Sunday, 11 September 2016

Sarkari corner

Basayya Jamalur Kalabhavi
ಮಾರ್ಚ್-2016 ರ ಸರ್ಕಾರಿ ಕಾರ್ನರ್
ಪ್ರಶ್ನೆಗಳು.
March 1, 2016 ಸರ್ಕಾರಿ ಕಾರ್ನರ್
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ
ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ.
ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ
ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ
ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ,
ಬೆಂಗಳೂರು 560018.
ಇ-ಮೇಲ್: sarakaricarner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
ದಿನದ ಪ್ರಶ್ನೆ( 1-3-16 )
ನಾನು ಆರೋಗ್ಯ ಇಲಾಖೆಯಲ್ಲಿ ಕಳೆದ 14 ವರ್ಷಗಳಿಂದ
ಸೇವೆ ಸಲ್ಲಿಸುತ್ತಿದ್ದು ಯಾವುದೇ ಪದೋನ್ನತಿ
ಅವಕಾಶವಿಲ್ಲ. ನನಗೆ ಈ ಸೇವೆಯಲ್ಲಿ ಮುಂದುವರಿಯಲು
ಮನಸ್ಸಿಲ್ಲದ ಕಾರಣ ರಾಜೀನಾಮೆ ನೀಡಿ ಉನ್ನತ
ವ್ಯಾಸಂಗ ಮಾಡಲು ನಿಯಮಾವಳಿಗಳಡಿ ಅವಕಾಶವಿದ್ದರೆ
ತಿಳಿಸಿ. ಅಥವಾ ಇಲಾಖೆಯಲ್ಲಿದ್ದುಕೊಂಡೇ ಅದರ
ಮುಖಾಂತರ ಸಸ್ಯ ಶಾಸ್ತ್ರದಲ್ಲಿ ಪಿ.ಎಚ್​ಡಿ., ಪದವಿ ಪಡೆಯಲು
ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ನಿಯಮಗಳೇನು?
ನನಗೀಗ 37 ವರ್ಷವಾಗಿದ್ದು ರಾಜೀನಾಮೆ ನೀಡಲು 15
ವರ್ಷ ಪೂರೈಸಬೇಕೆ? ನಿವೃತ್ತಿ ವೇತನ ಎಷ್ಟು ಸಿಗುತ್ತದೆ.
ಸೂಕ್ತ ಸಲಹೆ ನೀಡಿ.
|ನಿರಂಜನ ಕುಮಾರ ನೇತ್ರಾಧಿಕಾರಿ, ಸಾಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ ಐಐಎ
ಪ್ರಕಾರ ಸರ್ಕಾರಿ ನೌಕರನು ಪಿಎಚ್.ಡಿ., ಮಾಡಲು ಮೂರು
ವರ್ಷಗಳ ಕಾಲ ಅವಕಾಶವಿರುತ್ತದೆ. ಆದರೆ ಈ ಪದವಿ
ಪಡೆಯುವುದು ಆ ಹುದ್ದೆಗೆ ಅವಶ್ಯಕವೆಂದು ಸರ್ಕಾರಕ್ಕೆ
ಮನದಟ್ಟಾದರೆ ನಿಯೋಜನೆ ಮೇರೆಗೆ ಕಳುಹಿಸಲಾಗುವುದು.
ಆದರೆ ನಿಮ್ಮ ಹುದ್ದೆಗೆ ಈ ಪಿಎಚ್.ಡಿ.,
ಅವಶ್ಯಕವಿಲ್ಲವಾದ್ದರಿಂದ ನೀವು 15 ವರ್ಷಗಳ ಸೇವೆ
ಪೂರೈಸಿ ಸ್ವಯಂ ನಿವೃತ್ತಿ ಹೊಂದಿ ಈ ಪಿಎಚ್.ಡಿ.,
ಪದವಿಯನ್ನು ಪಡೆಯಬಹುದು. ಆಗ ನಿಮಗೆ ನಿವೃತ್ತಿ ಸೇವಾ
ಸೌಲಭ್ಯಗಳು ಲಭ್ಯವಾಗುತ್ತವೆ.
***
2-3-16.
ಗ್ರಾಮ ಪಂಚಾಯ್ತಿ – ಪಂಚಾಯ್ತಿಯ ಅಭಿವೃದ್ಧಿ ಇಲಾಖಾ
ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಶಿಕ್ಷಕರ ಹಾಜರಾತಿ
ಪುಸ್ತಕದಲ್ಲಿ ಮೇಲುಸಹಿ ಮಾಡುವ ಹಾಜರಿರದ ಶಿಕ್ಷಕರಿಗೆ ಗಿ
(ಗೈರುಹಾಜರಿ) ಚಿಹ್ನೆ ಹಾಕುವ ಅಧಿಕಾರವಿದೆಯೇ?
| ಶಶಾಂಕ್ ಮೂಡಿಗೆರೆ, ಚಿಕ್ಕಮಗಳೂರು
ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಶಾಲೆಗೆ
ಭೇಟಿ ನೀಡುವ ಅಧಿಕಾರ ಹೊಂದಿರುವುದಿಲ್ಲ. ಅಲ್ಲದೆ
ಅವರು ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಮೇಲುಸಹಿ
ಮಾಡುವ ಮತ್ತು ಹಾಜರಿರದ ಶಿಕ್ಷಕರಿಗೆ ಗಿ ಚಿಹ್ನೆ ಹಾಕುವ
ಅಧಿಕಾರವನ್ನು ಹೊಂದಿರುವುದಿಲ್ಲ. ನಿಮ್ಮ ಪಿಡಿಒ ಅವರು
ವ್ಯಾಪ್ತಿ ಮೀರಿ ಕರ್ತವ್ಯ ನಿರ್ವಹಿಸಿರುವುದರಿಂದ ಈ ಬಗ್ಗೆ
ಶಾಲಾ ಮುಖ್ಯೋಪಾಧ್ಯಾಯರು ಕ್ಷೇತ್ರ
ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬಹುದು.
***
3-3-16.
ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರ
ಹುದ್ದೆ ದೊರಕುವುದೆ?
ನಾನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ
ಎಸ್​ಎಸ್​ಎಲ್​ಸಿ ಮುಗಿಸಿ ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾಲಯದಲ್ಲಿ ಬಾಹ್ಯವಾಗಿ ಒಂದು ವರ್ಷದ
ಪಿಯುಸಿ ಮುಗಿಸಿರುತ್ತೇನೆ. ಇತ್ತೀಚೆಗೆ ನನ್ನ ತಂದೆಯವರು
ನಿಧನ ಹೊಂದಿದ್ದು ಅನುಕಂಪದ ಆಧಾರದ ಮೇರೆಗೆ
ದ್ವಿತೀಯ ದರ್ಜೆ ಸಹಾಯಕರ ಹುದ್ದೆ ದೊರಕುವುದೇ.
|ರಾಜ್​ಕುಮಾರ್, ಪೂಜಾರಿ, ಸಿಂದಗಿ, ವಿಜಯಪುರ
ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ)
ನಿಯಮಗಳು 1973ಕ್ಕೆ 2013ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ
ಮಾಡಿ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ 2 ವರ್ಷದ
ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ನಿಗದಿ
ಪಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮುಕ್ತ
ವಿಶ್ವವಿದ್ಯಾನಿಲಯದ ಪಿಯುಸಿಯನ್ನು ಪದವಿ ಪೂರ್ವ
ಪರೀಕ್ಷಾ ಮಂಡಳಿಯ ಪಿಯುಸಿಗೆ ತತ್ಸಮಾನವಲ್ಲವೆಂದು
ಆದೇಶಿಸಿದೆ. ಆದ ಕಾರಣ ನೀವು ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾನಿಲಯದ ಒಂದು ವರ್ಷದ ಪಿಯುಸಿಯನ್ನು
ಪೂರೈಸಿರುವುದರಿಂದ ಅನುಕಂಪದ ಆಧಾರದ ಮೇಲೆ
ನೇಮಕಾತಿ ಹೊಂದಲು ಅರ್ಹರಾಗಿರುವುದಿಲ್ಲ.
***
4-3-16.
ಸರ್ಕಾರಿ ಸ್ವಾಮ್ಯದ ಅಭಿವೃದ್ಧಿ ನಿಗಮದಿಂದ ನಿವೃತ್ತಿ
ಹೊಂದಿ 20 ತಿಂಗಳಾಯಿತು. ಭವಿಷ್ಯನಿಧಿ ಉಪದಾನ, ಜಿಐಎಸ್​
ಗಳಿಗೆ ರಜೆ ನಗದೀಕರಣ, ಪಿಂಚಣಿ ಮುಂತಾದ
ಸವಲತ್ತುಗಳನ್ನು ಬಿಡುಗಡೆ ಮಾಡದೆ ವಿನಾಕಾರಣ
ತಡೆಹಿಡಿಯಲಾಗಿದೆ. ಇವುಗಳ ಪರಿಹಾರಕ್ಕಾಗಿ ಸೂಕ್ತ ಕಾನೂನಿನ
ಮಾರ್ಗೇಪಾಯಗಳೇನು?
|ಕೆ.ಎಲ್. ನಾಗಲಕ್ಷ್ಮೀ ತುಮಕೂರು
ನೀವು ಸರ್ಕಾರಿ ಸ್ವಾಮ್ಯದ ಅಭಿವೃದ್ಧಿ ನಿಗಮದಿಂದ
ನಿವೃತ್ತಿ ಹೊಂದಿದ್ದು, ನಿಮ್ಮ ಭವಿಷ್ಯ ನಿಧಿ ಮೊಬಲಗನ್ನು
ಅಂತಿಮವಾಗಿ ನೀವೇ ಪಡೆಯಬಹುದು. ನಿಮಗೆ
ಲಭ್ಯವಾಗಬೇಕಾದ ಇತರೆ ನಿವೃತ್ತಿ ಸೌಲಭ್ಯಗಳನ್ನು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 214ರ
ರೀತ್ಯ ಯಾವುದೇ ಹಣಕಾಸು ನಷ್ಟವಿದ್ದರೆ ಅಂತಹ
ಸಂದರ್ಭದಲ್ಲಿ ತಡೆಹಿಡಿಯಲು ಅವಕಾಶವಿದೆ. ಅಲ್ಲದೆ ನಿಮ್ಮ
ಮೇಲೆ ಯಾವುದೇ ಇಲಾಖಾ ವಿಚಾರಣೆ ಬಾಕಿ ಇದ್ದರೆ ಅಂತಹ
ಸಂದರ್ಭದಲ್ಲಿಯೂ ಸಹ ನಿಯಮಾವಳಿಯಲ್ಲಿ ಅವಕಾಶವಿದೆ.
ಆದರೆ ನಿಮ್ಮ ಪ್ರಕರಣದಲ್ಲಿ 20 ತಿಂಗಳೊಳಗಾಗಿ
ವಿಚಾರಣೆಯನ್ನು ಪೂರೈಸಿ ನಿಮ್ಮಿಂದ ಬರಬೇಕಾಗಿರುವ
ಬಾಕಿಯನ್ನು ಇವುಗಳಿಂದ ಕಠಾಯಿಸಿಕೊಳ್ಳಬಹುದಾಗಿತ್ತು.
ಆದ ಕಾರಣ ಸ್ವಾಭಾವಿಕ ನ್ಯಾಯಕ್ಕೆ
ವಿರುದ್ಧವಾಗಿರುವುದರಿಂದ ಸಂಬಂಧಿತ ನಿಗಮದ ಸರ್ಕಾರದ
ಪ್ರಧಾನ ಕಾರ್ಯದರ್ಶಿಯವರನ್ನು ಅಥವಾ ಮೇಲ್ಮನವಿ
ಪ್ರಾಧಿಕಾರವನ್ನು ಕೋರಬಹುದು. ತದನಂತರ ನೀವು
ನ್ಯಾಯಾಲಯಕ್ಕೆ ಮೊರೆ ಹೋಗಬಹುದು.
***
5-3-16.
ನಾನು 1996ರಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣದ ಶಿಕ್ಷಕ
ಗ್ರೇಡ್-2 ಹುದ್ದೆಗೆ ನೇಮಕವಾಗಿ 2006ರಲ್ಲಿ 10 ವರ್ಷಗಳ
ಕಾಲ ಮಿತಿ ವೇತನ ಬಡ್ತಿ ಪಡೆದಿರುತ್ತೇನೆ. 2008ರಲ್ಲಿ
ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಗೆ
ಪದೋನ್ನತಿ ಹೊಂದಿದ್ದು ಈ ಹುದ್ದೆಯಲ್ಲಿ ನಿರಂತರ ಸೇವೆ
ಸಲ್ಲಿಸಿದ್ದಕ್ಕಾಗಿ ನನಗೆ ಮತ್ತೊಮ್ಮೆ ಕಾಲಮಿತಿ ವೇತನ ಬಡ್ತಿ
ದೊರೆಯುವುದೇ?
|ಎಂ.ಆರ್. ಶಿವಮೂರ್ತಿ
ಕರ್ನಾಟಕ ಸರ್ಕಾರಿ ಸೇವಾ (ಕಾಲಮಿತಿ ಭರ್ತಿ) ನಿಯಮ
1983ರಂತೆ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ 10 ವರ್ಷಗಳ
ಕಾಲ ನಿರಂತರವಾಗಿ ಒಂದೇ ಹುದ್ದೆಯಲ್ಲಿ ಸೇವೆ
ಸಲ್ಲಿಸಿರುವುದಕ್ಕೆ ಹೆಚ್ಚಿನ ವೇತನ ಶ್ರೇಣಿಯ
ಪದೋನ್ನತಿಯನ್ನು ನೀಡಲಾಗುವುದು. ಆದ ಕಾರಣ
ನೀವು ಈಗಾಗಲೇ ಒಮ್ಮೆ ಕೆಳಗಿನ ಹುದ್ದೆಯಲ್ಲಿ ಕಾಲಮಿತಿ
ಬಡ್ತಿಯನ್ನು ಪಡೆದಿರುವುದರಿಂದ ಮತ್ತೊಮ್ಮೆ ನಿಮಗೆ
ಮೇಲಿನ ಹುದ್ದೆಯಲ್ಲಿ ಇದು ದೊರಕುವುದಿಲ್ಲ.
***
6-3-16.
13 ವರ್ಷಗಳ ಸೇವೆಯನ್ನು ಸೇವಾ ಮುಂಬಡ್ತಿಗೆ
ಪರಿಗಣಿಸಲಾಗುತ್ತದೆಯೇ?
ನಾನು 2002ರಲ್ಲಿ ಸಿಇಟಿ ಮೂಲಕ ಮೈಸೂರು ಜಿಲ್ಲೆಗೆ
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು, 2015ರ
ಸಾಮಾನ್ಯ ವರ್ಗಾವಣೆಯಲ್ಲಿ ಹಾಸನ ಜಿಲ್ಲೆಗೆ
ವರ್ಗಾವಣೆಗೊಂಡಿರುತ್ತೇನೆ. ನನ್ನ 13 ವರ್ಷಗಳ
ಸೇವೆಯನ್ನು ಸೇವಾ ಮುಂಬಡ್ತಿಗೆ ಇಲ್ಲಿ
ಪರಿಗಣಿಸಲಾಗುತ್ತದೆಯೇ? ಇಲ್ಲವಾದಲ್ಲಿ ಸೂಕ್ತ ಕಾರಣ
ತಿಳಿಸಿ.
|ಹೇಮಾವತಿ ಎಸ್.ಬಿ. ಗಂಡಸಿ, ಅರಸೀಕೆರೆ ತಾಲೂಕು
ನೀವು ಮೈಸೂರು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸ್ವತಃ
ಕೋರಿಕೆ ಮೇರೆಗೆ ವರ್ಗಾವಣೆಗೊಂಡಿರುವುದರಿಂದ ನಿಮ್ಮ
ಸೇವಾವಧಿಯನ್ನು ಮುಂಬಡ್ತಿಗಾಗಿ ನಿಯಮಾವಳಿ
ರೀತ್ಯಾ ಪರಿಗಣಿಸಲಾಗುವುದಿಲ್ಲ. ನೀವು ಹಾಸನದಲ್ಲಿ
ಜ್ಯೇಷ್ಠತಾ ಪಟ್ಟಿಯಲ್ಲಿ ಕಿರಿಯರಾಗಿರುವುದರಿಂದ ನಿಮ್ಮ
ಮುಂಬಡ್ತಿಗೆ ಅವಕಾಶವಿರುವುದಿಲ್ಲ.
***
7-3-16.
ನಮ್ಮ ತಂದೆಯವರು ಲೋಕೋಪಯೋಗಿ ಇಲಾಖೆಯಲ್ಲಿ
ದಿನಗೂಲಿ ನೌಕರರಾಗಿ 1996ರಿಂದ ಕೆಲಸ ಮಾಡುತ್ತಿದ್ದು,
2015ರ ಅಕ್ಟೋಬರ್ ತಿಂಗಳ 20ರಂದು ನಿಧನ
ಹೊಂದಿರುತ್ತಾರೆ. ನನಗೆ ಈ ಇಲಾಖೆಯಲ್ಲಿ ಅನುಕಂಪದ
ಆಧಾರದ ಮೇಲೆ ಸರ್ಕಾರಿ ನೌಕರಿ ಲಭ್ಯವಾಗುತ್ತದೆಯೇ?
| ಪಿ.ಎನ್. ರಮೇಶ್ ಚಿತ್ರದುರ್ಗ
ದಿನಾಂಕ 2.1.1997ರ ಸರ್ಕಾರಿ ಸುತ್ತೋಲೆಯಂತೆ ದಿನಾಂಕ
1.4.1984ಕ್ಕಿಂತ ಮುಂಚೆ ದಿನಗೂಲಿ ನೌಕರರಾಗಿ ಸೇವೆಗೆ
ಸೇರಿದ್ದು, 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರನ್ನು
ಖಾಯಂಗೊಳಿಸುವ ಮುನ್ನ ನಿಧನಹೊಂದಿದರೆ ಅಂತಹವರ
ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ
ನೀಡಬೇಕೆಂದು ಸೂಚಿಸಿದೆ. ಆದರೆ ನಿಮ್ಮ ತಂದೆಯವರು ಈ
ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣ ನೀವು
ಅನುಕಂಪದ ಮೇರೆಗೆ ಸರ್ಕಾರಿ ನೌಕರಿ ಪಡೆಯಲು ಅರ್ಹರಲ್ಲ.
***
8-3-16.
ನಿಯಮಾವಳಿ ರೀತ್ಯ ಸರಿಯಾಗಿದೆಯೇ?
ನಾನು ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದು, ಅನಿವಾರ್ಯ ಕಾರಣದಿಂದಾಗಿ 2
ತಿಂಗಳು ಅನಧಿಕೃತವಾಗಿ ಗೈರು ಹಾಜರಾಗಬೇಕಾಯಿತು.
ಈ ನನ್ನ ವರ್ತನೆಗೆ ಶಿಸ್ತುಪ್ರಾಧಿಕಾರಿಯು ಇಲಾಖಾ ವಿಚಾರಣೆ
ನಡೆಸಿ ನನ್ನ ವಾರ್ಷಿಕ ವೇತನ ಬಡ್ತಿಯನ್ನು ಖಾಯಂ ಆಗಿ
ತಡೆಹಿಡಿದಿದ್ದಾರೆ. ಇದು ನಿಯಮಾವಳಿ ರೀತ್ಯ
ಸರಿಯಾಗಿದೆಯೇ?
ಬಿ.ಎಸ್. ಪ್ರಮೀಳ ಸರ್ಕಾರಿ ಆಸ್ಪತ್ರೆ, ವಿಜಯಪುರ
ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ದಂಡನೆಯಾಗಿ
ವಾರ್ಷಿಕ ವೇತನ ಬಡ್ತಿಯನ್ನು ಶಾಶ್ವತವಾಗಿ
ತಡೆಯುವಂತಿಲ್ಲ. ಈಗಾಗಲೇ ಮದೋಸಿಂಗ್ ದೌಲತ್​ಸಿಂಗ್ v/s
State of Bombayಪ್ರಕರಣದಲ್ಲಿ ಸರ್ವೇಚ್ಛ ನ್ಯಾಯಾಲಯ
ಆದೇಶಿಸಿದೆ.
***
9-3-16.
ನಾನು ಕೃಷಿ ಇಲಾಖೆಗೆ ಶೀಘ್ರಲಿಪಿಗಾರನಾಗಿ 2006ರಲ್ಲಿ
ಕೆಲಸಕ್ಕೆ ಸೇರಿದೆ. ಕೆಲವೊಂದು ಕಾರಣಗಳಿಂದಾಗಿ ನನ್ನ
ಮೇಲೆ ಆರೋಪ ಹೊರಿಸಿ, ಇಲಾಖಾ ವಿಚಾರಣೆ ನಡೆಸಿ ಶಿಸ್ತು
ಪ್ರಾಧಿಕಾರಿಯು ನನಗೆ ಬೆರಳಚ್ಚುಗಾರನ ಹುದ್ದೆಗೆ ಹಿಂಬಡ್ತಿ
ನೀಡಿದರು. ಈ ರೀತಿಯಾಗಿ ಶಿಸ್ತುಪ್ರಾಧಿಕಾರಿಯು ವಿಧಿಸಿದ
ದಂಡನೆಯು ನಿಯಮಾವಳಿ ರೀತ್ಯ ಸರಿಯಾಗಿದೆಯೇ?
|ಮಹೇಶ್ ಎನ್. ಚಿಕ್ಕಮಗಳೂರು
ಸಿಸಿಎ ನಿಯಮಾವಳಿಯ ನಿಯಮ 8 (ಡ) ರೀತ್ಯ ಒಬ್ಬ ನೌಕರ
ನೇರ ನೇಮಕಾತಿಯಿಂದ ಒಂದು ಹುದ್ದೆಗೆ ನೇಮಕಗೊಂಡ
ಮೇಲೆ ಅದಕ್ಕಿಂತ ಕೆಳಗಿನ ಹುದ್ದೆಗೆ ಹಿಂಬಡ್ತಿಗೊಳಿಸುವ
ದಂಡನೆಯನ್ನು ವಿಧಿಸುವಂತಿಲ್ಲ.
***
10-3-16.
ನಾನು ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ
ಕಾರ್ಯ ನಿರ್ವಹಿಸುತ್ತಿದ್ದು 2015ರ ಮಾರ್ಚ್ ತಿಂಗಳಿನಲ್ಲಿ
ಶಿಸ್ತು ಪ್ರಾಧಿಕಾರಿಯಾದ ಜಿಲ್ಲಾಧಿಕಾರಿಯವರು ನನ್ನನ್ನು
ಕರ್ತವ್ಯ ನಿರ್ಲಕ್ಷ್ಯ ಆಧಾರದ ಮೇಲೆ
ಅಮಾನತಿನಲ್ಲಿಟ್ಟಿದ್ದಾರೆ. ಇಲ್ಲಿಯವರೆಗೂ ನನ್ನನ್ನು ಕೆಲಸಕ್ಕೆ
ಹಿಂತೆಗೆದುಕೊಂಡಿರುವುದಿಲ್ಲ. ನನಗೆ ಬರುತ್ತಿರುವ
ಜೀವನಾಧಾರ ಭತ್ಯೆಯಲ್ಲಿ ಸಂಸಾರ ನಡೆಸುವುದು
ಕಷ್ಟಕರವಾಗಿದೆ. ನಾನು ಬೇರೆ ಖಾಸಗಿ ನೌಕರಿಯನ್ನು ಈ
ಅಮಾನತಿನ ಅವಧಿಯಲ್ಲಿ ಮಾಡಬಹುದೇ?
|ದಿನೇಶ್ ಎಂ. ಮಂಗಳೂರು
ಕರ್ನಾಟಕ ಸೇವಾ ನಿಯಮಾವಳಿಯ ನಿಯಮ 98 (2)ರಂತೆ
ಸರ್ಕಾರಿ ನೌಕರನು ಅಮಾನತಿನ ಅವಧಿಯಲ್ಲಿ ಯಾವುದೇ
ಉದ್ಯೋಗದಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಥವಾ
ಕಸುಬಿನಲ್ಲಿ ನಿರತನಾಗಿಲ್ಲ ಎಂಬುದನ್ನು ಸಮರ್ಥಿಸುವ
ಪ್ರಮಾಣ ಪತ್ರವನ್ನು ನೀಡದ ಹೊರತು ಅವನಿಗೆ
ಜೀವನಾಧಾರ ಭತ್ಯೆ ನೀಡತಕ್ಕದ್ದಲ್ಲ ಎಂದು ಸೂಚಿಸಿದೆ.
ಹೀಗಾಗಿ ನೀವು ನಿಮ್ಮ ಅಮಾನತಿನ ಅವಧಿ ಯಲ್ಲಿ
ಯಾವುದೇ ಖಾಸಗಿ ಉದ್ಯೋಗವನ್ನು
ಮಾಡುವಂತಿಲ್ಲ.
***
11-3-16.
ನಾನು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೌಕರನಾಗಿದ್ದು,
2015ರ ಡಿಸೆಂಬರ್​ನಲ್ಲಿ ಲೋಕಾಯುಕ್ತ ಟ್ರ್ಯಾಪ್
ಕೇಸಿನಲ್ಲಿ ಸಿಲುಕಿಕೊಂಡಿದ್ದರಿಂದ ನನ್ನನ್ನು
ಅಮಾನತ್ತಿನಲ್ಲಿಟ್ಟಿದ್ದಾರೆ. ಅಲ್ಲದೆ ನನ್ನ ಮೇಲೆ ಇಲಾಖಾ
ವಿಚಾರಣೆ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು
ಹೂಡಿರುವುದರಿಂದ ಎರಡೆರಡು ದಂಡನೆಗಳು ಒಟ್ಟೊಟ್ಟಿಗೆ
ನಡೆಸುವುದು ಕಾನೂನು ಸಮ್ಮತವೇ?
|ಎನ್. ಮಾದೇಗೌಡ ಮಂಡ್ಯ
ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣ ಒಟ್ಟೊಟ್ಟಿಗೆ
ನಡೆಸುವುದು ಸಂವಿಧಾನದ ಅನುಚ್ಛೇದ 20(2)ರ
ವ್ಯಾಪ್ತಿಯಲ್ಲಿ ಎರಡು ದಂಡನೆಯಾಗುವುದಿಲ್ಲ. ಇಲಾಖಾ
ವಿಚಾರಣೆಯು ಶಾಸನಬದ್ಧ ನಿಯಮಾವಳಿಯಲ್ಲಿ ಬಂದ ಒಂದು
ಪ್ರಕಾರವಾಗಿದ್ದರೂ ಇಲಾಖಾ ಶಿಸ್ತು ಕ್ರಮಗಳು ಪ್ರಮಾಣ
ವಚನ ಆಧಾರಿತ ಕಾನೂನುಬದ್ಧ ಸಾಕ್ಷ್ಯ ಆಧಾರ ಮೇಲೆ
ನಡೆಯುವುದಿಲ್ಲ. ಆದ್ದರಿಂದ ಇದು ಎರಡೆರಡು
ದಂಡನೆಯಾಗುವುದಿಲ್ಲ.
***
12- 3 -16.
ನಮ್ಮ ತಾಯಿಯವರು ಪ್ರೌಢಶಾಲಾ ಶಿಕ್ಷಕಿಯಾಗಿ 25 ವರ್ಷಗಳ
ಕಾಲ ಸೇವೆ ಸಲ್ಲಿಸಿದ್ದು ಕಳೆದ ನವೆಂಬರ್ ತಿಂಗಳಿನಲ್ಲಿ
ಅವರನ್ನು ದುರ್ನಡತೆ ಆರೋಪದ ಮೇಲೆ
ಅಮಾನತಿನಲ್ಲಿಡಲಾಯಿತು. ನಮ್ಮ ತಾಯಿ ಅಮಾನತಿನ
ಅವಧಿಯಲ್ಲಿಯೇ 2016ರ ಫೆಬ್ರವರಿ 25ರಂದು
ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ
ನಿರುದ್ಯೋಗಿಯಾಗಿರುವ ನನಗೆ ಯಾವ್ಯಾವ ಆರ್ಥಿಕ
ಮತ್ತು ಸೇವಾ ಸೌಲಭ್ಯ ಲಭ್ಯವಾಗುತ್ತದೆ?
|ಡಿ.ಎಚ್. ಮಂಜುನಾಥ್ ಬಳ್ಳಾರಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 100 (2)
ರಂತೆ ಅಮಾನತಿನಲ್ಲಿರುವ ಸರ್ಕಾರಿ ನೌಕರನು ಶಿಸ್ತಿನ ಅಥವಾ
ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವುದಕ್ಕೆ
ಮುಂಚೆ ನಿಧನ ಹೊಂದಿದರೆ ಅಂಥವರ ಕುಟುಂಬಕ್ಕೆ
ಅಮಾನತಿನ ಮತ್ತು ನಿಧನದ ದಿನಾಂಕಗಳ ನಡುವಿನ
ಅವಧಿಯನ್ನು ಎಲ್ಲಾ ಉದ್ದೇಶಕ್ಕಾಗಿ ಕರ್ತವ್ಯವೆಂದು
ಪರಿಗಣಿಸಿ ಬಾಕಿ ವೇತನ ಭತ್ಯೆಗಳನ್ನು ನೀಡಬೇಕು.
ಅಲ್ಲದೇ ಅವನ ಕುಟುಂಬಕ್ಕೆ ಕುಟುಂಬ ವೇತನ,
ಅನುಕಂಪದ ಮೇರೆಗೆ ನೇಮಕ, ಉಪದಾನ ಇತ್ಯಾದಿ ಸೇವಾ
ಸೌಲಭ್ಯಗಳು ಲಭ್ಯವಾಗುತ್ತದೆ.
***
13-3-16.
ನಾನು ರೇಷ್ಮೆ ಇಲಾಖೆಯಲ್ಲಿ ರೇಷ್ಮೆ
ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ
ಮೇಲೆ ಖಾಸಗಿ ದೂರ ಬಂದ ಪ್ರಯುಕ್ತ ನನ್ನನ್ನು
ಶಿಸ್ತುಕ್ರಮಕ್ಕೆ ಒಳಪಡಿಸಲಾಯಿತು. ಈ ಶಿಸ್ತುಕ್ರಮಕ್ಕೆ
ಒಳಪಡಿಸಲು ವಿಚಾರಣಾಕಾಧಿರಿಯಾಗಿ ನನಗಿಂತ ಸೇವಾ
ಜ್ಯೇಷ್ಠತೆಯಲ್ಲಿ ಮತ್ತು ಸ್ಥಾನಮಾನದಲ್ಲಿ ಕಿರಿಯರಾದ
ಅಧಿಕಾರಿಯನ್ನು ನೇಮಿಸಲಾಯಿತು. ಇದರಿಂದಾಗಿ ನಾನು ಈ
ಇಲಾಖಾ ವಿಚಾರಣೆಗೆ ಪಾಲ್ಗೊಳ್ಳಲು ಮುಜುಗರ
ಉಂಟಾಗುತ್ತದೆ. ಈ ಬಗ್ಗೆ ನಿಮ್ಮ ಸಲಹೆ ಏನು?
|ಎಚ್. ಹನುಮಂತಯ್ಯ ಚಿಕ್ಕಬಳ್ಳಾಪುರ
ಸಿಸಿಎ ನಿಯಮಾವಳಿಯ ನಿಯಮ 11(5)ರಂತೆ
ವಿಚಾರಣಾಧಿಕಾರಿಯಾಗಿ ನೇಮಕವಾಗುವ ಅಧಿಕಾರಿ ಆಬಾಧಿತ
ನೌಕರನಿಗಿಂತ ಸ್ಥಾನಮಾನದಲ್ಲಿ ಮತ್ತು ಸೇವಾ
ಜ್ಯೇಷ್ಠತೆಯಲ್ಲಿ ಹಿರಿಯನಾಗಿರಬೇಕೆಂದು ಸೂಚಿಸಿದೆ.
ಆದುದರಿಂದ ನೀವು ಶಿಸ್ತು ಪ್ರಾಧಿಕಾರಿಗೆ ಈ ಬಗ್ಗೆ ಮನವರಿಕೆ
ಮಾಡಿಕೊಟ್ಟು ವಿಚಾರಣಾಧಿಕಾರಿಯನ್ನು ಬದಲಾಯಿಸಲು
ಮನವಿ ಸಲ್ಲಿಸಬಹುದು.
***
14-3-16.
ವಿಚಾರಣಾಧಿಕಾರಿಯಾಗಿ ನೇಮಿಸಲು
ಶಿಸ್ತುಪ್ರಾಧಿಕಾರಿಯನ್ನು ಕೋರಬಹುದೇ?
ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆಯ
ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪೂರ್ವಾಗ್ರಹ
ಪೀಡಿತರಾಗಿದ್ದ ನನ್ನ ಮೇಲಧಿಕಾರಿಯವರು
ಶಿಸ್ತುಪ್ರಾಧಿಕಾರಕ್ಕೆ ನನ್ನ ಮೇಲೆ ಶಿಸ್ತುಕ್ರಮ ಕೈಗೊಳ್ಳಲು
ವರದಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ
ಶಿಸ್ತುಪ್ರಾಧಿಕಾರದ ಇಲಾಖಾ ಆಯುಕ್ತರು ನನ್ನ ವಿರುದ್ಧ
ಇಲಾಖಾ ವಿಚಾರಣೆಯನ್ನು ನಡೆಸಲು ನನ್ನ
ಮೇಲಧಿಕಾರಿಯವರನ್ನೇ ವಿಚಾರಣಾಧಿಕಾರಿಯನ್ನಾಗಿ
ನಿಯುಕ್ತಿಗೊಳಿಸಿದರು. ಈ ಹಿನ್ನೆಲೆಯಲ್ಲಿ ನಾನು
ಬೇರೊಬ್ಬರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲು
ಶಿಸ್ತುಪ್ರಾಧಿಕಾರಿಯನ್ನು ಕೋರಬಹುದೇ?
|ಮೋಹನ್​ಕುಮಾರ್ ಬಳ್ಳಾರಿ
ಸಿಸಿಎ ನಿಯಮಾವಳಿಯಡಿಯಲ್ಲಿ ವಿಚಾರಣಾಧಿಕಾರಿ ಪಕ್ಷಪಾತಿ
ಎಂಬುದು ಆಪಾದಿತನ ಅನಿಸಿಕೆಯಾದರೆ ಸಕಾರಣಗಳನ್ನು
ಒಳಗೊಂಡ ಮನವಿಯನ್ನು ಶಿಸ್ತುಪ್ರಾಧಿಕಾರಿಗೆ ವಿಚಾರಣೆ
ಪ್ರಾರಂಭವಾಗುವುದಕ್ಕೆ ಮೊದಲೇ ಸಲ್ಲಿಸಬೇಕು.
ಎಂದು ಮನಕ್​ಲಾಲ್ ಡ/ಠ ಈ. ಖಜ್ಞಿಜಚಡಜಿ. ಪ್ರಕರಣದಲ್ಲಿ
ಸರ್ವೇಚ್ಛ ನ್ಯಾಯಾಲಯವು ಸೂಚಿಸಿದೆ. (ಹೆಚ್ಚಿನ ವಿವರಗಳಿಗೆ
ಎಂ. ಉಮೇಶ್ ಅವರ ಸಿಸಿಎ ನಿಯಮಾವಳಿ ಸಮಗ್ರ ಕೈಪಿಡಿ
ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ
94812 44434ನ್ನು ಸಂರ್ಪಸಬಹುದು)
***
15-3-16.
ಅನಾರೋಗ್ಯದ ನಿಮಿತ್ತ ತುರ್ತು ಚಿಕಿತ್ಸೆಗಾಗಿ
ವೈದ್ಯಕೀಯ ರಜೆಯ ಮೇಲೆ ಹೋಗಬೇಕಾದರೆ ರಜೆ
ಮಂಜೂರು ಮಾಡುವ ಅಧಿಕಾರಿಯ ಪೂರ್ವಾನುಮತಿ
ಪಡೆದುಕೊಂಡೇ ಹೋಗಬೇಕೇ? ಇಲ್ಲೊಬ್ಬ ಅಧಿಕಾರಿ
ಈ ರೀತಿ ಲಿಖಿತ ಸೂಚನೆ ನೀಡಿದ್ದಾರೆ. ಇದು ಸರಿಯಾದ
ಕ್ರಮವೇ?
|ಎಸ್.ಎನ್. ವರ್ಣೇಕರ್ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 175ರಂತೆ
ವೈದ್ಯಕೀಯ ಆಧಾರದ ಮೇಲೆ ರಜೆ ಮಂಜೂರು ಮಾಡಲು
ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ನಿಯಮ 177ರಂತೆ ರಜೆ
ಅರ್ಜಿಯನ್ನು ಚಿಕಿತ್ಸೆ ನಂತರ ಸಲ್ಲಿಸಿ ಮಂಜೂರು
ಮಾಡಿಸಿಕೊಳ್ಳಬಹುದು. ಅಧಿಕಾರಿ ನೀಡಿರುವ ಸೂಚನೆ
ನಿಯಮಬದ್ಧವಾಗಿರುವುದಿಲ್ಲ.
***
16-3-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಎರಡೂ ಮೂತ್ರಪಿಂಡಗಳ
ವೈಫಲ್ಯದಿಂದ ಬಳಲುತ್ತಿದ್ದು ವಾರಕ್ಕೆರಡು ಬಾರಿ
ಡಯಾಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದೇನೆ. ಸರ್ಕಾರಿ
ನೌಕರರಿಗಿರುವ ಜ್ಯೋತಿ ಸಂಜೀವಿನಿ ಯೋಜನೆಯಡಿಯಲ್ಲಿ
ಡಯಾಲಿಸಿಸ್ ಚಿಕಿತ್ಸೆ ಪಡೆಯಬಹುದೇ?
|ಎಸ್. ರಶ್ಮಿ ಬೆಂಗಳೂರು
ಜ್ಯೋತಿ ಸಂಜೀವಿನಿ ಯೋಜನೆಯ ಅನುಷ್ಠಾನದ
ದಿನಾಂಕ 18.8.2014ರ ಸರ್ಕಾರಿ ಆದೇಶದಲ್ಲಿ ಮಾರಣಾಂತಿಕ
ಕಾಯಿಲೆಗಳಾದ ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆ
ಮುಂತಾದವುಗಳಿಗೆ ಚಿಕಿತ್ಸೆ ಪಡೆಯಲು ನಗದು ರಹಿತ
ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಹೀಗಿರುವುದರಿಂದ
ನೀವು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದು
ವೈದ್ಯಕೀಯ ಮರು ವೆಚ್ಚಕ್ಕೆ ಕೋರಬಹುದು.
***
17-3-16.
ನಾನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚಾಲಕನಾಗಿ
1982ರಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 2008ರಲ್ಲಿ ನನಗೆ
ಹಿರಿಯ ಚಾಲಕರ ಹುದ್ದೆಗೆ ಪದೋನ್ನತಿ ನೀಡಿದ್ದು ನಾನು
ಚಾಲಕನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇನೆ. ಹೀಗಾಗಿ
ನಾನು 20, 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ
ಬಡ್ತಿಯನ್ನು ಕೋರಬಹುದೇ?
|ಕೃಷ್ಣ ಮಂಗಳೂರು
ನೀವು 2008ರಲ್ಲಿ ಹಿರಿಯ ಚಾಲಕರ ಹುದ್ದೆಗೆ ಪದೋನ್ನತಿ
ಹೊಂದಿರುವು ದರಿಂದ ದಿನಾಂಕ 9.5.2002ರ ಸರ್ಕಾರಿ
ಆದೇಶದಂತೆ 20 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು
ಹಾಗೂ ದಿನಾಂಕ 14.6.2012ರ ಸರ್ಕಾರಿ ಆದೇಶಗಳಂತೆ 25
ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು ಪಡೆಯಬಹುದು.
ಆದರೆ ನೀವು 25 ವರ್ಷಗಳ ನಂತರ ಹಿರಿಯ ಚಾಲಕರಾಗಿ
ಪದೋನ್ನತಿ ಹೊಂದಿರುವುದರಿಂದ 30 ವರ್ಷಗಳ ಹೆಚ್ಚುವರಿ
ವೇತನ ಬಡ್ತಿಯನ್ನು ಪಡೆಯಲು ಅವಕಾಶವಾಗುವುದಿಲ್ಲ.
***
18-3-16
ವೇತನ ನಿಗದಿಗೆ ಪರಿಗಣಿಸಲಾಗುತ್ತದೆಯೇ?
ನಾನು ನ್ಯಾಯಾಂಗ ಇಲಾಖೆಯಲ್ಲಿ 2008ರಿಂದ ಪ್ರಥಮ
ದರ್ಜೆ ಸಹಾಯಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ
ಸಿಸಿಎ ನಿಯಮಾವಳಿ ರೀತ್ಯ ಆರೋಪ ಹೊರಿಸಿ 2015ರಲ್ಲಿ
ಸೇವೆಯಿಂದ ತೆಗೆದುಹಾಕಿದ್ದಾರೆ. ನನಗೀಗ 32 ವರ್ಷ
ವಯಸ್ಸಾಗಿದ್ದು ಪುನಃ ಯಾವುದಾದರೂ ಸರ್ಕಾರಿ
ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಬಹುದೇ? ಆಯ್ಕೆಯಾದರೆ
ನನ್ನ ಹಿಂದಿನ ಸೇವೆಯನ್ನು ರಜೆ , ಪಿಂಚಣಿ, ಜ್ಯೇಷ್ಠತೆ
ಮತ್ತು ವೇತನ ನಿಗದಿಗೆ ಪರಿಗಣಿಸಲಾಗುತ್ತದೆಯೇ?
ಸಿಸಿಎ ನಿಯಮಾವಳಿಯ ನಿಯಮ 8 (ಡಜಿಜಿ) ರಡಿಯಲ್ಲಿ ನಿಮ್ಮನ್ನು
ಸೇವೆಯಿಂದ ತೆಗೆದುಹಾಕಲು ನಿಯಮ 11ರಡಿಯಲ್ಲಿನ
ಕಾರ್ಯವಿಧಾನವನ್ನು ಅನುಸರಿಸಬೇಕು. ಹೀಗೆ ತೆಗೆದು
ಹಾಕಲಾಗಿರುವುದರಿಂದ ನೀವು ಮತ್ತೆ ವಯೋಮಿತಿ
ಇದ್ದರೆ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗಬಹುದು. ಆದರೆ
ನಿಮ್ಮ ಹಿಂದಿನ ಸೇವೆಯನ್ನು ಮುಟ್ಟುಗೋಲು
ಹಾಕಿಕೊಳ್ಳುವುದರಿಂದ ನಿಮಗೆ ವೇತನ ನಿಗದಿ, ರಜೆ, ಮತ್ತು
ಜ್ಯೇಷ್ಠತೆಯಾಗಲಿ ಲಭ್ಯವಾಗುವುದಿಲ್ಲ.
***
19-3-16.
ಎಷ್ಟು ಸೇರಿಕೆ ಕಾಲ ಲಭ್ಯವಾಗುತ್ತದೆ?
ನಾನು ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕೆ
ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ
20.6.2015ರಂದು ನನ್ನನ್ನು ಕೆಲವೊಂದು ಆರೋಪಗಳ
ಹಿನ್ನೆಲೆಯಲ್ಲಿ ಅಮಾನತಿನಲ್ಲಿಡಲಾಯಿತು. ಅದಾಗಿ 6
ತಿಂಗಳಾದ ಬಳಿಕ ಮರು ನೇಮಕ ಮಾಡಿಕೊಳ್ಳಲು ಮನವಿ
ಮಾಡಿದಾಗ ವಿಚಾರಣೆ ಬಾಕಿ ಇಟ್ಟು ಬೆಂಗಳೂರಿನಿಂದ
ಮಂಗಳೂರಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಯಿತು.
ಅಲ್ಲದೆ ನನ್ನನ್ನು ದಿನಾಂಕ 5.3.2016ರಂದು ಅಪರಾಹ್ನ
ಕಾರ್ಯ ನಿಯುಕ್ತಿಗೊಳಿಸಲಾಯಿತು. ಅಮಾನತಿನಲ್ಲಿರುವ
ನನಗೆ ಎಷ್ಟು ಸೇರಿಕೆ ಕಾಲ ಲಭ್ಯವಾಗುತ್ತದೆ?
|ಶಿವಮೂರ್ತಿ ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 76 (9)
ರಂತೆ ಅಮಾನತಿನಲ್ಲಿದ್ದ ಸರ್ಕಾರಿ ನೌಕರರನ್ನು ಮರು ನೇಮಕ
ಮಾಡಿ ಅವನು ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು
ಬೇರೆ ಸ್ಥಳಕ್ಕೆ ನಿಯೋಜಿಸಿದಾಗ ಅವನು ನೇಮಕಾತಿ
ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 10 ದಿನಗಳ ಕಾಲ
ಸೇರಿಕೆ ಕಾಲವನ್ನು ಪಡೆಯುತ್ತಾನೆ.
***
20-3-16.
ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನೇರ
ನೇಮಕಾತಿ ಮೂಲಕ ಪ್ರೌಢಶಾಲಾ
ಮುಖ್ಯೋಪಾಧ್ಯಾಯರ ಹುದ್ದೆಗೆ
ನೇಮಕಗೊಂಡಿದ್ದೇನೆ. ಪ್ರಾಥಮಿಕ ಶಾಲಾ
ಶಿಕ್ಷಕಿಯಾಗಿದ್ದಾಗ ಪಡೆಯುತ್ತಿದ್ದ ಕುಟುಂಬ ಕಲ್ಯಾಣ
ವಿಶೇಷ ಭತ್ಯೆಯನ್ನು ಪಡೆಯಬಹುದೇ?
|ಶಿವಲೀಲಾ ಎನ್.ಕೆ. ಧಾರವಾಡ
ದಿನಾಂಕ 1.10.1985ರ ಸರ್ಕಾರಿ ಆದೇಶದಂತೆ ಸರ್ಕಾರಿ
ನೌಕರರು ಪಡೆಯುತ್ತಿರುವ ವಿಶೇಷ ಭತ್ಯೆಗಳು ಅವರು
ಮೇಲಿನ ಹುದ್ದೆಗೆ ನೇಮಕವಾದರೂ ಮುಂದುವರಿಯುತ್ತವೆ.
***
21-3-16.
ನಾನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ
ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ತಿಂಗಳು ನನ್ನ
ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗೆ
ಕೆಲವೊಂದು ದೂರಿನ ಹಿನ್ನೆಲೆಯಲ್ಲಿ ಪರಿವೀಕ್ಷಣೆಗೆ ತೆರಳಿದ್ದೆ.
ಆದರೆ ಶಾಲೆಯ ಶಿಕ್ಷಕರು ಮತ್ತು
ಮುಖ್ಯೋಪಾಧ್ಯಾಯರು ನನ್ನ ಭೇಟಿಯನ್ನು
ಆಕ್ಷೇಪಿಸಿದರು. ನಾನು ಈ ರೀತಿ ಭೇಟಿ ನೀಡುವುದು
ಸರಿಯಾದ ಕ್ರಮವಲ್ಲವೇ? ಇದು ನನ್ನ ಕರ್ತವ್ಯವಲ್ಲವೇ?
| ಶಿವಶಂಕರ್ ಕಡೂರು, ಚಿಕ್ಕಮಗಳೂರು
ದಿನಾಂಕ 3.3.2014ರ ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ
313, ಗ್ರಾಪಂಕ 2013ರಂತೆ ಪಂಚಾಯ್ತಿ ಅಭಿವೃದ್ಧಿ
ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ
ಸ್ಪಷ್ಟವಾಗಿ ಸರ್ಕಾರವು ಕಾರ್ಯ ಹಂಚಿಕೆ ಮಾಡಿದೆ. ಅಲ್ಲದೇ
ನೀವು ನಿಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗೆ
ಸಂಬಂಧಿಸಿ ಯಾವುದೇ ದೂರು ಬಂದರೆ ಕ್ಷೇತ್ರ
ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬೇಕೇ ಹೊರತು
ನೇರವಾಗಿ ಪರಿವೀಕ್ಷಣೆ ಮಾಡುವುದು ಸರಿಯಾದ
ಕ್ರಮವಲ್ಲ. ಇದು ನಿಮ್ಮ ಕರ್ತವ್ಯವೂ ಅಲ್ಲ.
***
22-3-16.
ನನಗೆ ಪರಿಚಿತರಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ
ಉಪನ್ಯಾಸಕಿ 30-6-2016 ರಂದು ವಯೋನಿವೃತ್ತಿ
ಹೊಂದಲಿದ್ದಾರೆ. ಅವರು ಈ ಅವಧಿಯೊಳಗೆ ಎಷ್ಟು
ಸಾಂರ್ದಭಿಕ ರಜೆ ತೆಗೆದುಕೊಳ್ಳಬಹುದು ?
ವಾಣಿ ಪಾಟೀಲ ಬೆಳಗಾವಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ ಬಿ,
ನಿಯಮ 2ರಲ್ಲಿ ಒಬ್ಬ ಸರ್ಕಾರಿ ನೌಕರನಿಗೆ ಕ್ಯಾಲೆಂಡರ್ ವರ್ಷದಲ್ಲಿ
15 ದಿನಗಳ ಸಾಂರ್ದಭಿಕ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಉಪನ್ಯಾಸಕಿ ಜೂನ್ 30ರೊಳಗೆ 15 ದಿನಗಳ ಸಾಂರ್ದಭಿಕ
ರಜೆ ಬಳಸಿಕೊಳ್ಳಬಹುದು.
***
23-3-16.
ನನ್ನ ತಮ್ಮ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರನಾಗಿ
ಕಾರ್ಯ ನಿರ್ವಹಿಸುತ್ತಿದ್ದು, ಪಾರ್ಶ್ವವಾಯುವಿಗೆ ತುತ್ತಾಗಿ
ಸರ್ಕಾರಿ ಸೇವೆಗೆ ಅನರ್ಹನಾಗಿರುತ್ತಾನೆ. ಆತನಿಗೆ ನಿವೃತ್ತಿ
ವೇತನ ಬರುತ್ತದೆಯೇ? ಅವನ ಮಕ್ಕಳಿಗೆ ಅನುಕಂಪದ
ಆಧಾರದ ಮೇಲೆ ಉದ್ಯೋಗ ಸಿಗುವುದೇ? ನಿವೃತ್ತಿ
ವೇತನ ಬೇಡ, ನೌಕರಿ ಬೇಕೆಂದು ಛಾಪಾ ಕಾಗದದಲ್ಲಿ
ಬರೆದುಕೊಡಬೇಕೇ
ಜಿ. ತಿಪ್ಪರಂಗಯ್ಯ ಕನ್ಮೆಡಿ, ತುಮಕೂರು
ನಿಮ್ಮ ತಮ್ಮ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ
ರೀತ್ಯ ವೈದ್ಯಕೀಯ ಆಧಾರದ ಮೇಲೆ ನಿವೃತ್ತಿ ಪಡೆದರೆ
ಪಿಂಚಣಿ ಸೌಲಭ್ಯ ದೊರಕುವುದಲ್ಲದೆ, 1996ರ ಕರ್ನಾಟಕ
ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ)
ನಿಯಮಾವಳಿಯಲ್ಲಿ ಅವರ ಮಕ್ಕಳಿಗೆ ನೌಕರಿಯೂ ದೊರಕುತ್ತದೆ.
ನಿವೃತ್ತಿ ವೇತನ ಬೇಡ, ನೌಕರಿ ಕೊಡಿ ಎಂದು ಛಾಪಾ
ಕಾಗದದಲ್ಲಿ ಬರೆದುಕೊಡುವ ಅಗತ್ಯವಿಲ್ಲ. ಅಂಥ ಯಾವ
ನಿಯಮವೂ ಇಲ್ಲ.
***
24-3-16.
ನಾನು 31.5.2010 ರಂದು ಸರಕಾರಿ ಪ್ರಾಥಮಿಕ ಶಾಲಾ
ಶಿಕ್ಷಕಿಯಾಗಿ ಸೇವೆಗೆ ಸೇರಿದ್ದು, ಪ್ರಸ್ತುತ ಪ್ರೌಢಶಾಲಾ ಸಹ
ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಸೇರಿರುತ್ತೇನೆ. ಪ್ರೌಢಶಾಲೆಗೆ
ಸಹಶಿಕ್ಷಕಿಯಾಗಿ ಸೇರಿದ ಮೇಲೆ ಪುನಃ ಪ್ರೊಬೇಷನರಿ
ಅವಧಿ ಮುಗಿಸಬೇಕೇ? ಪ್ರೌಢಶಾಲೆಯಿಂದ ಪದವಿಪೂರ್ವ
ಕಾಲೇಜಿಗೆ ಬಡ್ತಿ ಹೊಂದುವಾಗ ಪ್ರಾಥಮಿಕ ಶಾಲಾ
ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಸೇವಾ ಅವಧಿಯನ್ನು
ಪರಿಗಣಿಸುತ್ತಾರೆಯೇ?
| ಸುಮತಿ, ಎಂ.ಕೆ. ಪುತ್ತೂರು, ದ.ಕ. ಜಿಲ್ಲೆ
ಕರ್ನಾಟಕ ಸರ್ಕಾರಿ ಸೇವಾ (ಪ್ರೊಬೇಷನ್) ನಿಯಮಾವಳಿ
1977ರ ರೀತ್ಯಾ ನೀವು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ
ಸಲ್ಲಿಸಿದ ಸೇವೆಯು ಬೇರೆ ವೃಂದವಾಗಿದ್ದು ಪ್ರೌಢಶಾಲೆಗೆ
ಸಹ ಶಿಕ್ಷಕಿಯಾಗಿ ಸೇರಿದ ಮೇಲೆ ಪುನಃ 2 ವರ್ಷಗಳ ಕಾಲ
ಪ್ರೊಬೇಷನ್ ಅವಧಿಯನ್ನು ಪೂರೈಸಬೇಕಾಗುತ್ತದೆ.
ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಪದೋನ್ನತಿ
ಹೊಂದುವಾಗ ನೀವು ಪ್ರಾಥಮಿಕ ಶಾಲೆಯಲ್ಲಿ ನಿರ್ವಹಿಸಿದ
ಸೇವಾವಧಿಯನ್ನು ಜ್ಯೇಷ್ಠತೆಯ ದೃಷ್ಟಿಯಿಂದ
ಪರಿಗಣಿಸಲಾಗುವುದಿಲ್ಲ.
***
25-3-16.
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ
ನಿರ್ವಹಿಸುತ್ತಿದ್ದೇನೆ. ನನ್ನ ತಂದೆ ತಾಯಿಗೆ ನಾನು ಒಬ್ಬಳೇ
ಮಗಳಾಗಿದ್ದು, ಅವರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ
ನಾನು ಸರ್ಕಾರದಿಂದ ವೈದ್ಯಕೀಯ ಪರಿಹಾರ ಭತ್ಯೆ
ಪಡೆಯಬಹುದೇ?
ಮಹಾಲಕ್ಷ್ಮೀ ಶಿಡ್ಲಘಟ್ಟ ತುಮಕೂರು.
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಚಿಕಿತ್ಸೆ )
ನಿಯಮಗಳು 1963ರ ನಿಯಮ 2ರಲ್ಲಿ ಸರ್ಕಾರಿ ನೌಕರನ/ನೌಕರಳ
ತಂದೆ, ತಾಯಿ ಸಾಮಾನ್ಯವಾಗಿ ಅವರೊಂದಿಗೆ
ವಾಸಿಸುತ್ತಿದ್ದರೆ ಮತ್ತು ಅವರ ಮಾಸಿಕ ಆದಾಯವು
6,000ಕ್ಕಿಂತ ಹೆಚ್ಚು ಮೀರದಿದ್ದರೆ ಈ ನಿಯಮಾವಳಿ ರೀತ್ಯ
ವೈದ್ಯಕೀಯ ಚಿಕಿತ್ಸಾ ಪರಿಹಾರ ಭತ್ಯವನ್ನು
ಪಡೆಯಬಹುದು.
***
26-3-16.
ನಮ್ಮ ತಂದೆಯವರು ಸರ್ಕಾರಿ ನೌಕರಿಯಲ್ಲಿರುವಾಗಲೇ
15-1-2016 ರಂದು ನಿಧನ ಹೊಂದಿರುತ್ತಾರೆ. ನಮ್ಮ
ತಂದೆಯವರಿಗೆ ಗಂಡುಮಕ್ಕಳಿಲ್ಲ, ವಿವಾಹಿತೆಯಾದ
ನಾನೊಬ್ಬಳೇ ಹೆಣ್ಣು ಮಗಳು. ನಾನು ಅನುಕಂಪದ
ಆಧಾರದ ಮೇಲೆ ನೌಕರಿ ಪಡೆಯಲು ಸಾಧ್ಯವಿದೆಯೇ?
| ಗಿರಿಜಾ ಎಂ.ಎಸ್. ಚಿಕ್ಕಮಗಳೂರು
ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ
ನೇಮಕಾತಿ) ನಿಯಮಗಳು 1996ರ ನಿಯಮ 3(ಸಿ)ರಡಿಯಲ್ಲಿ
ಅವಿವಾಹಿತ ಮಗಳು ಮಾತ್ರ ಅನುಕಂಪದ ಮೇಲೆ ಸರ್ಕಾರಿ ನೌಕರಿ
ಪಡೆಯಲು ಅರ್ಹಳಾಗುತ್ತಾಳೆ. ನೀವು
ವಿವಾಹಿತರಾಗಿರುವುದರಿಂದ ನಿಮಗೆ ಈ ಅನುಕಂಪದ
ನೇಮಕಾತಿ ಲಭ್ಯವಾಗುವುದಿಲ್ಲ.
***
27-3-16.
ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಯಸಿದರೆ, ವಯೋಮಿತಿಯಲ್ಲಿ
ಎಷ್ಟು ವರ್ಷಗಳ ಕಾಲ ಸಡಿಲಿಕೆ ನೀಡಲಾಗುತ್ತದೆ?
ನಾನು ಪೊಲೀಸ್ ಇಲಾಖೆಯಲ್ಲಿ 13 ವರ್ಷಗಳಿಂದ ಸೇವೆ
ಸಲ್ಲಿಸುತ್ತಿದ್ದು ನನಗೀಗ 40 ವರ್ಷವಾಗಿರುತ್ತದೆ. ನಾನೀಗ
ಬೇರೆ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಯಸಿದರೆ,
ವಯೋಮಿತಿಯಲ್ಲಿ ಎಷ್ಟು ವರ್ಷಗಳ ಕಾಲ ಸಡಿಲಿಕೆ
ನೀಡಲಾಗುತ್ತದೆ?
| ಬೈರೇಗೌಡ ಬೆಂಗಳೂರು
ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ)
ನಿಯಮಗಳು 1977ರ ನಿಯಮ 6 (3) (ಡಿ) ರಡಿಯಲ್ಲಿ ಸರ್ಕಾರಿ
ಸೇವೆ ಸಲ್ಲಿಸಿದ ಅಭ್ಯರ್ಥಿಯು ಬೇರೊಂದು ಇಲಾಖೆಗೆ
ಅಥವಾ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಅವನು ಎಷ್ಟು
ವರ್ಷ ಸೇವೆ ಸಲ್ಲಿಸಿರುತ್ತಾನೋ ಅಷ್ಟು ವರ್ಷ ಅಥವಾ
ಗರಿಷ್ಠ 10 ವರ್ಷಗಳವರೆಗೆ ವಯೋಮಿತಿಯ ಗರಿಷ್ಠ ಮಿತಿಯಲ್ಲಿ
ಸಡಿಲಿಸಲಾಗುವುದು. ಆದ ಕಾರಣ 40
ವರ್ಷವಾಗಿರುವುದರಿಂದ ನೀವು ಬೇರೊಂದು ಹುದ್ದೆಗೆ
ಇಲಾಖೆಯ ಅನುಮತಿ ಪಡೆದು ಅರ್ಜಿಯನ್ನು ಸಲ್ಲಿಸಬಹುದು.
***
28-3-16.
ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ
ಪರಿಹಾರ ಸೂಚಿಸಿ
ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ
ಶಿಕ್ಷಕನಾಗಿ ಬಡ್ತಿ ಪಡೆದು ಕಾರಣಾಂತರದಿಂದ ಹಿಂಬಡ್ತಿ
ಪಡೆದಿರುತ್ತೇನೆ. ಈಗ ನಾನು 28 ವರ್ಷಗಳ ಕಾಲ ಸೇವೆ
ಸಲ್ಲಿಸಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ
ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ
ಸೂಚಿಸಿ.
|ಜಿ. ಅಶ್ವತ್ಥಪ್ಪ ಬಾಗೇಪಲ್ಲಿ
ದಿನಾಂಕ 14.6.2012ರ ಸರ್ಕಾರಿ ಆದೇಶದ (ಸಂಖ್ಯೆ ಎಫ್​ಡಿ
12, ಎಸ್​ಆರ್​ಪಿ 2012 (ಐಐಐ) ಪ್ರಕಾರ ಸ್ವ ಇಚ್ಛೆಯಿಂದ ತಮ್ಮ
ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಈ 25
ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು
ನೀಡಬಾರದೆಂದು ಸೂಚಿಸಲಾಗಿದೆ. ಅಲ್ಲದೇ ನೀವೇ
ಸ್ವತಃ ಪದೋನ್ನತಿಯನ್ನು ಪಡೆದು ತದನಂತರ
ಸ್ವಇಚ್ಛೆಯಿಂದ ಹಿಂಬಡ್ತಿ ಹೊಂದಿರುವುದರಿಂದ ನಿಮಗೆ ಈ
25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದಿಲ್ಲ.
***
29-3-16.
ವೇತನ ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ
ಪರಿಹಾರ ಸೂಚಿಸಿ
ನಾನು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ
ಶಿಕ್ಷಕನಾಗಿ ಬಡ್ತಿ ಪಡೆದು ಕಾರಣಾಂತರದಿಂದ ಹಿಂಬಡ್ತಿ
ಪಡೆದಿರುತ್ತೇನೆ. ಈಗ ನಾನು 28 ವರ್ಷಗಳ ಕಾಲ ಸೇವೆ
ಸಲ್ಲಿಸಿದ್ದು 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ
ಬಡ್ತಿಗೆ ಅರ್ಹನೇ? ಅಥವಾ ಇಲ್ಲವೇ? ಸೂಕ್ತ ಪರಿಹಾರ
ಸೂಚಿಸಿ.
|ಜಿ. ಅಶ್ವತ್ಥಪ್ಪ ಬಾಗೇಪಲ್ಲಿ
ದಿನಾಂಕ 14.6.2012ರ ಸರ್ಕಾರಿ ಆದೇಶದ (ಸಂಖ್ಯೆ ಎಫ್​ಡಿ
12, ಎಸ್​ಆರ್​ಪಿ 2012 (ಐಐಐ) ಪ್ರಕಾರ ಸ್ವ ಇಚ್ಛೆಯಿಂದ ತಮ್ಮ
ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ ಈ 25
ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಯನ್ನು
ನೀಡಬಾರದೆಂದು ಸೂಚಿಸಲಾಗಿದೆ. ಅಲ್ಲದೇ ನೀವೇ
ಸ್ವತಃ ಪದೋನ್ನತಿಯನ್ನು ಪಡೆದು ತದನಂತರ
ಸ್ವಇಚ್ಛೆಯಿಂದ ಹಿಂಬಡ್ತಿ ಹೊಂದಿರುವುದರಿಂದ ನಿಮಗೆ ಈ
25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದಿಲ್ಲ.
***
30-3-16.
ವಾಹನಭತ್ಯೆ ಯಾವ ನಿಯಮದಡಿಯಲ್ಲಿ
ನೀಡಬೇಕಾಗಿರುತ್ತದೆ ?
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 12, ಎಸ್​ಆರ್​ಪಿ 2012,
ದಿನಾಂಕ 14.6.2012ರನ್ವಯ ಡಿ ದರ್ಜೆ ನೌಕರರಿಗೆ ಮಾಸಿಕವಾಗಿ
ರೂ. 200 ವಾಹನಭತ್ಯೆ ನೀಡುತ್ತದೆ. ಕಚೇರಿಯ ಎಲ್ಲಾ ಡಿ
ದರ್ಜೆ ನೌಕರರು ವಾಹನಭತ್ಯೆ ಮಂಜೂರಾತಿಗಾಗಿ ಅರ್ಜಿ
ಸಲ್ಲಿಸಿದ್ದಾರೆ. ವಾಹನಭತ್ಯೆ ಯಾವ ನಿಯಮದಡಿಯಲ್ಲಿ
ನೀಡಬೇಕಾಗಿರುತ್ತದೆ ಮತ್ತು ಷರತ್ತುಗಳೇನು?
ದಯವಿಟ್ಟು ಮಾಹಿತಿ ನೀಡಿ.
| ಎಚ್.ಎಂ. ಮಂಜುನಾಥ್ ತಿಪಟೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 496ರಂತೆ
ಡಿ ದರ್ಜೆ ನೌಕರನು ಕಚೇರಿಯ ಹೊರಗೆ
ಕಾರ್ಯನಿರ್ವಹಿಸಬೇಕಾಗಿ ಬಂದು ಅವನು 16 ಕಿ.ಮೀ.ಗಿಂತ
ದೂರ ಕ್ರಮಿಸಬೇಕಾದರೆ ಈ ವಾಹನ ಭತ್ಯೆ ನೀಡಬಹುದು.
(ಸೈಕಲ್ ಆರ್ಡರ್ಲಿ) ನಿಯಮ 497ರಡಿ ಈ ವಾಹನ ಭತ್ಯೆ
ಮಂಜೂರು ಮಾಡುವ ಷರತ್ತುಗಳನ್ನು ನೀಡಿದ್ದು
ಅದರಂತೆ ಕಚೇರಿಯ ಎಲ್ಲ ಡಿ ದರ್ಜೆ ನೌಕರರಿಗೂ ಈ
ಭತ್ಯೆಯನ್ನು ನೀಡುವಂತಿಲ್ಲ.
***
31-3-16.
ನನ್ನ ಗಂಡ ದಿನಾಂಕ 27.6.2012ರಂದು ಗ್ರೇಡ್-2
ಪಂಚಾಯ್ತಿ ಕಾರ್ಯದರ್ಶಿ ವೃಂದಕ್ಕೆ ನೇಮಕಗೊಂಡಿದ್ದು,
ದಿನಾಂಕ 21.12.2014ರಂದು
ಮೃತಪಟ್ಟಿರುತ್ತಾರೆ.ಪ್ರೊಬೇಷನರಿ ಅವಧಿ
ಪೂರ್ಣಗೊಳ್ಳುವ ಮೊದಲೇ ಮೃತರಾದ ಕಾರಣ
ಅವರನ್ನು ಸರ್ಕಾರಿ ನೌಕರರೆಂದು ಪರಿಗಣೆಸಲು
ಅವಕಾಶವಿಲ್ಲವೆಂದು ರಾಯಚೂರು ಜಿಲ್ಲಾ ಪಂಚಾಯ್ತಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನನಗೆ ಅನುಕಂಪದ
ಮೇರೆಗೆ ಉದ್ಯೋಗ ಕೊಡಲು ತಿರಸ್ಕರಿಸಿದ್ದಾರೆ.
ದಯವಿಟ್ಟು ಪರಿಹಾರ ಸೂಚಿಸಿ.
|ಕಮಲಮ್ಮ ರಾಯಚೂರು.
ಒಬ್ಬ ವ್ಯಕ್ತಿ ಸರ್ಕಾರಿ ಸೇವೆಗೆ ಸೇರಿ 1 ದಿನ ಕರ್ತವ್ಯ
ನಿರ್ವಹಿಸಿದರೂ ಸಹ ಅವನು ಸರ್ಕಾರಿ ನೌಕರನೇ. ಹಾಗಾಗಿ
ರಾಯಚೂರು ಜಿಲ್ಲಾ ಪಂಚಾಯ್ತಿ ಸಿಇಒ ನಿಮಗೆ ಅನುಕಂಪದ
ಹುದ್ದೆ ನಿರಾಕರಿಸಿರುವುದು ಕಾನೂನು ಬಾಹಿರವಾಗಿದೆ.ಆದ
ಕಾರಣ ನೀವು ಮತ್ತೊಮ್ಮೆ ಮನವಿ ಸಲ್ಲಿಸಿ 1996ರ
ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಾವಳಿ
ರೀತ್ಯ ನೇಮಕಗೂಳ್ಳಲು ಅವಕಾಶವಿದೆ.

No comments:

Post a Comment