Sunday, 11 September 2016

Sarkari corner

Basayya Jamalur Kalabhavi
ಏಪ್ರಿಲ್ 2016 ರ ಸರ್ಕಾರಿ ಕಾರ್ನರ್
ಪ್ರಶ್ನೆಗಳು.
April 2, 2016 ಸರ್ಕಾರಿ ಕಾರ್ನರ್
Vijayavani (ವಿಜಯವಾಣಿ) Kannada No 1 Daily
BY ವಿಜಯವಾಣಿ ನ್ಯೂಸ್ · APR 1, 2016
ರಜೆ, ಭತ್ಯೆ, ವೇತನ ತಾರತಮ್ಯ, ದೈಹಿಕ, ಮಾನಸಿಕ ಕಿರುಕುಳ
ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ
ಕಾನೂನು ಪರಿಹಾರ ಸೂಚಿಸುವ ದೈನಂದಿನ ಅಂಕಣ
ಸರ್ಕಾರಿ ಕಾರ್ನರ್. ಸೇವಾ ಕಾನೂನು ತಜ್ಞ ಲ.
ರಾಘವೇಂದ್ರ ಅವರು ಸರ್ಕಾರಿ ಉದ್ಯೋಗಸ್ಥರ
ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ.
***
ದಿನದ ಪ್ರಶ್ನೆ ( 1-4-16)
ನನ್ನ ಗಂಡ ತನ್ನ ತಂದೆಯ ನಿಧನದ ನಂತರ 2003 ರಲ್ಲಿ
ಅನುಕಂಪದ ಮೇರೆಗೆ ಕೆಲಸಕ್ಕೆ ಸೇರಿಕೊಂಡಿದ್ದರು. 2016ರ
ಜನವರಿಯಲ್ಲಿ ನನ್ನ ಗಂಡ ಆಕಸ್ಮಿಕವಾಗಿ ನಿಧನ
ಹೊಂದಿದ್ದಾರೆ. ನನ್ನ ಗಂಡನ ನಂತರ ನಾನು ಅನುಕಂಪದ
ಆಧಾರದ ಮೇಲೆ ಕೆಲಸವನ್ನು ಪಡೆಯಲು ಅರ್ಹಳಾ? ಮಾಹಿತಿ
ನೀಡಿ.
|ರಂಗಮ್ಮ ರಾಯಚೂರು
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ) ನಿಯಮಗಳು 1996 ರ ನಿಯಮ 3ರ ರೀತ್ಯಾ
ನೀವು ಕೆಲಸ ಪಡೆಯಲು ಆರ್ಹರು. ನಿಮ್ಮ ವಿದ್ಯಾರ್ಹತೆ
ಮೇಲೆ ನಿಮಗೆ ಸಿ ಅಥವಾ ಡಿ ಗುಂಪಿನ ಹುದ್ದೆ ಲಭಿಸುತ್ತದೆ.
(ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ
ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕ
ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ
94812 44434ನ್ನು ಸಂರ್ಪಸಬಹುದು.)
***
ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ
ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ:
ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ
ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ,
ಬೆಂಗಳೂರು 560018.
ಇ-ಮೇಲ್: sarakaricorner@gmail.com
ದೂರವಾಣಿ: 8884432666, ಫ್ಯಾಕ್ಸ್: 080-26257464.
***
2-4-16.
ನಾನು 2011ರಿಂದ ಎಸ್​ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದು
ಈಗ ಕೆಪಿಎಸ್​ಸಿಯಲ್ಲಿ ಕರೆದಿರುವ ಸಿ ವೃಂದದ ಹುದ್ದೆಗೆ
ಇಲಾಖೆಯಿಂದ ಎನ್​ಒಸಿ ಪಡೆಯುವುದು ಕಡ್ಡಾಯವೇ? ಬೇರೆ
ಹುದ್ದೆಗೆ ಆಯ್ಕೆಯಾದರೆ ಈಗಿನ ಹುದ್ದೆಗೆ ರಾಜೀನಾಮೆ ಸಲ್ಲಿಸಿ
ಆ ಹುದ್ದೆಗೆ ಹೋಗಬಹುದೇ? ಆನ್​ಲೈನ್ ಅರ್ಜಿಯಲ್ಲಿ
ಸರ್ಕಾರಿ ನೌಕರರೇ ಇರುವ ಕಾಲಂನಲ್ಲಿ ಇಲ್ಲ ಎಂದು
ನಮೂದಿಸಬಹುದೇ?
|ವಿಶ್ವನಾಥ ಭಟ್ಟ ಹಾವೇರಿ.
ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ)
ನಿಯಮಗಳು 1977ರ ನಿಯಮ 11 ರೀತ್ಯ ಸರ್ಕಾರಿ ನೌಕರರು
ಪೂರ್ವಾನುಮತಿ ಪಡೆದೇ ಬೇರೆ ಇಲಾಖೆಗೆ ಅರ್ಜಿ
ಸಲ್ಲಿಸಬೇಕು. ಈ ರೀತಿ ನಾನು ಸರ್ಕಾರಿ ನೌಕರನಲ್ಲ ಎಂದು
ಅರ್ಜಿಯಲ್ಲಿ ನಮೂದಿಸಿ ಆಯ್ಕೆಯಾದರೆ ಅಂತಹ ಅಭ್ಯರ್ಥಿಗಳು
ಭವಿಷ್ಯದಲ್ಲಿ ತೊಂದರೆ ಅನುಭವಿಸುವಂತಾಗುತ್ತದೆ.
ಸರ್ಕಾರಿ ನೌಕರರಿಗೆ ಅನುಮತಿ ನೀಡುವುದು ಪ್ರಾಧಿಕಾರದ
ನಿರ್ಧಾರವಾಗಿರುತ್ತದೆ.
***
3-4-16.
ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ವಿಶೇಷ ಭತ್ಯೆಗೆ ಅರ್ಹಳೇ?
ನಾನು ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕೆಲಸ
ಮಾಡುತ್ತಿದ್ದು, 2006ರಲ್ಲಿ ನನಗೆ ಸಂತಾನ ಶಕ್ತಿ ಹರಣ
ಚಿಕಿತ್ಸೆಯಾಗಿದೆ. 2007ರ ಏಪ್ರಿಲ್​ನಲ್ಲಿ ಸರ್ಕಾರಿ ಕೆಲಸ ಸಿಕ್ಕಿದೆ.
ನನಗೀಗ 39 ವರ್ಷವಾಗಿದ್ದು ನಾನು ಸಂತಾನ ಶಕ್ತಿ ಹರಣ
ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶೇಷ ಭತ್ಯೆ ಪಡೆಯಲು
ಅರ್ಹಳೇ?
|ಮಂಜುಳಾ ಹಾಸನ
ನೀವು ಸರ್ಕಾರಿ ಸೇವೆಗೆ ಸೇರುವ ಮೊದಲೇ ಸಂತಾನ
ಶಕ್ತಿ ಹರಣ ಚಿಕಿತ್ಸೆ ಮಾಡಿಕೊಂಡಿರುವುದರಿಂದ 1985ರ
ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ 27 ಎಸ್​ಆರ್​ಎಸ್ 85ರಂತೆ
ನೀವು ವಿಶೇಷ ಭತ್ಯೆ ಪಡೆಯಲು ಅರ್ಹರಾಗಿರುವುದಿಲ್ಲ.
***
4-4-16.
ಮಗುವಿಗೆ ಎಷ್ಟು ತಿಂಗಳಾಗುವವರೆಗೆ ಈ ಅನುಕೂಲ
ಪಡೆಯಬಹುದು?
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು ನನಗೆ 7 ತಿಂಗಳ
ಮಗು ಇದೆ. ಮಗುವಿಗೆ ದಿನದ ಅವಧಿಯಲ್ಲಿ ಮನೆಗೆ ಹೋಗಿ
ಹಾಲುಣಿಸಿ ಬರಲು ಅವಕಾಶವಿದೆಯೇ? ಇದ್ದರೆ ಯಾವ
ಅವಧಿಯಲ್ಲಿ ಹೋಗಿ ಬರಬಹುದು? ಹಾಗೆಯೇ ಮಗುವಿಗೆ
ಎಷ್ಟು ತಿಂಗಳಾಗುವವರೆಗೆ ಈ ಅನುಕೂಲ ಪಡೆಯಬಹುದು?
| ನಿರ್ಮಲ ಗದಗ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ಮಹಿಳಾ
ಸರ್ಕಾರಿ ನೌಕರರು ತಮ್ಮ ಮಗುವಿಗೆ ಹಾಲುಣಿಸಿ ಬರಲು
ಅವಕಾಶವಿಲ್ಲ. ಆದರೆ ನಿಮ್ಮ ಮೇಲಾಧಿಕಾರಿಗಳ ಅನುಕಂಪದ
ಆಧಾರದ ಮೇಲೆ ಮಗುವಿನ ಬೆಳವಣಿಗೆ ದೃಷ್ಟಿಯಿಂದ ನೀವು
ಪೂರ್ವಾನುಮತಿ ಪಡೆದು ಹೋಗಿಬರಬಹುದು.
***
5-4-16.
ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ?
ನಾನು ಅನುಕಂಪದ ಆಧಾರದ ಮೇಲೆ 2000ದಿಂದ 2016ರವರೆಗೆ
15 ವರ್ಷ ಸೇವೆ ಸಲ್ಲಿಸಿದ್ದೇನೆ. 2015ರಲ್ಲಿ ಎಸ್​ಎಸ್​ಎಲ್​ಸಿ
ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ನನಗೆ ಸಿ ಗುಂಪಿನ
ಹುದ್ದೆ ಲಭ್ಯವಾಗುತ್ತದೆಯೇ ? ದಯವಿಟ್ಟು ತಿಳಿಸಿ.
|ಶಂಕರ ಹುಬ್ಬಳ್ಳಿ
ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ)
ನಿಯಮಗಳು 1978ರ ನಿಯಮ 4 ರಂತೆ ದ್ವಿತೀಯ ದರ್ಜೆ
ಸಹಾಯಕರ ಹುದ್ದೆಗೆ ನೇಮಕಗೊಳ್ಳಲು ಪಿಯುಸಿ ಶಿಕ್ಷಣ
ಕಡ್ಡಾಯಗೊಳಿಸಲಾಗಿದೆ. ಆದ ಕಾರಣ ನೀವು ಪದವಿಪೂರ್ವ
ಶಿಕ್ಷಣ ಪಡೆದ ಮೇಲೆ ಸಿ ವರ್ಗದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
***
6-4-16.
***
7-4-16.
ಸಿ ಗುಂಪಿನ ಹುದ್ದೆ ಲಭ್ಯವಾಗುತ್ತದೆಯೇ?
ನಾನು ಅನುಕಂಪದ ಆಧಾರದ ಮೇಲೆ 2000ದಿಂದ 2016ರವರೆಗೆ
15 ವರ್ಷ ಸೇವೆ ಸಲ್ಲಿಸಿದ್ದೇನೆ. 2015ರಲ್ಲಿ ಎಸ್​ಎಸ್​ಎಲ್​ಸಿ
ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ನನಗೆ ಸಿ ಗುಂಪಿನ
ಹುದ್ದೆ ಲಭ್ಯವಾಗುತ್ತದೆಯೇ ? ದಯವಿಟ್ಟು ತಿಳಿಸಿ.
|ಶಂಕರ ಹುಬ್ಬಳ್ಳಿ
ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ)
ನಿಯಮಗಳು 1978ರ ನಿಯಮ 4 ರಂತೆ ದ್ವಿತೀಯ ದರ್ಜೆ
ಸಹಾಯಕರ ಹುದ್ದೆಗೆ ನೇಮಕಗೊಳ್ಳಲು ಪಿಯುಸಿ ಶಿಕ್ಷಣ
ಕಡ್ಡಾಯಗೊಳಿಸಲಾಗಿದೆ. ಆದ ಕಾರಣ ನೀವು ಪದವಿಪೂರ್ವ
ಶಿಕ್ಷಣ ಪಡೆದ ಮೇಲೆ ಸಿ ವರ್ಗದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
***
8-4-16.
ನನ್ನ ಗೆಳೆಯರೊಬ್ಬರು ಅನುದಾನಿತ ಪ್ರೌಢಶಾಲೆಯಲ್ಲಿ
1992ರಿಂದ ಸೇವೆ ಸಲ್ಲಿಸುತ್ತಿದ್ದು ಆ ಸಂಸ್ಥೆಯು
2014ರಲ್ಲಿ ಅನುದಾನಕ್ಕೊಳಪಟ್ಟಿದೆ. 2016ರ ಜನವರಿಯಲ್ಲಿ
ಆಕಸ್ಮಿಕವಾಗಿ ಅವರು ನಿಧನ ಹೊಂದಿದ್ದಾರೆ. ಇವರ
ಕುಟುಂಬ ವರ್ಗದವರಿಗೆ ಅನುಕಂಪದ ಆಧಾರದ ಮೇಲೆ
ಉದ್ಯೋಗ ದೊರಕುತ್ತದೆಯೇ ?
|ಸುರೇಂದ್ರ ಪಿರಿಯಪಟ್ಟಣ
ಸೇವೆಯಲ್ಲಿರುವಾಗಲೇ ಅನುದಾನಿತ ಶಿಕ್ಷಣ
ಸಂಸ್ಥೆಯಲ್ಲಿನ ನೌಕರರು ನಿಧನ ಹೊಂದಿದರೆ ಅವರಿಗೆ
ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕಾದುದು
ಆಯಾ ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿರುತ್ತದೆ.
ಹೀಗಿರುವಲ್ಲಿ ಈ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ
ಉದ್ಯೋಗ ಪಡೆಯಲು ನಿಧನರಾದ ನೌಕರರ ಕುಟುಂಬ
ವರ್ಗದವರು ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
***
9-4-16.
***
10-4-16.
ಸೇವಾ ಅವಧಿಯನ್ನು ಸೇರಿಸಲು ಏನು ಮಾಡಬೇಕು?
ನಾನು 35ನೇ ವರ್ಷದಲ್ಲಿ ಸರ್ಕಾರಿ ಸೇವೆಗೆ ಸೇರಿದ್ದು
ಕೆಸಿಎಸ್​ಆರ್ 247 ಎ ಪ್ರಕಾರ ಹೆಚ್ಚುವರಿ 2 ವರ್ಷಗಳ ನಿವೃತ್ತಿ
ಸೌಲಭ್ಯಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ. ಆದರೆ ನನಗೆ
ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ಈ ಸೇವಾ
ಅವಧಿಯನ್ನು ಸೇರಿಸಲು ಏನು ಮಾಡಬೇಕು?
|ಎಸ್.ಆರ್. ವೆಂಕಮ್ಮ ಹೊಯ್ಸಳ ನಗರ, ಹಾಸನ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 247ಎ
ರೀತ್ಯ ನೇಮಕಾತಿ ಪ್ರಾಧಿಕಾರದ ಮೂಲಕ ಆಯ್ಕೆಯಾಗಿ 30
ವರ್ಷಗಳ ನಂತರ ಸೇವೆಗೆ ಸೇರಿದರೆ, ಅಂಥವರಿಗೆ 2 ವರ್ಷಗಳ
ಸೇವಾ ಅವಧಿಯನ್ನು ಸೇರಿಸಲು ಸೂಚಿಸಲಾಗಿದೆ. ಆದ
ಕಾರಣ ನೀವು ಸರ್ಕಾರಕ್ಕೆ ಈ ಬಗ್ಗೆ ನಿಮ್ಮ ಇಲಾಖೆಯ
ಮುಖಾಂತರ ಅಥವಾ ನೇರವಾಗಿ ಮನವಿ ಯನ್ನು
ಸಲ್ಲಿಸಬಹುದು.
***
11-4-16.
ಸ್ವಯಂ ನಿವೃತ್ತಿ ಪಡೆದರೆ ನಿವೃತ್ತಿ ವೇತನ
ದೊರೆಯುತ್ತವೆಯೆ?
ನಾನು 2003ರಲ್ಲಿ ಶಿಕ್ಷಕಿಯಾಗಿ ಸೇರಿದ್ದು, 2014ರ ಮೇ
ತಿಂಗಳಿನಲ್ಲಿ ಮೆದುಳಿನ ಆಘಾತದಿಂದ ಕೈ ಕಾಲು ಸ್ವಾಧೀನ
ಇಲ್ಲವಾಗಿದೆ. ಇಲ್ಲಿಯವರೆಗೂ ನಾನು ವೇತನ ರಹಿತ ರಜೆಯ
ಮೇಲಿದ್ದು ನಾನು ಸ್ವಯಂ ನಿವೃತ್ತಿ ಪಡೆದರೆ ನನಗೆ ನಿವೃತ್ತಿ
ವೇತನ, ಉಪದಾನ, ಇತರ ಸೌಲಭ್ಯಗಳು
ದೊರೆಯುತ್ತವೆಯೋ ಇಲ್ಲವೋ ದಯವಿಟ್ಟು ತಿಳಿಸಿ.
|ಅರುಣಾ ಮಾಧವರಾವ್ ಟೊಣಪಿ ವಿಜಯಪುರ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ನಿಯಮ
222ರಂತೆ ಒಬ್ಬ ಸರ್ಕಾರಿ ನೌಕರನು ನಿವೃತ್ತಿ ವೇತನ ಪಡೆಯಲು
ಕನಿಷ್ಠ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
ಹೀಗಿರುವಲ್ಲಿ ನೀವು ಕೈಕಾಲು ಸ್ವಾಧೀನ ಇಲ್ಲದ
ಪ್ರಯುಕ್ತ ವೈದ್ಯಕೀಯ ಆಧಾರದ ಮೇಲೆ ನಿಯಮ 273ರಂತೆ
ಅಶಕ್ತತಾ ನಿವೃತ್ತಿ ವೇತನ ಪಡೆಯಬಹುದು. ಆಗ ನಿಮಗೆ
ಪಿಂಚಣಿ ಸೌಲಭ್ಯಗಳು ಲಭ್ಯವಾಗುತ್ತವೆ. ಆದರೆ ನೀವು
ಅಶಕ್ತರೆಂದು ಜಿಲ್ಲಾ ಸರ್ಜನ್​ರಿಂದ ವೈದ್ಯಕೀಯ ಪ್ರಮಾಣ
ಪತ್ರವನ್ನು ಸಲ್ಲಿಸಬೇಕು.
***
12-4-16.
ಎಸ್​ಡಿಎ ಹುದ್ದೆಗೆ ಅರ್ಹಳಲ್ಲವೇ?
ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಪತಿ
ಅನಾರೋಗ್ಯದಿಂದ 1979ರಲ್ಲಿ ನಿಧನ ಹೊಂದಿದ್ದಾರೆ.
ಆದರೆ ನಾನು ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದಾಗ ನಿಮ್ಮ ಪತಿ
ಬೆರಳಚ್ಚುಗಾರರಾಗಿದ್ದರೆಂದು ನಿಮಗೆ ಹುದ್ದೆ ನೀಡಲು
ಆಗುವುದಿಲ್ಲವೆಂದು ತಿರಸ್ಕರಿಸಿದ್ದಾರೆ. ನಾನು ಎಸ್​ಡಿಎ
ಹುದ್ದೆಗೆ ಅರ್ಹಳಲ್ಲವೇ?
|ಕಮಲಾ ಚಂದಪ್ಪ ಡೋಳೂರ ವಿಜಯಪುರ
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿ ರೀತ್ಯ ಸರ್ಕಾರಿ
ನೌಕರರು ಯಾವುದೇ ಹುದ್ದೆಯಲ್ಲಿ ಇದ್ದು ನಿಧನ
ಹೊಂದಿದರೂ ಅವರ ಕುಟುಂಬ ವರ್ಗದವರಿಗೆ ಅನುಕಂಪದ
ಆಧಾರದ ಮೇಲೆ ಅರ್ಹತೆಯನ್ನು ಪರಿಗಣಿಸಿ ಉದ್ಯೋಗ
ನೀಡಬೇಕೆಂದು ಸೂಚಿಸಲಾಗಿದೆ. ಹೀಗಿರುವಲ್ಲಿ ನೀವು
ತಿಳಿಸಿದ ಅನುದಾನಿತ ಸಂಸ್ಥೆ ನಿಮ್ಮ ಪತಿ
ಬೆರಳಚ್ಚುಗಾರರಾಗಿದ್ದರೆಂದು ಹೇಳಿ ನಿಮಗೆ ಉದ್ಯೋಗ
ನೀಡಲು ಸಾಧ್ಯವಿಲ್ಲವೆಂದು ತಿಳಿಸಿರುವುದು
ನಿಯಮಬಾಹಿರವಾಗಿರುತ್ತದೆ. ನಿಮ್ಮನ್ನು ಎಸ್​ಡಿಎ ಹುದ್ದೆಗೆ
ಆಗಲೇ ನೇಮಕ ಮಾಡಿಕೊಳ್ಳಬಹುದಾಗಿತ್ತು. ನೀವು
ನ್ಯಾಯಾಲಯದ ಮೊರೆ ಹೋಗಬಹುದು.
***
13-4-16.
ಮನೆ ಕಟ್ಟಲು ಕಚೇರಿಯ ಅನುಮತಿ ಪಡೆಯಬೇಕೇ?
ನನ್ನ ಮಾವನವರು ನನ್ನ ಹೆಂಡತಿ ಹೆಸರಿಗೆ ನಿವೇಶನ ಖರೀದಿ
ಮಾಡಿ ಕೊಟ್ಟಿರುತ್ತಾರೆ. ನಾನು ಈಗ ಬ್ಯಾಂಕಿನಿಂದ
ಸಾಲ ಪಡೆದು ನಿವೇಶನದಲ್ಲಿ ಮನೆ ಕಟ್ಟಿಸಲು
ತೀರ್ವನಿಸಿರುತ್ತೇನೆ. ಮನೆ ಕಟ್ಟಲು ಕಚೇರಿಯ ಅನುಮತಿ
ಪಡೆಯಬೇಕೇ?
|ಹೆಚ್.ಆರ್. ಕುಮಾರಸ್ವಾಮಿ ಭೂದಾಖಲೆಗಳ ಸಹಕಾರ
ನಿರ್ದೇಶಕ, ಬೆಂಗಳೂರು
ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮ 21 (4)ರ ರೀತ್ಯ
ಸರ್ಕಾರಿ ನೌಕರನು ಸರ್ಕಾರದ ಪೂರ್ವ ಮಂಜೂರಾತಿ ಪಡೆಯದ
ಹೊರತು, ತಾನೇ ಆಗಲಿ ಅಥವಾ ತನ್ನ ಕುಟುಂಬದ
ಸದಸ್ಯರ ಪರವಾಗಿ ಬ್ಯಾಂಕ್ ವ್ಯವಹಾರವನ್ನು
ನಡೆಸತಕ್ಕದ್ದಲ್ಲ. ಅಂದರೆ ಸಾಲವನ್ನು ಪಡೆಯತಕ್ಕದ್ದಲ್ಲ.
ಅಲ್ಲದೆ ನೀವು ನಿಮ್ಮ ಪತ್ನಿಗೆ ನಿಮ್ಮ ಮಾವನವರು ನೀಡಿದ
ನಿವೇಶನದ ಮಾಹಿತಿಯನ್ನು ಆಸ್ತಿ ಮತ್ತು ಋಣ ಪಟ್ಟಿಯಲ್ಲಿ
ಆಯಾ ವರ್ಷವೇ ತಿಳಿಸಿರತಕ್ಕದ್ದು.
***
14-4-16.
ಕಾನೂನಿನಲ್ಲಿ ಪರಿಹಾರ ಇದೆಯೇ?
ನಾನು 1984ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದು 88ರಲ್ಲಿ
ಕುಟುಂಬಯೋಜನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು
ಅಂದಿನ ವಿಶೇಷ ವೇತನ ರೂ. 25 ಪಡೆದಿದ್ದೇನೆ. ಈಗ
ಸೇವೆಯಲ್ಲಿ ಕಿರಿಯರಾದ ನೌಕರರು ರೂ. 350 ವಿಶೇಷ
ವೇತನವಾಗಿ ಪಡೆಯುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ
ಏನಾದರೂ ಪರಿಹಾರ ಇದೆಯೇ?
|ಶಾರದಾದೇವಿ ಶೃಂಗೇರಿ
1985ರ ಸರ್ಕಾರಿ ಆದೇಶದಂತೆ ಒಬ್ಬ ಸರ್ಕಾರಿ ನೌಕರನಿಗೆ ಅವನು
ಪಡೆಯುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನೇ ಕುಟುಂಬ
ಯೋಜನೆ ಅನುಸರಣೆಗೆ ವಿಶೇಷ ಭತ್ಯೆಯಾಗಿ
ನೀಡಲಾಗುತ್ತದೆ. ದಿನಾಂಕ 13.12.1999ರ ಸರ್ಕಾರಿ ಆದೇಶ
ಸಂಖ್ಯೆ ಎಫ್​ಡಿ10, ಎಸ್​ಆರ್​ಎಸ್ 99 ರಂತೆ ಸರ್ಕಾರಿ ನೌಕರರಿಗೆ
ವೇತನ ಬಡ್ತಿ ಹೆಚ್ಚಳವಾದರೂ ಅವರಿಗೆ ಈ ವಿಶೇಷ
ಭತ್ಯೆಯನ್ನು ಹೆಚ್ಚಿಸಿ ನೀಡಲಾಗುವುದಿಲ್ಲ.
***
15-4-16.
ನಾನು ಬ್ರಾಹ್ಮಣ ಜಾತಿಗೆ ಸೇರಿದ್ದು ನನ್ನ ಪತಿ ಪರಿಶಿಷ್ಟ
ಜಾತಿಗೆ ಸೇರಿದ್ದಾರೆ. ನಮ್ಮದು ಅಂತರ್ಜಾತಿ
ವಿವಾಹವಾಗಿದ್ದು, ನಮಗೀಗ 2 ಮಕ್ಕಳಿದ್ದಾರೆ. ದಿನಾಂಕ
3.8.2015ರಂದು ನಾನು ಸರ್ಕಾರಿ ನೌಕರಿಗೆ ಸೇರಿದ್ದು ನನ್ನ
ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಸೇವಾ ಪುಸ್ತಕದಲ್ಲಿ
ನಮೂದಿಸಬಹುದೇ?
| ಪೂರ್ಣಿಮಾ ಎಸ್.ಸಿ. ಎಸ್​ಡಿಎ ಡಯಟ್, ಚಿಕ್ಕಬಳ್ಳಾಪುರ
ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ
ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ
(ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ
1990ರಡಿಯಲ್ಲಿ ನಿಮ್ಮ ಪತಿಯವರು ಪರಿಶಿಷ್ಟ ಜಾತಿಗೆ
ಸೇರಿದ್ದರೂ ನಿಮ್ಮ ಸೇವಾ ಪುಸ್ತಕದಲ್ಲಿ ಅದನ್ನು
ನಮೂದಿಸಲು ನಿಯಮಾವಳಿ ರೀತ್ಯ ಅವಕಾಶವಿಲ್ಲ. ಆದರೆ
ನಿಮ್ಮ ಇಬ್ಬರು ಮಕ್ಕಳಿಗೆ ಈ ಪರಿಶಿಷ್ಟ ಜಾತಿಯ ಮೀಸಲಾತಿ
ಸೌಲಭ್ಯ ಲಭ್ಯವಾಗುತ್ತದೆ.
***
16-4-16.
ಸಹೋದರನ ಮನವಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಪರಿಹಾರ
ಏನು?
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ನನ್ನ ತಂದೆ 2015ರ ಮಾರ್ಚ್​ನಲ್ಲಿ ನಿಧನರಾಗಿದ್ದಾರೆ. ನಮ್ಮ
ತಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಅವರ
ವಾರ್ಷಿಕ ವರಮಾನ 4 ಲಕ್ಷ ರೂ.ಗಳಾಗಿದೆ. ಈ ಆದಾಯದ
ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆಯವರು
ಅನುಕಂಪದ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ
ಸಲ್ಲಿಸಿದ ನನ್ನ ಸಹೋದರನ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದಕ್ಕೆ ಪರಿಹಾರ ಏನು?
| ಶಿಲ್ಪಾ ಎಂ.ಆರ್. ಬೆಂಗಳೂರು
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ನೇಮಕಾತಿ)
ನಿಯಮಗಳು 1996ರ ನಿಯಮ 4(1) ರೀತ್ಯ ಅನುಕಂಪದ
ಆಧಾರದ ಮೇಲೆ ನೇಮಕ ಹೊಂದಲು ಮೃತ ಕುಟುಂಬದ
ಆದಾಯ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ವೇತನ
ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ ವೇತನದ ಸರಾಸರಿ ವೇತನಕ್ಕೆ
ತುಟ್ಟಿಭತ್ಯೆ, ಬೆಂಗಳೂರಿಗೆ ಅನ್ವಯಿಸುವಂತೆ ಮನೆ ಬಾಡಿಗೆ
ಭತ್ಯೆ, ನಗರ ಪರಿಹಾರ ಭತ್ಯೆಯೂ ಸೇರಿ ಒಟ್ಟು
ಉಪಲಬ್ಧಿಗಿಂತ ಕಡಿಮೆ ಇದ್ದರೆ ಮೃತ ಸರ್ಕಾರಿ ನೌಕರನ
ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಕೂಡಿದೆ ಎಂದು
ಪರಿಗಣಿಸಬೇಕು. ಆದ್ದರಿಂದ ನಿಮ್ಮ ತಾಯಿಯ ಆದಾಯವು
ಪ್ರಸ್ತುತ ಭತ್ಯೆಗಳು ಸೇರಿ 4 ಲಕ್ಷ 6 ಸಾವಿರಕ್ಕಿಂತ ಕಡಿಮೆ
ಇದ್ದರೆ ನಿಮ್ಮ ಸಹೋದರನು ಅನುಕಂಪದ ಮೇರೆಗೆ
ನೇಮಕಾತಿ ಹೊಂದಲು ಅರ್ಹನಾಗುತ್ತಾನೆ.
***
17-4-16.
ಅನುಕಂಪದ ಮೇಲೆ ಉದ್ಯೋಗ ಪಡೆಯಲು ಅರ್ಹನೇ?
ನಮ್ಮ ಪೋಷಕರು ಸರ್ಕಾರಿ ಶಾಲೆಗಳಲ್ಲಿ
ಶಿಕ್ಷಕರಾಗಿದ್ದವರು. ನಮ್ಮ ತಾಯಿ 7 ವರ್ಷಗಳ ಹಿಂದೆ
ನಿಧನರಾಗಿದ್ದು, ಅದರ ಹಿನ್ನೆಲೆಯಲ್ಲಿ ನನ್ನ ಸಹೋದರನಿಗೆ
ಅನುಕಂಪದ ಮೇಲೆ ನೌಕರಿ ಸಿಕ್ಕಿರುತ್ತದೆ ಮತ್ತು ಅವನ
ವಿವಾಹವಾಗಿರುತ್ತದೆ. ನನ್ನ ತಂದೆ 1 ವರ್ಷದ ಕೆಳಗೆ
ಸೇವೆಯಲ್ಲಿರುವಾಗಲೇ ನಿಧನ ಹೊಂದಿದ್ದು, ನಾನು
ಅನುಕಂಪದ ಮೇಲೆ ಉದ್ಯೋಗ ಪಡೆಯಲು ಅರ್ಹನೇ?
| ಸುಮೇಘ ರಾಜ್
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇಲೆ ನೇಮಕ)
ನಿಯಮಾವಳಿಯ 1996ರ ಅನ್ವಯ ನಿಮಗೆ 18 ವರ್ಷ
ಪೂರ್ಣವಾಗಿದ್ದಲ್ಲಿ ನಿಮ್ಮ ತಂದೆಯವರ ನಿಧನದ
ದಿನಾಂಕದಿಂದ 1 ವರ್ಷದೊಳಗೆ ಅನುಕಂಪದ ಮೇರೆಗೆ
ನೇಮಕಗೊಳ್ಳಲು ಸಕ್ಷಮ ಪ್ರಾಕಾರಕ್ಕೆ ಅರ್ಜಿಯನ್ನು
ಸಲ್ಲಿಸಬಹುದು.
***
18-4-16.
***
19-4-16
ವೃಂದ ಬದಲಾವಣೆ ಮಾಡಿಕೊಳ್ಳಲು ನಿಯಮಾವಳಿಯಲ್ಲಿ
ಅವಕಾಶವಿಲ್ಲವೇ?
ನಾನು ರಾಮದುರ್ಗ ತಾಲೂಕು ಪಂಚಾಯ್ತಿಯಲ್ಲಿ 18
ವರ್ಷಗಳಿಂದ ಬೆರಳಚ್ಚು ಗಾರಳಾಗಿ
ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ವೃಂದ ಬದಲಾವಣೆ
ಕೋರಿದಾಗ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು
ನೀಡುತ್ತೇವೆಂದು ಹೇಳುತ್ತಾರೆ. ನಾನು ಬಿ.ಎ.
ಪದವಿಧರಳಾಗಿದ್ದು ನನಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ
ವೃಂದ ಬದಲಾವಣೆ ಮಾಡಿಕೊಳ್ಳಲು ನಿಯಮಾವಳಿಯಲ್ಲಿ
ಅವಕಾಶವಿಲ್ಲವೇ?
|ಜಯಶ್ರೀ ಜಿ. ಅಗಾಸೆ ರಾಮದುರ್ಗ, ಬೆಳಗಾವಿ
ಕರ್ನಾಟಕ ಸಿವಿಲ್ ಸೇವಾ (ಬೆರಳಚ್ಚುಗಾರರು ಮತ್ತು ಕಿರಿಯ
ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು) (ಉದ್ಯೋಗ
ವೃಂದ ಬದಲಾವಣೆ)ನಿಯಮಗಳು 1964ರ ನಿಯಮ 2ರಲ್ಲಿ
ಬೆರಳಚ್ಚುಗಾರರು ಪ್ರೊಬೇಷನ್ ಅವಧಿ ಹೊರತುಪಡಿಸಿ 5
ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದ್ದರೆ ಅವರಿಗೆ
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆ
ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೀಗಾಗಿರುವುದರಿಂದ ನೀವು ಬಿ.ಎ. ಪದವಿಧರರಾಗಿದ್ದು
ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಿಂದ ಪ್ರಥಮ ದರ್ಜೆ
ಸಹಾಯಕರ ಹುದ್ದೆಗೆ ಪದೋನ್ನತಿ ಮೂಲಕ
ನಿಯೋಜನೆಗೊಳ್ಳಬಹುದು.
***
20-4-2016.
ನಿವೃತ್ತಿ ಸೌಲಭ್ಯಗಳು ಯಾವುವು?
ನಾನು ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ
ದರ್ಜೆ ಸಹಾಯಕನಾಗಿ ಆಯ್ಕೆಗೊಂಡು ಪ್ರಸ್ತುತ ಸಮಾಜ
ಕಲ್ಯಾಣ ಇಲಾಖೆಯಲ್ಲಿ ನಿಯಮ 32ರಡಿಯಲ್ಲಿ ತಾಲೂಕು
ಸಮಾಜ ಕಲ್ಯಾಣ ಅಧಿಕಾರಿಯಾಗಿ ಕಾರ್ಯ
ನಿರ್ವಹಿಸುತ್ತಿದ್ದೇನೆ. 28 ವರ್ಷ ಸೇವೆ ಪೂರೈಸಿದ್ದು ಈಗ
ನನಗೆ 54 ವರ್ಷ ವಯಸ್ಸು. ಸಕ್ಕರೆ ಕಾಯಿಲೆಯಿಂದ
ಬಳಲುತ್ತಿರುವ ನಾನು ವೈಯಕ್ತಿಕ ಕಾರಣಗಳಿಗಾಗಿ ಸ್ವ ಇಚ್ಛೆ
ನಿವೃತ್ತಿ ಪಡೆದಲ್ಲಿ ನನಗೆ ಸಿಗುವ ಅರ್ಹತಾದಾಯಕ ಸೇವೆ
ಎಷ್ಟು? ಹಾಗೂ ಸಿಗುವ ನಿವೃತ್ತಿ ಸೌಲಭ್ಯಗಳು
ಯಾವುವು?
|ಬಿ.ಎಸ್. ಜಗದೀಶ್ ಮೈಸೂರು
ನೀವು ವೈಯಕ್ತಿಕ ಕಾರಣಗಳಿಂದ ಕರ್ನಾಟಕ ಸರ್ಕಾರಿ
ಸೇವಾ ನಿಯಮಾವಳಿಯ ನಿಯಮ 285 (2)ರಂತೆ ಸ್ವ ಇಚ್ಛೆ
ನಿವೃತ್ತಿ ಪಡೆದರೆ ನಿಮಗೆ 5 ವರ್ಷಗಳವರೆಗಿನ ಸೇವಾ
ಅಧಿಕ್ಯವನ್ನು (ವೆಟೇಜ್) ಪಡೆಯುವುದರಿಂದ ನಿಮಗೆ ನಿಮ್ಮ
ಮೂಲ ವೇತನದ ಶೇ. 50ರಷ್ಟು ಮೊಬಲಗು ನಿವೃತ್ತಿ
ವೇತನವಾಗಿ ಲಭ್ಯವಾಗುವುದು. ಅಲ್ಲದೆ ಕರ್ನಾಟಕ
ಸರ್ಕಾರಿ ಸೇವಾ ನಿಯಮಾವಳಿಯಂತೆ ನಿವೃತ್ತಿ ಉಪದಾನ,
ಕಮ್ಯೂಟೇಷನ್ ಮುಂತಾದ ಎಲ್ಲಾ ಸೇವಾ ಸೌಲಭ್ಯಗಳು
ಲಭ್ಯವಾಗುತ್ತದೆ.
***
21-4-2016.
25 ವರ್ಷದ ಹೆಚ್ಚುವರಿ ವೇತನ ಬಡ್ತಿ ಲಭ್ಯವಾಗುವುದೇ?
ನಾನು 1981ರಿಂದ ಅನುದಾನಿತ ಪ್ರೌಢಶಾಲೆಯಲ್ಲಿ 20 ವರ್ಷಗಳ
ಕಾಲ ಸಹ ಶಿಕ್ಷಕನಾಗಿ ಕೆಲಸ ಮಾಡಿ 1997ರಲ್ಲಿ ಪದವಿಪೂರ್ವ
ಕಾಲೇಜು ಉಪನ್ಯಾಸಕನಾಗಿ ಪದೋನ್ನತಿಯನ್ನು
ಪಡೆದಿದ್ದೇನೆ. ನನಗೆ 25 ವರ್ಷದ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದೇ?
| ಎಂ.ಎಸ್. ಮಕನದಾರ ಬೆಳಗಾವಿ
ದಿನಾಂಕ 14.6.2012ರ ಸರ್ಕಾರಿ ಆದೇಶದಂತೆ ಸೇವೆಯಲ್ಲಿ
ಒಂದು ಪದೋನ್ನತಿ ಪಡೆದ ಸರ್ಕಾರಿ ನೌಕರನಿಗೆ 25 ವರ್ಷಗಳ
ಸೇವೆ ಸಲ್ಲಿಸಿದ್ದಕ್ಕೆ ಹೆಚ್ಚುವರಿ ವೇತನ ಬಡ್ತಿಯನ್ನು
ನೀಡಬೇಕೆಂದು ಸೂಚಿಸಿದೆ. ಆದರೆ ಕನಿಷ್ಠ ಒಂದು
ಪದೋನ್ನತಿಯನ್ನು ಪಡೆದವರಿಗೆ ಈ ಹೆಚ್ಚುವರಿ ವೇತನ
ಬಡ್ತಿಯನ್ನು ನೀಡಬಾರದೆಂದು ಆದೇಶದಲ್ಲಿ ನೀಡಲಾಗಿದೆ.
ನೀವು 1990ರಲ್ಲೇ ಪದವಿ ಪೂರ್ವ ಶಿಕ್ಷಕರಾಗಿ ಪದೋನ್ನತಿ
ಹೊಂದಿರುವುದರಿಂದ ನಿಮಗೆ ಈ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದಿಲ್ಲ.
***
22-4-16.
ಅನುಕಂಪದ ಆಧಾರದ ಮೇಲೆ ನೌಕರಿ ದೊರಕುತ್ತದೆಯೇ?
ಸರ್ಕಾರಿ ನೌಕರ ಪಾರ್ಶ್ವವಾಯು ಪೀಡಿತನಾಗಿ ನಿವೃತ್ತಿ ಪಡೆದರೆ
ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ
ದೊರಕುತ್ತದೆಯೇ?
| ಎಂ. ತಿಪ್ಪೇಸ್ವಾಮಿ ಬಳ್ಳಾರಿ
1996ರ ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಆಧಾರದ
ಮೇಲೆ ನೇಮಕಾತಿ) ನಿಯಮಾವಳಿಯ ನಿಯಮ 3ಎ ರೀತಿಯಂತೆ
ಸರ್ಕಾರಿ ಸೇವೆಯಲ್ಲಿದ್ದಾಗಲೇ ಶಾಶ್ವತ
ಅಸಮರ್ಥತೆಯಿಂದಾಗಿ ಸ್ವಯಂ ನಿವೃತ್ತಿ ಪಡೆಯುವ ಸರ್ಕಾರಿ
ನೌಕರರ ಅವಲಂಬಿತರು ಅನುಕಂಪದ ಆಧಾರದ
ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ
ಪಾರ್ಶ್ವವಾಯು, ಇನ್ನಿತರ ಕಾಯಿಲೆಯಿಂದ ನಿವೃತ್ತಿ ಪಡೆಯುವ
ಸರ್ಕಾರಿ ನೌಕರರ ಅವಲಂಬಿತರಿಗೆ ನಿಯಮಾವಳಿಯಂತೆ ಸರ್ಕಾರಿ
ನೌಕರಿ ಲಭ್ಯವಾಗುವುದಿಲ್ಲ.
***
23-4-16.
ಸರ್ಕಾರದ ಇತರ ಹುದ್ದೆಗಳಿಗೆ ಆಯ್ಕೆಯಾದರೆ ಸೇವಾ ಅವಧಿ
ಪರಿಗಣಿಸಲಾಗುವುದೇ?
ನಾನು ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕೆಎಂಎಫ್)
2014ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಸರ್ಕಾರಿ
ನೌಕರಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಸಂಬಂಧಿತ
ಅಂಕಣದಲ್ಲಿ ನೀವು ಸರ್ಕಾರಿ ನೌಕರರೇ? ಎಂದು
ಕೇಳಲಾಗುತ್ತದೆ. ನಾವು ಸರ್ಕಾರಿ ನೌಕರರೇ? ನಮ್ಮ
ಸೇವಾ ಅವಧಿಯನ್ನು ಸರ್ಕಾರದ ಇತರ ಹುದ್ದೆಗಳಿಗೆ
ಆಯ್ಕೆಯಾದರಲ್ಲಿ ಪರಿಗಣಿಸಲಾಗುವುದೇ?
| ಎಸ್.ಡಿ. ರಾಮಕೃಷ್ಣ, ಬೆಂಗಳೂರು ಡೇರಿ
ನೀವು ಸೇವೆ ಸಲ್ಲಿಸುತ್ತಿರುವ ಬೆಂಗಳೂರು ಡೇರಿಯು
ಸರ್ಕಾರದ ಇಲಾಖೆಯಾಗಿರದೆ ಅದೊಂದು ಅರೆ ಸರ್ಕಾರಿ
ಸಂಸ್ಥೆಯಾಗಿದೆ. ಹೀಗಾಗಿ ನೀವು ಸರ್ಕಾರಿ ನೌಕರರಲ್ಲ.
ಆದ್ದರಿಂದ ನಿಮ್ಮ ಸೇವೆಯನ್ನು ಸರ್ಕಾರಿ ಹುದ್ದೆಗಳಿಗೆ
ಪರಿಗಣಿಸಲಾಗುವುದಿಲ್ಲ.
***
24-4-16
ವೇತನ ಬಡ್ತಿ ಪಡೆಯಲು ಅರ್ಹನಿದ್ದೇನೆಯೆ?
ನಾನು ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ
ಇಂಜಿನಿಯರ್ ಆಗಿ 32 ವರ್ಷಗಳಿಂದ ಸೇವೆ ಸಲ್ಲಿಸಿ ನಿಯಮ
32ರಲ್ಲಿ ಪದೋನ್ನತಿ ಪಡೆದಿರುವೆ. ಏತನ್ಮಧ್ಯೆ ನನ್ನನ್ನು
ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿಟ್ಟು
ತದನಂತರ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಸ್ಥಳ
ನಿಯುಕ್ತಿಗೊಳಿಸಿದ್ದಾರೆ. ಮತ್ತೆ ನಾನು ನಿಯಮ
32ರಡಿಯಲ್ಲೇ ಪದೋನ್ನತಿ ಹೊಂದಿದ್ದು 25 ಮತ್ತು 30
ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಪಡೆಯಲು
ಅರ್ಹನಿದ್ದೇನೆಯೇ?
| ಚಂದ್ರಶೇಖರ ಕಲಬುರ್ಗಿ
ನೀವು ನಿಯಮ 32ರಲ್ಲಿ ಪದೋನ್ನತಿ ಪಡೆದು ಮಧ್ಯದಲ್ಲಿ
ಒಂದೂವರೆ ವರ್ಷಗಳ ಕಾಲ
ಅಮಾನತುಗೊಂಡಿರುವುದರಿಂದ ಈ ಅಮಾನತಿನ
ಅವಧಿಯನ್ನು ಕರ್ತವ್ಯ ಅಥವಾ ರಜೆ ಎಂದು ಪರಿಗಣಿಸಿದಾಗ
ನಿಮಗೆ 25 ವರ್ಷದ ಹೆಚ್ಚುವರಿ ವೇತನ ಬಡ್ತಿ
ಲಭ್ಯವಾಗುವುದು.
***
26-4-16.
ನಾನು 1985ರಲ್ಲಿ ಉಪನ್ಯಾಸಕನಾಗಿ ಸರ್ಕಾರಿ ಸೇವೆಗೆ
ಸೇರಿದ್ದು, 1995ರಲ್ಲಿ ಕಾಲಮಿತಿ ವೇತನ ಬಡಿ ್ತ ಪಡೆದಿದ್ದೇನೆ.
1996ರಲ್ಲಿ ನಾನು ಪ್ರಾಂಶುಪಾಲನಾಗಿ ಪದೋನ್ನತಿ
ಹೊಂದಿದ್ದು 2012ರವರೆಗೆ ಒಂದೇ ಹುದ್ದೆಯಲ್ಲಿ 16 ವರ್ಷ
ಕಾರ್ಯ ನಿರ್ವಹಿಸಿದ್ದೇನೆ. ನಾನು 15 ವರ್ಷಗಳ ಹೆಚ್ಚುವರಿ
ವೇತನ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಪಡೆಯಲು
ಅವಕಾಶವಿದೆಯೇ?
| ಸಂಕ್ರಪ್ಪ ಯಾದಗಿರಿ
1991ರ ಕರ್ನಾಟಕ ಸಿವಿಲ್​ಸೇವಾ (ಹಿರಿಯ ವೇತನ ಶ್ರೇಣಿಗೆ
ಸ್ವಯಂಚಾಲಿತ ಬಡ್ತಿ) ನಿಯಮಾವಳಿಯ ನಿಯಮ 3ರಂತೆ
ಒಂದೇ ಹುದ್ದೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ
ಅಂಥ ಸರ್ಕಾರಿ ನೌಕರರು ಸ್ವಯಂ ಚಾಲಿತ ಬಡ್ತಿಗೆ
ಅರ್ಹರಾಗುತ್ತಾರೆ. ಆದ ಕಾರಣ ನೀವು
ಪ್ರಾಂಶುಪಾಲರಾಗಿ ಒಂದೇ ಹುದ್ದೆಯಲ್ಲಿ ಸೇವೆ
ಸಲ್ಲಿಸಿರುವುದರಿಂದ ಸ್ವಯಂಚಾಲಿತ ವಿಶೇಷ
ಮುಂಬಡ್ತಿಯನ್ನು ಪಡೆಯಲು ಅರ್ಹರಾಗಿರುತ್ತೀರಿ.
***
27-4-16.
ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
ನನ್ನ ತಂದೆ ಕಲಬುರಗಿ ಜಿಲ್ಲೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ
ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2013ರಲ್ಲಿ
ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ನನ್ನ ತಾಯಿ
ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು
ಅರ್ಜಿ ಸಲ್ಲಿಸಿದ್ದರು. ಆದರೆ ನೇಮಕಾತಿ ಆದೇಶ ಪಡೆಯುವ
ಮುಂಚೆಯೇ 2014ರಲ್ಲಿ ಅನಾರೋಗ್ಯದಿಂದ ಅವರೂ
ನಿಧನರಾಗಿದ್ದಾರೆ. ಒಬ್ಬಳೇ ಮಗಳಾದ ನನಗೆ ಅನುಕಂಪದ
ಮೇರೆಗೆ ನೇಮಕಾತಿ ನೀಡಬೇಕೆಂದು ಕೋರಿದ್ದೇನೆ. ನನಗೆ
ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
|ಸ್ವಾತಿ ಕಲಬುರಗಿ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ) ನಿಯಮಗಳು 1996ರ ನಿಯಮ 3 (2)ರಂತೆ ಅವಿವಾಹಿತ
ಮಗಳು ಅನುಕಂಪದ ಮೇರೆಗೆ ನೇಮಕಾತಿ ಪಡೆಯಲು
ಅರ್ಹಳು. ನಿಮ್ಮ ತಂದೆಯವರ ಹುದ್ದೆಯನ್ನು ನಿಮ್ಮ
ತಾಯಿಯವರು ಪಡೆಯುವ ಮೊದಲೇ
ನಿಧನರಾಗಿರುವುದರಿಂದ ಈ ನಿಯಮಾವಳಿಯಂತೆ ನಿಮ್ಮ
ಅರ್ಜಿಯನ್ನು ಪರಿಗಣಿಸಿ ಸಂಬಂಸಿದ ಸಕ್ಷಮ
ಪ್ರಾಧಿಕಾರಿಯವರು ನೇಮಕ ಮಾಡಿಕೊಳ್ಳಬೇಕು.
***
28-4-16.
ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
ನನ್ನ ತಂದೆ ಕಲಬುರಗಿ ಜಿಲ್ಲೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ
ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 2013ರಲ್ಲಿ
ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ನನ್ನ ತಾಯಿ
ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು
ಅರ್ಜಿ ಸಲ್ಲಿಸಿದ್ದರು. ಆದರೆ ನೇಮಕಾತಿ ಆದೇಶ ಪಡೆಯುವ
ಮುಂಚೆಯೇ 2014ರಲ್ಲಿ ಅನಾರೋಗ್ಯದಿಂದ ಅವರೂ
ನಿಧನರಾಗಿದ್ದಾರೆ. ಒಬ್ಬಳೇ ಮಗಳಾದ ನನಗೆ ಅನುಕಂಪದ
ಮೇರೆಗೆ ನೇಮಕಾತಿ ನೀಡಬೇಕೆಂದು ಕೋರಿದ್ದೇನೆ. ನನಗೆ
ಅನುಕಂಪದ ನೌಕರಿ ಲಭ್ಯವಾಗುತ್ತದೆಯೇ?
|ಸ್ವಾತಿ ಕಲಬುರಗಿ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ
ನೇಮಕ) ನಿಯಮಗಳು 1996ರ ನಿಯಮ 3 (2)ರಂತೆ ಅವಿವಾಹಿತ
ಮಗಳು ಅನುಕಂಪದ ಮೇರೆಗೆ ನೇಮಕಾತಿ ಪಡೆಯಲು
ಅರ್ಹಳು. ನಿಮ್ಮ ತಂದೆಯವರ ಹುದ್ದೆಯನ್ನು ನಿಮ್ಮ
ತಾಯಿಯವರು ಪಡೆಯುವ ಮೊದಲೇ
ನಿಧನರಾಗಿರುವುದರಿಂದ ಈ ನಿಯಮಾವಳಿಯಂತೆ ನಿಮ್ಮ
ಅರ್ಜಿಯನ್ನು ಪರಿಗಣಿಸಿ ಸಂಬಂಸಿದ ಸಕ್ಷಮ
ಪ್ರಾಧಿಕಾರಿಯವರು ನೇಮಕ ಮಾಡಿಕೊಳ್ಳಬೇಕು.
***
29-4-16.
ವಿಶೇಷ ಅಂಗವೈಕಲ್ಯತೆ ರಜೆ ಲಭ್ಯವಾಗುತ್ತದೆಯೇ?
| ಎಸ್. ಸೋಮಶೇಖರ್ ಮೈಸೂರು
ನಾನು ಗ್ರೂಪ್ ಡಿ ನೌಕರನಾಗಿದ್ದು ರಸ್ತೆ ಅಪಘಾತವಾಗಿ ನನ್ನ
ಬಲ ಮೊಣಕಾಲು ಕಳೆದುಕೊಂಡಿರುತ್ತೇನೆ.
ಅಂಗವಿಕಲನಾಗಿರುವ ನನಗೆ ವಿಶೇಷ ಅಂಗವೈಕಲ್ಯತೆ ರಜೆ
ಲಭ್ಯವಾಗುತ್ತದೆಯೇ? ನಾನು ಕೃತಕ ಕಾಲನ್ನು
ಒಂದೂವರೆ ಲಕ್ಷ ರೂಪಾಯಿಗೆ ಖರೀದಿಸಿ ಅಳವಡಿಸಿಕೊಳ್ಳಲು
ಇಚ್ಛಿಸಿದ್ದೇನೆ. ಈ ಖರೀದಿಗೆ ಸಂಬಂಧಿಸಿದಂತೆ ನನಗೆ ಎಷ್ಟು
ಮೊತ್ತದ ಹಣವು ಸರ್ಕಾರದಿಂದ ಮರುಪಾವತಿಯಾಗುತ್ತದೆ?
ತಿಳಿಸಿ.
ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಯ ನಿಯಮ 136
(1)ರಂತೆ ಸರ್ಕಾರಿ ನೌಕರನು ತನ್ನ ಕಚೇರಿ ಕೆಲಸ ನಿರ್ವಹಣೆಯ
ಸಮಯದಲ್ಲಿ ಆದ ಗಾಯದಿಂದ ಅಂಗವಿಕಲನಾದರೆ ಅವನಿಗೆ
ವಿಶೇಷ ರಜೆ ಲಭ್ಯವಾಗುತ್ತದೆ. 1963ರ ಕರ್ನಾಟಕ ಸರ್ಕಾರಿ
ನೌಕರರ ವೈದ್ಯಕೀಯ ಚಿಕಿತ್ಸಾ ನಿಯಮಾವಳಿಯಂತೆ ಕೃತಕ
ಕಾಲು ಅಳವಡಿಸಿಕೊಳ್ಳಲು 65,000 ರೂಪಾಯಿಗಳ ಮರು
ಸಂದಾಯದ ಅವಕಾಶವಿರುತ್ತದೆ.
***
30-4-2016.
ನನ್ನ ತಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಮಾಸ್ತರಾಗಿ ಸೇವೆ
ಸಲ್ಲಿಸಿ ಕಳೆದ ಮಾರ್ಚ್ ನಲ್ಲಿ ಹೃದಯಾಘಾತದಿಂದ ನಿಧನ
ಹೊಂದಿದ್ದಾರೆ? ಅನುಕಂಪದ ಆಧಾರದ ಮೇಲೆ ನೌಕರಿ
ನೀಡಬೇಕಾದರೆ ವಾರ್ಷಿಕ ಆದಾಯ ಎಷ್ಟಿರಬೇಕು? ನಮ್ಮ
ಅಜ್ಜನ ಹೆಸರಲ್ಲಿ 8 ಲಕ್ಷ ರೂ. ಚರಾಸ್ಥಿ ಇರುವುದರಿಂದ
ಅನುಕಂಪದ ಮೇರೆಗೆ ನೌಕರಿ ನೀಡಲಾಗುವುದಿಲ್ಲವೆಂದು
ತಿರಸ್ಕರಿಸಿರುತ್ತಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.
| ಮಂಜುನಾಥ ಎಚ್. ಕಾರವಾರ
ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರ ಮೇಲೆ
ನೇಮಕಾತಿ) ನಿಯಮಾವಳಿ 1996ರ ನಿಯಮ 4ರಲ್ಲಿ
ಅನುಕಂಪದ ಆಧಾರದ ಮೇಲೆ ನೇಮಕವಾಗಲು ಮೃತ
ಸರ್ಕಾರಿ ನೌಕರನ ಕುಟುಂಬವು ಆರ್ಥಿಕ
ಮುಗ್ಗಟ್ಟಿನಲ್ಲಿರಬೇಕು ಅಥವಾ ಜೀವನಾಧಾರ
ರಹಿತವಾಗಿರಬೇಕು. ಅವರ ವಾರ್ಷಿಕ ಆದಾಯವು ಪ್ರಥಮ
ದರ್ಜೆ ಸಹಾಯಕರ ವೇತನ ಶ್ರೇಣಿಯ ಕನಿಷ್ಠ ಮತ್ತು ಗರಿಷ್ಠ
ವೇತನದ ಸರಾಸರಿಯ ಉಪಲಬ್ಧಿಗೆ ಬೆಂಗಳೂರಿನಲ್ಲಿ
ಅನ್ವಯಿಸುವಂತೆ ಮನೆ ಬಾಡಿಗೆ, ನಗರ ಪರಿಹಾರ ಭತ್ಯೆಯು
ಸೇರಿದಂತೆ ಒಟ್ಟು ಮೊಬಲಗು ಕಡಿಮೆ ಇದ್ದರೆ ಅಂತಹ
ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಕೂಡಿದೆ ಎಂದು
ಪರಿಗಣಿಸಲು ಸೂಚಿಸಲಾಗಿದೆ. ಹೀಗಿರುವಲ್ಲಿ ನಿಮ್ಮ
ಅಜ್ಜನವರ ಚರಾಸ್ಥಿಯ ಹಿನ್ನೆಲೆಯಲ್ಲಿ ನಿಮ್ಮ ಅರ್ಜಿಯನ್ನು
ತಿರಸ್ಕರಿಸುವುದು ನಿಯಮಬದ್ಧವಾಗಿಲ್ಲ. ಆದ ಕಾರಣ ನೀವು
ಮತ್ತೊಮ್ಮೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗೆ ಮನವರಿಕೆ
ಮಾಡಿಸಿ ಅರ್ಜಿಯನ್ನು ಸಲ್ಲಿಸಬಹುದು.

No comments:

Post a Comment