾಂತ್ ಹೆಗಡೆ ಕಾರವಾರ
ನಿಮ್ಮ ಪತ್ನಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹುದ್ದೆಗೆ
ರಾಜೀನಾಮೆ ನೀಡಿ ಹೊಸ ಹುದ್ದೆಗೆ ಸೇರಬೇಕಾಗುತ್ತದೆ.
ಆದರೆ 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ
ನೇಮಕಾತಿ) ನಿಯಮಾವಳಿ ರೀತ್ಯ ನೇಮಕಾತಿ
ಪ್ರಾಧಿಕಾರದ ಆಕ್ಷೇಪಣಾ ರಹಿತ ಪ್ರಮಾಣ ಪತ್ರವನ್ನು
ಪಡೆದೇ ಹೊಸ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ
ಪತ್ನಿಯು ರಾಜೀನಾಮೆ ಸಲ್ಲಿಸಿ ಹೊಸ ಹುದ್ದೆಗೆ
ಹಾಜರಾದರೆ ಅವರ ಹಿಂದಿನ ಸೇವೆಯನ್ನು
ಪರಿಗಣಿಸಲಾಗುವುದಿಲ್ಲ.
***
16-5-2016
ವಿನ್ಯೂ ಲೋಯರ್ ಮತ್ತು ಅಕೌಂಟ್ಸ್ ಲೋಯರ್
ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆ?
ನಾನು ಚಿತ್ರದುರ್ಗದಲ್ಲಿ ಗ್ರಾಮ ಲೆಕ್ಕಿಗನಾಗಿ
ಕಾರ್ಯನಿರ್ವಹಿಸುತ್ತಿದ್ದು 2014ರ ದ್ವಿತೀಯ ಅಧಿವೇಶನದಲ್ಲಿ
ಅಕೌಂಟ್ಸ್ ಹೈಯರ್ ಮತ್ತು ರೆವಿನ್ಯೂ ಹೈಯರ್
ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿರುತ್ತೇನೆ. ಆದರೆ ನಮ್ಮ
ಮೇಲಾಧಿಕಾರಿಗಳು ನಿಮಗೆ ನಿಗದಿಪಡಿಸಿರುವ ರೆವಿನ್ಯೂ
ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ
ತೇರ್ಗಡೆಯಾಗಬೇಕೆಂದು ಸೂಚಿಸಿದ್ದಾರೆ. ಆದ ಕಾರಣ
ನಾನು ಈ ಪರೀಕ್ಷೆಗಳಿಗೆ ಹಾಜರಾಗಿ
ತೇರ್ಗಡೆಯಾಗಬೇಕೇ?
|ವಿಶ್ವನಾಥ್ ಚಿತ್ರದುರ್ಗ
ದಿನಾಂಕ 1.4.1976ರ ಸರ್ಕಾರಿ ಸುತ್ತೋಲೆ ಸಂಖ್ಯೆ ಜಿಎಡಿ
25, ಎಸ್ಎಸ್ಆರ್ 76ರಂತೆ ಸರ್ಕಾರಿ ನೌಕರನು ರೆವಿನ್ಯೂ ಹೈಯರ್
ಮತ್ತು ಅಕೌಂಟ್ಸ್ ಹೈಯರ್ ಪರೀಕ್ಷೆಗಳಲ್ಲಿ
ತೇರ್ಗಡೆಯಾಗಿದ್ದರೆ ಅಂತಹ ನೌಕರನು ಮತ್ತೆ ರೆವಿನ್ಯೂ
ಲೋಯರ್ ಮತ್ತು ಅಕೌಂಟ್ಸ್ ಲೋಯರ್ ಪರೀಕ್ಷೆಗಳಲ್ಲಿ
ತೇರ್ಗಡೆಯಾಗುವುದರಿಂದ ವಿನಾಯಿತಿ ನೀಡಲಾಗಿದೆ. ಆದ
ಕಾರಣ ನೀವು ಮತ್ತೆ ಈ ರೆವಿನ್ಯೂ ಲೋಯರ್ ಮತ್ತು
ಅಕೌಂಟ್ಸ್ ಲೋಯರ್ ಪರೀಕ್ಷೆಗಳಿಗೆ ಹಾಜರಾಗುವ
ಅಗತ್ಯವಿಲ್ಲ.
***
17-5-16
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ
ತೇರ್ಗಡೆಯಾಗಲೇಬೇಕೇ?
ನಾನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ
ಶೀಘ್ರಲಿಪಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು
ನನಗೀಗ 54 ವರ್ಷವಾಗಿರುತ್ತದೆ. ನಾನು ಕಂಪ್ಯೂಟರ್
ಜ್ಞಾನ ಹೊಂದಿದ್ದು ಕಂಪ್ಯೂಟರ್ ಸಾಕ್ಷರತಾ
ಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕೇ?
|ಎಂ ಉಮಾ ಚಿಕ್ಕಮಗಳೂರು
ಕರ್ನಾಟಕ ಸಿವಿಲ್ ಸೇವಾ ಕಂಪ್ಯೂಟರ್ ಸಾಕ್ಷರತಾ
ಪರೀಕ್ಷೆ ನಿಯಮಗಳು 2012ರ ರೀತ್ಯ ದಿನಾಂಕ 7.3.2012ಕ್ಕೆ
50 ವರ್ಷ ಪೂರೈಸಿದ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ
ನೀಡಲಾಗಿದೆ. ಆದರೆ ನಿಮಗೆ ತದನಂತರದ ದಿನಾಂಕದಲ್ಲಿ 54
ವರ್ಷವಾಗಿರುವುದರಿಂದ ಪರೀಕ್ಷೆಯಲ್ಲಿ ತೇರ್ಗಡೆ
ಹೊಂದುವುದು ಕಡ್ಡಾಯ.
***
18-5-16
ಅನುಕಂಪದ ಮೇಲೆ ಸರ್ಕಾರಿ ನೌಕರಿ ದೊರಕುತ್ತದೆಯೇ?
ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಮ್ಮ ತಂದೆ
ನಿಧನದ ನಂತರ ನನ್ನ ಹಿರಿಯ ಸಹೋದರನಿಗೆ ಅನುಕಂಪದ
ಮೇಲೆ ನೌಕರಿ ದೊರೆಯಿತು. ನನ್ನ ಹಿರಿಯ ಸಹೋದರ ದಿನಾಂಕ
28.4.2016ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ನನ್ನ ಹಿರಿಯ ಸಹೋದರನ ನಿಧನದಿಂದ
ಅವಲಂಬಿತನಾದ ನನಗೆ ಅನುಕಂಪದ ಮೇಲೆ ಸರ್ಕಾರಿ ನೌಕರಿ
ದೊರಕುತ್ತದೆಯೇ?
|ನಾಗರಾಜ ದೇವದುರ್ಗ ರಾಯಚೂರು
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರ ಮೇಲೆ
ನೇಮಕಾತಿ) ನಿಯಮಾವಳಿ 1996ರ ನಿಯಮ 3ರ ರೀತ್ಯ
ಅವಿವಾಹಿತ ಸಹೋದರನು ಅನುಕಂಪದ ಆಧಾರದ ಮೇಲೆ
ನೇಮಕವಾಗಲು ಅರ್ಹನಾಗಿರುತ್ತಾನೆ. ಆದ ಕಾರಣ ನೀವು
ಈ ನಿಯಮಾವಳಿ ರೀತ್ಯ ಅನುಕಂಪದ ಆಧಾರದ ಮೇಲೆ
ನೇಮಕ ಮಾಡಿಕೊಳ್ಳಲು ಸಕ್ಷಮ ಪ್ರಾಧಿಕಾರಿಗೆ ಮನವರಿಕೆ
ಮಾಡಿಸಿ ಅರ್ಜಿಯನ್ನು ಸಲ್ಲಿಸಬಹುದು.
***
19-5-16
ನೇಮಕಾತಿ ಮಾಡಿಕೊಳ್ಳಲು ಯಾವ ರೀತಿ ಕ್ರಮ
ಕೈಗೊಳ್ಳಬೇಕು?
ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ
ಸಲ್ಲಿಸುತ್ತಿದ್ದ ನನ್ನ ತಂದೆಯವರು ಇತ್ತೀಚೆಗೆ ನಿಧನ
ಹೊಂದಿದ್ದು, ನಾನು ಸಂಬಂಧಿತ ಶಿಕ್ಷಣ ಸಂಸ್ಥೆಯ
ಮುಖ್ಯೋಪಾಧ್ಯಾಯರನ್ನು ಭೇಟಿಯಾದಾಗ
ಅನುಕಂಪದ ಆಧಾರದ ಮೇಲೆ ನೇಮಕಾತಿಗೆ
ಅವಕಾಶವಿಲ್ಲವೆಂದು ತಿಳಿಸಿ ನನ್ನ ಮನವಿ ತಿರಸ್ಕರಿಸಿದ್ದಾರೆ.
ಹೀಗಿರುವಲ್ಲಿ ನಾನು ಅನುಕಂಪದ ಆಧಾರದ ಮೇಲೆ
ನೇಮಕಾತಿ ಮಾಡಿಕೊಳ್ಳಲು ಯಾವ ರೀತಿ ಕ್ರಮ
ಕೈಗೊಳ್ಳಬೇಕು?
|ಮಂಜುನಾಥ ಬಿ.ಎನ್. ಹಾಸನ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ ) ನಿಯಮ ಗಳು 1996ರ ನಿಯಮ 3ರ ರೀತ್ಯ
ಅನುದಾನಿತ ಮೃತ ನೌಕರನ ಅವಲಂಬಿತರು ಅನುಕಂಪದ
ಆಧಾರದ ಮೇಲೆ ಹುದ್ದೆ ಪಡೆಯಲು ಅರ್ಹರಾಗುತ್ತಾರೆ.
ದಿನಾಂಕ 12.9.1996ರ ಅಸೂಚನೆಯಲ್ಲಿ ಅನುದಾನಿತ ಶಿಕ್ಷಣ
ಸಂಸ್ಥೆಗಳಿಗೂ ಸಹ ಈ ನಿಯಮಾವಳಿಯನ್ನು ಅನ್ವಯಿಸಲಾಗಿದೆ.
ಆದ ಕಾರಣ ನೀವು ಸಹ ಪುನರ್ ಅನುಕಂಪದ ನೇಮಕಕ್ಕೆ
ಸಂಬಂಧಿತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಅರ್ಜಿಯನ್ನು
ಸಲ್ಲಿಸಬಹುದು.
***
20-4-16
ನಾನು 30 ವರ್ಷಗಳಿಂದ ಸರ್ಕಾರಿ ನೌಕರಳಾಗಿ ಸೇವೆ
ಸಲ್ಲಿಸುತ್ತಿದ್ದು, ನನಗೀಗ 55 ವರ್ಷ.ನನ್ನ ಸೇವಾ ಅವಧಿ 4
ವರ್ಷ ಉಳಿದಿದ್ದು, ನಾನು ಕರ್ನಾಟಕ ಸರ್ಕಾರಿ ಸೇವಾ
ನಿಯಮಾವಳಿ ರೀತ್ಯ ಸ್ವಯಂ ನಿವೃತ್ತಿ ಪಡೆದರೆ ಸಿಗುವ
ಸೇವಾ ಅಕ್ಯ (ವೈಟೇಜ್) ಎಷ್ಟು?
|ಅನಿತಾ ಮದಬಾವಿ, ವಿಜಯಪುರ.
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 285 (2)(v)ರ
ರೀತ್ಯ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ
ಹೊಂದುವ ಸರ್ಕಾರಿ ನೌಕರರಿಗೆ 5 ವರ್ಷಗಳ ಕಾಲ ಸೇವಾ
ಅಕ್ಯವು ದೊರಕುತ್ತದೆ. ಆದರೆ ಇದು ಒಟ್ಟು
ಅರ್ಹತಾದಾಯಕ ಸೇವೆ 33 ವರ್ಷಗಳನ್ನು ದಾಟಬಾರದು.ಆದ
ಕಾರಣ ನಿಮಗೆ 3 ವರ್ಷಗಳ ಕಾಲ ಸೇವಾ ಅಕ್ಯ
ಲಭ್ಯವಾಗುತ್ತದೆ.
***
21-5-16.
ನಾನು ನ್ಯಾಯಾಂಗ ಇಲಾಖೆಯಲ್ಲಿ 2009ರಲ್ಲಿ ಪ್ರಥಮ
ದರ್ಜೆ ಸಹಾಯಕಿಯಾಗಿ ನೇಮಕಗೊಂಡಿರುತ್ತೇನೆ. ನನ್ನ ಪತಿ
ನಿರುದ್ಯೋಗಿ. ನನ್ನ ಅತ್ತೆಯವರಿಗೆ ಇತ್ತೀಚೆಗೆ ತೆರೆದ ಹೃದಯ
ಚಿಕಿತ್ಸೆ ಮಾಡಿಸಿದ್ದು ನಾನು ಈ ವೈದ್ಯಕೀಯ
ಚಿಕಿತ್ಸೆಯನ್ನು ನಮ್ಮ ಕಚೇರಿಯಿಂದ ಮರು ಪಾವತಿ
ಪಡೆಯಬಹುದೇ?
|ಶಾರದಾ ಬೆಂಗಳೂರು
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ)
ನಿಯಮಗಳು 1963ರ ನಿಯಮ 2ರಲ್ಲಿ ಕುಟುಂಬ ಎನ್ನುವ
ಪದಾವಳಿಯನ್ನು ಪರಿಭಾಷಿಸಿದ್ದು ಅದರಂತೆ ಸರ್ಕಾರಿ ನೌಕರನ/ಳ
ಪತಿ ಅಥವಾ ಪತ್ನಿ ತಂದೆ, ತಾಯಿ, ನೌಕರನೊಂದಿಗೆ
ವಾಸಿಸುತ್ತಿದ್ದರೆ ಅಂಥವರು ಎಂದು ತಿಳಿಸಿದೆ. ಆದರೆ
ಅತ್ತೆಯವರ ವೈದ್ಯಕೀಯ ವೆಚ್ಚವನ್ನು ಮರು ಸಂದಾಯ
ಮಾಡಲು ನಿಯಮಾವಳಿ ರೀತ್ಯ ಅವಕಾಶವಿರುವುದಿಲ್ಲ.
***
22-5-16
ಪೊಲೀಸ್ ವಸತಿ ಗೃಹದಲ್ಲಿ ಎಷ್ಟು ಅವಧಿಯವರೆಗೆ
ಮುಂದುವರಿಯಬಹುದು?
ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ
ನಿರ್ವಹಿಸುತ್ತಿದ್ದ ನನಗೀಗ ಪಿಎಸ್ಐ ಹುದ್ದೆಗೆ ಪದೋನ್ನತಿ
ಲಭ್ಯವಾಗಿದ್ದು ಚಾಮರಾಜನಗರದಿಂದ ಮೈಸೂರಿಗೆ ಸ್ಥಳ
ನಿಯುಕ್ತಿಗೊಂಡಿರುತ್ತೇನೆ. ಮುಖ್ಯ ಪೇದೆಯಾಗಿದ್ದಾಗ
ಹಂಚಿಕೆಯಾಗಿರುವ ಪೊಲೀಸ್ ವಸತಿ ಗೃಹದಲ್ಲಿ ಎಷ್ಟು
ಅವಧಿಯವರೆಗೆ ಮುಂದುವರಿಯಬಹುದು. ಈ ಬಗ್ಗೆ ಇರುವ
ನಿರ್ದಿಷ್ಟ ನಿಯಮಗಳೇನು?
|ಜಯಕೀರ್ತಿ ಮೈಸೂರು
ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಪರಿಶಿಷ್ಟ 4ರಲ್ಲಿನ ನಿಯಮ
29 (2ಎ) ರೀತ್ಯ ಒಂದು ತಿಂಗಳೊಳಗಾಗಿ ವಸತಿ ಗೃಹವನ್ನು
ಖಾಲಿ ಮಾಡಲು ಅವಕಾಶ ನೀಡಲಾಗುತ್ತದೆ. ಅವಧಿ 1
ತಿಂಗಳಿಗಿಂತ ಜಾಸ್ತಿಯಾದಲ್ಲಿ ನಿಮ್ಮ ವಸತಿ ಗೃಹದ ಬಾಡಿಗೆ/
ಲೈಸೆನ್ಸ್ ಶುಲ್ಕವನ್ನು ಮೂರರಷ್ಟು ವಿಧಿಸಬಹುದು. 3
ತಿಂಗಳಿಗಿಂತ ಜಾಸ್ತಿಯಾದಲ್ಲಿ ವಸತಿ ಗೃಹವನ್ನು ಖಾಲಿ
ಮಾಡದಿದ್ದರೆ ಲೋಕೋಪಯೋಗಿ ಇಲಾಖೆಯು ಅಗತ್ಯ
ಕ್ರಮ ಕೈಗೊಂಡು ಖಾಲಿ ಮಾಡಿಸಬಹುದು 3 ತಿಂಗಳಿಗಿಂತ
ಜಾಸ್ತಿಯಾದಲ್ಲಿ 5ರಷ್ಟು ಲೈಸೆನ್ಸ್ ಶುಲ್ಕವನ್ನು
ವಿಧಿಸಬಹುದು.
***
23-5-16.
ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ 1987ರಿಂದ ಕೆಲಸ
ಮಾಡುತ್ತಿದ್ದ ನಮ್ಮ ತಂದೆ 12.02.2015ರಂದು ನಿಧನ
ಹೊಂದಿರುತ್ತಾರೆ. ಅವರ ಪುತ್ರನಾದ ನನಗೆ ಅನುಕಂಪದ
ಆಧಾರದ ಮೇಲೆ ಸರ್ಕಾರಿ ನೌಕರಿ ದೊರಕುತ್ತದೆಯೇ?
|ಹುಲುಗಪ್ಪ ಉಪ್ಪಾರ ಧಾರವಾಡ
ದಿನಾಂಕ 2.1.1997ರ ಸರ್ಕಾರಿ ಸುತ್ತೋಲೆ ಸಿಆಸುಇ 11,
ಸೇಅನೆ 95ರಂತೆ ದಿನಾಂಕ 1.4.1984ಕ್ಕಿಂತ ಮೊದಲು
ದಿನಗೂಲಿ ನೌಕರರಾಗಿ ನೇಮಕವಾಗಿದ್ದು ದಿನಾಂಕ
31.12.1991ಕ್ಕೆ 10 ವರ್ಷಗಳ ಕಾಲ ಸೇವೆ ಸಲ್ಲಿಸಿ
ಸಕ್ರಮಗೊಂಡಿರುವ ನೌಕರರ ಅವಲಂಬಿತರಿಗೆ 1996ರ
ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಾವಳಿ
ರೀತ್ಯ ಸರ್ಕಾರಿ ನೌಕರಿ ಲಭ್ಯವಾಗುತ್ತದೆ. ಆದರೆ ನಿಮ್ಮ
ತಂದೆಯವರು ತದನಂತರ ನಿಯೋಜಿತರಾಗಿದ್ದು ಖಾಯಂ
ಆಗದ ಕಾರಣ ಅನುಕಂಪದ ನೇಮಕ ಲಭ್ಯವಾಗುವುದಿಲ್ಲ.
***
24-5-16
ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ
ಕಾರ್ಯ ನಿರ್ವಹಿಸುತ್ತಿದ್ದು ಪೂರ್ವಾಗ್ರಹ ಪೀಡಿತರಾಗಿದ್ದ
ನನ್ನ ಮೇಲಧಿಕಾರಿ ಶಿಸ್ತುಪ್ರಾಧಿಕಾರಕ್ಕೆ ನನ್ನ ವಿರುದ್ಧ ವರದಿ
ಸಲ್ಲಿಸಿದ್ದಾರೆ. ಶಿಸ್ತುಪ್ರಾಧಿಕಾರದ ಇಲಾಖಾ ಆಯುಕ್ತರು
ಇಲಾಖಾ ವಿಚಾರಣೆ ನಡೆಸಲು ನನ್ನ ಮೇಲಧಿಕಾರಿಯನ್ನೇ
ವಿಚಾರಣಾಧಿಕಾರಿಯನ್ನಾಗಿ ನಿಯುಕ್ತಿಗೊಳಿಸಿದ್ದಾರೆ. ಈ
ಹಿನ್ನೆಲೆಯಲ್ಲಿ ನಾನು ಬೇರೊಬ್ಬರನ್ನು
ವಿಚಾರಣಾಧಿಕಾರಿಯಾಗಿ ನೇಮಿಸಲು ಕೋರಬಹುದೇ?
|ಶಿವಕುಮಾರ ಹಾಸನ
ಸಿಸಿಎ ನಿಯಮಾವಳಿಯಡಿ ವಿಚಾರಣಾಧಿಕಾರಿ ಪಕ್ಷಪಾತಿ
ಎಂಬುದು ಆಪಾದಿತನ ಅನಿಸಿಕೆಯಾದರೆ ಸಕಾರಣಗಳನ್ನು
ಒಳಗೊಂಡ ಮನವಿಯನ್ನು ಶಿಸ್ತುಪ್ರಾಧಿಕಾರಿಗೆ ವಿಚಾರಣೆ
ಪ್ರಾರಂಭವಾಗುವುದಕ್ಕೆ ಮೊದಲೇ ಸಲ್ಲಿಸಬೇಕು
ಎಂದು ಮನಕ್ಲಾಲ್ ಡ/ಠ ಈ. ಖಜ್ಞಿಜಚಡಜಿ. ಪ್ರಕರಣದಲ್ಲಿ
ಸರ್ವೇಚ್ಛ ನ್ಯಾಯಾಲಯವು ಸೂಚಿಸಿದೆ.
***
25-5-16
ಪ್ರಾಥಮಿಕ ಶಾಲಾ ಶಿಕ್ಷಕಿಯಾದ ನನಗೆ, ಎರಡು ಮಕ್ಕಳಿದ್ದು,
ಈಗಾಗಲೇ ಎರಡು ಸಲ ಹೆರಿಗೆ ರಜೆ ಪಡೆದಿರುತ್ತೇನೆ. ನನ್ನ
ವೈಯಕ್ತಿಕ ಕಾರಣಗಳಿಂದ ನಮಗೆ ಇನ್ನೊಂದು ಮಗುವಿನ
ಅವಶ್ಯಕತೆ ಇದೆ. ನಾನು ಇನ್ನೊಂದು ಮಗು ಪಡೆದರೆ ವೇತನ
ರಹಿತ ರಜೆ ಹಾಕಿಕೊಳ್ಳಬಹುದೇ? ಎಷ್ಟು ದಿನ ರಜೆ
ಪಡೆಯಬಹುದು? ವೈದ್ಯಕೀಯ ಪ್ರಮಾಣಪತ್ರ
ನೀಡಬೇಕೆ? ವೇತನರಹಿತ ರಜೆ ತೆಗೆದುಕೊಳ್ಳುವುದರಿಂದ,
ಕುಟುಂಬ ಯೋಜನೆ ಅನುಸರಿಸದೆ ಇರುವುದರಿಂದ ನನ್ನ
ವೃತ್ತಿ ಬದುಕಿಗೆ ತೊಂದರೆಯಾಗುತ್ತದೆಯೇ?
| ಪ್ರಿಯಾ ಚಾಮರಾಜನಗರ
ನೀವು ಸರ್ಕಾರಿ ಸೇವಾ ನಿಯಾಮಾವಳಿಯ ನಿಯಮ 117ರ
ಪ್ರಕಾರ ವೇತನರಹಿತ ರಜೆಯನ್ನು 5 ವರ್ಷಗಳವರೆಗೆ
ಪಡೆಯಬಹುದು. ಆದರೆ ಈ ಅವಧಿಯಲ್ಲಿ ನಿಮಗೆ ವಾರ್ಷಿಕ ವೇತನ
ಬಡ್ತಿ ಇತ್ಯಾದಿ ಸೌಲಭ್ಯಗಳು ಮುಂದೂಡಲ್ಪಡುತ್ತದೆ. ಆದರೆ
ನೀವು ಗಳಿಸದ ರಜೆಯನ್ನು ನಿಯಮ 114(6) (ಸಿ) ರೀತ್ಯ
ಇಡೀ ಸೇವಾ ಅವಧಿಯಲ್ಲಿ 360 ದಿನ ಪಡೆಯಬಹುದು. ಈ
ವೇತನರಹಿತ ರಜೆ ಪಡೆಯುವುದರಿಂದ ಮತ್ತು ಕುಟುಂಬ
ಯೋಜನೆ ಅನುಸರಿಸದೇ ಇರುವುದರಿಂದ ನಿಮ್ಮ ವೃತ್ತಿ
ಬದುಕಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ
ಪದೋನ್ನತಿಗಳನ್ನು ಮುಂದೂಡಲಾಗುವುದು.
***
26-5-16
ಯಾವ ದಿನಾಂಕದಿಂದ ಕಾಲಮಿತಿ ಬಡ್ತಿ ಲಭ್ಯವಾಗುತ್ತದೆ?
ನಾನು ನೇರ ನೇಮಕಾತಿ ಮುಖಾಂತರ ಸಿ ದರ್ಜೆಯ ವಾಹನ
ಚಾಲಕ ಹುದ್ದೆಯಲ್ಲಿ ದಿನಾಂಕ 3.10.2003ರಂದು
ಕರ್ತವ್ಯಕ್ಕೆ ಸೇರಿದ್ದು, ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ
ಹುದ್ದೆಗಳ ನೇಮಕಾತಿ) ನಿಯಮಗಳು 1978ರ ನಿಯಮ 3 ಮತ್ತು
4ರನ್ವಯ ವಾಹನ ಚಾಲಕ ಹುದ್ದೆಯಿಂದ ದ್ವಿತೀಯ ದರ್ಜೆ
ಸಹಾಯಕರ ಹುದ್ದೆಗೆ ನೇಮಕಾತಿ ಪ್ರಾಧಿಕಾರದಿಂದ ವೃಂದ
ಬದಲಾವಣೆಗೊಂಡು ದಿನಾಂಕ 4.7.2012ರಿಂದ ಕೆಲಸ
ಮಾಡುತ್ತಿರುತ್ತೇನೆ. ನಾನು 10 ವರ್ಷಗಳ ಆಯ್ಕೆಕಾಲಿಕ
ವೇತನ ಪಡೆದಿರುವುದಿಲ್ಲ. ಇದನ್ನು ಪಡೆಯಲು ನಾನು
ಅರ್ಹನೇ? ಯಾವ ದಿನಾಂಕದಿಂದ ಕಾಲಮಿತಿ ಬಡ್ತಿ
ಲಭ್ಯವಾಗುತ್ತದೆ?
|ಮಧುಸೂದನ್ ಚಿತ್ರದುರ್ಗ
1983ರ ಕರ್ನಾಟಕ ಸರ್ಕಾರಿ ಸೇವಾ (ಕಾಲಬದ್ಧ ಮುಂಬಡ್ತಿ
ನಿಯಮಗಳು) ನಿಯಮ 3ರಂತೆ ಒಂದೇ ಹುದ್ದೆಯಲ್ಲಿ 10
ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಅಂತವರಿಗೆ ಈ ಸೌಲಭ್ಯ
ಲಭ್ಯವಾಗುತ್ತದೆ. ಈ ನಿಯಮಾವಳಿಯ ನಿಯಮ 3(ಬಿ)ಯಂತೆ 10
ವರ್ಷಕ್ಕಿಂತ ಮೊದಲೇ ನೀವು ವೃಂದ ಬದಲಾವಣೆ
ಮಾಡಿಕೊಂಡಿರುವುದರಿಂದ ನಿಮ್ಮ ವಾರ್ಷಿಕ ವೇತನವನ್ನು
ಮೂರು ತಿಂಗಳುಗಳ ಕಾಲ ಮುಂದೂಡಿ ನಿಮ್ಮ ಹಿಂದಿನ
ಹುದ್ದೆಯಲ್ಲಿ ಕಾಲವೇತನ ಮುಂಬಡ್ತಿಯನ್ನು
ಪಡೆಯಬಹುದು.
***
27-5-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದು ರಜಾ
ದಿನಗಳಲ್ಲಿ ಚಲನಚಿತ್ರಗಳಲ್ಲಿ ಅಭಿನಯ, ನಿರ್ದೇಶನ
ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ
ಅವಶ್ಯಕವೇ?
|ಸಿ.ಪಿ. ಲಿಂಗರಾಜು ಚಿಕ್ಕಮಗಳೂರು
ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 2, ಸೇನೆಸಿ 2004,
ದಿನಾಂಕ 8.3.2004ರಂತೆ ಅಖಿಲ ಭಾರತ ಸೇವಾ
ಅಧಿಕಾರಿಗಳು ಒಳಗೊಂಡಂತೆ ಎಲ್ಲಾ ಅಧಿಕಾರಿ ಮತ್ತು
ನೌಕರರು ಚಲನಚಿತ್ರ ಮತ್ತು ಟೆಲಿವಿಷನ್ ಧಾರವಾಹಿಗಳಲ್ಲಿ
ನಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೀಗಾಗಿ ಸರ್ಕಾರಿ ನೌಕರರು ಚಲನಚಿತ್ರಗಳಲ್ಲಿ ನಟಿಸುವುದು
ಮತ್ತು ಟೆಲಿವಿಜನ್ ಧಾರಾವಾಹಿಗಳಲ್ಲಿ ಅಭಿನಯಿಸುವುದು
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ
ನಿಯಮ 16ರ ಮೇರೆಗೆ ದುರ್ನಡತೆಯಾಗುತ್ತದೆ. ಅಂತಹ ನೌಕರರು
ಶಿಸ್ತು ಕ್ರಮಕ್ಕೆ ಒಳಪಡುತ್ತಾರೆ.
***
28-5-16
ಒಬ್ಬ ಸರ್ಕಾರಿ ನೌಕರನಿಗೆ ಯಾವುದೇ ನೋಟಿಸ್ ನೀಡದೆ
ಅವನ ಅನುಪಸ್ಥಿತಿಯಲ್ಲಿ ಹಾಜರಿ ಪುಸ್ತಕದಲ್ಲಿ ಕೆಂಪು
ಶಾಹಿಯಿಂದ ಅಮಾನತು ಎಂದು ಬರೆದು ತದ ನಂತರ
ಅಮಾನತು ಆದೇಶ ಹೊರಡಿಸಲು ಬರುತ್ತದೆಯೇ? ಆ
ಅವಧಿಯಲ್ಲಿ ಜೀವನಾ ಧಾರ ಭತ್ಯೆ ನಿರಾಕರಿಸಲು ಅವಕಾಶ
ಇದೆಯೇ?
|ಜಿ. ಶಿವಕುಮಾರ್ ಮುದ್ದೆಬಿಹಾಳ
ಸರ್ಕಾರಿ ನೌಕರನನ್ನು ಸಿಸಿಎ ನಿಯಮಾವಳಿ ನಿಯಮ 10ರಂತೆ
ಅವನು ಯಾವುದಾದರೂ ದುರ್ನಡತೆ ಅಥವಾ ಕರ್ತವ್ಯ
ಲೋಪವೆಸಗಿದರೆ ಶಿಸ್ತು ಪ್ರಾಧಿಕಾರವು ಯಾವುದೇ
ನೋಟಿಸ್ ನೀಡದೆ ಅಮಾನತುಗೊಳಿಸಬಹುದು. ತದನಂತರ
ಅವನ ಹಾಜರಿ ಪುಸ್ತಕದಲ್ಲಿ ಅಮಾನತು ಎಂದು
ನಮೂದಿಸಬೇಕು. ಅಮಾನತಿನ ಅವಧಿಯಲ್ಲಿ ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 98ರಂತೆ ಮೊದಲ
6 ತಿಂಗಳ ಅವಧಿಗೆ ಸರ್ಕಾರಿ ನೌಕರನ ಮೂಲ ವೇತನದ ಶೇ. 50
ಜೀವನಾಧಾರ ಭತ್ಯೆ ಮತ್ತು ಅದಕ್ಕೆ ಹೊಂದಿಕೊಂಡಂತೆ
ತುಟ್ಟಿ ಭತ್ಯೆ ನೀಡಬೇಕು. ಅಲ್ಲದೆ ಅವನು ಅಮಾನತ್ತಿನ
ಮೊದಲು ಪಡೆಯುತ್ತಿದ್ದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ
ಭತ್ಯೆಗಳಲ್ಲಿ ಯಾವುದೇ ಕಡಿತಗೊಳಿಸದೆ ಸಂಪೂರ್ಣವಾಗಿ
ನೀಡಬೇಕಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ
ಅವರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ
ನೋಡಬಹು
***
29-5-16
ನಾನು ಪ್ರೌಢಶಾಲಾ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ
ಕರ್ತವ್ಯ ನಿರ್ವಹಿಸುತ್ತಿದ್ದು ಮುಖ್ಯ ಶಿಕ್ಷಕಿಯಾಗಿ
ಪದೋನ್ನತಿಯ ಬಡ್ತಿ ಸಿಗುತ್ತದೆಯೇ ಮತ್ತು ಮುಖ್ಯ
ಶಿಕ್ಷಕಿಯಾಗಿ ಪದೋನ್ನತಿ ನಿರಾಕರಿಸಿ ಹುದ್ದೆಯಲ್ಲಿ
ಮುಂದುವರಿದರೆ 25 ಮತ್ತು 30 ವರ್ಷಗಳ ಹೆಚ್ಚುವರಿ ವಾರ್ಷಿಕ
ವೇತನ ಬಡ್ತಿ ಸಿಗುತ್ತದೆಯೇ?
|ಬಾಲಸರಸ್ವತಿ ಮೈಸೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 42 ಬಿ
ರೀತ್ಯ ನೀವು ಮುಖ್ಯ ಶಿಕ್ಷಕಿಯಾಗಿ ಪದೋನ್ನತಿ
ಪಡೆದರೆ ನಿಮಗೆ ವೇತನ ಬಡ್ತಿ ಲಭ್ಯವಾಗುತ್ತದೆ. ಆದರೆ ನೀವು
ಮುಖ್ಯ ಶಿಕ್ಷಕಿಯ ಪದೋನ್ನತಿಯನ್ನು ನಿರಾಕರಿಸಿದರೆ
ದಿನಾಂಕ 14.6.2012ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12,
ಎಸ್ಆರ್ಪಿ 2012ರ ಕಂಡಿಕೆ 6ರ ಪ್ರಕಾರ 25 ಮತ್ತು 30 ವರ್ಷಗಳ
ಸೇವಾ ಅವಧಿಯ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದಿಲ್ಲ.
***
30-5-16
ನಾನು ದಿನಾಂಕ 7.6.2001ರಂದು ನ್ಯಾಯಾಂಗ
ಇಲಾಖೆಯಲ್ಲಿ ಬೆರಳಚ್ಚುಗಾರಳಾಗಿ ನೇಮಕಗೊಂಡಿದ್ದು
ದಿನಾಂಕ 7.6.2016ಕ್ಕೆ 15 ವರ್ಷಗಳ ಸೇವೆಯನ್ನು
ಪೂರೈಸಿದ್ದೇನೆ. ನನಗೆ ದಿನಾಂಕ 12.4.2010ರಂದು ಪ್ರಥಮ
ದರ್ಜೆ ಸಹಾಯಕರಾಗಿ ಮುಂಬಡ್ತಿಯಾಗಿರತ್ತದೆ. ನಾನು 15
ವರ್ಷಗಳ ಸ್ವಯಂಚಾಲಿತ ಬಡ್ತಿ ಪಡೆಯಬಹುದೇ?
ಪಡೆಯಬಹುದಾದಲ್ಲಿ ಯಾವ ಕ್ರಮದಲ್ಲಿ ಪಡೆಯಬೇಕು?
ಎಂಬುದನ್ನು ತಿಳಿಸಿ.
|ಹೆಚ್.ಎನ್. ಲೀಲಾ ನ್ಯಾಯಾಂಗ ಇಲಾಖೆ, ಹಾಸನ
ಕರ್ನಾಟಕ ಸರ್ಕಾರಿ ಸೇವಾ (ಹಿರಿಯ ವೇತನ ಶ್ರೇಣಿಗೆ ವಿಶೇಷ
ಮುಂಬಡ್ತಿ ನೀಡುವಿಕೆ ) ನಿಯಮಗಳು 1991ರ ನಿಯಮ 3ರ
ಮೇರೆಗೆ ಒಂದೇ ಹುದ್ದೆಯಲ್ಲಿ 15 ವರ್ಷಗಳ ಕಾಲ
ನಿರಂತರವಾಗಿ ಸೇವೆ ಸಲ್ಲಿಸಿದರೆ ಅಂಥವರಿಗೆ ಈ ಸ್ವಯಂಚಾಲಿತ
ವೇತನಬಡ್ತಿ ದೊರಕುತ್ತದೆ. ನಿಮಗೆ 15 ವರ್ಷವಾಗುವ 2
ತಿಂಗಳ ಮೊದಲೇ ಪದೋನ್ನತಿ ದೊರಕಿರುವುದರಿಂದ
ನೀವು ಈ ನಿಯಮಾವಳಿಯ ನಿಯಮ 7 (ಎ) ಪ್ರಕಾರ 15
ವರ್ಷಗಳ ವೇತನ ಬಡ್ತಿಯನ್ನು ಹಿಂದಿನ ಹುದ್ದೆಯಲ್ಲಿ ಪಡೆದು
ತದನಂತರ ಪದೋನ್ನತಿಯ ಹುದ್ದೆಯಾದ ಪ್ರಥಮ ದರ್ಜೆ
ಸಹಾಯಕರ ಹುದ್ದೆಯಲ್ಲಿವೇತನ ನಿಗದಿಗೊಳಿಸಲು ನಿಮ್ಮ
ಮೇಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಬೇಕು.
***
31-5-16
ನಾನು ಕಲಬುರ್ಗಿ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಡಿ ಗುಂಪಿನ
ನೌಕರೆ. ನನ್ನ ಮಗಳು ಮೂಕಿಯಾಗಿದ್ದು ಮೆದುಳು
ತೊಂದರೆಯಿಂದ ನರಳುತ್ತಿದ್ದಾಳೆ. ಅವಳ ಸಂಪೂರ್ಣ
ನಿರ್ವಹಣೆಗಾಗಿ ನನಗೆ ವಿಶೇಷ ವೇತನವನ್ನು ನೀಡಲು
ಬರುತ್ತದೆಯೇ?
| ಭಾರತಿ ಸುತಾರ ಕಲಬುರ್ಗಿ
ದಿನಾಂಕ 10.6.2013ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 12,
ಎಸ್ಆರ್ಪಿ 2012, (ಜಿಜಿ) ರ ರೀತ್ಯ ಸರ್ಕಾರಿ ನೌಕರರ ಮಕ್ಕಳು
ಚಲನ ವೈಕ್ಯಲತೆ ಮತ್ತು ಅಂಗವಿಕಲತೆಯಿಂದಾಗಿ ಶಾಲೆಗೆ
ಹೋಗದೆ ಮನೆಯಲ್ಲೇ ಉಳಿದುಕೊಂಡರೆ ಪೋಷಕರ ಮೇಲೆ
ಸಂಪೂರ್ಣವಾಗಿ ಅವಲಂಬಿತವಾಗಿದ್ದರೆ ಅಂತಹ ನೌಕರರಿಗೆ
ಒಂದು ಮಗುವಿಗೆ ಮಾಸಿಕವಾಗಿ 500 ರೂ. ಪೋಷಣಾ
ಭತ್ಯೆ ಮಂಜೂರು ಮಾಡಲಾಗುತ್ತದೆ. ಅಲ್ಲದೆ ದಿನಾಂಕ
19.1.2016ರ ಸರ್ಕಾರಿ ಆದೇಶದಂತೆ ಮಾನಸಿಕ
ವೈಕಲ್ಯತೆಯಿಂದ ನರಳುತ್ತಿರುವ ಸರ್ಕಾರಿ ನೌಕರರ ವಿಶೇಷ
ಮಕ್ಕಳ ಪೋಷಣೆಗೆ ಈ ಭತ್ಯೆಯನ್ನು ನೀಡಲಾಗುತ್ತದೆ.
Sunday, 11 September 2016
Sarkari corner
Labels:
Sarkari corner
Subscribe to:
Post Comments (Atom)
Group D ವೃಂದದ ನೌಕರ ಮೃತಪಟ್ಟಾಗ ಅವರ ಸಂಬಂದಿಗಳಿಗೆ ಯಾವ ವೃಂದದ ನೌಕರಿ ನೀಡಲಾಗುತ್ತದೆ Group C or Group D?
ReplyDeleteಪತಿ ಅನಾರೋಗ್ಯದಿಂದ ಮೃತ ಪಟ್ಟಿದ್ದು ಪತ್ನಿ ಸರಕಾರಿ ಶಾಲೆ ಶಿಕ್ಷಕಿ ಹಾಗದರೆ ಅವಿವಾಹಿತ ಮೈದುನನಿಗೆ ಅನುಕಂಪದ ಆಧಾರದಲ್ಲಿ ನೌಕರಿ ಬರುತ್ತದಯೇ
ReplyDeleteನಾನು ೧೭-೦೯-೨೦೦೦ ರಂದು ಅನುಕಂಪದ ಆಧಾರ ಮೇಲೆ ಗ್ರಾಮಲೆಕ್ಕಾದಿಕಾರಿ ಕಾರ್ಯನಿರ್ವಾಣೆ ಮಾಡತಾ ಇರುತ್ತೆನೆ.ನನ್ನ ಪರೀಕ್ಷಾರ್ಥ ಅವದಿಯೂ ಬಹಳ ತಡವಾಗಿದರಿಂದಾ ಸರಕಾರ ಆದೇಶದ ಮೇರೆಗೆ ೨೩-೧೨ ೨೦೧೪ ರಂದು ನನ್ನ ಪರೀಕ್ಷಾರ್ಥ ಅವದಿಯು ವಿಸ್ತರಣೆ ಆಗಿರುತ್ತದೆ. ಇ ಆದೇಶದ ಪ್ರಕಾರ ಮಾನ್ಯ ಜಿಲ್ಲಾದಿಕಾರಿಗಳು ಧಾರವಾಡ ಇವರು ನನ್ನ ಪರೀಕ್ಷರ್ಥ ಅವದಿಯನ್ನು ಘೂಷಣೆ ಮಾಡಿರುತ್ತಾರೆ. ಇಗ ನನಗೆ ೪ ವಾಷೀಕ ವೇತನ ಬಂಡ್ತಿ ಹೂರತು ಪಡೀಸಿ ಇಲ್ಲಿವೆರೆಗೆ ಯಾವ ವೇತನ ಬಂಡ್ತಿಗಳು ಹಾಗೂ ನನ್ನ ಎರಡು ದಂಡನಾ ೨೦೦೮.ಒಂದು .ಎರಡು ೨೦೦೯ ರಲ್ಲಿ ಇದರಲ್ಲಿ ೬ ವಾಷೀಕ ವೇತನ ಬಂಡ್ತಿಗಳುನ್ನು ತಡೆಹಿಡಿಲು ಆದೇಶ ಆಗಿರುತ್ತವೆ ಯಾವಾಗ ಮುಗಿತ್ತವೆ . ಆದರಿಂದಾ ಇಗ ನನಗೆ ೨೦೦೪ ರಿಂದಾ ೨೦೨೧ ವರೆಗೆ ಎಷ್ಟೋ ವೇತನ ಇರಬೇಕು ಇದರಲ್ಲಿ ೨೦೦೪ ರಿಂದಾ ೨೦೧೪ ವರಗೆ ನನಗೆ ಕಾಲ್ಪನಿಕ ನೀಡಬಹುದೆ .ಮತ್ತು ೨೦೧೪ ರಿಂದಾ ೨೦೨೧ ವರೆಗೆ ಎಷ್ಟೋ ಅರಿಯ್ಸ ಬರುತ್ತೆ .ಹಾಗೂ ನಾನು ಯಾವಾಗ ಮುಂಬಂಡ್ತಿಗೆ ಅರ್ಹತೆ ಪಡೆಯುತ್ತನೆ ದಯಮಾಡಿ ತಿಳಿಸಿ
ReplyDelete